ಕನ್ನಡ ಸುದ್ದಿ  /  ಮನರಂಜನೆ  /  Deepika Das Marriage: ನಟಿ ದೀಪಿಕಾ ದಾಸ್‌ ಸೈಲೆಂಟ್‌ ಆಗಿ ಮದುವೆಯಾಗಿಬಿಟ್ರ? ಬಿಗ್‌ಬಾಸ್‌ ಚೆಲುವೆಯ ವೆಡ್ಡಿಂಗ್‌ ಫೋಟೋಶೂಟ್‌

Deepika Das Marriage: ನಟಿ ದೀಪಿಕಾ ದಾಸ್‌ ಸೈಲೆಂಟ್‌ ಆಗಿ ಮದುವೆಯಾಗಿಬಿಟ್ರ? ಬಿಗ್‌ಬಾಸ್‌ ಚೆಲುವೆಯ ವೆಡ್ಡಿಂಗ್‌ ಫೋಟೋಶೂಟ್‌

Deepika Das Marriage: ಬಿಗ್‌ಬಾಸ್‌ ಕನ್ನಡ ಸೀಸನ್‌ 9ರಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ದಾಸ್‌ ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ದೀಪಿಕಾ ದಾಸ್‌ ಗೋವಾದಲ್ಲಿ ಮದುವೆಯಾಗಿದ್ದಾರೆ. ದುಬೈನಲ್ಲಿರುವ ಕರ್ನಾಟಕ ಮೂಲದ ಉದ್ಯಮಿಯನ್ನು ದೀಪಿಕಾ ದಾಸ್‌ ವಿವಾಹವಾಗಿದ್ದಾರೆ.

Deepika Das Marriage: ನಟಿ ದೀಪಿಕಾ ದಾಸ್‌ ಮದುವೆ ಫೋಟೋಶೂಟ್‌
Deepika Das Marriage: ನಟಿ ದೀಪಿಕಾ ದಾಸ್‌ ಮದುವೆ ಫೋಟೋಶೂಟ್‌

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 9ರಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ದಾಸ್‌ ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ. ನಟಿ ಸೈಲೆಂಟ್‌ ಆಗಿ ಮದುವೆಯಾಗಿಬಿಟ್ರ? ದೀಪಿಕಾ ದಾಸ್‌ ಕೈ ಹಿಡಿದ ವರ ಯಾರು? ಎಂಗೇಜ್‌ಮೆಂಟ್‌ ಇತ್ಯಾದಿಗಳ ಸುದ್ದಿಯೇ ಇಲ್ಲದೆ ನೇರವಾಗಿ ಮದುವೆಯಾದ್ರ? ಇದು ಪ್ರೀವೆಡ್ಡಿಂಗ್‌ ಫೋಟೋಶೂಟಾ? ಇತ್ಯಾದಿ ಸಂದೇಹಗಳು ಬರುವಂತೆ ದೀಪಿಕಾ ದಾಸ್‌ ತನ್ನ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದೀಗ ಬಂದ ಅಪ್‌ಡೇಟ್‌: ಮೂಲಗಳ ಪ್ರಕಾರ ದೀಪಿಕಾ  ದಾಸ್‌ ಗೋವಾದಲ್ಲಿ ಮದುವೆಯಾಗಿದ್ದಾರೆ. ದುಬೈನಲ್ಲಿರುವ ಕರ್ನಾಟಕ ಮೂಲದ ಉದ್ಯಮಿಯನ್ನು ದೀಪಿಕಾ ದಾಸ್‌ ವಿವಾಹವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಗೋವಾದಲ್ಲಿ ವಿವಾಹ ನಡೆದಿದ್ದು, ವಧುವರರ ಕುಟುಂಬದ ಕೆಲವೇ ಸದಸ್ಯರು ಮಾತ್ರ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

ದೀಪಿಕಾ ದಾಸ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ "ವೆಲ್‌ಕಂ ಟು ಅಡ್ವೇಂಚರ್‌ ವರ್ಲ್ಡ್‌" ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈ ಮೂಲಕ ಈ ಫೋಟೋಗಳ ಹಿಂದೆ ಏನೋ ರಹಸ್ಯ ಇರುವ ಸೂಚನೆ ನೀಡಿದ್ದಾರೆ. ಆದರೆ, ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದ್ಯಾವುದೋ ಜಾಹೀರಾತು ಫೋಟೋ ಆಗಿರಬಹುದು ಎಂಬ ಅನುಮಾನವೂ ದಟ್ಟವಾಗಿತ್ತು. ಆದರೆ, ಇದೀಗ ಆ ಅನುಮಾನ ಪರಿಹಾರವಾಗಿದೆ. 

ಟ್ರೆಂಡಿಂಗ್​ ಸುದ್ದಿ

ನಾಗಿಣಿ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ದೀಪಿಕಾ ದಾಸ್‌ ಅವರು ಬೀಚ್‌ ಸೈಡ್‌ ವೆಡ್ಡಿಂಗ್‌ ಫೋಟೋಶೂಟ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್‌ ಸೀಸನ್‌ 9ರಲ್ಲಿ ಶೈನ್‌ ಶೆಟ್ಟಿ ಗೆಲುವು ಪಡೆದಿದ್ದರು. ಶೈನ್‌ ಶೆಟ್ಟಿ ಮತ್ತು ದೀಪಿಕಾ ದಾಸ್‌ ಆತ್ಮೀಯರಾಗಿದ್ದರು. ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಗುಸುಗುಸು ಇತ್ತು. ಆದರೆ, ಈಗ ಮದುವೆಯ ಫೋಟೋ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಿಸ್ಟರ್‌ ಆಂಡ್‌ ಮಿಸ್‌ ಡಿ ಎಂದು ಬರೆದಿರುವ ಕ್ಯಾಪ್ಷನ್‌ ಹಲವು ಸಂದೇಹಗಳನ್ನು ಹುಟ್ಟುಹಾಕಿತ್ತು. ಇದೀಗ ಬಂದ ಮಾಹಿತಿ ಪ್ರಕಾರ ದೀಪಿಕಾ ದಾಸ್‌ ಗೋವಾದಲ್ಲಿ ಮದುವೆಯಾಗಿದ್ದಾರೆ. ದುಬೈನಲ್ಲಿರುವ ಕರ್ನಾಟಕ ಮೂಲದ ಉದ್ಯಮಿಯನ್ನು ದೀಪಿಕಾ ದಾಸ್‌ ವಿವಾಹವಾಗಿದ್ದಾರೆ ಎನ್ನಲಾಗಿದೆ. 

ಇತ್ತೀಚೆಗೆ ಬಿಗ್‌ಬಾಸ್‌ ಸ್ಪರ್ಧಿಗಳಾದ ಕಾರ್ತಿಕ್‌ ಮಹೇಶ್‌ ಮತ್ತು ನಮ್ರತಾ ಗೌಡ ಕೂಡ ಇದೇ ರೀತಿ ಮದುವೆಯಾದ ಫೋಟೋ ಹಂಚಿಕೊಂಡಿದ್ದರು. ಇದು ನಿಜವಾದ ಮದುವೆಯಲ್ಲ, ಇದೇ ಕಾರಣಕ್ಕೆ ಕಾರ್ತಿಕ್‌ ಮಹೇಶ್‌ ಅವರು "ಕರಿಮಣಿ ಮಾಲೀಕ ನಾನಲ್ಲ" ಎಂಬ ವಿಡಿಯೋವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಜ್ಯುವೆಲ್ಲರಿ ಜಾಹೀರಾತುವೊಂದಕ್ಕೆ ಬಿಗ್‌ಬಾಸ್‌ ಕನ್ನಡದ ನಮ್ರತಾ ಗೌಡ ಮತ್ತು ಕಾರ್ತಿಕ್‌ ಮಹೇಶ್‌ ಈ ರೀತಿ ಮದುವೆ ಗಂಡು-ಹೆಣ್ಣಾಗಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳ ಜಾಹೀರಾತಿಗಾಗಿ ಈ ರೀತಿ ಮದುವೆ ದೃಶ್ಯದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಇದೇ ರೀತಿ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ದೀಪಿಕಾ ದಾಸ್‌ ಕೂಡ ಮದುಮಗಳಾಗಿರಬಹುದು ಎಂದು ಊಹಿಸಲಾಗಿತ್ತು. ಆದರೆ, ಇದೀಗ ದೀಪಿಕಾ ದಾಸ್‌ ಮದುವೆಯಾಗಿರುವುದು ಖಚಿತವಾಗಿದೆ.