Bhagyalakshmi Serial: 2 ಇಡ್ಲಿ 1 ಸೌಟು ಉಪ್ಪಿಟ್ಟು, ಎಲ್ಲವೂ ಲಿಮಿಟ್ಟು, ಕೆಲಸದವಳ ವರ್ತನೆಗೆ ಮನೆ ಮಂದಿ ಬೇಸರ; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 21st february 2024 episode kusuma fedup on maid rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: 2 ಇಡ್ಲಿ 1 ಸೌಟು ಉಪ್ಪಿಟ್ಟು, ಎಲ್ಲವೂ ಲಿಮಿಟ್ಟು, ಕೆಲಸದವಳ ವರ್ತನೆಗೆ ಮನೆ ಮಂದಿ ಬೇಸರ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: 2 ಇಡ್ಲಿ 1 ಸೌಟು ಉಪ್ಪಿಟ್ಟು, ಎಲ್ಲವೂ ಲಿಮಿಟ್ಟು, ಕೆಲಸದವಳ ವರ್ತನೆಗೆ ಮನೆ ಮಂದಿ ಬೇಸರ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 21ರ ಸಂಚಿಕೆ ಹೀಗಿದೆ. ಅಡುಗೆ ಮಾಡಲು ತಾಂಡವ್‌ ಕರೆ ತರುವ ಹುಡುಗಿ ಪ್ರತಿಯೊಂದಕ್ಕೂ ಹಣ ಡಿಮ್ಯಾಂಡ್‌ ಮಾಡುವುದು ಕುಸುಮಾಗೆ ಬೇಸರವುಂಟು ಮಾಡುತ್ತಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 21ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 21ರ ಸಂಚಿಕೆ (PC: Colors Kannada)

Bhagyalakshmi Kannada Serial: ತಾಂಡವ್‌ ಚಾಲೆಂಜ್‌ನಲ್ಲಿ ಗೆಲ್ಲಬೇಕು ನನ್ನನ್ನು ಮದುವೆ ಆಗಬೇಕೆಂದು ಶ್ರೇಷ್ಠಾ, ಮನೆ ಕೆಲಸದವಳನ್ನು ಕಳಿಸಿಕೊಡುತ್ತಾಳೆ. ಇದೆಲ್ಲಾ ಇಷ್ಟವಿಲ್ಲದಿದ್ದರೂ ಕುಸುಮಾ ಸುಮ್ಮನಿರುತ್ತಾಳೆ. ಆದರೆ ಮನೆ ಕೆಲಸದವಳ ವರ್ತನೆ ನೋಡಿ ಬೇಸರ ವ್ಯಕ್ತಪಡಿಸುತ್ತಾಳೆ.

ಮದುವೆ ಕಾರ್ಡ್‌ ಪ್ರಿಂಟ್‌ ಹಾಕಿಸಲು ಮುಂದಾದ ಶ್ರೇಷ್ಠಾ

ಶ್ರೇಷ್ಠಾ ತಾಂಡವ್‌ಗೆ ಕರೆ ಮಾಡಿ ಮನೆ ಕೆಲಸದವಳ ಬಗ್ಗೆ ವಿಚಾರಿಸಿಕೊಳ್ಳುತ್ತಾಳೆ. ಇನ್ಮುಂದೆ ಯಾವುದೇ ಕಾರಣಕ್ಕೂ ನನ್ನನ್ನು ಮಧ್ಯದಲ್ಲಿ ಬಿಟ್ಟು ಹೋಗಬಾರದು. ಎಲ್ಲವನ್ನೂ ನಾನೊಬ್ಬಳೇ ನಿಭಾಯಿಸುವುದಕ್ಕೆ ಕಷ್ಟವಾಗುತ್ತಿದೆ. ಸುಂದರಿ ಏನೋ ತಪ್ಪು ಮಾಡಿ ಪೂಜಾಳನ್ನು ಮನೆಗೆ ಕರೆ ತಂದಿದ್ದಳು. ನಮ್ಮಿಬ್ಬರ ಬಗ್ಗೆ ಅವಳಿಗೆ ಎಲ್ಲವನ್ನೂ ಹೇಳಿದ್ದೇನೆ ಎಂದು ಶ್ರೇಷ್ಠಾ ಹೇಳಿದಾಗ ತಾಂಡವ್‌ಗೆ ಗಾಬರಿಯಾಗುತ್ತದೆ. ಇರುವ ವಿಚಾರವನ್ನು ಈ ರೀತಿ ಪೂಜಾ ಬಳಿ ಹೇಳಬಾರದಿತ್ತು ಎಂದು ಜೋರು ಮಾಡುತ್ತಾನೆ. ಆದರೆ ಶ್ರೇಷ್ಠಾ ಇದೆಲ್ಲದಕ್ಕೂ ಬಗ್ಗುವವಳಲ್ಲ. ಸಂಜೆ ಭೇಟಿ ಆಗು ವೆಡ್ಡಿಂಗ್‌ ಕಾರ್ಡ್‌ ಡಿಸೈನ್‌ ನೋಡಲು ಹೋಗಬೇಕು ಎನ್ನುತ್ತಾಳೆ. ತಾಂಡವ್‌ಗೆ ಇದ್ಯಾವುದೂ ಇಷ್ಟವಿಲ್ಲ, ನನಗೆ ಇನ್ನೂ ಡಿವೋರ್ಸ್‌ ಆಗಿಲ್ಲ, ಮನೆಯಲ್ಲೇ ಸರಳವಾಗಿ ತಾಳಿಶಾಸ್ತ್ರ ನಡೆಯಲಿ ಎನ್ನುತ್ತಾನೆ.

ಶ್ರೇಷ್ಠಾಗೆ ಮಾತ್ರ ತಾನು ಧೂಂ ಧಾಂ ಅಂತ ಮದುವೆ ಆಗುವ ಆಸೆ. ಇದು ನಿನ್ನ ಎರಡನೇ ಮದುವೆ ಆದರೆ ನನಗೆ ಮೊದಲ ಮದುವೆ, ನಾನು ಅದ್ದೂರಿಯಾಗಿ ಮದುವೆ ಆಗಲೇಬೇಕು ಎಂದುಕೊಳ್ಳುತ್ತಾಳೆ. ಸುಂದರಿ ಕೂಡಾ ಶ್ರೇಷ್ಠಾ ಪರ ನಿಂತು, ಜೀವನದಲ್ಲಿ ಪದೇ ಪದೆ ಮದುವೆ ಆಗುವುದಿಲ್ಲ, ಒಂದೇ ಸಾರಿ ಆಗುವುದು ಜೋರಾಗಿ ಆಗಿಬಿಡಬೇಕು ಎನ್ನುತ್ತಾಳೆ. ಶ್ರೇಷ್ಠಾಗೆ ಇದೊಂದೇ ಸಾಕು, ತಾಂಡವ್‌ನನ್ನು ಯಾವೆಲ್ಲಾ ರೀತಿ ಲಾಕ್‌ ಮಾಡಬಹುದು ಅಂತ ಕಾಯುತ್ತಿದ್ದಾಳೆ.

ಎಲ್ಲರಿಗೂ ಲಿಮಿಟ್‌ ತಿಂಡಿ

ಇತ್ತ ಮನೆಯಲ್ಲಿ ಹೊಸ ಕೆಲಸದಾಕೆ ಮನೆ ಮಂದಿಯನ್ನೆಲ್ಲಾ ಬ್ರೇಕ್‌ಫಾಸ್ಟ್‌ಗೆ ಕರೆಯುತ್ತಾಳೆ. ಎಲ್ಲರೂ ತಿಂಡಿ ತಿನ್ನಲು ಬರುತ್ತಾರೆ. ಗುಂಡಣ್ಣನಿಗೆ ಇಡ್ಲಿ, ತನ್ವಿಗೆ ಪಲಾವ್‌, ತಾಂಡವ್‌ಗೆ ನ್ಯೂಡಲ್ಸ್‌, ಪೂಜಾಗೆ ಮಸಾಲೆ ದೋಸೆ, ಧರ್ಮರಾಜ್‌ಗೆ ಉಪ್ಪಿಟ್ಟು ಹಾಗೂ ಕುಸುಮಾಗೆ ಪೊಂಗಲ್‌ ಹೀಗೆ ಒಬ್ಬೊಬ್ಬರಿಗೆ ಒಂದೊಂದು ಅಡುಗೆ ಮಾಡಿ ಬಡಿಸುತ್ತಾಳೆ. ಆ ತಿಂಡಿ ರುಚಿ ಮಾಡಿದ ಪೂಜಾ, ಕುಸುಮಾಗೆ ಆಶ್ಚರ್ಯದ ಜೊತೆ ಬೇಸರ. ಇಷ್ಟು ರುಚಿಯಾಗಿ ಅಡುಗೆ ಮಾಡಿದ್ದಾಳೆ. ಇವಳನ್ನು ಮನೆಯಿಂದ ಓಡಿಸುವ ಅವಕಾಶ ತಪ್ಪಿಹೋಯ್ತು ಎಂದುಕೊಳ್ಳುತ್ತಾರೆ. ಅಷ್ಟರಲ್ಲಿ ತಾಂಡವ್‌, ತಿಂಡಿ ಹೇಗಿದೆ ಎಂದು ಎಲ್ಲರಿಗೂ ಕೇಳುತ್ತಾನೆ. ಬೇಕಿದ್ದರೆ ಎಲ್ಲರೂ ಇನ್ನೂ ಸ್ವಲ್ಪ ಹಾಕಿಸಿಕೊಳ್ಳಿ ಎನ್ನುತ್ತಾನೆ. ಆದರೆ ನಂತರವಷ್ಟೇ ಅವನಿಗೆ ಗೊತ್ತಾಗಿದ್ದು ಕೆಲಸದವಳು ಮಾಡಿದ್ದು ಲಿಮಿಟ್‌ ಅಡುಗೆ ಅಂತ.

ಶ್ರೀಮಂತರ ಮನೆಯಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪ ತಿನ್ನುವುದು, ಅದಕ್ಕೆ ನಾನು ಲಿಮಿಟ್‌ ಅಡುಗೆ ಮಾಡಿದೆ. ಈಗ ನನ್ನ ಸಮಯ ಮುಗಿಯಿತು ನಾನು ಬೇರೆ ಮನೆಗೆ ಹೋಗಬೇಕು. ನಾಳೆಯಿಂದ ಹೆಚ್ಚು ಅಡುಗೆ ಮಾಡಬೇಕು ಎಂದರೆ ಇನ್ನಷ್ಟು ಹಣ ಕೊಡಬೇಕು ಎಂದು ಕಂಡಿಷನ್‌ ಹಾಕಿ ಅಲ್ಲಿಂದ ಹೊರಡುತ್ತಾಳೆ. ಹೊಟ್ಟೆ ತುಂಬಾ ತಿನ್ನದೆ ಗುಂಡಣ್ಣ ಬೇಸರಗೊಳ್ಳುತ್ತಾನೆ. ಅಮ್ಮನಿಗೆ ಫೋನ್‌ ಮಾಡಿ ಬೇಸರ ವ್ಯಕ್ತಪಡಿಸುತ್ತಾನೆ. ಮಗನ ಕಷ್ಟ ಕಂಡು ಭಾಗ್ಯಾ ಕೂಡಾ ಬೇಸರವಾಗುತ್ತಾಳೆ. ಮನೆ ಮಂದಿಗೆಲ್ಲಾ ತಿಂಡಿ ತುಂಬಿಸಿಕೊಂಡು ಅಮ್ಮನ ಮನೆಯಿಂದ ಹೊರಡುತ್ತಾಳೆ.

ಭಾಗ್ಯಾ ತಂದ ತಿಂಡಿಯನ್ನು ಮನೆಯವರು ತಿನ್ನಲು ತಾಂಡವ್‌ ಬಿಡುತ್ತಾನಾ? ಶ್ರೇಷ್ಠಾ ತಾನು ಅಂದುಕೊಂಡಂತೆ ಮದುವೆ ಆಹ್ವಾನ ಪತ್ರಿಕೆ ಪ್ರಿಂಟ್‌ ಹಾಕಿಸಿ ಎಲ್ಲರಿಗೂ ಕೊಡುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

mysore-dasara_Entry_Point