Shreya Ghoshal: ಬಾಳೆಲ್ಲಾ ಉಲ್ಲಾಸದ ಹೂ ಮಳೆ; ಜನ ಮೆಚ್ಚಿದ ಗಾಯಕಿ ಶ್ರೇಯಾ ಘೋಷಾಲ್ ಸುಂದರ ಫೋಟೋ ಗ್ಯಾಲರಿ
ಇವರ ಹಾಡುಗಳನ್ನು ಕೇಳುತ್ತಿದ್ದರೆ ಯಾರೇ ಆಗಲಿ ಒಂದು ಕ್ಷಣ ಮಂತ್ರ ಮುಗ್ಧರಾಗದೆ ಇರುವುದಿಲ್ಲ. ಯಾವುದೇ ಭಾಷೆ ಆಗಲೀ ನಿರರ್ಗಳವಾಗಿ ಹಾಡುವುದು ಇವರ ವೈಶಿಷ್ಟ್ಯತೆ. ಹೆಸರು ಕೂಡಾ ಅಷ್ಟೇ ಚೆಂದ, ಶ್ರೇಯಾ ಘೋಷಾಲ್.
(1 / 14)
ಶ್ರೇಯಾ ಘೋಷಾಲ್, ಮೂಲತ: ಬಂಗಾಳಿ ಕುಟುಂಬಕ್ಕೆ ಸೇರಿದರೂ ಇಂದು ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಹಿಟ್ ಹಾಡುಗಳನ್ನು ಹಾಡಿದ್ದಾರೆ.
(2 / 14)
ಶ್ರೇಯಾ ಘೋಷಾಲ್ ಹುಟ್ಟಿದ್ದು 12 ಮಾರ್ಚ್ 1984. ಬೆಂಗಾಳಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಶ್ರೇಯಾ ತಂದೆ ಬಿಸ್ವಜಿತ್ ಘೋಷಾಲ್, ತಾಯಿ ಶರ್ಮಿಷ್ಠ ಘೋಷಾಲ್
(4 / 14)
ಸ್ಕೂಲ್, ಕಾಲೇಜಿನಲ್ಲಿ ಶ್ರೇಯಾ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದರು. ಇವರ ಹಾಡನ್ನು ಕೇಳಿದವರು ಆಗಲೇ ದನಿಗೆ ಮಾರು ಹೋಗಿದ್ದರು.
(5 / 14)
ಲತಾ ಮಂಗೇಶ್ವರ್ ಅವರು ಹಾಡಿದ್ದ ಗಣೇಶನ ಹಾಡೊಂದನ್ನು ಶ್ರೇಯಾ ಮೊದಲ ಬಾರಿಗೆ ರೆಕಾರ್ಡ್ ಮಾಡಿದ ಶ್ರೇಯಾಗೆ ಅವಕಾಶಗಳು ಹುಡುಕಿ ಬಂದವು.
(6 / 14)
ಸರಿಗಮಪ ಹಿಂದಿ ಕಾರ್ಯಕ್ರಮದಲ್ಲಿ ಶ್ರೇಯಾ ಹಾಡು ಕೇಳಿದ ಸಂಜಯ್ ಲೀಲಾ ಬನ್ಸಾಲಿ ತಮ್ಮ ದೇವ್‌ದಾಸ್ ಚಿತ್ರದಲ್ಲಿ ಅವಕಾಶ ನೀಡಿದರು.
(7 / 14)
ಅಲ್ಲಿಂದ ಶ್ರೇಯಾ ಘೋಷಾಲ್ ಲಕ್ ಸಂಪೂರ್ಣ ಬದಲಾಯ್ತು. ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಶ್ರೇಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
(8 / 14)
ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಶಿಲಾದಿತ್ಯ ಮುಖೋಪಾಧ್ಯಾಯ ಎಂಬುವರನ್ನು ಶ್ರೇಯಾ, 2015ರಲ್ಲಿ ಮದುವೆ ಆದರು.
(11 / 14)
2003ರಲ್ಲಿ ತೆರೆ ಕಂಡ ಪ್ಯಾರಿಸ್ ಪ್ರಣಯ ಚಿತ್ರದ ಕೃಷ್ಣ ನೀ ಬೇಗನೆ ಬಾರೋ ಹಾಡನ್ನು ಹಾಡುವ ಮೂಲಕ ಶ್ರೇಯಾ ಕನ್ನಡಕ್ಕೆ ಬಂದರು.
(12 / 14)
ಚೆಲುವಿನ ಚಿತ್ತಾರ ಚಿತ್ರದ ಉಲ್ಲಾಸದ ಹೂ ಮಳೆ, ಮೌರ್ಯ ಚಿತ್ರದ ಉಸಿರಾಗುವೆ, ಆಕಾಶ್ ಚಿತ್ರದ ಆಹಾ ಎಂಥ ಆ ಕ್ಷಣ, ವರ್ಷ ಚಿತ್ರದ ವಾಸಂತಿ, ಜೊತೆ ಜೊತೆಯಲಿ ಚಿತ್ರದ ಓ ಗುಣವಂತ, ಮಿಲನ ಚಿತ್ರದ ಮಳೆ ನಿಂತು ಹೋದ ಮೇಲೆ, ಕೆಂಪೇಗೌಡ ಚಿತ್ರದ ಥರ ಥರ, ಚಕ್ರವರ್ತಿ ಚಿತ್ರದ ಒಂದು ಮಳೆ ಬಿಲ್ಲು, ಯುವರತ್ನ ಚಿತ್ರದ ನೀನಾದೆ ನಾ, ಸೇರಿ ಅನೇಕ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ.
(13 / 14)
ಸೋನು ನಿಗಮ್, ಶಂಕರ್ ಮಹದೇವನ್, ಎಸ್‌ಪಿ ಬಾಲಸುಬ್ರಹ್ಮಣ್ಯಂ, ರಾಜೇಶ್ ಕೃಷ್ಣನ್ ಸೇರಿದಂತೆ ಶ್ರೇಯಾ ಬಹುತೇಕ ಎಲ್ಲಾ ಗಾಯಕರೊಂದಿಗೆ ಹಾಡಿದ್ದಾರೆ.
ಇತರ ಗ್ಯಾಲರಿಗಳು