1975 Kannada Movie: ಸಸ್ಪೆನ್ಸ್, ಥ್ರಿಲ್ಲರ್ '1975' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ.. ಎರಡನೇ ವಾರದತ್ತ ಹೆಜ್ಜೆ ಇಟ್ಟ ಸಿನಿಮಾ
ಕೊಲೆಯ ತನಿಖೆ ಜೊತೆಗೆ ಮಾದಕ ಜಾಲದ ಬಗ್ಗೆಯೂ ಚಿತ್ರದಲ್ಲಿ ಹಲವು ವಿಚಾರಗಳನ್ನು ಹೇಳಿದ್ದು, ಅಷ್ಟೇ ರೋಚಕವಾಗಿ ತೆರೆ ಮೇಲೆ ಕಟ್ಟಿ ಕೊಡಲಾಗಿದೆ. ಪ್ರೇಕ್ಷಕರೂ ಕೂಡಾ ಸಿನಿಮಾ ನೋಡಿ ಉತ್ತಮ ಪ್ರತಿಕ್ರಿಯೆ ನೀಡುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಫೆಬ್ರವರಿ 24 ರಂದು ತೆರೆ ಕಂಡ ವಸಿಷ್ಠ ಬಂಟನೂರು ನಿರ್ದೇಶನದ 1975 ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸಿನಿಮಾ ಮೊದಲ ವಾರ ಸಕ್ಸಸ್ ಕಂಡಿದ್ದು ಇದೀಗ ಎರಡನೇ ವಾರದತ್ತ ಹೆಜ್ಜೆ ಇಟ್ಟಿದೆ.
ಸಿಲ್ವರ್ ಸ್ಕ್ರೀನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿ ದಿನೇಶ್ ರಾಜನ್ '1975' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಜೈ ಶೆಟ್ಟಿ ನಾಯಕನಾಗಿ, ಮಾನಸ ನಾಯಕಿಯಾಗಿ ನಟಿಸಿದ್ದಾರೆ. ಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿಗಳ ಕೊಲೆಯ ಸುತ್ತ ಹೆಣೆದ ಕಥೆಯೇ 1975. ಆ ಮೂವರು ವಿದ್ಯಾರ್ಥಿಗಳ ಕೊಲೆಗೆ ಕಾರಣವೇನು..? ಕೊಲೆ ಮಾಡಿದ್ದು ಯಾರು..? ಎಂದು ತನಿಖೆಯ ಸುತ್ತ ಸಸ್ಪೆನ್ಸ್ ಹಾದಿಯಲ್ಲಿ ಸಾಗುವ ಕಥೆ ರೋಚಕವಾಗಿ ತೆರೆ ಮೇಲೆ ಮೂಡಿಬಂದಿದೆ. ಕೊಲೆಯ ತನಿಖೆ ಜೊತೆಗೆ ಮಾದಕ ಜಾಲದ ಬಗ್ಗೆಯೂ ಚಿತ್ರದಲ್ಲಿ ಹಲವು ವಿಚಾರಗಳನ್ನು ಹೇಳಿದ್ದು, ಅಷ್ಟೇ ರೋಚಕವಾಗಿ ತೆರೆ ಮೇಲೆ ಕಟ್ಟಿ ಕೊಡಲಾಗಿದೆ. ಪ್ರೇಕ್ಷಕರೂ ಕೂಡಾ ಸಿನಿಮಾ ನೋಡಿ ಉತ್ತಮ ಪ್ರತಿಕ್ರಿಯೆ ನೀಡುತ್ತಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಇದು ನಾಯಕ ಜೈ ಶೆಟ್ಟಿ ಹಾಗೂ ನಾಯಕಿ ಮಾನಸ ಇಬ್ಬರಿಗೂ ಮೊದಲ ಸಿನಿಮಾ ಆದರೂ ಅಚ್ಚುಕಟ್ಟಾದ ನಟನೆ ಮೂಲಕ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗಮನ ಸೆಳೆದಿದ್ದು, ಇವರೊಂದಿಗೆ ವೆಂಕಟೇಶ್ ಪ್ರಸಾದ್, ಭೂಷಣ್ ಗೌಡ, ಮುರಳಿ, ಉಮೇಶ್, ಮಧು, ಸಿಂಧು ಲೋಕನಾಥ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. '1975' ಚಿತ್ರಕ್ಕೆ ಶಿವಪ್ರಸಾದ್, ಧನಂಜಯ್ ವರ್ಮಾ, ಸಂದೇಶ್ ಬಾಬಣ್ಣ ಮೂವರ ಸಂಗೀತ ನಿರ್ದೇಶನವಿದೆ. ನಾಗೇಂದ್ರ ಅರಸ್ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ, ಪ್ರಸನ್ನ ಗುರಲಕೆರೆ ಛಾಯಾಗ್ರಹಣ ಇದೆ.
ಮತ್ತಷ್ಟು ಮನರಂಜನೆ ಸುದ್ದಿಗಳು
ರಮ್ಯಾ ಜೊತೆಗಿನ ಫೋಟೋ ಹಂಚಿಕೊಂಡ ಸಾನ್ಯಾ ಅಯ್ಯರ್... ನೆಟಿಜನ್ಸ್ ಕಮೆಂಟ್ ಮಾಡಿದ್ದೇನು ನೋಡಿ
ಸಾನ್ಯಾ ಅಯ್ಯರ್, ರಮ್ಯಾ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ''ಅವರು ನಿಜಕ್ಕೂ ಅತ್ಯುತ್ತಮ ವ್ಯಕ್ತಿತ್ವ ಹೊಂದಿರುವವರು. ನಾನು ಬಾಲ್ಯದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ನನ್ನ ಫೇವರೆಟ್ ನಟಿ ಯಾರು ಎಂದು ನಿರೂಪಕರು ಕೇಳಿದ್ದರು. ಆಗ ನಾನು ರಮ್ಯಾ ಹೆಸರು ಹೇಳಿದ್ದೆ. ಕೆಲವೊಂದು ವಿಷಯಗಳು ಎಂದಿಗೂ ಬದಲಾಗುವುದಿಲ್ಲ'' ಎಂದು ಸ್ಯಾನ್ಯಾ ಬರೆದುಕೊಂಡಿದ್ದಾರೆ. ಪೂರ್ತಿ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಧನಂಜಯ್ 25ನೇ ಚಿತ್ರದ ಟೈಟಲ್ ಹಾಡಿನಲ್ಲಿ ಪುನೀತ್... ಆ ಸೀನ್ ನೋಡಿ ಥ್ರಿಲ್ ಆದ ಅಪ್ಪು ಫ್ಯಾನ್ಸ್!
'ಹೊಯ್ಸಳ' ಚಿತ್ರದಲ್ಲಿ ಧನಂಜಯ್ ಗುರುದೇವ ಹೊಯ್ಸಳ ಹೆಸರಿನ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರತಂಡ ಇತ್ತೀಚೆಗೆ ಸಳ ಸಳ ನೀ ಹೊಯ್ಸಳ, ನೂರಾನೆಯ ಬಲ ಸಿಂಗಲ್ ಪಡೆ ಇದು... ಎಂಬ ಹಾಡನ್ನು ರಿಲೀಸ್ ಮಾಡಿದೆ. ಸಳ ಸಳ ಹೊಯ್ಸಳ ಹಾಡಿಗೆ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಈ ಹಾಡನ್ನು ಹಾಡಿದ್ದು ಚಿತ್ರದ ಹಾಡುಗಳಿಗೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಂಪೂರ್ಣ ಸ್ಟೋರಿಗೆ ಈ ಲಿಂಕ್ ಒತ್ತಿ.