Nanban Entertainment: ಉದ್ಯಮ ಕ್ಷೇತ್ರದ ಯಶಸ್ಸಿನ ನಂತರ ಮನರಂಜನೆ ಕ್ಷೇತ್ರದತ್ತ ನನ್ಬನ್ ಗ್ರೂಪ್ಸ್; ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪನೆ
Aug 09, 2023 01:59 PM IST
ನನ್ಬನ್ ಗ್ರೂಪ್‌ನಿಂದ ಚಿತ್ರ ನಿರ್ಮಾಣ ಸಂಸ್ಥೆ ಆರಂಭ
ಮೊದಲು ತಮಿಳು ಸಿನಿಮಾ ನಿರ್ಮಾಣ, ನಂತರ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣದ ಗುರಿ ಹೊಂದಿದ್ದೇವೆ.ಹೊಸದಾಗಿ ಪ್ರಾರಂಭಿಸಲಾದ ನನ್ಬನ್ ಎಂಟರ್‌ಟೈನ್ಮೆಂಟ್ ಅಡಿ ಪ್ರತಿಭಾವಂತರಿಗೆ ಅವಕಾಶ ನೀಡುತ್ತೇವೆ. ಈ ವೇದಿಕೆ ಮೂಲಕ ಅವರು ತಮ್ಮ ಪ್ರತಿಭೆ ಪ್ರದರ್ಶಿಸಬಹುದು.
ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ನನ್ಬನ್ ಗ್ರೂಪ್ ಮನರಂಜನಾ ಲೋಕಕ್ಕೆ ಹೊಸ ಹೆಜ್ಜೆ ಇಟ್ಟಿದೆ. ನನ್ಬನ್ ಗ್ರೂಪ್ ವತಿಯಿಂದ ನನ್ಬನ್ ಎಂಟರ್ಟೈನ್ಮೆಂಟ್ ಎಂಬ ಹೊಸ ನಿರ್ಮಾಣ ಸಂಸ್ಥೆ ಪ್ರಾರಂಭವಾಗಿದೆ. ಆಗಸ್ಟ್ 3 ರಂದು ಚೆನ್ನೈನಲ್ಲಿ, ನನ್ಬನ್ ಎಂಟರ್ಟೈನ್ಮೆಂಟ್ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ನನ್ಬನ್ ಗ್ರೂಪ್ ಮುಖ್ಯಸ್ಥ ನರೈನ್ ರಾಮಸ್ವಾಮಿ, ಸಹ ಸಂಸ್ಥಾಪಕ ಮಣಿವಣ್ಣನ್, ಸಂಸ್ಥಾಪಕ ಗೋಪಾಲ ಕೃಷ್ಣನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನನ್ಬನ್ ಗ್ರೂಪ್ ಭಾರತದ ರಾಯಭಾರಿ ನಟ ಆರಿ ಅರ್ಜುನನ್, ನನ್ಬನ್ ಸಂಸ್ಥೆ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡರು. ನಂತರ ಮಾತನಾಡಿದ ನನ್ಬನ್ ಗ್ರೂಪ್ ಸಂಸ್ಥಾಪಕ ಗೋಪಾಲ ಕೃಷ್ಣನ್, ''ನಿಮ್ಮೆಲ್ಲರ ಸಹಭಾಗಿತ್ವ ಮತ್ತು ಸಹಕಾರ ಇಲ್ಲದಿದ್ದರೆ ಈ ಕಾರ್ಯಕ್ರಮ ಇಷ್ಟು ಅದ್ಧೂರಿಯಾಗಿ ನಡೆಯುತ್ತಿರಲಿಲ್ಲ.
ನಮ್ಮ ಗ್ರೂಪ್ ಹಲವಾರು ಸಾಮಾಜಿಕ ಕಾರಣಗಳಿಗಾಗಿ ಸಹಾಯ ಹಸ್ತ ನೀಡುತ್ತಿದೆ. ನನ್ಬನ್ ಗ್ರೂಪ್ ಪ್ರಾರಂಭಿಸಲು ಮುಖ್ಯ ಕಾರಣ ಸ್ನೇಹ. ನಾವು ಯಾವ ರೀತಿಯ ಜೀವನ ನಡೆಸುತ್ತೇವೆ ಮತ್ತು ನಾವು ಎಲ್ಲಿದ್ದೇವೆ ಎಂಬುದರ ಹೊರತಾಗಿಯೂ, ಸ್ನೇಹದಿಂದ ಸುತ್ತಮುತ್ತಲಿನವರಿಗೆ ಪ್ರೀತಿಯಿಂದ ಬೇಷರತ್ತಾದ ಸಹಾಯವನ್ನು ನೀಡುತ್ತೇವೆ. ನಾವು ಸ್ನೇಹ ಜಾತಿ, ಮತ, ಸಮುದಾಯ ಅಥವಾ ಲಿಂಗದ ಆಧಾರದ ಮೇಲೆ ಜನರ ನಡುವೆ ವ್ಯತ್ಯಾಸವನ್ನು ಹೊಂದಿಲ್ಲ'' ಎಂದರು.
''ನನ್ಬನ್ ಗ್ರೂಪ್ ಒಂದು ಲಾಭ ರಹಿತ ಸಂಸ್ಥೆಯಾಗಿದೆ. ನಾವೀಗ ಈ ಗುಂಪಿನಿಂದ ನನ್ಬನ್ ಎಂಟರ್ಟೈನ್ಮೆಂಟ್ ಎಂಬ ಹೊಸ ಉದ್ಯಮ ಪ್ರಾರಂಭಿಸಿದ್ದೇವೆ. ಈ ಸಂಸ್ಥೆಯು ಸಿನಿಮಾ ನಿರ್ಮಾಣದತ್ತ ಗಮನ ಹರಿಸುತ್ತದೆ. ಮೊದಲು ತಮಿಳು ಸಿನಿಮಾ ನಿರ್ಮಾಣ, ನಂತರ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣದ ಗುರಿ ಹೊಂದಿದ್ದೇವೆ.ಹೊಸದಾಗಿ ಪ್ರಾರಂಭಿಸಲಾದ ನನ್ಬನ್ ಎಂಟರ್‌ಟೈನ್ಮೆಂಟ್ ಅಡಿ ಪ್ರತಿಭಾವಂತರಿಗೆ ಅವಕಾಶ ನೀಡುತ್ತೇವೆ. ಈ ವೇದಿಕೆ ಮೂಲಕ ಅವರು ತಮ್ಮ ಪ್ರತಿಭೆ ಪ್ರದರ್ಶಿಸಬಹುದು'' ಎಂದರು.
ನನ್ಬನ್ ಗ್ರೂಪ್ ಸಿನಿಮಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗಿದೆ. ನನ್ಬನ್ ಎಂಟರ್ಟೈನ್ಮೆಂಟ್ ಮೂಲಕ ಯುವ ಪ್ರತಿಭೆಗಳ ಕನಸಿಗೆ ವೇದಿಕೆ ನಿರ್ಮಿಸಿದೆ. ಈ ಸಂಸ್ಥೆ ಅಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಗುರಿ ಹೊಂದಿದ್ದು ಇನ್ಮುಂದೆ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಆಗಿದೆ.