logo
ಕನ್ನಡ ಸುದ್ದಿ  /  ಕ್ರಿಕೆಟ್  /  Bcci Salary Vs Ipl Salary: ಬಿಸಿಸಿಐ ವಾರ್ಷಿಕ ಒಪ್ಪಂದ ಪಡೆದ ಆಟಗಾರರಿಗೆ ಐಪಿಎಲ್​ನಲ್ಲಿ ಸಿಗುವ ವೇತನವೆಷ್ಟು?

BCCI Salary vs IPL salary: ಬಿಸಿಸಿಐ ವಾರ್ಷಿಕ ಒಪ್ಪಂದ ಪಡೆದ ಆಟಗಾರರಿಗೆ ಐಪಿಎಲ್​ನಲ್ಲಿ ಸಿಗುವ ವೇತನವೆಷ್ಟು?

Prasanna Kumar P N HT Kannada

Mar 01, 2024 06:18 PM IST

google News

ಬಿಸಿಸಿಐ ವಾರ್ಷಿಕ ಒಪ್ಪಂದ ಪಡೆದ ಆಟಗಾರರಿಗೆ ಐಪಿಎಲ್​ನಲ್ಲಿ ಸಿಗುವ ವೇತನವೆಷ್ಟು

    • BCCI Salary vs IPL salary : ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರರ ಬಿಸಿಸಿಐ ವೇತನ ಮತ್ತು ಐಪಿಎಲ್​ ವೇತನದ ವ್ಯತ್ಯಾಸ ಎಷ್ಟಿದೆ ಎಂಬುದನ್ನು ಈ ಮುಂದೆ ನೋಡೋಣ.
ಬಿಸಿಸಿಐ ವಾರ್ಷಿಕ ಒಪ್ಪಂದ ಪಡೆದ ಆಟಗಾರರಿಗೆ ಐಪಿಎಲ್​ನಲ್ಲಿ ಸಿಗುವ ವೇತನವೆಷ್ಟು
ಬಿಸಿಸಿಐ ವಾರ್ಷಿಕ ಒಪ್ಪಂದ ಪಡೆದ ಆಟಗಾರರಿಗೆ ಐಪಿಎಲ್​ನಲ್ಲಿ ಸಿಗುವ ವೇತನವೆಷ್ಟು

ಇಂಡಿಯನ್ ಪ್ರೀಮಿಯರ್ ಲೀಗ್‌ (IPL) 2024ರ ಸೀಸನ್‌ಗೆ ಒಂದು ತಿಂಗಳಿಗೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. 2023ರ ಅಕ್ಟೋಬರ್ 1 ರಿಂದ 2024ರ ಸೆಪ್ಟೆಂಬರ್ 30ರ ಅವಧಿಗೆ ವಾರ್ಷಿಕ ಒಪ್ಪಂದ ಇರಲಿದೆ.​ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್​ರನ್ನು ಈ ಗುತ್ತಿಗೆಯಿಂದ ಹೊರಗೆ ಇಡಲಾಗಿದೆ. ಪ್ರಮುಖ ಆಟಗಾರರನ್ನು ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.

ಎ+, ಎ, ಬಿ, ಸಿ ಕೆಟಗಿರಿಯಲ್ಲಿ 30 ಆಟಗಾರರು ಅವಕಾಶ ಪಡೆದಿದ್ದಾರೆ. ಕ್ರಮವಾಗಿ 7, 5, 3, 1 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ. ಆದರೆ, ವಾರ್ಷಿಕ ಒಪ್ಪಂದದಲ್ಲಿ ಸ್ಥಾನ ಪಡೆದ ಆಟಗಾರರು ಬಿಸಿಸಿಐ ಒಪ್ಪಂದಕ್ಕಿಂತ ಇಂಡಿಯನ್ ಪ್ರೀಮಿಯರ್​​ ಲೀಗ್​​ನ ಒಪ್ಪಂದದಲ್ಲಿ ಹೆಚ್ಚಿನ ವೇತನ ಪಡೆಯುತ್ತಾರೆ. ಹಾಗಾದರೆ ಗುತ್ತಿಗೆಯಲ್ಲಿರುವ ಆಟಗಾರರ ಬಿಸಿಸಿಐ ವೇತನ ಮತ್ತು ಐಪಿಎಲ್​ ವೇತನದ ವ್ಯತ್ಯಾಸ ಎಷ್ಟಿದೆ ಎಂಬುದನ್ನು ಈ ಮುಂದೆ ನೋಡೋಣ.

ಬಿಸಿಸಿಐ ಕೇಂದ್ರ ಒಪ್ಪಂದ 2023-24 vs ಐಪಿಎಲ್​ 2024 ಸಂಬಳ

ಗ್ರೇಡ್ A+ (7 ಕೋಟಿ ರೂಪಾಯಿ)

ರೋಹಿತ್ ಶರ್ಮಾ - (ಮುಂಬೈ ಇಂಡಿಯನ್ಸ್‌ - 16 ಕೋಟಿ ರೂಪಾಯಿ)

ವಿರಾಟ್ ಕೊಹ್ಲಿ - (ರಾಯಲ್ ಚಾಲೆಂಜರ್ಸ್ ಬೆಂಗಳೂರು - 15 ಕೋಟಿ ರೂಪಾಯಿ)

ಜಸ್ಪ್ರೀತ್ ಬುಮ್ರಾ - (ಮುಂಬೈ ಇಂಡಿಯನ್ಸ್‌ - 12 ಕೋಟಿ ರೂಪಾಯಿ)

ರವೀಂದ್ರ ಜಡೇಜಾ - (ಚೆನ್ನೈ ಸೂಪರ್ ಕಿಂಗ್ಸ್‌ - 16 ಕೋಟಿ ರೂಪಾಯಿ)

ಗ್ರೇಡ್ ಎ (5 ಕೋಟಿ ರೂಪಾಯಿ)

ರವಿಚಂದ್ರನ್ ಅಶ್ವಿನ್ - (ರಾಜಸ್ಥಾನ್ ರಾಯಲ್ಸ್‌ - 5 ಕೋಟಿ ರೂಪಾಯಿ)

ಮೊಹಮ್ಮದ್ ಶಮಿ - (ಗುಜರಾತ್ ಟೈಟಾನ್ಸ್ - 6.25 ಕೋಟಿ ರೂಪಾಯಿ)

ಮೊಹಮ್ಮದ್ ಸಿರಾಜ್ - (ರಾಯಲ್ ಚಾಲೆಂಜರ್ಸ್ ಬೆಂಗಳೂರು - 7 ಕೋಟಿ ರೂಪಾಯಿ)

ಕೆಎಲ್ ರಾಹುಲ್ - (ಲಕ್ನೋ ಸೂಪರ್ ಜೈಂಟ್ಸ್‌ - 17 ಕೋಟಿ ರೂಪಾಯಿ)

ಶುಭಮನ್ ಗಿಲ್ - (ಗುಜರಾತ್ ಟೈಟಾನ್ಸ್‌ - 8 ಕೋಟಿ ರೂಪಾಯಿ)

ಹಾರ್ದಿಕ್ ಪಾಂಡ್ಯ. - (ಮುಂಬೈ ಇಂಡಿಯನ್ಸ್‌ - 15 ಕೋಟಿ ರೂಪಾಯಿ)

ಗ್ರೇಡ್ ಬಿ (3 ಕೋಟಿ ರೂ.)

ಸೂರ್ಯ ಕುಮಾರ್ ಯಾದವ್ - (ಮುಂಬೈ ಇಂಡಿಯನ್ಸ್‌ - 8 ಕೋಟಿ ರೂಪಾಯಿ)

ರಿಷಭ್ ಪಂತ್ - (ದೆಹಲಿ ಕ್ಯಾಪಿಟಲ್ಸ್ - 16 ಕೋಟಿ ರೂಪಾಯಿ)

ಕುಲದೀಪ್ ಯಾದವ್ - (ದೆಹಲಿ ಕ್ಯಾಪಿಟಲ್ಸ್‌ - 2 ಕೋಟಿ ರೂಪಾಯಿ)

ಅಕ್ಷರ್ ಪಟೇಲ್ - (ದೆಹಲಿ ಕ್ಯಾಪಿಟಲ್ಸ್‌ - 9 ಕೋಟಿ ರೂಪಾಯಿ)

ಯಶಸ್ವಿ ಜೈಸ್ವಾಲ್ - (ರಾಜಸ್ಥಾನ್ ರಾಯಲ್ಸ್‌ - 4 ಕೋಟಿ ರೂಪಾಯಿ)

ಗ್ರೇಡ್ ಸಿ (1 ಕೋಟಿ ರೂ.)

ರಿಂಕು ಸಿಂಗ್ - (ಕೋಲ್ಕತ್ತಾ ನೈಟ್ ರೈಡರ್ಸ್‌ - 55 ಲಕ್ಷ ರೂಪಾಯಿ)

ತಿಲಕ್ ವರ್ಮಾ - (ಮುಂಬೈ ಇಂಡಿಯನ್ಸ್‌ - 1.7 ಕೋಟಿ ರೂಪಾಯಿ)

ಋತುರಾಜ್ ಗಾಯಕ್ವಾಡ್ - (ಚೆನ್ನೈ ಸೂಪರ್ ಕಿಂಗ್ಸ್‌ - 6 ಕೋಟಿ ರೂಪಾಯಿ)

ಶಾರ್ದೂಲ್ ಠಾಕೂರ್ - (ಚೆನ್ನೈ ಸೂಪರ್ ಕಿಂಗ್ಸ್‌ - 4 ಕೋಟಿ ರೂಪಾಯಿ)

ಶಿವಂ ದುಬೆ - (ಚೆನ್ನೈ ಸೂಪರ್ ಕಿಂಗ್ಸ್‌ - 4 ಕೋಟಿ ರೂಪಾಯಿ)

ರವಿ ಬಿಷ್ಣೋಯ್ - (ಲಕ್ನೋ ಸೂಪರ್ ಜೈಂಟ್ಸ್‌ - 4 ಕೋಟಿ ರೂಪಾಯಿ)

ಜಿತೇಶ್ ಶರ್ಮಾ -(ಪಂಜಾಬ್ ಕಿಂಗ್ಸ್‌ - 20 ಲಕ್ಷ ರೂಪಾಯಿ)

ವಾಷಿಂಗ್ಟನ್ ಸುಂದರ್ - (ಸನ್‌ರೈಸರ್ಸ್ ಹೈದರಾಬಾದ್‌ 8.75 ಕೋಟಿ ರೂಪಾಯಿ)

ಮುಖೇಶ್ ಕುಮಾರ್ - (ದೆಹಲಿ ಕ್ಯಾಪಿಟಲ್ಸ್ - 5.50 ಕೋಟಿ ರೂಪಾಯಿ)

ಸಂಜು ಸ್ಯಾಮ್ಸನ್ - (ರಾಜಸ್ಥಾನ್ ರಾಯಲ್ಸ್‌ - 14 ಕೋಟಿ ರೂಪಾಯಿ)

ಅರ್ಷದೀಪ್ ಸಿಂಗ್ - (ಪಂಜಾಬ್ ಕಿಂಗ್ಸ್‌ - 4 ಕೋಟಿ ರೂಪಾಯಿ)

ಕೆಎಸ್ ಭರತ್ - (ಕೋಲ್ಕತ್ತಾ ನೈಟ್ ರೈಡರ್ಸ್‌ - 50 ಲಕ್ಷ ರೂಪಾಯಿ)

ಪ್ರಸಿದ್ಧ್ ಕೃಷ್ಣ - (ರಾಜಸ್ಥಾನ್ ರಾಯಲ್ಸ್‌ - 10 ಕೋಟಿ ರೂಪಾಯಿ)

ಅವೇಶ್ ಖಾನ್ - (ರಾಜಸ್ಥಾನ್ ರಾಯಲ್ಸ್‌ - 10 ಕೋಟಿ ರೂಪಾಯಿ)

ರಜತ್ ಪಾಟಿದಾರ್ - (ರಾಯಲ್ ಚಾಲೆಂಜರ್ಸ್ ಬೆಂಗಳೂರು - 20 ಲಕ್ಷ ರೂಪಾಯಿ)

ಧ್ರುವ್ ಜುರೆಲ್* - (ರಾಜಸ್ಥಾನ್ ರಾಯಲ್ಸ್‌ - 20 ಲಕ್ಷ ರೂಪಾಯಿ)

ಸರ್ಫರಾಜ್ ಖಾನ್* - (ಐಪಿಎಲ್ ಒಪ್ಪಂದವಿಲ್ಲ)

ಇಶಾನ್ ಕಿಶನ್ - ಶ್ರೇಯಸ್ ಅಯ್ಯರ್ ಕಥೆ ಏನು?

ಗುತ್ತಿಗೆಯಿಂದ ಹೊರಬಿದ್ದಿರುವ ಇಶಾನ್ ಕಿಶನ್ ಅವರು ಮುಂಬೈ ಇಂಡಿಯನ್ಸ್ ಪರ 15.25 ಕೋಟಿ ರೂಪಾಯಿ ಮತ್ತು ಶ್ರೇಯಸ್ ಅಯ್ಯರ್​ ಅವರು ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಪರ 12.25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಎಲ್ಲಾ ಆಟಗಾರರು ಕೇಂದ್ರ ಒಪ್ಪಂದದ ಮೂಲಕ ನೀಡುವ ಹಣದ ಹೊರತಾಗಿ ಆಡುವ ಪ್ರತಿಯೊಂದು ಪಂದ್ಯಕ್ಕೂ (ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಪ್ರತಿ ಏಕದಿನಕ್ಕೆ 6 ಲಕ್ಷ, ಪ್ರತಿ ಟಿ20ಐಗೆ 3 ಲಕ್ಷ ರೂಪಾಯಿ) ಮೌಲ್ಯದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ