logo
ಕನ್ನಡ ಸುದ್ದಿ  /  ಕ್ರಿಕೆಟ್  /  Vinod Kambli Health: ಮತ್ತೊಮ್ಮೆ ಹದಗೆಟ್ಟಿದ ವಿನೋದ್ ಕಾಂಬ್ಳಿ ಆರೋಗ್ಯ, ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು ಸಚಿನ್ ಆಪ್ತನಿಗೆ?

Vinod Kambli Health: ಮತ್ತೊಮ್ಮೆ ಹದಗೆಟ್ಟಿದ ವಿನೋದ್ ಕಾಂಬ್ಳಿ ಆರೋಗ್ಯ, ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು ಸಚಿನ್ ಆಪ್ತನಿಗೆ?

Prasanna Kumar P N HT Kannada

Dec 23, 2024 04:53 PM IST

google News

ಮತ್ತೊಮ್ಮೆ ಹದಗೆಟ್ಟಿದ ವಿನೋದ್ ಕಾಂಬ್ಳಿ ಆರೋಗ್ಯ, ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು ಸಚಿನ್ ಆಪ್ತನಿಗೆ?

    • Vinod Kambli: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದೆ. ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಮತ್ತೊಮ್ಮೆ ಹದಗೆಟ್ಟಿದ ವಿನೋದ್ ಕಾಂಬ್ಳಿ ಆರೋಗ್ಯ, ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು ಸಚಿನ್ ಆಪ್ತನಿಗೆ?
ಮತ್ತೊಮ್ಮೆ ಹದಗೆಟ್ಟಿದ ವಿನೋದ್ ಕಾಂಬ್ಳಿ ಆರೋಗ್ಯ, ದಿಢೀರ್ ಆಸ್ಪತ್ರೆಗೆ ದಾಖಲು, ಏನಾಯ್ತು ಸಚಿನ್ ಆಪ್ತನಿಗೆ?

Vinod Kambli Health Update: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಆಪ್ತ ಸ್ನೇಹಿತ ವಿನೋದ್ ಕಾಂಬ್ಳಿ ಅವರ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದೆ. ಅವರನ್ನು ಥಾಣೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲಾ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ವೈದ್ಯರು ಅವರನ್ನು ನಿಗಾದಲ್ಲಿ ಇರಿಸಿದ್ದಾರೆ. ಇತ್ತೀಚೆಗೆ ತಮ್ಮ ಕೋಚ್​​ ಆಗಿದ್ದ ರಮಾಕಾಂತ್ ಆಚ್ರೇಕರ್​ ಅವರ ಸ್ಮರಣಾರ್ಥ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿನ್​ರನ್ನು ಭೇಟಿ ಮಾಡಿ ಸುದ್ದಿಯಾಗಿದ್ದ ಕಾಂಬ್ಳಿ ಮತ್ತೊಮ್ಮೆ ತೀವ್ರ ಅನಾರೋಗ್ಯಕ್ಕೆ ಸಿಲುಕಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಡಿತದ ವ್ಯವಸದಿಂದ ಸಾಕಷ್ಟು ಬಳಲುತ್ತಿದ್ದ ಕಾಂಬ್ಳೆ ಅವರು ಈ ಹಿಂದೆ 14 ಬಾರಿ ರಿಹ್ಯಾಬ್​ಗೆ ಹೋಗಿದ್ದರು.

ಇತ್ತೀಚೆಗೆ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಬ್ಳಿ ಜೊತೆಗೆ ಸಚಿನ್ ಕೂಡ ಭಾಗವಹಿಸಿದ್ದರು. ಆಪ್ತ ಸ್ನೇಹಿತರು ದೀರ್ಘಕಾಲದ ನಂತರ ಮುಖಾಮುಖಿ ಭೇಟಿಯಾಗಿದ್ದರು. ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಕಾಂಬ್ಳಿ ಆರೋಗ್ಯ ಪರಿಸ್ಥಿತಿ ಕಂಡು ಕ್ರಿಕೆಟ್​ ವಲಯದಲ್ಲಿ ಕಳವಳ ವ್ಯಕ್ತವಾಗಿತ್ತು. ಹೃದ್ರೋಗದ ಜೊತೆಗೆ ಇತರ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಂಬ್ಳಿ ಅವರಿಗೆ ಈ ಹಿಂದೆಯೂ ಆರೋಗ್ಯ ಹದಗೆಟ್ಟಿತ್ತು. ಇದೀಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಶೀಘ್ರದಲ್ಲೇ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ವಿನೋದ್ ಕಾಂಬ್ಳಿ ವೃತ್ತಿಜೀವನ

ಟೀಮ್ ಇಂಡಿಯಾ ಪರ ಹಲವು ಪಂದ್ಯಗಳಲ್ಲಿ ಕಾಂಬ್ಳಿ ದಿಟ್ಟ ಪ್ರದರ್ಶನ ನೀಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 104 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 2 ಶತಕ ಹಾಗೂ 14 ಅರ್ಧಶತಕ ಬಾರಿಸಿದ್ದಾರೆ. ಇದರೊಂದಿಗೆ 2477 ರನ್ ಗಳಿಸಿದ್ದಾರೆ. ಅತ್ಯುತ್ತಮ ಏಕದಿನ ಸ್ಕೋರ್ 106 ರನ್. ಕಾಂಬ್ಳಿ 17 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 1084 ರನ್ ಗಳಿಸಿದ್ದಾರೆ. ಈ ಪೈಕಿ ಎರಡು ದ್ವಿಶತಕವನ್ನೂ ಸಿಡಿಸಿದ್ದಾರೆ. ಅವರ ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ವೃತ್ತಿಜೀವನವೂ ಅತ್ಯುತ್ತಮವಾಗಿದೆ. ಕಾಂಬ್ಳಿ ಪ್ರಥಮ ದರ್ಜೆ ಪಂದ್ಯಗಳಲ್ಲಿ 9965 ರನ್ ಗಳಿಸಿದ್ದಾರೆ. ಒಂದು ಕಾಲದಲ್ಲಿ ಕಾಂಬ್ಳಿ ಅವರನ್ನು ದಿಗ್ಗಜ ಕ್ರಿಕೆಟಿಗರೊಂದಿಗೆ ಹೋಲಿಸಲಾಗುತ್ತಿತ್ತು. ಆದರೆ ಅವರು ಕುಡಿತದ ಚಟಕ್ಕೆ ಒಳಗಾಗಿ ತನ್ನ ವೃತ್ತಿಜೀವನವನ್ನು ಹಾಳು ಮಾಡಿಕೊಂಡರು.

ನೆರವಿಗೆ ಬರ್ತೀವಿ ಎಂದಿದ್ರು 1983ರ ವಿಶ್ವಕಪ್ ತಂಡದ ಸದಸ್ಯರು!

ಕಾಂಬ್ಳಿ ಅವರ ವಿಡಿಯೋ ವೈರಲ್ ಆದ ಬಳಿಕ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರು ನೆರವಿಗೆ ಬರುವುದಾಗಿ ಘೋಷಿಸಿದ್ದಾರೆ. ಕಪಿಲ್ ದೇವ್ ಅವರು ಷರತ್ತಿನೊಂದಿಗೆ ಸಹಾಯ ಮಾಡಲಿದ್ದೇವೆ ಎಂದು ಇತ್ತೀಚೆಗೆ ಹೇಳಿದ್ದರು. ಕುಡಿಯುವುದನ್ನು ಬಿಟ್ಟು ರಿಹ್ಯಾಬ್​ಗೆ ಹೋದರೆ ಅವರ ಚಿಕಿತ್ಸೆಗೆ ಸಂಬಂಧಿಸಿ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ. ಎಷ್ಟೇ ಖರ್ಚಾದರೂ ಪರವಾಗಿಲ್ಲ, ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಇದಕ್ಕೆ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿ, ಕಾಂಬ್ಳಿ ಅವರು ನನ್ನ ಮಗನಿದ್ದಂತೆ. ಅವರಿಗೋಸ್ಕರ ಏನುಬೇಕಾದರೂ ಮಾಡಲು ನಾವು ಸಿದ್ಧ ಎಂದು ಹೇಳಿದ್ದರು. ಇದೆಲ್ಲದರ ನಂತರ ಇದಕ್ಕೆ ಉತ್ತರಿಸಿದ್ದ ಕಾಂಬ್ಳಿ, ನಾನು ಅವರ ಷರತ್ತಿಗೆ ಬದ್ಧ ಎಂದು ಭರವಸೆ ನೀಡಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ