Sanjana Anand: ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು ಬಂದ ಸಂಜನಾ ಆನಂದ್... ಶೀಘ್ರದಲ್ಲೇ ಸಿನಿಮಾ ಟೈಟಲ್ ಘೋಷಣೆ
Mar 02, 2023 09:31 PM IST
ಸಂಜನಾ ಆನಂದ್, ವಿಕ್ರಮ್ ರವಿಚಂದ್ರನ್
- ಕನ್ನಡದಲ್ಲಿ ಸದ್ಯಕ್ಕೆ ಸೂತ್ರಧಾರಿ ಹಾಗೂ ರಾಯಲ್ ಸಿನಿಮಾಗಳಲ್ಲಿ ಸಂಜನಾ ಬ್ಯುಸಿ ಇದ್ಧಾರೆ. ಇದರ ಜೊತೆಗೆ ಈಗ ವಿಕ್ರಮ್ ಜೊತೆ ರೊಮ್ಯಾನ್ಸ್‌ಗೆ ಸಿದ್ಧರಾಗಿದ್ದಾರೆ. ವಿಕ್ರಮ್ ಹಾಗೂ ಸಂಜನಾ ಕೆಮಿಸ್ಟ್ರಿ ತೆರೆ ಮೇಲೆ ಹೇಗೆ ವರ್ಕೌಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕು.
'ತ್ರಿವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಈಗ ಎರಡನೇ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಕಳೆದ ವರ್ಷ ಈ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಈ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದು ಈ ಚೆಲುವನಿಗೆ ಸಂಜನಾ ಆನಂದ್ ಜೋಡಿಯಾಗಿ ನಟಿಸಲಿದ್ದಾರಂತೆ.
ದುನಿಯಾ ವಿಜಯ್ ಜೊತೆ 'ಸಲಗ' ಚಿತ್ರದಲ್ಲಿ ನಟಿಸಿದ ನಂತರ ಈ ಬ್ಯೂಟಿಗೆ ತೆಲುಗಿನಲ್ಲಿ ಕೂಡಾ ಆಫರ್ ಹೆಚ್ಚಾಗಿದೆಯಂತೆ. ಸಂಜನಾ ಚಿತ್ರರಂಗಕ್ಕೆ ಬಂದಿದ್ದು 2019ರಲ್ಲಿ ತೆರೆ ಕಂಡ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ. ನಂತರ ಮಳೆಬಿಲ್ಲು, ಖುಷ್ಕ, ಸಲಗ, ಶೋಕಿವಾಲಾ, ವಿಂಡೋಸೀಟ್ ಸಿನಿಮಾಗಳಲ್ಲಿ ನಟಿಸಿದರು. ಇದಾದ ನಂತರ ಆಕೆಗೆ ತೆಲುಗು ಚಿತ್ರರಂಗದಿಂದ ಬುಲಾವ್ ಬಂತು. ತೆಲುಗಿನ ನೇನು ಮೀಕು ಬಾಗಾ ಕಾವಾಲ್ಸಿನವಾಡಿನಿ ಹಾಗೂ ಫುಲ್ ಬಾಟಲ್ ಸಿನಿಮಾಗಳಲ್ಲಿ ಸಂಜನಾ ನಟಿಸಿದ್ದಾರೆ. ಕನ್ನಡದಲ್ಲಿ ಸದ್ಯಕ್ಕೆ ಸೂತ್ರಧಾರಿ ಹಾಗೂ ರಾಯಲ್ ಸಿನಿಮಾಗಳಲ್ಲಿ ಆಕೆ ಬ್ಯುಸಿ ಇದ್ಧಾರೆ. ಇದರ ಜೊತೆಗೆ ಈಗ ವಿಕ್ರಮ್ ಜೊತೆ ರೊಮ್ಯಾನ್ಸ್‌ಗೆ ಸಿದ್ಧರಾಗಿದ್ದಾರೆ. ವಿಕ್ರಮ್ ಹಾಗೂ ಸಂಜನಾ ಕೆಮಿಸ್ಟ್ರಿ ತೆರೆ ಮೇಲೆ ಹೇಗೆ ವರ್ಕೌಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕು.
ಇನ್ನು ವಿಕ್ರಮ್ ರವಿಚಂದ್ರನ್ ಮೊದಲ ಚಿತ್ರದಲ್ಲಿ ಆಕ್ಟಿಂಗ್, ಆಕ್ಷನ್ ಮತ್ತು ಡಾನ್ಸ್ ಮೂಲಕ ಸಿನಿಪ್ರಿಯರ ಗಮನ ಸೆಳೆದರೂ, ಸಿನಿಮಾ ಹೆಚ್ಚು ದಿನ ಚಿತ್ರಮಂದಿರದಲ್ಲಿ ನಿಲ್ಲಲ್ಲಿಲ್ಲ. ಇದೀಗ ಅವರು ಹೊಸ ಕಥೆಯೊಂದಿಗೆ ಆಗಮಿಸುತ್ತಿದ್ದಾರೆ. ಆದರೆ ಈ ಬಾರಿ ಅವರು ಹೂವು ಬದಿಗಿಟ್ಟು, ರಾ ಹಾಗೂ ಗ್ಯಾಂಗ್‌ಸ್ಟರ್ ಸಬ್ಜೆಕ್ಟ್ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಗಳೂರಿನ ಶ್ರೀ ಬಂಡೆ ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ವಿಕ್ರಮ್ ಸಹೋದರ ಮನುರಂಜನ್ ಕ್ಲಾಪ್ ಮಾಡಿದ್ದರು.
ಮುಹೂರ್ತದ ವೇಳೆ ವಿಕ್ರಮ್ , ಪಂಚೆ ಧರಿಸಿ, ಕೈಯಲ್ಲಿ ಮುಧೋಳ ತಳಿಯ ನಾಯಿ ಹಿಡಿದು ಗಮನ ಸೆಳೆದಿದ್ದರು. ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ರಾಜನ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಡಾಲಿ ಧನಂಜಯ್ 'ಹೆಡ್‌ಬುಷ್' ಸಿನಿಮಾಗೆ ಕೂಡಾ ಕಾರ್ತಿಕ್ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೀಗ ವಿಕ್ರಂ ಜತೆ ಕೈ ಜೋಡಿಸಿದ್ದಾರೆ. ಸದ್ಯಕ್ಕೆ ಸಿನಿಮಾಗೆ VKR 2 ಎಂದು ಹೆಸರಿಟ್ಟಿದ್ದು ಶೀಘ್ರದಲ್ಲೇ ಚಿತ್ರದ ಟೈಟಲ್ ಹಾಗೂ ಇನ್ನಿತರ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಿದೆ.