ಸಿಎಸ್‌ಕೆ ವಿರುದ್ಧ ಚೆಪಾಕ್‌ನಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್; ಚೆನ್ನೈ ತಂಡಕ್ಕೆ ಮರಳಿದ ಪತಿರಾನ
Chennai Super Kings vs Gujarat Titans: ಚಾಂಪಿಯನ್ ತಂಡಗಳಾದ ಸಿಎಸ್‌ಕೆ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಪಂದ್ಯದಲ್ಲಿ ಟಾಸ್ ಸೋತ ಸಿಎಸ್‌ಕೆ ಮೊದಲಿಗೆ ಬ್ಯಾಟಿಂಗ್ ಮಾಡುತ್ತಿದೆ.
ಐಪಿಎಲ್ 2024ರ ಆವೃತ್ತಿಯ 7ನೇ ಪಂದ್ಯದಲ್ಲಿ ಕಳೆದ ಆವೃತ್ತಿಯ ಫೈನಲಿಸ್ಟ್‌ಗಳಾದ ಗುಜರಾತ್ ಟೈಟಾನ್ಸ್ (Gujarat Titans) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿವೆ. ಹಾಲಿ ಚಾಂಪಿಯನ್ ಚೆನ್ನೈ ತಂಡದ ತವರು ಮೈದಾನ ಚೆಪಾಕ್ ಕ್ರೀಡಾಂಗಣದಲ್ಲಿ ಸತತ ಎರಡನೇ ಪಂದ್ಯ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿದ್ದಾರೆ.
ಗುಜರಾತ್ ತಂಡವು ಕೊನೆಯ ಪಂದ್ಯದಲ್ಲಿ ಆಡಿದ ತಂಡದೊಂದಿಗೆ ಕಣಕ್ಕಳಿಯುತ್ತಿದೆ. ಅತ್ತ ಚೆನ್ನೈ ತಂಡವು ಪಥೀಶ ಪತಿರಾಣಾ ಅವರನ್ನು ತಂಡಕ್ಕೆ ಕರೆಸಿಕೊಂಡಿದ್ದು, ಮತ್ತೋರ್ವ ಲಂಕಾ ಆಟಗಾರ ತೀಕ್ಷಣ ತಂಡದಿಂದ ಹೊರಬಿದ್ದಿದ್ದಾರೆ.
ಚಿದಂಬರಂ ಸ್ಟೇಡಿಯಂ ಪಿಚ್ ವರದಿ
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಸಮತೋಲಿತ ಪಿಚ್ ಹೊಂದಿದೆ. ಹೆಸರುವಾಸಿ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಕ್ಕೂ ಸಮನಾಗಿ ನೆರವಾಗಲಿದೆ. ಇಲ್ಲಿ ರನ್ ಮಳೆ ಹರಿಯುವ ಸಾಧ್ಯತೆ ಕಡಿಮೆ. 180 ರನ್ ಈ ಮೈದಾನದಲ್ಲಿ ಸ್ಪರ್ಧಾತ್ಮಕ ಮೊತ್ತವಾಗಲಿದೆ. ಈ ಪಿಚ್ ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಸಮಾನಾಗಿ ನೆರವಾದರೂ, ಸ್ಪಿನ್ನರ್‌ಗಳಿಗೆ ಅನುಕೂಲ ಕಲ್ಪಿಸಲಿದೆ.
ಸಿಎಸ್‌ಕೆ ಆಡುವ ಬಳಗ
ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್.
ಇಂಪ್ಯಾಕ್ಟ್ ಆಟಗಾರರು: ಮಥೀಶ ಪತಿರಾನ, ಶಾರ್ದೂಲ್ ಠಾಕೂರ್, ಶೇಕ್ ರಶೀದ್, ನಿಶಾಂತ್ ಸಿಂಧು, ಮಿಚೆಲ್ ಸ್ಯಾಂಟ್ನರ್.
ಗುಜರಾತ್ ಟೈಟಾನ್ಸ್ ತಂಡ
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್ಮನ್ ಗಿಲ್ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಸ್ಪೆನ್ಸರ್ ಜಾನ್ಸನ್.
ಇಂಪ್ಯಾಕ್ಟ್ ಆಟಗಾರರು: ಸಾಯಿ ಸುದರ್ಶನ್, ಶರತ್ ಬಿಆರ್, ಅಭಿನವ್ ಮನೋಹರ್, ನೂರ್ ಅಹ್ಮದ್, ಮಾನವ್ ಸುತಾರ್.