ಇದೇನಿದು, ಜಿಲೇಬಿ-ಧೋಕ್ಲಾ ತಿಂದ್ರೆ ನನ್ ಫಿಟ್ನೆಸ್ ಏನಾಗ್ಬೇಡ; ಜಾಹೀರಾತು ಶೂಟಿಂಗ್ ವೇಳೆ ರೇಗಾಡಿದ ಹಾರ್ದಿಕ್, ವಿಡಿಯೋ ವೈರಲ್
Hardik Pandya : ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ ಜಾಹೀರಾತು ಶೂಟ್ನಲ್ಲಿ ಸೆಟ್ ಸಿಬ್ಬಂದಿಯ ಮೇಲೆ ತಾಳ್ಮೆ ಕಳೆದುಕೊಂಡು ರೇಗಾಡಿದ ವಿಡಿಯೋ ವೈರಲ್ ಆಗಿದೆ.
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ (IPL 2024) ವೇಳಾಪಟ್ಟಿ ಪ್ರಕಟಗೊಂಡಿದೆ. ಮೊದಲ 21 ಪಂದ್ಯಗಳ ದಿನಾಂಕವನ್ನು ಬಿಸಿಸಿಐ (BCCI) ಬಹಿರಂಗಪಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ (Chennai Super Kings vs Royal Challegers Bangalore) ನಡುವೆ ಕಾದಾಟ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಮೈದಾನವು ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಐಪಿಎಲ್ ಆರಂಭಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಅನೇಕ ಆಟಗಾರರು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಾರ್ದಿಕ್ ಸೇರಿದಂತೆ ಅನೇಕರು ಈಗಾಗಲೇ ಸಂಪೂರ್ಣ ಫಿಟ್ ಆಗಿದ್ದು, ನೆಟ್ಸ್ನಲ್ಲಿ ಬ್ಯಾಟಿಂಗ್ ಕೂಡ ಆರಂಭಿಸಿದ್ದಾರೆ. ಈ ನಡುವೆ ಜಾಹೀರಾತುಗಳಲ್ಲಿ ಸಹ ಭಾಗವಹಿಸುತ್ತಿದ್ದಾರೆ. ಅದರಂತೆ ಹಾರ್ದಿಕ್ ಪಾಂಡ್ಯ ಆ್ಯಡ್ ಶೂಟ್ನಲ್ಲಿ ಪಾಲ್ಗೊಂಡಿದ್ದು, ಸೆಟ್ ಸಿಬ್ಬಂದಿಯ ಮೇಲೆ ತಾಳ್ಮೆ ಕಳೆದುಕೊಂಡು ರೇಗಾಡಿದ ವಿಡಿಯೋ ವೈರಲ್ ಆಗಿದೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆರೋಗ್ಯಕರ ಆಹಾರಕ್ಕೆ ಒತ್ತು ನೀಡುತ್ತಾರೆ. ಸಂಪೂರ್ಣ ಫಿಟ್ನೆಸ್ ಪಡೆಯಲು ಸದಾ ಆಹಾರ ಕ್ರಮವನ್ನು ಅನುಕರಿಸುತ್ತಾರೆ. ಮುಂಬೈನಲ್ಲಿ ಐಪಿಎಲ್ ಜಾಹೀರಾತು ಚಿತ್ರೀಕರಣದ ಸೆಟ್‌ನಲ್ಲಿ ಸಾಂಪ್ರದಾಯಿಕ ಗುಜರಾತಿ ಭಕ್ಷ್ಯಗಳೊಂದಿಗೆ ಬಡಿಸಿದಾಗ 32 ವರ್ಷದ ಆಟಗಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿ ಮೇಲೆ ರೇಗಾಡಿದ ಹಾರ್ದಿಕ್ ಪಾಂಡ್ಯ
ಪಾಂಡ್ಯಗೆ ನೀಡಲಾದ ಆಹಾರದ ಬಗ್ಗೆ ಸೆಟ್‌ನ ಸಿಬ್ಬಂದಿಯೊಬ್ಬರ ಮೇಲೆ ಕಿರುಚಾಡಿದ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕ್ರಿಕೆಟಿಗನಿಗೆ ಮಧ್ಯಾಹ್ನದ ಊಟಕ್ಕೆ ಧೋಕ್ಲಾ, ಜಿಲೇಬಿ, ಫಫ್ಡಾ ನೀಡಲಾಯಿತು. ನಾನು ಇದನ್ನು ತಿನ್ನಲು ಸಾಧ್ಯವೇ? ನಾನು ಫಿಟ್ನೆಸ್ ಮಾಡುತ್ತಿದ್ದೇನೆ. ಇವುಗಳನ್ನು ತಿನ್ನಲು ಸಾಧ್ಯವೇ? ಇದರಿಂದ ಏನು ಮಾಡಲಿ ಎಂದು ಹೇಳಿದ್ದಾರೆ. ಸರ್, ಇವುಗಳನ್ನೇ ಅಡ್ಜೆಸ್ಟ್ ಮಾಡ್ಕೊಳ್ಳಿ ಎಂದು ಆ ಸಿಬ್ಬಂದಿ ಹೇಳಿದ್ದಾರೆ.
ಭಾಯ್ ಅಡ್ಜೆಸ್ಟ್ ಮಾಡಿಕೊಳ್ಳೋಕೆ ಆಗಲ್ಲ. ನನ್ನ ಶೆಫ್ ಮತ್ತು ನ್ಯೂಟ್ರಿಷಿಯನಿಸ್ಟ್ ಎಲ್ಲಿದ್ದಾರೆ? ಎನ್ನುತ್ತಾರೆ ಹಾರ್ದಿಕ್. ಆದರೆ, ಸಿಬ್ಬಂದಿ ಇವತ್ತು ಇದನ್ನೇ ಮ್ಯಾನೇಜ್ ಮಾಡ್ಕೊಳ್ಳಿ ಎನ್ನುತ್ತಾರೆ. ಡೈರೆಕ್ಟರ್ ಸರ್ಗೆ ಹೇಳು ನನಗೆ ಇವು ಬೇಡ. ಇವುಗಳನ್ನು ನನ್ನ ಸ್ಟಾಮಿನಾ ಹೋಗುತ್ತೆ ಅಷ್ಟೆ ಎಂದು ಜೋರಾಗಿ ಮಾತಾಡಿದ್ದಾರೆ. ಸದ್ಯ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಇದು ವೃತ್ತಿಪರ ಕ್ರೀಡಾಪಟುಗಳು ಇಂತಹ ಜಂಕ್ಫುಡ್ಗೆ ಆದ್ಯತೆ ಕೊಡುವುದಿಲ್ಲ.
ಮುಂಬೈ ಇಂಡಿಯನ್ಸ್ ತಂಡ
ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಾಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್, ರೊಮಾರಿಯೋ ಶೆಫರ್ಡ್ ಹಾರ್ದಿಕ್ ಪಾಂಡ್ಯ, ಜೆರಾಲ್ಡ್ ಕೊಯೆಟ್ಜಿ, ದಿಲ್ಶನ್ ಮಧುಶಂಕ, ಶ್ರೇಯಸ್ ಗೋಪಾಲ್, ನುವಾನ್ ತುಷಾರ, ನಮನ್ ಧೀರ್, ಅಂಶುಲ್ ಕಾಂಬೋಜ್, ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ