‘ಮುದ್ದಿಸಿದೆ, ಚುಂಬಿಸಿದೆ ಅದರಲ್ಲೇನು ತಪ್ಪು?’ ಆ ಕೆಟ್ಟ ಅನುಭವದ ನೋವಿನಿಂದ ಇನ್ನೂ ಹೊರಬಂದಿಲ್ಲ ‘ಗಜ’ ನಟಿ ನವ್ಯಾ ನಾಯರ್!-sandalwood news gaja drushya movie fame malayalam actress navya nair shares her life s bad moment with kids mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಮುದ್ದಿಸಿದೆ, ಚುಂಬಿಸಿದೆ ಅದರಲ್ಲೇನು ತಪ್ಪು?’ ಆ ಕೆಟ್ಟ ಅನುಭವದ ನೋವಿನಿಂದ ಇನ್ನೂ ಹೊರಬಂದಿಲ್ಲ ‘ಗಜ’ ನಟಿ ನವ್ಯಾ ನಾಯರ್!

‘ಮುದ್ದಿಸಿದೆ, ಚುಂಬಿಸಿದೆ ಅದರಲ್ಲೇನು ತಪ್ಪು?’ ಆ ಕೆಟ್ಟ ಅನುಭವದ ನೋವಿನಿಂದ ಇನ್ನೂ ಹೊರಬಂದಿಲ್ಲ ‘ಗಜ’ ನಟಿ ನವ್ಯಾ ನಾಯರ್!

ಬಹುಭಾಷಾ ನಟಿ ನವ್ಯಾ ನಾಯರ್‌, ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಉತ್ತರ ಭಾರತ ಪ್ರವಾಸದಲ್ಲಿರುವ ಇದೇ ನಟಿ ಈ ಹಿಂದೆ ನಡೆದ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

‘ಮುದ್ದಿಸಿದೆ, ಚುಂಬಿಸಿದೆ ಅದರಲ್ಲೇನು ತಪ್ಪು?’ ಆ ಕೆಟ್ಟ ಅನುಭವದ ನೋವಿಂದ ಇನ್ನೂ ಹೊರಬಂದಿಲ್ಲ ‘ಗಜ’ ನಟಿ ನವ್ಯಾ ನಾಯರ್!
‘ಮುದ್ದಿಸಿದೆ, ಚುಂಬಿಸಿದೆ ಅದರಲ್ಲೇನು ತಪ್ಪು?’ ಆ ಕೆಟ್ಟ ಅನುಭವದ ನೋವಿಂದ ಇನ್ನೂ ಹೊರಬಂದಿಲ್ಲ ‘ಗಜ’ ನಟಿ ನವ್ಯಾ ನಾಯರ್!

Navya Nair: ಮೂಲ ಮಲಯಾಳಯಾದರೂ, ಕರುನಾಡ ಚಿತ್ರಪ್ರೇಮಿಗಳಿಗೂ ಗೊತ್ತಿರುವ ಮುಖ ಎಂದರೆ ಅದು ನವ್ಯಾ ನಾಯರ್‌ ಅವರದ್ದು. ದರ್ಶನ್‌ ನಾಯಕನಾಗಿ ನಟಿಸಿದ ಗಜ ಸಿನಿಮಾ ಮೂಲಕ ಚಂದನವನದ ಕದ ತಟ್ಟಿದ ಈ ನಟಿಗೆ, ಆರಂಭದಲ್ಲಿಯೇ ದೊಡ್ಡ ಯಶಸ್ಸು ಸಿಕ್ಕಿತ್ತು. ಮೊದಲ ಚಿತ್ರವೇ ಕೈ ಹಿಡಿಯಿತು. ಅಲ್ಲಿಂದ ಕನ್ನಡಿಗರ ಪ್ರೀತಿಯನ್ನೂ ಸಂಪಾದಿಸಿದ ನವ್ಯಾ, ಸಾಲು ಸಾಲು ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡರು. ರವಿಚಂದ್ರನ್‌ ಜತೆ ದೃಶ್ಯ ಸಿನಿಮಾದ ಎರಡೂ ಭಾಗಗಳಲ್ಲಿ ನಟಿಸಿದರು. ಹೀಗಿರುವಾಗಲೇ ತಮ್ಮ ಜೀವನದ ಕೆಟ್ಟ ಅನುಭವವೊಂದನ್ನು ಇದೀಗ ಹಂಚಿಕೊಂಡಿದ್ದಾರೆ.

ಮಾಲಿವುಡ್‌ನಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡ ನವ್ಯಾ, ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ತೆರೆಮೇಲೆ ಎಷ್ಟು ಸಿಂಪಲ್‌ ಆಗಿರುತ್ತಾರೋ, ತೆರೆಯ ಆಚೆಗೂ ಅಂದರೆ ರಿಯಲ್‌ ಲೈಫ್‌ನಲ್ಲೂ ಅಷ್ಟೇ ಸಿಂಪಲ್. ಚಿತ್ರಗಳಲ್ಲಿ ಅವರನ್ನು ಅದೇ ರೀತಿಯಲ್ಲಿ ನೋಡಿದ್ದೇ ಹೆಚ್ಚು. ಈ ಸಿಂಪಲ್‌ ನಟಿಗೆ ಮಕ್ಕಳೆಂದರೆ ಅಷ್ಟೇ ಪ್ರೀತಿ. ಇದೀಗ ಕೆಲ ವರ್ಷಗಳಿಂದ ಅವರು ಮಕ್ಕಳನ್ನು ಮುದ್ದಿಸುವುದರಿಂದ ತುಂಬ ದೂರ ಉಳಿದಿದ್ದಾರೆ. ಅದಕ್ಕೆ ಕಾರಣ ಏನಿರಬಹುದು? ಅದನ್ನೂ ಅವರೇ ಹೇಳಿದ್ದಾರೆ.

ಮುದ್ದಾಡಿದ್ದೇ ರಾದ್ಧಾಂತವಾಯ್ತು

ನವ್ಯಾ ನಾಯರ್ ಮಲಯಾಳಂನ ನೆಚ್ಚಿನ ನಟಿ. ಇಷ್ಟಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ನವ್ಯಾ, ನಂದನಂ ಚಿತ್ರದಿಂದ ಎಲ್ಲರ ಗಮನಸೆಳೆದಿದ್ದಾರೆ. ಆ ಚಿತ್ರದಲ್ಲಿನ ಬಾಲಾಮಣಿ ಪಾತ್ರ ಅಪಾರ ಜನಪ್ರಿಯತೆ ತಂದುಕೊಟ್ಟಿದೆ. ಹೀಗಿರುವಾಗಲೇ ಇದೇ ನಟಿ ತಮ್ಮ ಜೀವನದ ಕೆಟ್ಟ ಅನುಭವವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಸಂಬಂಧಿಕರ ಮಗುವನ್ನು ಎತ್ತಿಕೊಂಡು, ಮುದ್ದಿಸಿ ಚುಂಬಿಸಿದ್ದೇ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿತ್ತು. ಆ ನೋವಿನ ವಿಷ್ಯವನ್ನೇ ವಿಡಿಯೋ ಮೂಲಕ ಶೇರ್‌ ಮಾಡಿದ್ದಾರೆ.

ಸದ್ಯ ನವ್ಯಾ ಪ್ರವಾಸದಲ್ಲಿದ್ದಾರೆ. ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಎಂದೆಲ್ಲ ಸುತ್ತಾಡುತ್ತಿದ್ದಾರೆ. ಆಗ್ರಾಕ್ಕೂ ತೆರಳಿ ತಾಜ್‌ಮಹಲ್‌ ಮುಂದೆ ಬಗೆಬಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಲ್ಲೇ ಇದ್ದ ಮಗುವನ್ನು ಎತ್ತಿ ಮುದ್ದಾಡಿ, ಸಿಹಿ ಮುತ್ತನ್ನು ನೀಡಿದ್ದಾರೆ. ಈ ಮಗುವಿನ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ, ಮಗುವಿನ ವಿಚಾರದಲ್ಲಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ನವ್ಯಾ ನಾಯರ್‌ ಬೇಸರದ ಪೋಸ್ಟ್‌ ಹೀಗಿದೆ

"ಕೆಟ್ಟ ಅನುಭವ ಆದಮೇಲೆ ಮೊದಲಿನಂತೆ ನಾನು ಮಕ್ಕಳ ಜತೆಗೆ ಸಲುಗೆ ಇಂದ ಇರಲು ಆಗಲಿಲ್ಲ. ಏಕೆಂದರೆ, ಆವತ್ತು ನನ್ನದೇ ಮನೆಯ ಮಗು, ಹೊರಗೆ ಬೆಳೆದವಳು. ಇಂಗ್ಲೀಷು ಮತ್ತು ಮಲಯಾಳಂನಲ್ಲಿ ಅವಳ ಮಾತು ಕೇಳುವುದೇ ಚೆಂದ. ಮನೆಯ ಮಗು ಆಗಿದ್ದರಿಂದ ಎತ್ತಿ ಮುದ್ದಾಡಿದೆ. ಪ್ರೀತಿಯಿಂದ ಕೆನ್ನೆಗೆ, ಹಣೆಗೆ ಮುತ್ತನ್ನಿಟ್ಟೆ. ಆದರೆ, ಅವರ ಅಮ್ಮ ಬಂದು, ಅಪರಿಚಿತರ ಮಗುವಿಗೆ ಹೀಗೆ ಮುತ್ತು ಕೊಡುವುದು ಎಷ್ಟು ಸರಿ? ಎಂದರು. ನಾನು ಒಂದು ಕ್ಷಣ ದಿಗ್ಭ್ರಮೆಗೊಂಡೆ. ಅಷ್ಟಕ್ಕೂ ಆ ಮಗುವಿನ ತಂದೆ ಮತ್ತು ನಾನು ಒಂದೇ ಮನೆಯಲ್ಲಿ ಬೆಳೆದವರು. ಹೆಚ್ಚಾಗಿ ರಕ್ತ ಸಂಬಂಧಿಗಳು. ನನ್ನ ಕಣ್ಣುಗಳಲ್ಲಿ ಆ ಕ್ಷಣ ನೀರು ತುಂಬಿತು. ನಾನು ಏನನ್ನೂ ಹೇಳದೆ ಹೊರಟೆ" ಎಂದು ನವ್ಯಾ ಹಳೇ ಘಟನೆಯನ್ನು ನೆನಪಿಸಿಕೊಂಡು ಪೋಸ್ಟ್‌ ಹಂಚಿಕೊಂಡಿದ್ದಾರೆ.

mysore-dasara_Entry_Point