logo
ಕನ್ನಡ ಸುದ್ದಿ  /  ಕರ್ನಾಟಕ  /  ಶಸ್ತ್ರಚಿಕಿತ್ಸೆ ಬಳಿಕ ಧ್ವನಿ ಕಳೆದುಕೊಂಡವನಿಗೆ 20 ವರ್ಷದ ಬಳಿಕ 10 ಲಕ್ಷ ರೂ ಪರಿಹಾರ ಘೋಷಣೆ; ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಶಸ್ತ್ರಚಿಕಿತ್ಸೆ ಬಳಿಕ ಧ್ವನಿ ಕಳೆದುಕೊಂಡವನಿಗೆ 20 ವರ್ಷದ ಬಳಿಕ 10 ಲಕ್ಷ ರೂ ಪರಿಹಾರ ಘೋಷಣೆ; ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Umesh Kumar S HT Kannada

Feb 22, 2024 09:59 AM IST

google News

ಶಸ್ತ್ರಚಿಕಿತ್ಸೆ ಬಳಿಕ ಧ್ವನಿ ಕಳೆದುಕೊಂಡವನಿಗೆ 20 ವರ್ಷದ ಬಳಿಕ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. (ಸಾಂಕೇತಿಕ ಚಿತ್ರ)

  • ಶಸ್ತ್ರಚಿಕಿತ್ಸೆ ಬಳಿಕ ಧ್ವನಿ ಕಳೆದುಕೊಂಡವನಿಗೆ 20 ವರ್ಷದ ಬಳಿಕ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಬೆಂಗಳೂರು ಓಲ್ಡ್ ಏರ್‌ಪೋರ್ಟ್‌ ರಸ್ತೆಯ ಮಣಿಪಾಲ್ ಹಾಸ್ಪಿಟಲ್ಸ್‌ ಈಗ ಶೇಕಡ 10 ಬಡ್ಡಿ ಸಹಿತ ಪರಿಹಾರ ನೀಡಬೇಕಾಗಿದೆ. 

ಶಸ್ತ್ರಚಿಕಿತ್ಸೆ ಬಳಿಕ ಧ್ವನಿ ಕಳೆದುಕೊಂಡವನಿಗೆ 20 ವರ್ಷದ ಬಳಿಕ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. (ಸಾಂಕೇತಿಕ ಚಿತ್ರ)
ಶಸ್ತ್ರಚಿಕಿತ್ಸೆ ಬಳಿಕ ಧ್ವನಿ ಕಳೆದುಕೊಂಡವನಿಗೆ 20 ವರ್ಷದ ಬಳಿಕ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಶಸ್ತ್ರ ಚಿಕಿತ್ಸೆಯ ಬಳಿಕ ಧ್ವನಿ ಕಳೆದುಕೊಂಡ ವ್ಯಕ್ತಿಯ ಪತ್ನಿಗೆ ಪರಿಹಾರವಾಗಿ 10 ಲಕ್ಷ ರೂಪಾಯಿ ಮತ್ತು ವಾರ್ಷಿಕ ಶೇಕಡ 10 ಬಡ್ಡಿ ಸೇರಿಸಿ ನೀಡುವಂತೆ ಸುಪ್ರೀಂ ಕೋರ್ಟ್‌ ಬೆಂಗಳೂರಿನ ಹಳೆ ಏರ್‌ಪೋರ್ಟ್‌ ರಸ್ತೆಯ ಮಣಿಪಾಲ್ ಹಾಸ್ಪಿಟಲ್ಸ್‌ಗೆ ಆದೇಶಿಸಿದೆ.

ಅರಿವಳಿಕೆ ನೀಡುವ ಸಂದರ್ಭದಲ್ಲಿ ವೈದ್ಯರು ಮಾಡಿದ ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ರೋಗಿಯ ಧ್ವನಿಯಲ್ಲಿ ಕರ್ಕಶ ಶಬ್ದ ಕಾಣಿಸಿಕೊಂಡದ್ದು ದೃಢಪಟ್ಟ ಕಾರಣ ಸುಪ್ರೀಂ ಕೋರ್ಟ್ ಸಂತ್ರಸ್ತರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತು ಎಂದು ಲೈವ್ ಲಾ ವರದಿ ಮಾಡಿದೆ.

ಮಣಿಪಾಲ್ ಹಾಸ್ಪಿಟಲ್ಸ್‌ ವೈದ್ಯರ ತಂಡವು ದೋಷಪೂರಿತ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಅದರಿಂದಾಗಿ ಧ್ವನಿ ಕಳೆದುಕೊಂಡಿರುವುದಾಗಿ ರೋಗಿ 18 ಲಕ್ಷ ರೂಪಾಯಿ ಪರಿಹಾರ ಕೋರಿದ್ದರು. ರೋಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅವರ ಪತ್ನಿಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.

ಏನಿದು ಧ್ವನಿ ಕಳೆದುಕೊಂಡ ಪ್ರಕರಣ

ಅಲಸೂರು ನಿವಾಸಿ ಡಗ್ಲಾಸ್ ಲೂಯಿಸ್ ಶ್ವಾಸಕೋಶಕ್ಕೆ ಸಂಬಂಧಿಸಿದ ಮೇಜರ್ ಸರ್ಜರಿಯನ್ನು 2003ರ ಅಕ್ಟೋಬರ್‌ 31ರಂದು ಮಾಡಿಸಿಕೊಂಡಿದ್ದರು. ಆಗ ಅರಿವಳಿಕೆ ನೀಡಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ಧ್ವನಿಯಲ್ಲಿ ಒರಟುತನ ಕಂಡುಬಂದಿತ್ತು. ಇದನ್ನು ಆಪರೇಷನ್ ನಡೆಸಿದ ಸರ್ಜನ್ ಅವರ ಗಮನಕ್ಕೆ ತರಲಾಗಿತ್ತು. ಆಗ ಅವರು, ಪುನರಾವರ್ತಿತ ಲಾರಿಂಜಿಯಲ್ ನರದ ಸುತ್ತ ದುಗ್ಧರಸ ಗ್ರಂಥಿಗಳ ಜೊತೆಗೆ ಗಡ್ಡೆಯ ಛೇದನದಿಂದಾಗಿ ಉಂಟಾಗಿರಬಹುದು. ನೆಬ್ಯುಲೈಸೇಶನ್ ಮತ್ತು ವಾಯ್ಸ್ ಥೆರಪಿ ಮೂಲಕ ಎಂಟು ತಿಂಗಳೊಳಗೆ ಧ್ವನಿಯನ್ನು ಮರಳಿ ಪಡೆಯಬಹುದು ಎಂದು ರೋಗಿಗೆ ಭರವಸೆ ನೀಡಿದರು.

ಆದಾಗ್ಯೂ, ರೋಗಿಯ ಪರಿಸ್ಥಿತಿಯಲ್ಲಿ ಯಾವುದೇ ಸುದಾರಣೆ ಕಾಣಲಿಲ್ಲ. ಇದೇ ವೇಳೆ, ಲೂಯಿಸ್ ಅವರು ಇನ್ನಿಬ್ಬರು ಡಾಕ್ಟರ್‌ ಅನ್ನು ಸಂಪರ್ಕಿಸಿದ್ದರು. ಶಸ್ತ್ರಚಿಕಿತ್ಸೆಗಾಗಿ ಅರಿವಳಿಕೆ ನೀಡುವ ಸಮಯದಲ್ಲಿ ತಪ್ಪಾದ ರೀತಿಯಲ್ಲಿ ನೀಡಿದ್ದರಿಂದಾಗಿ ಅವರ ಎಡ ಆರಿಟಿನಾಯ್ಡ್ ಪ್ರಕ್ರಿಯೆಯ ಸ್ಥಳಾಂತರವಾಗಿದೆ. ಇದರಿಂದಾಗಿ ಧ್ವನಿ ಹೋಗಿದೆ ಎಂದು ಆ ಇಬ್ಬರು ಡಾಕ್ಟರ್‌ಗಳು ಖಚಿತಪಡಿಸಿದ್ದರು.

ಗ್ರಾಹಕ ವೇದಿಕೆಯಲ್ಲಿ ಪ್ರಕರಣ ದಾಖಲು

ಬೇರೆ ಇಬ್ಬರು ಡಾಕ್ಟರ್ ನೀಡಿದ ಖಚಿತ ವರದಿ ಆಧರಿಸಿ, ಲೂಯಿಸ್ ಅವರು ಬೆಂಗಳೂರಿನಲ್ಲಿ ಜಿಲ್ಲಾ ಗ್ರಾಹಕ ವಿವಾದ ಇತ್ಯರ್ಥ ವೇದಿಕೆಯಲ್ಲಿ 2006ರ ಮೇ 10ರಂದು ಪ್ರಕರಣ ದಾಖಲಿಸಿದರು. ಗ್ರಾಹಕ ವೇದಿಕೆಯು ಆಸ್ಪತ್ರೆಗೆ 5000 ರೂಪಾಯಿ ವ್ಯಾಜ್ಯ ವೆಚ್ಚ ಮತ್ತು 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತು. ಮುಂದೆ 2007ರ ಆಗಸ್ಟ್ 24ರಂದು ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪ್ರಶಸ್ತಿಯನ್ನು ಎತ್ತಿಹಿಡಿಯಿತು. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಸಹ ಅದನ್ನು 2007ರ ನವೆಂಬರ್ 15ರಂದು ದೃಢಪಡಿಸಿತು. ಪರಿಹಾರದ ಮೊತ್ತವನ್ನು ಬದಲಾಗದೆ ಇರಿಸಿತು.

ಈ ನಡುವೆ, 2015ರಲ್ಲಿ ಲೂಯಿಸ್ ಅವರು ಮೃತಪಟ್ಟರು. ಅವರ ಪತ್ನಿಯು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ 18 ಲಕ್ಷ ರೂಪಾಯಿ ಪರಿಹಾರ ಕೋರಿದರು. ಪತಿಯು ಅವರ ಧ್ವನಿಯಲ್ಲಿನ ಒರಟುತನದಿಂದಾಗಿ ವೃತ್ತಿಜೀವನದಲ್ಲಿ ಸಂಕಷ್ಟಕ್ಕೀಡಾದರು. 2003 ರಿಂದ ಅವರ ವೃತ್ತಿಜೀವನವು ಅಸ್ತವ್ಯಸ್ತವಾಗಿತ್ತು. ಅವರು ಸಾಯುವವರೆಗೂ ಅದೇ ಹುದ್ದೆ ಮತ್ತು ತಿಂಗಳಿಗೆ 30,000 ರೂಪಾಯಿ ವೇತನ ಮಾತ್ರ ಪಡೆದರು ಎಂದು ವಾದಿಸಿದರು.

ಇದೇ ವೇಳೆ, ಮಣಿಪಾಲ್ ಹಾಸ್ಪಿಟಲ್ಸ್‌ ಪ್ರತಿವಾದ ಮಂಡಿಸುತ್ತ, ಶಸ್ತ್ರಚಿಕಿತ್ಸಕ ಸಮಯದಲ್ಲಿ ಡಬಲ್ ಲುಮೆನ್ ಟ್ಯೂಬ್ ಮೂಲಕ ರೋಗಿಗೆ ಅರಿವಳಿಕೆ ನೀಡುವಲ್ಲಿ ಯಾವುದೇ ನಿರ್ಲಕ್ಷ್ಯವಾಗಿಲ್ಲ ಎಂದು ಹೇಳಿತ್ತು. ಅಲ್ಲದೆ, ಗ್ರಾಹಕ ಪರಿಹಾರ ವೇದಿಕೆ ಅದನ್ನು ಪರಿಗಣಿಸಿಲ್ಲ ಎಂದು ವಾದಿಸಿತು.

ಆದಾಗ್ಯೂ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಅಹ್ಸನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠ, ಹಾಸ್ಪಿಟಲ್ಸ್‌ನ ವಾದವನ್ನು ಪರಿಗಣಿಸಲಿಲ್ಲ. ಅಲ್ಲದೆ, ಟ್ರೇನಿ ಅನಸ್ತೆಟಿಸ್ಟ್‌ ಮೂಲಕ ಅದನ್ನು ನಡೆಸಿದ್ದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡುವಂತೆ ಆದೇಶಿಸಿತು.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ