Sushmita Sen: ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌ಗೆ ಹೃದಯಾಘಾತ... ಆತಂಕದಲ್ಲಿ ಅಭಿಮಾನಿಗಳು!
ಕನ್ನಡ ಸುದ್ದಿ  /  ಮನರಂಜನೆ  /  Sushmita Sen: ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌ಗೆ ಹೃದಯಾಘಾತ... ಆತಂಕದಲ್ಲಿ ಅಭಿಮಾನಿಗಳು!

Sushmita Sen: ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌ಗೆ ಹೃದಯಾಘಾತ... ಆತಂಕದಲ್ಲಿ ಅಭಿಮಾನಿಗಳು!

ನಿಮ್ಮ ಹೃದಯವನ್ನು ಯಾವಾಗಲೂ ಸಂತೋಷ ಮತ್ತು ಧೈರ್ಯದಿಂದ ಇರಿಸಿಕೊಳ್ಳಿ ಮತ್ತು ನಿಮಗೆ ಅಗತ್ಯವಿದ್ದಾಗ ಅದು ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು. ಕೆಲವು ದಿನಗಳ ಹಿಂದೆ ನನಗೆ ಹೃದಯಾಘಾತವಾಗಿತ್ತು. ಆದರೆ ಸೂಕ್ತ ಸಮಯಕ್ಕೆ ನನಗೆ ವೈದ್ಯಕೀಯ ಚಿಕಿತ್ಸೆ ದೊರೆಯಿತು.

ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌
ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌ (PC: Sushmita Sen )

ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್‌ ಅವರಿಗೆ ಹೃದಯಾಘಾತವಾಗಿದೆ. ವಿಷಯ ತಿಳಿದ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ಧಾರೆ. 47 ವರ್ಷದ ನಟಿ ಸುಷ್ಮಿತಾ ಸೇನ್‌ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ಧಾರೆ. ತಮ್ಮ ಮೆಚ್ಚಿನ ನಟಿ ಅನಾರೋಗ್ಯಕ್ಕೆ ಒಳಗಾಗಿರುವ ವಿಚಾರ ತಿಳಿದು ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಆದರೆ ಸುಷ್ಮಿತಾ ಅವರಿಗೆ ಹಾರ್ಟ್‌ ಅಟ್ಯಾಕ್‌ ಆಗಿರುವುದು ಕೆಲವು ದಿನಗಳ ಹಿಂದೆ ಅಂತೆ.

ತಮಗೆ ಹಾರ್ಟ್‌ ಅಟ್ಯಾಕ್‌ ಆಗಿತ್ತು ಎಂಬ ವಿಚಾರವನ್ನು ಸ್ವತ: ಸುಷ್ಮಿತಾ ಸೇನ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ತಂದೆ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿರುವ ಸುಷ್ಮಿತಾ ಸೇನ್‌, ತಾವು ಅನಾರೋಗ್ಯಕ್ಕೆ ಒಳಗಾದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ''ನಿಮ್ಮ ಹೃದಯವನ್ನು ಯಾವಾಗಲೂ ಸಂತೋಷ ಮತ್ತು ಧೈರ್ಯದಿಂದ ಇರಿಸಿಕೊಳ್ಳಿ ಮತ್ತು ನಿಮಗೆ ಅಗತ್ಯವಿದ್ದಾಗ ಅದು ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು. ಕೆಲವು ದಿನಗಳ ಹಿಂದೆ ನನಗೆ ಹೃದಯಾಘಾತವಾಗಿತ್ತು. ಆದರೆ ಸೂಕ್ತ ಸಮಯಕ್ಕೆ ನನಗೆ ವೈದ್ಯಕೀಯ ಚಿಕಿತ್ಸೆ ದೊರೆಯಿತು.''

''ಆಸ್ಪತ್ರೆಯಲ್ಲಿ ನನಗೆ ಅಂಜಿಯೋಪ್ಲಾಸ್ಟಿ ಮಾಡಲಾಯ್ತು. ನಿಮ್ಮ ಹೃದಯ ಚೆನ್ನಾಗಿದೆ ಎಂದು ಕಾರ್ಡಿಯಾಲಜಿಸ್ಟ್‌ ಕನ್ಫರ್ಮ್‌ ಮಾಡಿದ್ದಾರೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ಮುಂದಿನ ಪೋಸ್ಟ್‌ನಲ್ಲಿ ಧನ್ಯವಾದ ಅರ್ಪಿಸುತ್ತೇನೆ. ನನ್ನ ಪ್ರೀತಿಪಾತ್ರರಿಗೆ ನನ್ನ ಶ್ರೇಯೋಭಿಲಾಷಿಗಳಿಗೆ ಈ ಪೋಸ್ಟ್‌ ಮೂಲಕ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಮುಂದಿನ ಜೀವನಕ್ಕೆ ನಾನು ಸಿದ್ಧಳಾಗಿದ್ದೇನೆ. ಐ ಲವ್‌ ಯೂ'' ಎಂದು ಸುಷ್ಮಿತಾ ಸೇನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಸುಷ್ಮಿತಾ ಸೇನ್‌ ಪೋಸ್ಟ್‌ ನೋಡಿ ಕೆಲವರು ಶಾಕ್‌ ಆಗಿದ್ದಾರೆ. ಕೆಲವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಲಹೆ ನೀಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಕೂಡಾ ಕಮೆಂಟ್‌ ಮಾಡಿ, ನೀವು ಸ್ಟಾಂಗ್‌ ಲೇಡಿ, ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕಮೆಂಟ್‌ ಮಾಡಿದ್ಧಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಸ್ಯಾಂಡಲ್‌ವುಡ್‌ ಅಖಾಡ ಎಂಟ್ರಿಗೆ ಯುವ ರಾಜ್‌ಕುಮಾರ್‌ ರೆಡಿ.. ಶುಕ್ರವಾರ ಚೊಚ್ಚಲ ಚಿತ್ರದ ಮುಹೂರ್ತ

ಇದಕ್ಕೂ ಮುನ್ನ 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ಯುವ ರಾಜ್‌ಕುಮಾರ್‌ ಅವರನ್ನು ಲಾಂಚ್‌ ಮಾಡಲು ಪ್ಲ್ಯಾನ್‌ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಮುಂದುವರೆಯಲಿಲ್ಲ. ಇದಾದ ನಂತರ ಯುವ ಚಿಕ್ಕಪ್ಪ ಪುನೀತ್‌ ರಾಜ್‌ಕುಮಾರ್‌, ಯುವ ಅವರನ್ನು ತಮ್ಮ ಪಿಆರ್‌ಕೆ ಬ್ಯಾನರ್‌ ಮೂಲಕ ಲಾಂಚ್‌ ಮಾಡಬೇಕು ಎಂದುಕೊಂಡಿದ್ದರು. ಪೂರ್ತಿ ಸ್ಟೋರಿಗೆ ಈ ಲಿಂಕ್‌ ಒತ್ತಿ

ಪವನ್‌ ಕಲ್ಯಾಣ್‌ ಜೊತೆ ತೆರೆ ಹಂಚಿಕೊಳ್ತಿದ್ದಾರಂತೆ ಶ್ರೀಲೀಲಾ.. ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ!

ಇತ್ತೀಚೆಗೆ ತಮ್ಮ ಸೋದರಳಿಯ ಸಾಯಿ‌ ಧರಮ್‌ ತೇಜ್ ಜೊತೆ ಒಂದು ರೀಮೇಕ್‌ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಅನೌನ್ಸ್‌ ಮಾಡಿದ್ದರು. ಈ ಚಿತ್ರವನ್ನು ಸಮುದ್ರಖನಿ ನಿರ್ದೇಶಿಸುತ್ತಿದ್ದು, ತ್ರಿವಿಕ್ರಮ್ ಕಥೆ ಬರೆದಿದ್ದಾರೆ. ಇದು ತಮಿಳಿನ 'ವಿನೋದ ಸೀತ್ಯಂ' ರೀಮೇಕ್‌ ಆಗಿದೆ. ಮೊದಲ ಬಾರಿಗೆ ಪವನ್‌ ಕಲ್ಯಾಣ್‌ ಹಾಗೂ ಸಾಯಿ ಧರಮ್‌ ತೇಜ್‌ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಈ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ ಕೇಳಿಬಂದಿದೆ. ಶ್ರೀಲೀಲಾ ಕೂಡಾ ಈ ರೀಮೇಕ್‌ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಸಂಪೂರ್ಣ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

Whats_app_banner