logo
ಕನ್ನಡ ಸುದ್ದಿ  /  ಕ್ರಿಕೆಟ್  /  Ipl 2024 Latest Updates: ಸಿಎಸ್‌ಕೆ Vs ಗುಜರಾತ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್, ಫಲಿತಾಂಶ ಸೇರಿ ಸಂಪೂರ್ಣ ವಿವರ

IPL 2024 Latest Updates: ಸಿಎಸ್‌ಕೆ vs ಗುಜರಾತ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಟಾಸ್, ಫಲಿತಾಂಶ ಸೇರಿ ಸಂಪೂರ್ಣ ವಿವರ

Jayaraj HT Kannada

Mar 26, 2024 11:40 PM IST

google News

: ಸಿಎಸ್‌ಕೆ vs ಗುಜರಾತ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

    • Indian Premier League 2024 Updates: ಐಪಿಎಲ್‌ 2024 ಆವೃತ್ತಿಯು 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಗುಜರಾತ್‌ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿವೆ. ಇಂದು ಎರಡನೇ ಗೆಲುವಿಗೆ ಎದುರು ನೋಡುತ್ತಿವೆ. ಚೆಪಾಕ್‌ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಅಪ್ಡೇಟ್‌ ಇಲ್ಲಿದೆ.
: ಸಿಎಸ್‌ಕೆ vs ಗುಜರಾತ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್
: ಸಿಎಸ್‌ಕೆ vs ಗುಜರಾತ್ ಐಪಿಎಲ್ ಪಂದ್ಯದ ಲೇಟೆಸ್ಟ್ ಅಪ್ಡೇಟ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 17ನೇ ಆವೃತ್ತಿಯಲ್ಲಿ ಮಾರ್ಚ್‌ 26ರ ಮಂಗಳವಾರ ಒಂದು ಪಂದ್ಯ ನಡೆಯುತ್ತಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಟೂರ್ನಿಯ ಎರಡನೇ ಪಂದ್ಯ ನಡೆಯುತ್ತಿದ್ದು, ಆತಿಥೇಯ ಸಿಎಸ್‌ಕೆ ತಂಡಕ್ಕೆ ಶುಭ್ಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟಾನ್ಸ್‌ (CSK vs GT) ಸವಾಲೆಸೆಯುತ್ತಿದೆ. ಆರ್‌ಸಿಬಿ ವಿರುದ್ಧದ ತವರಿನ ಪಂದ್ಯದಲ್ಲಿ ಚೆನ್ನೈ ಗೆದ್ದಿದ್ದು, ಅತ್ತ ಮುಂಬೈ ವಿರುದ್ಧ ಅಹಮದಾಬಾದ್‌ನಲ್ಲಿ ಗುಜರಾತ್‌ ಜಯ ಸಾಧಿಸಿತ್ತು. ಇದೀಗ ಸತತ ಎರಡನೇ ಗೆಲುವಿನತ್ತ ಉಭಯ ತಂಡಗಳು ಗುರಿ ಇಟ್ಟಿವೆ. ಪಂದ್ಯದ ಲೇಟೆಸ್ಟ್‌ ಅಪ್ಡೇಟ್‌ ಹೀಗಿದೆ.

ಸಿಎಸ್‌ಕೆ ಆಲ್‌ರೌಂಡ್‌ ಆಟಕ್ಕೆ ತಲೆಬಾಗಿದ ಗುಜರಾತ್ ಟೈಟಾನ್ಸ್; ಚೆಪಾಕ್‌ನಲ್ಲಿ ಎರಡನೇ ಗೆಲುವು ಸಾಧಿಸಿದ ಚೆನ್ನೈ

ಐಪಿಎಲ್ 2024ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಗೆಲುವಿನ ನಾಗಾಲೋಟ ಮುಂದುವರೆಸಿದೆ. ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧದ ಪಂದ್ಯದಲ್ಲಿ ರುತುರಾಜ್‌ ಗಾಯಕ್ವಾಡ್‌ ಪಡೆ 63 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ ಎರಡನೇ ಗೆಲುವು ಸಾಧಿಸುವಲ್ಲಿ ಸಿಎಸ್‌ಕೆ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ಮೈ ಸೂಪರ್‌ ಕಿಂಗ್ಸ್‌ ತಂಡವು 6 ವಿಕೆಟ್‌ ಕಳೆದುಕೊಂಡು 206 ರನ್‌ ಪೇರಿಸಿತು. ಇದಕ್ಕೆ ಪ್ರತಿಯಾಗಿ ಗುಜರಾತ್‌ ತಂಡವು, 8 ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಿತು. ಪಂದ್ಯದ ಸಂಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಸಿಎಸ್‌ಕೆ ವಿರುದ್ಧ ಟಾಸ್‌ ಗೆದ್ದ ಗುಜರಾತ್‌ ಬೌಲಿಂಗ್‌ ಆಯ್ಕೆ; ಚೆನ್ನೈ ತಂಡಕ್ಕೆ ಮರಳಿದ ಪತಿರಾನ

ಐಪಿಎಲ್ ಪ್ರಸಕ್ತ ಆವೃತ್ತಿಯ 7ನೇ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿವೆ. ಹಾಲಿ ಚಾಂಪಿಯನ್‌ ಚೆನ್ನೈ ತಂಡದ ತವರು ಮೈದಾನ ಚೆಪಾಕ್ ಕ್ರೀಡಾಂಗಣದಲ್ಲಿ ಈ ಬಾರಿಯ ಎರಡನೇ ಪಂದ್ಯ ನಡೆಯುತ್ತಿದೆ. ಟಾಸ್‌ ಗೆದ್ದ ಗುಜರಾತ್‌ ಟೈಟಾನ್ಸ್‌ ಯುವ ನಾಯಕ ಶುಭ್ಮನ್‌ ಗಿಲ್ ಬೌಲಿಂಗ್‌ ಆಯ್ಕೆ ಮಾಡಿಲೊಂಡಿದ್ದಾರೆ. ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಿಎಸ್‌ಕೆ ತಂಡದಲ್ಲಾದ ಬದಲಾವಣೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

CSK vs GT: ಸಿಎಸ್‌ಕೆ-ಟೈಟಾನ್ಸ್‌ ಸಂಭಾವ್ಯ ತಂಡ ಹೀಗಿದೆ

ರುತುರಾಜ್ ಗಾಯಕ್ವಾಡ್ ನಾಯಕತ್ವದೊಂದಿಗೆ ಸಿಎಸ್‌ಕೆ ತಂಡವು ಜಯದ ಋತುವನ್ನು ಆರಂಭಿಸಿತು. ತನ್ನ ಎರಡನೇ ಪಂದ್ಯಕ್ಕೆ ಚೆನ್ನೈ ತಂಡವು ಬಹುತೇಕ ಇದೇ ಆಡುವ ಬಳಗವನ್ನು ಉಳಿಸುವ ಸಾಧ್ಯತೆ ಇದೆ. ಅತ್ತ ಗುಜರಾತ್‌ ಕೂಡಾ ಕೊನೆಯ ಪಂದ್ಯದ ಆಡುವ ಬಳಗವನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಸಂಭಾವ್ಯ ತಂಡದ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಸಿಎಸ್‌ಕೆ-ಗುಜರಾತ್‌ ಪಂದ್ಯದ ಪಿಚ್‌ ಹಾಗೂ ಹವಾಮಾನ ವರದಿ ಹೀಗಿದೆ

ಇಬ್ಬರು ಹೊಸ ನಾಯಕರಾದ ಶುಭ್ಮನ್‌ ಗಿಲ್‌ ಮತ್ತು ಋತುರಾಜ್‌ ಗಾಯಕ್ವಾಡ್ ಐಪಿಎಲ್‌ ಗೆಲುವಿನ ಅಭಿಯಾನ ಮುಂದುವರೆಸಲು ಮುಂದಾಗಿದ್ದಾರೆ.‌ ಎರಡು ಚಾಂಪಿಯನ್‌ ತಂಡಗಳಾದ ಸಿಎಸ್‌ಕೆ ಮತ್ತು ಗುಜರಾತ್‌ ಟೈಟಾನ್ಸ್‌ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಸತತ ಗೆಲುವಿಗಾಗಿ ಎದುರು ನೋಡುತ್ತಿವೆ. ಪಂದ್ಯದ ಪಿಚ್‌, ಹವಾಮಾನ ವರದಿಯ ಸಂಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ