ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chaitra Achar: ಯಾವ ಹಾಲಿವುಡ್‌, ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ ಸಪ್ತ ಸಾಗರದಾಚೆ ಎಲ್ಲೋ ಚೆಲುವೆ; ಚೈತ್ರಾ ಜೆ ಆಚಾರ್‌ ಹೊಸ ಚಿತ್ರಲಹರಿ

Chaitra Achar: ಯಾವ ಹಾಲಿವುಡ್‌, ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ ಸಪ್ತ ಸಾಗರದಾಚೆ ಎಲ್ಲೋ ಚೆಲುವೆ; ಚೈತ್ರಾ ಜೆ ಆಚಾರ್‌ ಹೊಸ ಚಿತ್ರಲಹರಿ

  • Chaithra J Achar Beautiful photos: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ, ಟೋಬಿ, ಮಹಿರಾ, ಆ ದೃಶ್ಯ ಮುಂತಾದ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಸುಂದರ ನಟಿ ಮತ್ತು ಗಾಯಕಿ ಚೈತ್ರಾ ಜೆ ಆಚಾರ್‌ ಇದೀಗ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಹ ಸುಂದರ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Chaithra J Achar Beautiful photos: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ, ಟೋಬಿ, ಮಹಿರಾ, ಆ ದೃಶ್ಯ ಮುಂತಾದ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಸುಂದರ ನಟಿ ಮತ್ತು ಗಾಯಕಿ ಚೈತ್ರಾ ಜೆ ಆಚಾರ್‌ ಇದೀಗ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಹ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
icon

(1 / 11)

Chaithra J Achar Beautiful photos: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ, ಟೋಬಿ, ಮಹಿರಾ, ಆ ದೃಶ್ಯ ಮುಂತಾದ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಸುಂದರ ನಟಿ ಮತ್ತು ಗಾಯಕಿ ಚೈತ್ರಾ ಜೆ ಆಚಾರ್‌ ಇದೀಗ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತಹ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.(Instagram- chaithra.j.achar)

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರದಲ್ಲಿ ನಾಯಕ ಮನುವಿಗೆ ಎರಡನೇ ಪ್ರೇಯಸಿಯಾಗಿ ನಟಿಸಿದ್ದ ಚೈತ್ರಾ ಜೆ ಆಚಾರ್‌ ಅವರು ಅಪ್ಲೋಡ್‌ ಮಾಡಿರುವ ಹೊಸ ಫೋಟೋಗಳನ್ನು ನೋಡಿರುವ ಫ್ಯಾನ್ಸ್‌ "ನಮ್ಮ ಚೈತ್ರಾ ಮೇಡಂ ಫೋಟೋಗಳು ಹಾಲಿವುಡ್‌, ಬಾಲಿವುಡ್‌ ನಟಿಯರಿಗಿಂತ ಕಡಿಮೆ ಇಲ್ಲ" ಎಂದಿದ್ದಾರೆ.  
icon

(2 / 11)

ಈ ಫೋಟೋಗಳನ್ನು ನೋಡಿದರೆ ಮನು ಮತ್ತು ಪ್ಯಾರಾಲಾಲ್‌ ಯೂನಿವರ್ಸ್‌ನಿಂದ ಭೂಮಿಗೆ ವಾಪಾಸ್‌ ಬರುತ್ತಾನೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.  
icon

(3 / 11)

ಚೈತ್ರಾ ಜೆ ಆಚಾರ್‌ ಸೌಂದರ್ಯವನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಕಿರಣ್‌ ಕೆ ನಾಯ್ಡು ಸೆರೆ ಹಿಡಿದಿದ್ದಾರೆ. ಕಪ್ಪು ಬ್ಲೌಸ್‌, ಸ್ಟೈಲಿಸ್‌ ಉಡುಗೆ ತೊಟ್ಟು ಚೈತ್ರಾ ಪೋಸ್‌ ನೀಡಿದ್ದಾರೆ.
icon

(4 / 11)

ಈ ಮಾದಕ ಮತ್ತು ಅಂದದ ಉಡುಗೆಗೆ ಸೂಕ್ತವಾಗುವಂತೆ ಸುಬ್ಬು ರಾವ್‌ ಅವರು ಕೇಶ ವಿನ್ಯಾಸ ಮತ್ತು ಮೇಕಪ್‌ ಮಾಡಿದ್ದಾರೆ. ಪೇಪರ್‌ಪ್ಯಾಂಟ್ಸ್‌ ಸ್ಟೈಲ್‌ ಮಾಡಿದೆ. ಕಿಹೊಯೊನ ಇಯರಿಂಗ್ಸ್‌ ಧರಿಸಿದ್ದಾರೆ. ಇವರ ಈ ಪ್ರಸಾಧನಕ್ಕೆ ಬಂದನಾ ಕುಜೂರ್‌ ನೆರವು ನೀಡಿದ್ದಾರೆ. 
icon

(5 / 11)

ಚೈತ್ರಾ ಜೆ ಆಚಾರ್‌ ಅವರು ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಇವರು ಬೆಂಗಳೂರು ಮೂಲದ ನಟಿ. 
icon

(6 / 11)

ಚೈತ್ರಾ ಜೆ. ಆಚಾರ್‌ ಗಾಯಕಿ. ಅಮ್ಮ ಹಾಡುವುದನ್ನು ಕೇಳುತ್ತ ಈಕೆಯೂ ಸಂಗೀತದ ಕುರಿತು ಆಸಕ್ತಿ ಬೆಳೆಸಿಕೊಂಡರು. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರು.
icon

(7 / 11)

ಬಾಲ್ಯದಿಂದಲೇ ಸಂಗೀತ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ಪರಿಕ್ರಮ ಹ್ಯುಮಾನಿಟಿ ಫೌಂಡೇಷನ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇದಾದ ಬಳಿಕ ಎಂಎಸ್‌ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದರು. 
icon

(8 / 11)

ಕಾಲೇಜಿನಲ್ಲಿದ್ದಾಗಲೇ ಇವರು ಬೆಂಗಳೂರು ಕ್ವೀನ್ಸ್‌ ಎಂಬ ಕನ್ನಡ ವೆಬ್‌ ಸರಣಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಮಹಿರಾ ಎಂಬ ಥ್ರಿಲ್ಲರ್‌ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಚೈತ್ರಾ ಜೆ ಆಚಾರ್‌ ಗಿಲ್ಕಿ, ತಲೆದಂಡ, ಆ ದೃಶ್ಯ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. 
icon

(9 / 11)

ಇವರು ಹಲವು ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವು ಹಾಡುಗಳನ್ನು ನೀಡಿದ್ದಾರೆ. ಇವರು ರಿಷಬ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ನಟನೆಯ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ "ಸೋಜುಗದ ಸೋಜು ಮಲ್ಲಿಗೆ" ಎಂಬ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡು ಸಖತ್‌ ಹಿಟ್‌ ಆಗಿದೆ. 
icon

(10 / 11)

ಕನ್ನಡದಲ್ಲಿ ಸಿನಿಮಾ ಸುದ್ದಿ, ಸಿನಿಮಾ ವಿಮರ್ಶೆ, ಒಟಿಟಿ ಸಿನಿಮಾ ಮತ್ತು ವೆಬ್‌ ಸರಣಿ, ಕನ್ನಡ ಧಾರಾವಾಹಿ, ರಿಯಾಲಿಟಿ ಶೋಗಳ ಮಾಹಿತಿ ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಪ್ರತಿನಿತ್ಯ ಭೇಟಿ ನೀಡಿ. 
icon

(11 / 11)

IPL_Entry_Point

ಇತರ ಗ್ಯಾಲರಿಗಳು