logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸೀಸ್ ನೆಲದಲ್ಲಿ ಜೈಸ್ವಾಲ್, ಕೆಎಲ್ ರಾಹುಲ್ ಬ್ಯಾಟಿಂಗ್ ಗೆ ಕಿಂಗ್ ಕೊಹ್ಲಿ ಫಿದಾ; ಮೈದಾನದಲ್ಲಿ ಸೆಲ್ಯೂಟ್ ಮಾಡಿದ ವೈರಲ್

ಆಸೀಸ್ ನೆಲದಲ್ಲಿ ಜೈಸ್ವಾಲ್, ಕೆಎಲ್ ರಾಹುಲ್ ಬ್ಯಾಟಿಂಗ್ ಗೆ ಕಿಂಗ್ ಕೊಹ್ಲಿ ಫಿದಾ; ಮೈದಾನದಲ್ಲಿ ಸೆಲ್ಯೂಟ್ ಮಾಡಿದ ವೈರಲ್

Raghavendra M Y HT Kannada

Nov 24, 2024 02:40 PM IST

google News

ಮೈದಾನಕ್ಕೆ ಬಂದು ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರಿಗೆ ಸೆಲ್ಯೂಟ್ ಮಾಡಿದ ವಿರಾಟ್ ಕೊಹ್ಲಿ

    • ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ರೀತಿಗೆ ಕಿಂಗ್ ಕೊಹ್ಲಿ ಫಿದಾ ಆಗಿದ್ದು, ಮೈದಾನದಲ್ಲೇ ತಮ್ಮ ಬ್ಯಾಟ್ ಮೇಲಕ್ಕೆತ್ತಿ ಇಬ್ಬರೂ ಆಟಗಾರರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಇದರ ವಿಡಿಯೊ, ಫೋಟೊಗಳು ವೈರಲ್ ಆಗಿವೆ.
ಮೈದಾನಕ್ಕೆ ಬಂದು ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರಿಗೆ ಸೆಲ್ಯೂಟ್ ಮಾಡಿದ ವಿರಾಟ್ ಕೊಹ್ಲಿ
ಮೈದಾನಕ್ಕೆ ಬಂದು ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರಿಗೆ ಸೆಲ್ಯೂಟ್ ಮಾಡಿದ ವಿರಾಟ್ ಕೊಹ್ಲಿ

ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸಿದ್ದಾರೆ. ಅದರಲ್ಲೂ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕನ್ನಡಿ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತವನ್ನು ಪೇರಿಸಲು ನೆರವಾಗಿದ್ದಾರೆ. 2ನೇ ದಿನದಾಟದ ಅಂತ್ಯಕ್ಕೆ ಭಾರತದ ಈ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರ ಬಗ್ಗೆ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿನದ ಆಟದ ನಂತರ ತಮ್ಮದೇ ಆದ ಬ್ಯಾಟಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದ ಕೊಹ್ಲಿ, ದಿನದಾಟದ ಕೊನೆಯಲ್ಲಿ ಮೈದಾನಕ್ಕೆ ಬಂದು ಇಬ್ಬರಿಗೂ ಸೆಲ್ಯೂಟ್ ಮಾಡಿದ್ದಾರೆ. ಜೈಸ್ವಾಲ್ ಮತ್ತು ರಾಹುಲ್ ಅವರಿಗೆ ವಿರಾಟ್ ತಮ್ಮ ಬ್ಯಾಟ್ ಅನ್ನು ಮೇಲಕ್ಕೆತ್ತಿ ಸೆಲ್ಯೂಟ್ ಮಾಡುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ ವೈರಲ್ ಆದ ಕೆಲವೇ ನಿಮಿಷಗಳಲ್ಲಿ ಕಾಪಿರೈಟ್ಸ್ ಕಾರಣದಿಂದ ವಿಡಿಯೊವನ್ನು ತೆಗೆದುಹಾಕಲಾಗಿದೆ.

ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್ ನಲ್ಲಿ ಕ್ರೀಸ್ ಕಚ್ಚಿ, ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಫಲವಾಗಿ ಅಜೇಯ 172 ರನ್ ಗಳ ಜೊತೆಯಾಟವನ್ನು ನೀಡಿದರು. ಜೊತೆಗೆ ಟೀಂ ಇಂಡಿಯಾ ಮುನ್ನಡೆ 218 ರನ್ ಗಳ ಮುನ್ನಡೆಯನ್ನು ಪಡೆಯಲು ಸಾಧ್ಯವಾಯಿತು. ಎರಡನೇ ದಿನದಾಟದ ಅಂತ್ಯಕ್ಕೆ ಜೈಸ್ವಾಲ್ 90 ರನ್ ಹಾಗೂ ರಾಹುಲ್ 62 ರನ್ ಗಳಿಸಿ ಮೂರನೇ ದಿನಕ್ಕೆ ಆಟವನ್ನು ಕಾಯ್ದುಕೊಂಡರು. ಎರಡನೇ ದಿನದಾಟದ ಬಳಿಕ ಡ್ರೆಸ್ಸಿಂಗ್ ರೂಮ್ ನತ್ತ ಬರುತ್ತಿದ್ದಾಗ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ ಸೆಲ್ಯೂಟ್ ಮೂಲಕ ಇಬ್ಬರೂ ಆರಂಭಿಕರಿಗೆ ವಿಶೇಷ ಗೌರವವನ್ನು ಸಲ್ಲಿಸಿದರು.

ಮೂರನೇ ದಿನದಾಟದಲ್ಲಿ 77 ರನ್ ಗಳಿಸಿ ರಾಹುಲ್ ಔಟಾದರು. ಬಳಿಕ ಯಶಸ್ವಿ ಜೈಸ್ವಾಲ್ 161 ರನ್ ಗಳಿಸಿದ್ದಾಗ ಮಿಚೆಲ್ ಮಾರ್ಷ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಅಂತಿಮವಾಗಿ ಈ ಜೋಡಿ ಮುರಿದ ಮೊದಲ ವಿಕೆಟ್ 201 ರನ್ ಜೊತೆಯಾಟ ನೀಡಿತು. ದೇವದತ್ ಪಡಿಕ್ಕಲ್ 25 ರನ್ ಗಳಿಸಿ ಬೇಗ ಪೆವಿಲಿಯನ್ ಸೇರಿಕೊಂಡರು. ರಿಷಭ್ ಪಂತ್ ಮತ್ತು ಧ್ರುವ್ ಜುರೆಲ್ ತಲಾ 1 ರನ್ ಗಳಿಸಿ ಬಂದಷ್ಟೇ ವೇಗವಾಗಿ ಔಟಾದವರು.

ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 150 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ಕೇವಲ 104 ರನ್ ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತ್ತು. ನಾಯಕ ಜಸ್ಪ್ರೀತ್ ಬುಮ್ರಾ ಅವರ ವೇಗದ ಬೌಲಿಂಗ್ ಮುಂದೆ ಆಸೀಸ್ ಬ್ಯಾಟರ್ ಗಳು ಪೆರೇಡ್ ನಡೆಸಿದರು. ಬುಮ್ರಾ 30 ರನ್ ಕೊಟ್ಟು ಪ್ರಮುಖ 5 ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಪರ್ತ್ ನೆಲದಲ್ಲಿ ಆಸೀಸ್ ಗೆಲುವಿಗೆ ಬೃಹತ್ ರನ್ ಗಳ ಗುರಿಯನ್ನು ನೀಡುವತ್ತ ದಾಪುಗಾಲು ಇಟ್ಟಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ