LIVE UPDATES
ಯಶ್ ಶೆಟ್ಟಿ ನಾಯಕನಾಗಿ ನಟಿಸಿದ ಜಂಗಲ್ ಮಂಗಲ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ ಸಿಂಪಲ್ ಸುನಿ
Entertainment News in Kannada Live October 6, 2024: ಯಶ್ ಶೆಟ್ಟಿ ನಾಯಕನಾಗಿ ನಟಿಸಿದ ಜಂಗಲ್ ಮಂಗಲ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ ಸಿಂಪಲ್ ಸುನಿ
Oct 06, 2024 03:47 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Entertainment News in Kannada Live:ಯಶ್ ಶೆಟ್ಟಿ ನಾಯಕನಾಗಿ ನಟಿಸಿದ ಜಂಗಲ್ ಮಂಗಲ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ ಸಿಂಪಲ್ ಸುನಿ
- ನಿರ್ದೇಶಕ ಸಿಂಪಲ್ ಸುನಿ ಅವರಿಂದ ಜಂಗಲ್ ಮಂಗಲ್ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಯಶ್ ಶೆಟ್ಟಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದರೆ, ಹರ್ಷಿತಾ ರಾಮಚಂದ್ರ ನಾಯಕಿಯಾಗಿದ್ದಾರೆ. ಶೂಟಿಂಗ್ ಮುಗಿಸಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ತೆರೆಗೆ ಬರಲಿದೆ.
Entertainment News in Kannada Live:‘ನಾನೆಲ್ಲೂ ಹೋಗಿಲ್ಲ, ನಮ್ಮ ಕುಟುಂಬದ ಸದ್ಯದ ಪರಿಸ್ಥಿತಿ ನಿಮಗೂ ಗೊತ್ತು’; ರಾಯಲ್ ಚಿತ್ರದ ಹಾಡಿನ ನೆಪದಲ್ಲಿ ಬಂದ ದಿನಕರ್ ತೂಗುದೀಪ
- ತುಮಕೂರಿನಲ್ಲಿ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ. ಹಾಡಿನ ರಿಲೀಸ್‌ಗೂ ಮುನ್ನ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
Entertainment News in Kannada Live:ಬಿಗ್‌ಬಾಸ್ ಕನ್ನಡ 7ರ ವಿಜೇತ ಶೈನ್ ಶೆಟ್ಟಿ ನಟನೆಯ ‘ಜಸ್ಟ್ ಮ್ಯಾರೀಡ್’ ಚಿತ್ರದ ಟೀಸರ್ ರಿಲೀಸ್
- ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ- ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ ಜಸ್ಟ್ ಮ್ಯಾರೀಡ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಾದ ರಿಯಲ್ ಸ್ಟಾರ್ ಉಪೇಂದ್ರ, ನಿಥಿಲನ್ ಹಾಗೂ ಅಜಯ್ ಭೂಪತಿ ಅವರು ಒಟ್ಟಾಗಿ ಜಸ್ಟ್ ಮ್ಯಾರೀಡ್ ಟೀಸರ್ ಅನಾವರಣ ಮಾಡಿದರು.
Entertainment News in Kannada Live:Kannada OTT Movies: ಸದ್ದಿಲ್ಲದೆ ಒಟಿಟಿಗೆ ಬಂದ ಕನ್ನಡದ ಎರಡು ಕ್ರೈಂ ಥ್ರಿಲ್ಲರ್ ಚಿತ್ರಗಳು; ಯಾವ ಒಟಿಟಿಯಲ್ಲಿ ವೀಕ್ಷಣೆ?
- OTT Kannada Movies: ಈ ವಾರ ಕನ್ನಡದ ಎರಡು ಸಿನಿಮಾಗಳು ಸದ್ದಿಲ್ಲದೆ ಒಟಿಟಿ ಅಂಗಳ ಪ್ರವೇಶಿಸಿವೆ. ವಿಭಿನ್ನ ಕಥೆಗಳನ್ನು ಹೊಂದಿರುವ ಈ ಎರಡು ಚಿತ್ರಗಳು ಕ್ರೈಮ್ ಥ್ರಿಲ್ಲರ್ ಜಾನರ್‌ಗೆ ಸೇರಿವೆ. ಹಾಗಾದರೆ ಆ ಸಿನಿಮಾಗಳು ಯಾವವು? ಸ್ಟ್ರೀಮಿಂಗ್ ವಿವರ ಸಹಿತ ಮಾಹಿತಿ ಇಲ್ಲಿದೆ.
Entertainment News in Kannada Live:ಕಿಚ್ಚನ ಮುಂದೆ ನಡೆಯದ ಜಗದೀಶ್ ಹಾರಾಟ, ಕೂಗಾಟ! ಸಿಎಂ ಆಗ್ತೀನಿ ಅಂದವರಿಗೆ ‘ನಿಯಮ’ಗಳ ಪಾಠ ಮಾಡಿದ ಸುದೀಪ್
- ಶನಿವಾರದ ಕಿಚ್ಚನ ಪಂಚಾಯ್ತಿಯಲ್ಲಿ ಜಗದೀಶ್ ಅವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿದ ಜಗದೀಶ್ ಅವರ ನಡೆಯನ್ನು ಕೊಂಚ ಬಿರುಸಾಗಿಯೇ ವಿರೋಧಿಸಿದ್ದಾರೆ.
Entertainment News in Kannada Live:‘ಜಗದೀಶ್ ವಕೀಲರಲ್ಲ, ಅವರನ್ನು ಲಾಯರ್ ಎಂದು ಬಿಂಬಿಸಬೇಡಿ!’ ಕಲರ್ಸ್ ಕನ್ನಡಕ್ಕೆ ಪತ್ರ ಬರೆದ ವಕೀಲರ ಸಂಘ
- Bigg boss Kannada 11: ದೆಹಲಿ ಬಾರ್ ಕೌನ್ಸಿಲ್‌ರವರು ಬಿಗ್ ಬಾಸ್ ಕನ್ನಡ ಸ್ಪರ್ಧಿ ಕೆ.ಎನ್. ಜಗದೀಶ್‌ರವರ ದೆಹಲಿ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿಯಾಗಿರುವ ದಾಖಲಾತಿಗಳನ್ನು ಪರಿಶೀಲಿಸಿ, ದಾಖಲೆಗಳು ನಕಲಿ ಎಂದು ದೃಢಪಟ್ಟ ನಂತರ ಅವರ ನೋಂದಣಿಯನ್ನು ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ.