logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇದೇನಾ ಕ್ರೀಡಾ ಸ್ಫೂರ್ತಿ; ಚೆಂಡು ನೆಲಕ್ಕೆ ತಾಗಿದರೂ ಅಂಪೈರ್​ಗೆ ಮನವಿ ಸಲ್ಲಿಸಿದ ಇಂಗ್ಲೆಂಡ್, ರೋಹಿತ್ ಕೊಟ್ರು ಭಿನ್ನ ಪ್ರತಿಕ್ರಿಯೆ

ಇದೇನಾ ಕ್ರೀಡಾ ಸ್ಫೂರ್ತಿ; ಚೆಂಡು ನೆಲಕ್ಕೆ ತಾಗಿದರೂ ಅಂಪೈರ್​ಗೆ ಮನವಿ ಸಲ್ಲಿಸಿದ ಇಂಗ್ಲೆಂಡ್, ರೋಹಿತ್ ಕೊಟ್ರು ಭಿನ್ನ ಪ್ರತಿಕ್ರಿಯೆ

Prasanna Kumar P N HT Kannada

Feb 24, 2024 03:46 PM IST

google News

ಇದೇನಾ ಕ್ರೀಡಾ ಸ್ಫೂರ್ತಿ; ಚೆಂಡು ನೆಲಕ್ಕೆ ತಾಗಿದರೂ ಅಂಪೈರ್​ಗೆ ಮನವಿ ಸಲ್ಲಿಸಿದ ಇಂಗ್ಲೆಂಡ್

    • Yashasvi Jaiswal : ಯಶಸ್ವಿ ಜೈಸ್ವಾಲ್​ ನಾಟೌಟ್ ಆಗಿದ್ದರೂ ಔಟ್​ಗೆ ಮನವಿ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಇದೇನಾ ಕ್ರೀಡಾ ಸ್ಫೂರ್ತಿ ಎಂದು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಇದೇನಾ ಕ್ರೀಡಾ ಸ್ಫೂರ್ತಿ; ಚೆಂಡು ನೆಲಕ್ಕೆ ತಾಗಿದರೂ ಅಂಪೈರ್​ಗೆ ಮನವಿ ಸಲ್ಲಿಸಿದ ಇಂಗ್ಲೆಂಡ್
ಇದೇನಾ ಕ್ರೀಡಾ ಸ್ಫೂರ್ತಿ; ಚೆಂಡು ನೆಲಕ್ಕೆ ತಾಗಿದರೂ ಅಂಪೈರ್​ಗೆ ಮನವಿ ಸಲ್ಲಿಸಿದ ಇಂಗ್ಲೆಂಡ್

ಇಂಡೋ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್​ ಪಂದ್ಯದ ಎರಡನೇ ದಿನದಾಟವು ವಿವಾದವೊಂದಕ್ಕೆ ಸಾಕ್ಷಿಯಾಯಿತು. ಯಶಸ್ವಿ ಜೈಸ್ವಾಲ್​ ನಾಟೌಟ್ ಆಗಿದ್ದರೂ ಔಟ್​ಗೆ ಮನವಿ ಮಾಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಇದೇನಾ ಕ್ರೀಡಾ ಸ್ಪೂರ್ತಿ ಎಂದು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಇಂಗ್ಲೆಂಡ್ ಆಟಗಾರರ ಮನವಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದ ಇನ್ನಿಂಗ್ಸ್​ನ 20ನೇ ಓವರ್​ನಲ್ಲಿ ಈ ಘಟನೆ ನಡೆಯಿತು. ಆ ಓವರ್​ ಒಲ್ಲಿ ರಾಬಿನ್ಸನ್ ಬೌಲಿಂಗ್ ಮಾಡಿದರು. ಚೆಂಡು ಔಟ್​ ಸೈಡ್​ ಎಡ್ಜ್​ ಆಗಿ ವಿಕೆಟ್ ಕೀಪರ್ ಕೈ ಸೇರಿತು. ಆದರೆ ಅದು ಪಿಚ್​ ಬಿದ್ದು ವಿಕೆಟ್ ಕೀಪರ್​ ಕೈ ಸೇರಿತ್ತು. ಸ್ಟ್ರೈಟ್ ಅಂಪೈರ್​​ ಔಟ್ ನೀಡದ ಕಾರಣ ಕೋಪಗೊಂಡ ನಾಯಕ ಬೆನ್ ​ಸ್ಟೋಕ್ಸ್, ಮೂರನೇ ಅಂಪೈರ್​ ಮೊರೆ ಹೋದರು. ಚೆಂಡು ಸ್ಪಷ್ಟವಾಗಿ ನೆಲಕ್ಕೆ ತಾಗಿರುವುದು ಕಂಡು ಬಂತು.

ಹಲವು ಆಯಾಮಗಳಲ್ಲಿ ಪರಿಶೀಲನೆ

ಅದಾಗಿಯೂ 3ನೇ ಅಂಪೈರ್ ಜೋಯಲ್ ವಿಲ್ಸನ್, ಹಲವು ಬಾರಿ ಮರು ಪರಿಶೀಲನೆ ನಡೆಸಿದರು. ಹಲವು ಕೋನಗಳಲ್ಲಿ ಮರು ಪರಿಶೀಲಿಸಿದರು. ಪ್ರತಿ ಆಯಾಮದಲ್ಲೂ ಚೆಂಡು ಪುಟಿಯುವುದನ್ನು ಕಾಣಬಹುದು. ರಿವಿವ್ಯೂನಲ್ಲಿ ಚೆಂಡು ಪಿಚ್​ ಆಗಿರುವುದನ್ನು ನೋಡಿದ ಬೆನ್ ಸ್ಟೋಕ್ಸ್ ಅಚ್ಚರಿ ವ್ಯಕ್ತಪಡಿಸಿದರು. ಔಟ್ ಎನ್ನುವ ಭಾವನೆಯಲ್ಲಿ ಆಶ್ಚರ್ಯ ವ್ಯಕ್ತಪಡಿಸಿದರು. ಕೊನೆಗೆ ನಾಟೌಟ್ ನೀಡಲಾಯಿತು.

ಬೆನ್ ಫೋಕ್ಸ್​ ಕ್ಯಾಚ್ ಪಡೆಯುತ್ತಿದ್ದಂತೆ ಇಡೀ ತಂಡ ಸಂಭ್ರಮಿಸಿತು. ಆಗಿನ್ನೂ ಜೈಸ್ವಾಲ್ 60 ಎಸೆತಗಳಲ್ಲಿ 40 ರನ್ ಗಳಿಸಿದ್ದರು. ಅಲ್ಲದೆ, ಭಾರತ 68 ರನ್​ಗಳಿಗೆ 1 ವಿಕೆಟ್ ಕಳೆದುಕೊಂಡಿತು. ಶುಭ್ಮನ್ ಗಿಲ್ 24 ರನ್ ಗಳಿಸಿ ಜೈಸ್ವಾಲ್​ಗೆ ಸಾಥ್ ನೀಡುತ್ತಿದ್ದರು. ಆದರೆ ಇಂಗ್ಲೆಂಡ್​ ಆಟಗಾರರು ಮರು ಪರಿಶೀಲನೆಗೆ ಹೋಗುತ್ತಿದ್ದಂತೆ ರೋಹಿತ್​ ವಿಭಿನ್ನ ಪ್ರತಿಕ್ರಿಯೆ ನೀಡಿದರು. ಅರೆ ಇದೇನ್ರಿ ಇದು ನಾಟೌಟ್ ಇದ್ದರೂ ರಿವಿವ್ಯೂ ತಗೊಂಡಿದ್ದಾರೆ ಎನ್ನುವಂತೆ ಪ್ರತಿಕ್ರಿಯಿಸಿದರು.

ನೆಟ್​ನಲ್ಲಿ ಇಂಗ್ಲೆಂಡ್ ಆಟಗಾರರ ಮೇಲೆ ಕ್ರಿಕೆಟ್ ಪ್ರಿಯರು ವಾಗ್ದಾಳಿ ನಡೆಸಿದರು. ಇದೇನಾ ಕ್ರೀಡಾ ಸ್ಪೂರ್ತಿ ಎಂದು ಪ್ರಶ್ನಿಸಿದ್ದಾರೆ. ಹೆಚ್ಚು ಗೊಂದಲವಿದ್ದರೆ ಮಾತ್ರ ಔಟ್​ಗೆ ಮನವಿ ಸಲ್ಲಿಸಬೇಕು. ಅದರಲ್ಲೂ ವಿಕೆಟ್ ಕೀಪರ್​ಗೆ ಚೆಂಡು ಎಲ್ಲಿ ಬಿದ್ದಿದೆ, ಸರಿಯಾಗಿ ಕ್ಯಾಚ್ ಪಡೆದೆನಾ, ಚೆಂಡು ಹೇಗೆ ಪುಟಿದಿದೆ ಎನ್ನುವ ಎಲ್ಲಾ ಜ್ಞಾನವೂ ಇರುತ್ತದೆ. ಆದರೆ ಅವರೇ ಅಪೀಲ್ ಮಾಡಿದ್ದು ವಿಪರ್ಯಾಸ ಎಂದಿದ್ದಾರೆ ನೆಟ್ಟಿಗರು.

ಯಶಸ್ವಿ ಜೈಸ್ವಾಲ್ ಅರ್ಧಶತಕ

ಸರಣಿಯ ಮೊದಲ ಇನ್ನಿಂಗ್ಸ್​ನಿಂದಲೂ ಭರ್ಜರಿ ಫಾರ್ಮ್​ನಲ್ಲಿರುವ ಯಶಸ್ವಿ ಜೈಸ್ವಾಲ್ ಮತ್ತೊಂದು ಅರ್ಧಶತಕ ಸಿಡಿಸಿ ಮಿಂಚಿದರು. ಪ್ರಮುಖರೇ ಔಟಾಗುತ್ತಿದ್ದರೂ ಉತ್ತಮ ಇನ್ನಿಂಗ್ಸ್​​ ಕಟ್ಟುವ ಮೂಲಕ ಗಮನ ಸೆಳೆದರು. 117 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 73 ರನ್ ಗಳಿಸಿ ಮಿಂಚಿದರು. ಶೋಯೆಬ್ ಬಶೀರ್ ಬೌಲಿಂಗ್​ನಲ್ಲಿ ಬೋಲ್ಡ್ ಆದರು. ಅವರು ಔಟಾದಾಗ ಭಾರತದ ಸ್ಕೋರ್ 161ಕ್ಕೆ 5 ವಿಕೆಟ್.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ