logo
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​ ಶರ್ಮಾಗೆ ಬಡ್ತಿ, ಕೆಎಲ್ ರಾಹುಲ್​ಗೆ ಹಿಂಬಡ್ತಿ; ಗಬ್ಬಾ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ 11ನಲ್ಲೂ ಅಚ್ಚರಿ ಬದಲಾವಣೆ

ರೋಹಿತ್​ ಶರ್ಮಾಗೆ ಬಡ್ತಿ, ಕೆಎಲ್ ರಾಹುಲ್​ಗೆ ಹಿಂಬಡ್ತಿ; ಗಬ್ಬಾ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ 11ನಲ್ಲೂ ಅಚ್ಚರಿ ಬದಲಾವಣೆ

Prasanna Kumar P N HT Kannada

Dec 12, 2024 06:21 PM IST

google News

ರೋಹಿತ್​ ಶರ್ಮಾಗೆ ಬಡ್ತಿ, ಕೆಎಲ್ ರಾಹುಲ್​ಗೆ ಹಿಂಬಡ್ತಿ; ಗಬ್ಬಾ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ 11ನಲ್ಲೂ ಅಚ್ಚರಿ ಬದಲಾವಣೆ

    • India Playing XI: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್​​ ಪಂದ್ಯಕ್ಕೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಅಲ್ಲದೆ, ಪ್ಲೇಯಿಂಗ್ 11ನಲ್ಲೂ ಅಚ್ಚರಿಯ ಎರಡು ಬದಲಾವಣೆ ಖಚಿತ ಎಂದು ವರದಿಯಾಗಿದೆ.
ರೋಹಿತ್​ ಶರ್ಮಾಗೆ ಬಡ್ತಿ, ಕೆಎಲ್ ರಾಹುಲ್​ಗೆ ಹಿಂಬಡ್ತಿ; ಗಬ್ಬಾ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ 11ನಲ್ಲೂ ಅಚ್ಚರಿ ಬದಲಾವಣೆ
ರೋಹಿತ್​ ಶರ್ಮಾಗೆ ಬಡ್ತಿ, ಕೆಎಲ್ ರಾಹುಲ್​ಗೆ ಹಿಂಬಡ್ತಿ; ಗಬ್ಬಾ ಟೆಸ್ಟ್​ಗೆ ಭಾರತದ ಪ್ಲೇಯಿಂಗ್ 11ನಲ್ಲೂ ಅಚ್ಚರಿ ಬದಲಾವಣೆ

ಪರ್ತ್​ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ತಂಡ, ಅಡಿಲೇಡ್​​ನಲ್ಲಿ ಮುಗ್ಗರಿಸಿದೆ. ಈಗ ಐಸಿಹಾಸಿಕ ಗಬ್ಬಾ ಟೆಸ್ಟ್​​ ಪಂದ್ಯಕ್ಕೆ ಉಭಯ ತಂಡಗಳು ಸಿದ್ಧತೆ ನಡೆಸಿವೆ. ಸೋಲಿನ ಬಳಿಕ ಪರಾಮರ್ಶೆ ನಡೆಸಿರುವ ಟೀಮ್ ಮ್ಯಾನೇಜ್​ಮೆಂಟ್, ಪ್ಲೇಯಿಂಗ್​ 11 ಜೊತೆಗೆ ಬ್ಯಾಟಿಂಗ್ ಕ್ರಮಾಂಕದಲ್ಲೂ ಬದಲಾವಣೆಗೆ ಚಿಂತನೆ ನಡೆಸಿದೆ. 3ನೇ ಟೆಸ್ಟ್​ನಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆಯುವುದಲ್ಲದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ರೇಸ್​​ನಲ್ಲಿ ಉಳಿದುಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದೆ.

ಮೊದಲ ಟೆಸ್ಟ್​​ನಲ್ಲಿ 295 ರನ್​ಗಳ ಅಂತರದಿಂದ ಗೆದ್ದಿದ್ದ ಟೀಮ್ ಇಂಡಿಯಾ, ಎರಡನೇ ಟೆಸ್ಟ್​​ನಲ್ಲಿ 10 ವಿಕೆಟ್​​ಗಳಿಂದ ಹೀನಾಯವಾಗಿ ಸೋಲು ಕಂಡಿದೆ. 2020-21ರಲ್ಲಿ ಇದೇ ಮೈದಾನದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಭಾರತ, ಅಮೋಘ ಗೆಲುವು ಸಾಧಿಸಿ ಐಸಿಹಾಸಿಕ ಸರಣಿಗೆ ಮುತ್ತಿಕ್ಕಿತ್ತು. ಇದೀಗ ಅಂತಹದ್ದೇ ಗೆಲುವು ಕಾಣುವ ವಿಶ್ವಾಸದಲ್ಲಿದೆ. ಅದಕ್ಕಾಗಿ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮತ್ತು ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಲು ಬಯಸಿದೆ.

ಆರಂಭಿಕ ಸ್ಥಾನಕ್ಕೆ ರೋಹಿತ್ ವಾಪಸ್

ಪರ್ತ್​ ಟೆಸ್ಟ್​ ಪಂದ್ಯದಲ್ಲಿ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿದು ಅದ್ಭುತ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆಎಲ್ ರಾಹುಲ್ 2ನೇ ಪಂದ್ಯದಲ್ಲೂ ಅದೇ ಸ್ಥಾನದಲ್ಲಿ ಬ್ಯಾಟ್ ಬೀಸಿದ್ದರು. ರೋಹಿತ್​ ಶರ್ಮಾ ಲಭ್ಯರಾಗಿದ್ದರೂ ತನ್ನ ಸ್ಥಾನವನ್ನು ರಾಹುಲ್​ಗೆ ತ್ಯಾಗ ಮಾಡಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ 2ನೇ ಟೆಸ್ಟ್​ನಲ್ಲಿ ಇಬ್ಬರು ಅಂದುಕೊಂಡಂತೆ ಪ್ರದರ್ಶನ ನೀಡಲಿಲ್ಲ. ಹೀಗಾಗಿ, ರಾಹುಲ್​​ಗೆ ಹಿಂಬಡ್ತಿ ಮತ್ತು ರೋಹಿತ್​ಗೆ ಬಡ್ತಿ ನೀಡಲು ಟೀಮ್ ಮ್ಯಾನೇಜ್​ಮೆಂಟ್ ಚಿಂತಿಸಿದೆ.

ಅದರಂತೆ ರೋಹಿತ್​ ಆರಂಭಿಕ ಸ್ಥಾನಕ್ಕೆ ಬಡ್ತಿ ಪಡೆದರೆ, ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯಲಿದ್ದಾರೆ. ಐತಿಹಾಸಿಕ ಗಬ್ಬಾ ಟೆಸ್ಟ್​​ನಲ್ಲಿ ರೋಹಿತ್​ ಮತ್ತು ಜೈಸ್ವಾಲ್ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದು, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅಗ್ರ 6 ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ವೇಗ ಮತ್ತು ಸ್ಪಿನ್ ವಿಭಾಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

2ನೇ ಟೆಸ್ಟ್​​ನಲ್ಲಿ ರೋಹಿತ್​-ರಾಹುಲ್ ಪ್ರದರ್ಶನ

ಅಡಿಲೇಡ್​ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಮೊದಲ ಇನ್ನಿಂಗ್ಸ್​​ನಲ್ಲಿ 37 ರನ್, ಎರಡನೇ ಇನ್ನಿಂಗ್ಸ್​ನಲ್ಲಿ 7 ರನ್ ಗಳಿಸಿದ್ದರು.

ಅಡಿಲೇಡ್​ ಟೆಸ್ಟ್ ಪಂದ್ಯದಲ್ಲಿ ರೋಹಿತ್​ ಶರ್ಮಾ ಮೊದಲ ಇನ್ನಿಂಗ್ಸ್​​ನಲ್ಲಿ 3 ರನ್, ಎರಡನೇ ಇನ್ನಿಂಗ್ಸ್​​ನಲ್ಲಿ 6 ರನ್ ಗಳಿಸಿದ್ದರು.

ಬೌಲಿಂಗ್​ನಲ್ಲಿ ಎರಡು ಬದಲಾವಣೆ

ಬೌಲಿಂಗ್​​ನಲ್ಲಿ ಎರಡು ಬದಲಾವಣೆಯಾಗುವುದು ಖಚಿತ ಎಂದು ವರದಿಯಾಗಿದೆ. ನಿತೀಶ್​ ಕುಮಾರ್ ರೆಡ್ಡಿ ಆಲ್​ರೌಂಡರ್ ಆಗಿ ಕಣಕ್ಕೆ ಇಳಿದರೆ, ಸ್ಪಿನ್ ಆಲ್​ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಆರ್ ಅಶ್ವಿನ್ ಅವಕಾಶ ಪಡೆದಿದ್ದರೂ ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿನ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಬದಲಾವಣೆ ಮಾಡಲು ಮ್ಯಾನೇಜ್​ಮೆಂಟ್ ತೀರ್ಮಾನಿಸಿದೆ ಎಂದು ವರದಿಯಾಗಿದೆ.

ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವೇಗಿ ಹರ್ಷಿತ್ ರಾಣಾ ಅವರನ್ನು ಕೈಬಿಡಬಹುದು. ಏಕೆಂದರೆ ಎರಡನೇ ಪಂದ್ಯದಲ್ಲಿ ವಿಕೆಟ್ ಪಡೆಯದೆ ತೀವ್ರ ನಿರಾಸೆ ಮೂಡಿಸಿದ್ದರು. ಹೀಗಾಗಿ, ಆಕಾಶ್ ದೀಪ್​ಗೆ ಅವಕಾಶ ನೀಡುವ ನಿರೀಕ್ಷೆ ಇದೆ. ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಜೊತೆಗೆ ಆಕಾಶ್ ದೀಪ್ ಅವಕಾಶ ಪಡೆದರೆ ಆಸೀಸ್ ಬ್ಯಾಟಿಂಗ್​ ಕೋಟೆಯನ್ನು ಛಿದ್ರಗೊಳಿಸಲು ಭರ್ಜರಿ ಸಿದ್ಧತೆ ನಡೆಸುವುದು ಅನಿವಾರ್ಯ.

3ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ XI

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ರೋಹಿತ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ