logo
ಕನ್ನಡ ಸುದ್ದಿ  /  ಕ್ರಿಕೆಟ್  /  147 ವರ್ಷಗಳ ಟೆಸ್ಟ್​ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾದ ಅಶ್ವಿನ್ ಮತ್ತು ಜಾನಿ ಬೈರ್‌ಸ್ಟೋ

147 ವರ್ಷಗಳ ಟೆಸ್ಟ್​ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾದ ಅಶ್ವಿನ್ ಮತ್ತು ಜಾನಿ ಬೈರ್‌ಸ್ಟೋ

Prasanna Kumar P N HT Kannada

Mar 04, 2024 09:52 PM IST

ಅಪರೂಪದ ದಾಖಲೆ ಬರೆಯಲು ಸಜ್ಜಾದ ಅಶ್ವಿನ್ ಮತ್ತು ಜಾನಿ ಬೈರ್‌ಸ್ಟೋ

    • Ravichandran Ashwin and Jonny Bairstow : ಉಭಯ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ ಅವರು 100ನೇ ಟೆಸ್ಟ್​​​ ಪಂದ್ಯಗಳ ಕ್ಲಬ್​​ಗೆ ಸೇರಲು ಸಜ್ಜಾಗಿದ್ದಾರೆ.
ಅಪರೂಪದ ದಾಖಲೆ ಬರೆಯಲು ಸಜ್ಜಾದ ಅಶ್ವಿನ್ ಮತ್ತು ಜಾನಿ ಬೈರ್‌ಸ್ಟೋ
ಅಪರೂಪದ ದಾಖಲೆ ಬರೆಯಲು ಸಜ್ಜಾದ ಅಶ್ವಿನ್ ಮತ್ತು ಜಾನಿ ಬೈರ್‌ಸ್ಟೋ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಆಕರ್ಷಕ ಟೆಸ್ಟ್ ಸರಣಿಯು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಟೆಸ್ಟ್‌ನೊಂದಿಗೆ (India vs England 5th Test) ಮುಕ್ತಾಯಗೊಳ್ಳಲು ಸಿದ್ಧವಾಗಿದೆ. ಭಾರತದ ವಿರುದ್ಧ ಬಜ್​ಬಾಲ್​ ವಿಫಲಗೊಂಡಿದ್ದು, ಸರಣಿ ಅಂತಿಮ ಪಂದ್ಯಕ್ಕೆ ಹೋಗುವ ಮುನ್ನವೇ ಆತಿಥೇಯರು 3-1 ಅಂತರದ ಮುನ್ನಡೆ ಸಾಧಿಸಿದ್ದಾರೆ. ಆದರೆ ಈ ಪಂದ್ಯವು ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

2ನೇ ಟೈಮ್​ ಔಟ್​ಗೂ ಮುನ್ನವೇ 10 ವಿಕೆಟ್​ಗಳಿಂದ ಗೆದ್ದ ಹೈದರಾಬಾದ್​; ಲಕ್ನೋ ವಿರುದ್ಧ 9.4 ಓವರ್​​ಗಳಲ್ಲೇ 167 ರನ್ ಚೇಸ್

ಕ್ರಿಕೆಟ್ ಪ್ರಿಯರಿಗೆ ಗುಡ್​ನ್ಯೂಸ್; ಈ ಒಟಿಟಿ ಫ್ಲಾಟ್​ಫಾರಂನಲ್ಲಿ ಉಚಿತವಾಗಿ ಟಿ20 ವಿಶ್ವಕಪ್​ ನೋಡಿ ಎಂಜಾಯ್ ಮಾಡಿ!

ವಿರಾಟ್ ಕೊಹ್ಲಿ, ರೋಹಿತ್​ ವಿಶ್ವದಾಖಲೆ ಮೇಲೆ ಬಾಬರ್ ಅಜಮ್ ಕಣ್ಣು; 215 ರನ್ ಗಳಿಸಿದ್ರೆ ಟಿ20ಯಲ್ಲಿ ಈತನದ್ದೇ ದರ್ಬಾರ್​

ಈ 11 ಆಟಗಾರರೊಂದಿಗೆ ಆರ್​​ಸಿಬಿ ಕಣಕ್ಕಿಳಿದರೆ ಪಂಜಾಬ್​ ಎದುರೂ ಗೆಲುವು ಪಕ್ಕಾ; ಪ್ಲೇಆಫ್ ರೇಸ್​ನಲ್ಲೂ ಉಳಿಯಬಹುದು

ಉಭಯ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋ (Ravichandran Ashwin and Jonny Bairstow) ಅವರು 100ನೇ ಟೆಸ್ಟ್​​​ ಪಂದ್ಯಗಳ ಕ್ಲಬ್​​ಗೆ ಸೇರಲು ಸಜ್ಜಾಗಿದ್ದಾರೆ. ಈ ಇಬ್ಬರ ಜೊತೆಗೆ ಇನ್ನಿಬ್ಬರು ಸಹ 100 ಟೆಸ್ಟ್​ಗಳ ಕ್ಲಬ್‌ಗೆ ಸೇರಲು ಸಿದ್ಧರಾಗಿದ್ದಾರೆ. ಇದು 147 ವರ್ಷಗಳ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಬಹಳ ಅಪರೂಪದ ಸಂದರ್ಭ ಎನಿಸಲಿದೆ. ವಿಶ್ವ ಕ್ರಿಕೆಟ್​​ನಲ್ಲಿ ಇಂತಹ ಕ್ಷಣಗಳು ಈ ಹಿಂದೆ ಎರಡು ಬಾರಿ ನಡೆದಿವೆ.

100ನೇ ಟೆಸ್ಟ್​ ಆಡಲು ಅಶ್ವಿನ್, ಜಾನಿ ಸಜ್ಜು

ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಬಾರಿಗೆ ಎದುರಾಳಿ ತಂಡಗಳ ಇಬ್ಬರು ಆಟಗಾರರು ಒಂದೇ ಪಂದ್ಯದಲ್ಲಿ ತಮ್ಮ 100ನೇ ಟೆಸ್ಟ್ ಆಡಲಿದ್ದಾರೆ. 2006ರಲ್ಲಿ ಸೌತ್​ ಆಫ್ರಿಕಾ-ನ್ಯೂಜಿಲೆಂಡ್​ ಟೆಸ್ಟ್ ಪಂದ್ಯದಲ್ಲಿ ಜಾಕ್​ ಕಾಲಿಸ್, ಶಾನ್ ಪೊಲಾಕ್ ಮತ್ತು ಸ್ಟೀಫನ್ ಫ್ಲೆಮಿಂಗ್ ತಮ್ಮ 100ನೇ ಟೆಸ್ಟ್ ಆಡಿದ್ದರು. ಇದು ಟೆಸ್ಟ್​ ಕ್ರಿಕೆಟ್​​ನಲ್ಲಿ ಎದುರಾಳಿ ತಂಡಗಳ ಆಟಗಾರರು ಒಟ್ಟಿಗೆ 100ನೇ ಟೆಸ್ಟ್​ ಆಡಿದ ಮೊದಲ ಘಟನೆಯಾಗಿತ್ತು.

2013ರಲ್ಲಿ ಮೈಕಲ್ ಕ್ಲಾರ್ಕ್ ಮತ್ತು ಅಲಸ್ಟೈರ್ ಕುಕ್ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ತಮ್ಮ 100ನೇ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಇದು 2ನೇ ಕ್ಷಣವಾಗಿತ್ತು. ಅಶ್ವಿನ್-ಬೈರ್‌ಸ್ಟೋ ಇಬ್ಬರೂ ಧರ್ಮಶಾಲಾದಲ್ಲಿ 5ನೇ ಟೆಸ್ಟ್ ಆಡಿದರೆ, ಈ ವಿಶಿಷ್ಟ ದಾಖಲೆ ಅನುಕರಿಸುವ 3ನೇ ವಿಶೇಷ ಕ್ಷಣವಾಗಲಿದೆ. ಇನ್ನೊಂದು ನಿದರ್ಶನವೆಂದರೆ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ನ ಮೈಕ್ ಅಥರ್ಟನ್ ಮತ್ತು ಅಲೆಕ್ ಸ್ಟೀವರ್ಟ್ ಒಂದೇ ತಂಡದ ಪರ 100 ನೇ ಟೆಸ್ಟ್ ಆಡಿದ್ದರು.

ವಿಲಿಯಮ್ಸನ್ ಮತ್ತು ಸೌಥಿ ಕೂಡ 100 ಟೆಸ್ಟ್​​ ಕ್ಲಬ್​ಗೆ

ಭಾರತದಿಂದ ಸುಮಾರು 12,000 ಕಿಮೀ ದೂರದಲ್ಲಿರುವ ನ್ಯೂಜಿಲೆಂಡ್​​ನಲ್ಲಿ ಇನ್ನಿಬ್ಬರು ಆಟಗಾರರು ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್​​ನಲ್ಲಿ ನ್ಯೂಜಿಲೆಂಡ್​​ನ ಟಿಮ್ ಸೌಥಿ ಮತ್ತು ಕೇನ್ ವಿಲಿಯಮ್ಸನ್ ಅವರು ತಮ್ಮ 100 ನೇ ಟೆಸ್ಟ್ ಅನ್ನು ಒಟ್ಟಿಗೆ ಆಡಲಿದ್ದಾರೆ. ಈಗಾಗಲೇ 76 ಆಟಗಾರರು 100 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್​​ಗಳನ್ನು ಆಡಿದ್ದಾರೆ. ಆದರೆ ಭಾರತದ ಟೆಸ್ಟ್​​ 7ನೇ ತಾರೀಖಿನಂದು ನಡೆದರೆ, ಆಸೀಸ್-ಕಿವೀಸ್ 2ನೇ ಟೆಸ್ಟ್​​ ಮಾರ್ಚ್ 8ರಂದು ನಡೆಯಲಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು