logo
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್ ಆಸ್ಟ್ರೇಲಿಯಾ ವಾರ್ಷಿಕ ಒಪ್ಪಂದದಿಂದ ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋಯ್ನಿಸ್ ಔಟ್; ನಾಲ್ವರು ಹೊಸಬರಿಗೆ ಮಣೆ

ಕ್ರಿಕೆಟ್ ಆಸ್ಟ್ರೇಲಿಯಾ ವಾರ್ಷಿಕ ಒಪ್ಪಂದದಿಂದ ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋಯ್ನಿಸ್ ಔಟ್; ನಾಲ್ವರು ಹೊಸಬರಿಗೆ ಮಣೆ

Prasanna Kumar P N HT Kannada

Mar 28, 2024 05:26 PM IST

google News

ಕ್ರಿಕೆಟ್ ಆಸ್ಟ್ರೇಲಿಯಾ ವಾರ್ಷಿಕ ಒಪ್ಪಂದದಿಂದ ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋಯ್ನಿಸ್ ಔಟ್

    • Cricket Australia Central Contract : 2024-25ರ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಕೈಬಿಟ್ಟಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ವಾರ್ಷಿಕ ಒಪ್ಪಂದದಿಂದ ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋಯ್ನಿಸ್ ಔಟ್
ಕ್ರಿಕೆಟ್ ಆಸ್ಟ್ರೇಲಿಯಾ ವಾರ್ಷಿಕ ಒಪ್ಪಂದದಿಂದ ಡೇವಿಡ್ ವಾರ್ನರ್, ಮಾರ್ಕಸ್ ಸ್ಟೋಯ್ನಿಸ್ ಔಟ್

ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಮಾರ್ಚ್ 29ರ ಗುರುವಾರ ಹೊಸ ವಾರ್ಷಿಕ ಕೇಂದ್ರ ಒಪ್ಪಂದ ಪಡೆದಿರುವ 23 ಆಟಗಾರರ ಹೆಸರನ್ನು ಪ್ರಕಟಿಸಿದೆ. ಆದರೆ ಅನುಭವಿ ಆಲ್‌ರೌಂಡರ್ ಮಾರ್ಕಸ್ ಸ್ಟೊಯ್ನಿಸ್ (Marcus Stoinis) ಅವರ ಹೆಸರು ಈ ಪಟ್ಟಿಯಿಂದ ಕಾಣೆಯಾಗಿದೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ಗೆ ಅಧಿಕೃತವಾಗಿ ಗುಡ್​ ಬೈ ಹೇಳಿರುವ ಡೇವಿಡ್ ವಾರ್ನರ್ (David Warner) ಅವರನ್ನೂ ಕ್ರಿಕೆಟ್ ಆಸ್ಟ್ರೇಲಿಯಾ ರಿಟೈನ್ ಮಾಡಿಕೊಂಡಿಲ್ಲ. ಟಿ20 ವಿಶ್ವಕಪ್​ ನಂತರ ಚುಟುಕು ಕ್ರಿಕೆಟ್​ಗೆ ವಾರ್ನರ್ ವಿದಾಯ ಹೇಳಲಿದ್ದಾರೆ.

ಸ್ಟೊಯ್ನಿಸ್ ಇತ್ತೀಚಿನ ದಿನಗಳಲ್ಲಿ ಮತ್ತೆ ಗಾಯದ ಸಮಸ್ಯೆ ಸಿಲುಕಿದ್ದಾರೆ. ಆದರೆ ಕಳೆದ ವರ್ಷ ಆಸ್ಟ್ರೇಲಿಯಾದ ವಿಜೇತ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಅವರು, ಯುಎಸ್​ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಶಾರ್ಟರ್​ ಫಾರ್ಮ್ಯಾಟ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ವಾರ್ನರ್, ಸ್ಟೊಯ್ನಿಸ್ ಜೊತೆಗೆ ಆಲ್​ರೌಂಡರ್ ಆಶ್ಟನ್ ಅಗರ್, ಆರಂಭಿಕ ಮಾರ್ಕಸ್ ಹ್ಯಾರಿಸ್, ವೇಗಿ ಮೈಕೆಲ್ ನೆಸರ್ ಅವರು ಹೊಸ ಒಪ್ಪಂದ ಕಳೆದುಕೊಂಡ ಆಟಗಾರರ ಪಟ್ಟಿಗೆ ಸೇರಿಕೊಂಡಿದ್ದಾರೆ. ಬದಲಿಗೆ ಸಿಎ ಬೆರಳೆಣಿಕೆಯಷ್ಟು ಹೊಸ ಮುಖಗಳಿಗೆ ಮಣೆ ಹಾಕಿದೆ. ವೇಗದ ಬೌಲರ್ ನಾಥನ್ ಎಲ್ಲಿಸ್, ಆಲ್-ರೌಂಡರ್‌ಗಳಾದ ಮ್ಯಾಟ್ ಶಾರ್ಟ್ ಮತ್ತು ಆರನ್ ಹಾರ್ಡಿ, ಯುವ ಬಲಗೈ ಆಟಗಾರ ಕ್ಸೇವಿಯರ್ ಬಾರ್ಟ್ಲೆಟ್ ಹೊಸದಾಗಿ ಒಪ್ಪಂದ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಅಧ್ಯಕ್ಷ ಜಾರ್ಜ್ ಬೈಲಿ ಅವರು ಹೊಸ ಒಪ್ಪಂದ ಪಡೆದಿರುವ ಆಟಗಾರರು ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನ ಹೊಂದಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮ್ಯಾಟ್, ಆರನ್ ಮತ್ತು ಕ್ಸೇವಿಯರ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಅವರು ಅಂತರಾಷ್ಟ್ರೀಯ ಹಂತವನ್ನು ಸ್ವೀಕರಿಸಿದ ರೀತಿ ವೀಕ್ಷಿಸಲು ರೋಮಾಂಚನಕಾರಿಯಾಗಿದೆ ಎಂದು ಬೈಲಿ ಉಲ್ಲೇಖಿಸಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ 2024-25 ಪುರುಷರ ಆಟಗಾರರ ಒಪ್ಪಂದ

ಸೀನ್ ಅಬಾಟ್, ಕ್ಸೇವಿಯರ್ ಬಾರ್ಲೆಟ್, ಸ್ಕಾಟ್ ಬೊಲ್ಯಾಂಡ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖಾವಾಜಾ, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಝೈ ರಿಚರ್ಡ್‌ಸನ್, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳಾಪಟ್ಟಿ

1 ನೇ ಟೆಸ್ಟ್ - ನವೆಂಬರ್ 22-26 : ಪರ್ತ್ ಸ್ಟೇಡಿಯಂ, ಪರ್ತ್

2 ನೇ ಟೆಸ್ಟ್ - ಡಿಸೆಂಬರ್ 6-10 : ಅಡಿಲೇಡ್ ಓವಲ್, ಅಡಿಲೇಡ್ (ಪಿಂಕ್ ಬಾಲ್ ಟೆಸ್ಟ್)

3 ನೇ ಟೆಸ್ಟ್ - ಡಿಸೆಂಬರ್ 14-18 : ದಿ ಗಬ್ಬಾ, ಬ್ರಿಸ್ಬೇನ್

4 ನೇ ಟೆಸ್ಟ್ - ಡಿಸೆಂಬರ್ 26-30 : ಎಂಸಿಜಿ, ಮೆಲ್ಬೋರ್ನ್

5 ನೇ ಟೆಸ್ಟ್ - ಜನವರಿ 3-7 : ಎಸ್​ಸಿಜಿ, ಸಿಡ್ನಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ