ಮೇ 25ರಂದು ಐಪಿಎಲ್ 2025ರ ಫೈನಲ್ ಪಂದ್ಯ; ಆರಂಭ ಯಾವಾಗ? ಮುಂದಿನ 3 ಆವೃತ್ತಿಯ ವೇಳಾಪಟ್ಟಿ ಬಹಿರಂಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಮೇ 25ರಂದು ಐಪಿಎಲ್ 2025ರ ಫೈನಲ್ ಪಂದ್ಯ; ಆರಂಭ ಯಾವಾಗ? ಮುಂದಿನ 3 ಆವೃತ್ತಿಯ ವೇಳಾಪಟ್ಟಿ ಬಹಿರಂಗ

ಮೇ 25ರಂದು ಐಪಿಎಲ್ 2025ರ ಫೈನಲ್ ಪಂದ್ಯ; ಆರಂಭ ಯಾವಾಗ? ಮುಂದಿನ 3 ಆವೃತ್ತಿಯ ವೇಳಾಪಟ್ಟಿ ಬಹಿರಂಗ

2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಿಂದ ಆರಂಭವಾಗಲಿದೆ. ಫೈನಲ್ ಪಂದ್ಯ ಮೇ 25ರಂದು ನಡೆಯಲಿದೆ. ಬಿಸಿಸಿಐ ಒಂದೇ ಬಾರಿಗೆ ಮುಂದಿನ ಮೂರು ಆವೃತ್ತಿಗಳ ಟೂರ್ನಿಯ ದಿನಾಂಕಗಳನ್ನು ಪ್ರಕಟಿಸಿದೆ.

ಮೇ 25ರಂದು ಐಪಿಎಲ್ 2025ರ ಫೈನಲ್ ಪಂದ್ಯ; ಆರಂಭ ಯಾವಾಗ? ಮುಂದಿನ 3 ಆವೃತ್ತಿಯ ವೇಳಾಪಟ್ಟಿ
ಮೇ 25ರಂದು ಐಪಿಎಲ್ 2025ರ ಫೈನಲ್ ಪಂದ್ಯ; ಆರಂಭ ಯಾವಾಗ? ಮುಂದಿನ 3 ಆವೃತ್ತಿಯ ವೇಳಾಪಟ್ಟಿ

ಮುಂದಿನ ಮೂರು ಋತುಗಳ ವೇಳಾಪಟ್ಟಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬಹಿರಂಗಪಡಿಸಿದೆ. ನವೆಂಬರ್‌ 24 ಹಾಗೂ 25ರಂದು ಐಪಿಎಲ್‌ 2025ರ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಅದಕ್ಕೂ ಮುನ್ನವೇ ಮೂರು ಸೀಸನ್‌ಗಳ ಪಂದ್ಯಾವಳಿಯ ದಿನಾಂಕ ಪ್ರಕಟಿಸಲಾಗಿದೆ. ವರದಿಗಳ ಪ್ರಕಾರ, ಐಪಿಎಲ್ 2025ರ ಆವೃತ್ತಿಯು ಮಾರ್ಚ್ 14ರಂದು ಆರಂಭವಾಗಲಿದ್ದು, ಮೇ 25ರಂದು ಫೈನಲ್‌ ಪಂದ್ಯ ನಡೆಯಲಿದೆ.

ಇದೇ ವೇಳೆ ಮುಂದಿನ ಮೂರು ಋತುಗಳ ದಿನಾಂಕಗಳನ್ನು ಖಚಿತಪಡಿಸಿರುವ ಐಪಿಎಲ್ ಆಡಳಿತ ಮಂಡಳಿಯು, ಟೂರ್ನಿಯಲ್ಲಿ ಭಾಗಿಯಾಗುವ ಎಲ್ಲಾ ಹತ್ತು ಫ್ರಾಂಚೈಸಿಗಳೊಂದಿಗೆ ಮಾತನಾಡಿದೆ. 2026ರ ಆವೃತ್ತಿಯು ಮಾರ್ಚ್ 15ರಿಂದ ಮೇ 31ರವರೆಗೆ ನಡೆಯಲಿದ್ದು, 2027ರ ಆವೃತ್ತಿಯು ಮಾರ್ಚ್ 14ರಿಂದ ಮೇ 30ರವರೆಗೆ ನಡೆಯಲಿದೆ ಎಂದು ಐಪಿಎಲ್‌ ತಿಳಿಸಿದೆ.

2025ರ ಐಪಿಎಲ್‌ ಆವೃತ್ತಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ. ಕಳೆದ ಆವೃತ್ತಿಯಲ್ಲೂ ಇಷ್ಟೇ ಪಂದ್ಯಗಳಿದ್ದವು. ಆದರೆ, 2022ರಲ್ಲಿ ನಡೆಎದ ಐಪಿಎಲ್ ಪಟ್ಟಿ ಮಾಡಿದ 84 ಪಂದ್ಯಗಳಿಗಿಂತ ಹತ್ತು ಪಂದ್ಯಗಳು ಕಡಿಮೆ.

ಐಪಿಎಲ್ 2025, 2026, ಮತ್ತು 2027ರ ದಿನಾಂಕಗಳು

  • ಐಪಿಎಲ್ 2025: ಈ ಸೀಸನ್ ಮಾರ್ಚ್ 14ರಂದು ಆರಂಭವಾಗುತ್ತದೆ. ಮೇ 25ರಂದು ಫೈನಲ್‌ ಪಂದ್ಯ ಮುಕ್ತಾಯಗೊಳ್ಳುತ್ತದೆ.
  • ಐಪಿಎಲ್ 2026: ಮಾರ್ಚ್ 15ರಿಂದ ಮೇ 31ರವರೆಗೆ ನಿಗದಿಪಡಿಸಲಾಗಿದೆ.
  • ಐಪಿಎಲ್ 2027: ಮಾರ್ಚ್ 14ರಿಂದ ಮೇ 30ರವರೆಗೆ ಪಂದ್ಯಗಳು ನಡೆಯಲಿವೆ.

ವಿವಿಧ ದೇಶಗಳಿಂದ ಆಟಗಾರರಿಗೆ ಅನುಮತಿ

ಇಎಸ್‌ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಪೂರ್ಣ ಸದಸ್ಯ ರಾಷ್ಟ್ರಗಳ ಹೆಚ್ಚಿನ ಆಟಗಾರರು ಮುಂದಿನ ಮೂರು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಲು ತಮ್ಮ ತಮ್ಮ ದೇಶದ ಕ್ರಿಕೆಟ್ ಮಂಡಳಿಗಳಿಂದ ಅನುಮೋದನೆ ಪಡೆದಿದ್ದಾರೆ. ಈಗಾಗಲೇ ಐಪಿಎಲ್ 2025ರಲ್ಲಿ ಭಾಗವಹಿಸಲು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಎಲ್ಲಾ ಆಟಗಾರರಿಗೆ ಅನುಮತಿ ನೀಡಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆಯ ಆಟಗಾರರು ಮುಂದಿನ ಮೂರು ಋತುಗಳಿಗೆ ಸಂಪೂರ್ಣವಾಗಿ ಲಭ್ಯವಿರುತ್ತಾರೆ ಎಂದು ಬಿಸಿಸಿಐ ತಿಳಿಸಿದೆ.

ಗಮನ ಸೆಳೆದ ಐಪಿಎಲ್‌ ಮೆಗಾ ಹರಾಜು

ಐಪಿಎಲ್ 2025ರ ಆವೃತ್ತಿಗಗೂ ಮುನ್ನ, ಇದೀಗ ಅಭಿಮಾನಿಗಳ ಚಿತ್ತ ಮೆಗಾ ಹರಾಜಿನ ಮೇಲಿದೆ. ಮೆಗಾ ಹರಾಜು ಪ್ರಕ್ರಿಯೆಯು ಇಂದು ಮತ್ತು ನಾಳೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯುತ್ತಿದೆ. ಒಟ್ಟು 577 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.

Whats_app_banner