ಕೆಎಲ್ ರಾಹುಲ್ ಕೊನೆಯ ರಣಜಿ ಆಡಿದ್ದು ಯಾವಾಗ; ಶ್ರೇಯಸ್ ಅಯ್ಯರ್ಗಾದ ಅನ್ಯಾಯಕ್ಕೆ ಬಿಸಿಸಿಐ ವಿರುದ್ಧ ಕೆಕೆಆರ್ ಅಧಿಕಾರಿ ಸ್ಪೋಟ
Shreyas Iyer : ಶ್ರೇಯಸ್ ಅಯ್ಯರ್ ಅವರನ್ನು ವಾರ್ಷಿಕ ಗುತ್ತಿಗೆ ಒಪ್ಪಂದದಿಂದ ಕೈಬಿಟ್ಟಿರುವ ಬಿಸಿಸಿಐ ಕ್ರಮವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ವಾರ್ಷಿಕ ಒಪ್ಪಂದ ಪಡೆದ ಆಟಗಾರರ ಪಟ್ಟಿಯನ್ನು ಬಿಸಿಸಿಐ (BCCI) ಪ್ರಕಟಿಸಿತು. ರಣಜಿ ಟೂರ್ನಿ ಆಡುವಂತೆ ಸೆಲೆಕ್ಟರ್ಸ್ ಮತ್ತು ಹೆಡ್ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ಆದೇಶಿಸಿದ್ದರೂ ನಿರ್ಲಕ್ಷಿಸಿ ಸುಳ್ಳು ಹೇಳಿದ್ದ ಕಾರಣ ಶ್ರೇಯಸ್ ಅಯ್ಯರ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಹೊರಗಿಡಲಾಯಿತು. ಅಲ್ಲದೆ, ಇಶಾನ್ ಕಿಶನ್ ಅವರನ್ನೂ ಸಹ ಕೈಬಿಡಲಾಗಿದೆ.
ರಣಜಿ ಆಡುವಂತೆ ಸೂಚಿಸಿದ್ದರೂ ಬೆನ್ನು ನೋವೆಂದು ಸುಳ್ಳು ಹೇಳಿ ಐಪಿಎಲ್ಗೆ ಭರ್ಜರಿ ತಯಾರಿ ನಡೆಸುತ್ತಿದ್ದ ಕಾರಣ ಅಯ್ಯರ್ಗೆ ಶಿಕ್ಷೆ ನೀಡಲಾಗಿದೆ. ಇದು ಬಿಸಿಸಿಐ ಮತ್ತು ಆಯ್ಕೆದಾರರ ಅಸಮಾಧಾನಕ್ಕೆ ಕಾರಣವಾಗಿತ್ತು. ಹಲವು ದಿನಗಳಿಂದ ಈ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಇದೀಗ ಐಪಿಎಲ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅಧಿಕಾರಿಯೊಬ್ಬರು ಈ ಬಗ್ಗೆ ತುಟಿ ಬಿಚ್ಚಿದ್ದು ಕಿಡಿಕಾರಿದ್ದಾರೆ.
‘ಇಂಜೆಕ್ಷನ್ ಪಡೆಯುತ್ತಿದ್ದ ಅಯ್ಯರ್’
RevSportz ಜೊತೆಗಿನ ಸಂವಾದದಲ್ಲಿ ಹೆಸರು ಹೇಳಲು ಇಚ್ಛಿಸದ ಕೆಕೆಆರ್ ಅಧಿಕಾರಿಯೊಬ್ಬರು, ಅಯ್ಯರ್ ಪರ ಬ್ಯಾಟ್ ಬೀಸಿ ಬಿಸಿಸಿಐಗೆ ಪ್ರಶ್ನಿಸಿದ್ದಾರೆ. ಗುತ್ತಿಗೆಯಿಂದ ಕೈಬಿಟ್ಟಿದ್ದಕ್ಕೆ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ ನೋವು ನಿವಾರಕ ಇಂಜೆಕ್ಷನ್ ಪಡೆಯುತ್ತಿದ್ದ ಮತ್ತು ವಿಶ್ವಕಪ್ ಆಡುವ ಸಲುವಾಗಿ ಐಪಿಎಲ್ನಿಂದ ಹಿಂದೆ ಸರಿದರು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ. ವಿಶ್ವಕಪ್ ನಂತರ ವಿಶ್ರಾಂತಿ ಪಡೆಯದ ಆಟಗಾರ ಯಾರೆಂಬುದನ್ನೂ ಎಂದು ಆ ಅಧಿಕಾರಿ ಹೇಳಿದ್ದಾರೆ.
ಅಯ್ಯರ್ ಅವರು ವಿಶ್ವಕಪ್ ಟೂರ್ನಿ ಆಡುವ ಸಲುವಾಗಿ ಐಪಿಎಲ್ ತ್ಯಜಿಸಿದರು. ಬೆನ್ನು ನೋವಿನ ಶಸ್ತ್ರಚಿಕಿತ್ಸೆಯ ನಂತರವೂ ಅವರು ವಿಶ್ವಕಪ್ ಟೂರ್ನಿಯಲ್ಲಿ ನೋವು ನಿವಾರಕ ಮೂರು ಕಾರ್ಟಿಸೋನ್ ಇಂಜೆಕ್ಷನ್ ತೆಗೆದುಕೊಂಡರು. ಇನ್ನೂ ಸೆಮಿಫೈನಲ್ ಮತ್ತು ಫೈನಲ್ ಸಮಯದಲ್ಲಿ ನೋವು ಮತ್ತಷ್ಟು ಹೆಚ್ಚಾಯಿತು. ಅದರ ನಡುವೆಯೂ ಆಡಿದ್ದಲ್ಲದೆ, ವಿಶ್ವಕಪ್ ನಂತರ ವಿಶ್ರಾಂತಿ ಪಡೆಯದ ಏಕೈಕ ಆಟಗಾರ ಎನಿಸಿದರು. ಆದರೆ ಅಂತಹ ಆಟಗಾರರನ್ನು ವಾರ್ಷಿಕ ಗುತ್ತಿಗೆಯಿಂದ ಕೈಬಿಟ್ಟಿರುವುದು ಸರಿಯಿಲ್ಲ ಎಂದು ಬಿಸಿಸಿಐ ವಿರುದ್ಧ ಗುಡುಗಿದ್ದಾರೆ.
ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದರು. ನಂತರ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡರು. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ, ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್‌ಗಳಿಗೆ ಮುಂಚಿತವಾಗಿ ಜನವರಿಯಲ್ಲಿ ರಣಜಿ ಆಡುವಂತೆ ಸೂಚಿಸಲಾಯಿತು. ಅದರಂತೆ ರಣಜಿಯನ್ನೂ ಆಡಿದರು. ಇದರ ನಡುವೆಯೂ ಒಂದು ಪಂದ್ಯದಿಂದ ಹಿಂದೆ ಸರಿದರು ಎಂಬ ಕಾರಣಕ್ಕೆ ಅನ್ಯಾಯ ಎಸಗಿರುವುದು ನಿಜವಾಗಲೂ ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಪ್ರಶ್ನಿಸಿದ ಸರ್ಫರಾಜ್ಗೆ ಚಾನ್ಸ್
ಇನ್ನು ಇದೇ ವೇಳೆ ಕೆಎಲ್ ರಾಹುಲ್ ಉದಾಹರಣೆಯನ್ನು ನೀಡಿ ಬಿಸಿಸಿಐ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ್ದಾರೆ. ಕೆಎಲ್ ರಾಹುಲ್ ತಮ್ಮ ಕ್ವಾಡ್ರೈಸ್ಪ್ ನೋವಿಗೆ ಚಿಕಿತ್ಸೆ ನೀಡಲು ಲಂಡನ್‌ಗೆ ತೆರಳಿದ್ದಾರೆ. ಆದರೆ ಯಾರೂ ಸಹ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಕೆಕೆಆರ್ ಅಧಿಕಾರಿ ಹೇಳಿದ್ದಾರೆ. ಹಾಗಾದರೆ ಭಾರತದ ಮಾಜಿ ಉಪನಾಯಕ ಯಾವಾಗ ಕೊನೆಯದಾಗಿ ರಣಜಿ ಆಡಿದ್ದು ಯಾವಾಗ ಎಂದು ಅವರು ಪ್ರಶ್ನಿಸಿದ್ದಾರೆ.
ಕೆಎಲ್ ರಾಹುಲ್ ಕೂಡ ತಮ್ಮ ಚತುರ್ಭುಜ ನೋವಿನ ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಿದ್ದರು. ಆದರೆ ಅವರ ಕುರಿತು ಯಾರೂ ಪ್ರಶ್ನೆ ಕೇಳಿಲ್ಲ. ರಾಹುಲ್ ಕೊನೆಯ ಬಾರಿಗೆ ರಣಜಿ ಪಂದ್ಯ ಯಾವಾಗ ಆಡಿದರು ಎಂದು ಕೇಳಿದ್ದಾರೆ. ಗಾಯದ ಕ್ರಿಕೆಟಿಗರೂ ಆಗಿದ್ದು, ಅಯ್ಯರ್ ಹಲವು ಸರಣಿ ಮತ್ತು ಪಂದ್ಯಗಳನ್ನು ಕಳೆದುಕೊಂಡಿದ್ದೂ ಇದೆ.