logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Reservoirs: ತುಂಗಭದ್ರಾ, ಕಬಿನಿ ಜಲಾಶಯಕ್ಕೆ ಹೆಚ್ಚಿದ ನೀರು, ಕೆಆರ್‌ಎಸ್‌ ,ಆಲಮಟ್ಟಿಯಿಂದ ಹೊರ ಹರಿವಿನ ಪ್ರಮಾಣ ಏರಿಕೆ

Karnataka Reservoirs: ತುಂಗಭದ್ರಾ, ಕಬಿನಿ ಜಲಾಶಯಕ್ಕೆ ಹೆಚ್ಚಿದ ನೀರು, ಕೆಆರ್‌ಎಸ್‌ ,ಆಲಮಟ್ಟಿಯಿಂದ ಹೊರ ಹರಿವಿನ ಪ್ರಮಾಣ ಏರಿಕೆ

Umesha Bhatta P H HT Kannada

Aug 31, 2024 10:48 AM IST

google News

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.

    • Karnataka Dam Levels ಕರ್ನಾಟಕದಲ್ಲಿ ಮಳೆಯಾಗುತ್ತಿರುವ ಕಾರಣದಿಂದ ಬಹುತೇಕ ಜಲಾಶಯಗಳಿಗೆ( Karnataka Reservoirs Level) ಒಳಹರಿವು ಹೆಚ್ಚಾಗಿದ್ದು, ಜಲಾಶಯ ತುಂಬಿರುವುದರಿಂದ ಹೊರ ಹರಿವನ್ನು ಏರಿಕೆ ಮಾಡಲಾಗಿದೆ.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆ ಕಂಡು ಬಂದಿದೆ.

ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಈ ವಾರ ಮಳೆ ಪ್ರಮಾಣ( Karnataka Rains) ಅಧಿಕಗೊಂಡಿದ್ದರಿಂದ ಜಲಾಶಯದ ನೀರಿನ ಮಟ್ಟದಲ್ಲೂ( Karnataka Reservoirs Level) ಏರಿಕೆ ಕಂಡಿದೆ. ಅಷ್ಟೇ ಅಲ್ಲದೇ ಹೊರ ಹರಿವಿನ ಪ್ರಮಾಣದಲ್ಲೂ ಹೆಚ್ಚಳ ಮಾಡಲಾಗಿದೆ. ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ( KRS Reservoir) ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದರಿಂದ ಕಾವೇರಿ ನದಿ ಮೂಲಕ ಹರಿ ಬಿಡುವ ನೀರಿನ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಅದೇ ರೀತಿ ಕೇರಳದಲ್ಲೂ ( Kerala Rains) ಮಳೆಯಾಗುತ್ತಿರುವುದರಿಂದ ಮೈಸೂರಿನ ಕಬಿನಿ ಜಲಾಶಯದ( Kabini Dam) ಒಳ ಹರಿವು ಅಧಿಕವಾಗಿದೆ. ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ( Almatti Reservoir) ಹರಿದು ಬರುತ್ತಿರುವ ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿ ಮೂಲಕ ಹರಿ ಬಿಡಲಾಗುತ್ತಿದೆ. ಮಲೆ ನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯದಲ್ಲೂ(Tunga Bhadra Dam) ನೀರಿನ ಮಟ್ಟ ಏರಿಕೆ ಕಂಡಿದೆ.

ಕೆಆರ್‌ ಎಸ್‌ ಜಲಾಶಯ

ಕೊಡಗಿನಲ್ಲಿ ಒಂದು ವಾರದಿಂದ ಉತ್ತಮ ಮಳೆಯೇ ಆಗುತ್ತಿದೆ. ಅದರಲ್ಲೂ ಭಾಗಮಂಡಲ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರಕ್ಕೆ ಶನಿವಾರ ಬೆಳಿಗ್ಗೆ 18690 ಕ್ಯೂಸೆಕ್‌ ನೀರು ಸೇರುತ್ತಿದೆ. ಇದರಿಂದ ಜಲಾಶಯದ ನೀರಿನ ಮಟ್ಟವು 124.36 ಅಡಿಗೆ ಏರಿಕೆ ಕಂಡಿದೆ. ಜಲಾಶಯದಲ್ಲಿ 48.838 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಿಂದ ಸದ್ಯ 17529 ಕ್ಯೂಸೆಕ್‌ ನೀರನ್ನು ಹರಿ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿ ಇದ್ದು, ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ.

ಆಲಮಟ್ಟಿ ಜಲಾಶಯ

ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ ಬೆಳಗಾವಿ ಜಿಲ್ಲೆಯ ಹಲವು ಭಾಗಗಳಲ್ಲಿ ಒಂದು ವಾರದಿಂದ ಮಳೆಯಾಗುತ್ತಿದೆ. ಇದರಿಂದ ಕೃಷ್ಣಾ ನದಿ ಮೂಲಕ ಭಾರೀ ನೀರು ವಿಜಯಪುರ ಜಿಲ್ಲೆ ಅಲಮಟ್ಟಿ ಜಲಾಶಯದ ಒಡಲು ಸೇರುತ್ತಿದೆ. ಶನಿವಾರದಂದು ಆಲಮಟ್ಟಿ ಜಲಾಶಯಕ್ಕೆ 1,78,574 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 1,76,618 ಕ್ಯುಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 519.27 ಮೀಟರ್‌ ತಲುಪಿದೆ. ಜಲಾಶಯದಲ್ಲಿ 117.376 ಟಿಎಂಸಿ ನೀರು ಸಂಗ್ರಹಿಸಲಾಗಿದೆ.

ಕಬಿನಿ ಜಲಾಶಯ

ಕೇರಳದಲ್ಲೂ ಮತ್ತೆ ಮಳೆ ಚುರುಕಾಗಿದೆ. ಇದರಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಶನಿವಾರ ಒಳ ಹರಿವು ಹೆಚ್ಚಾಗಿದೆ. ಜಲಾಶಯಕ್ಕೆ 8802 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಿಂದ ನಾಲೆಗೂ ಸೇರಿ ಸದ್ಯ 6,350 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು2283.46 ಅಡಿ ಗೆ ತಲುಪಿದೆ. ಜಲಾಶಯದಲ್ಲಿ ಈಗ 19.16 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 19.52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದ್ದು, ಗರಿಷ್ಠ ಮಟ್ಟವು 2284 ಅಡಿ.

ಲಿಂಗನಮಕ್ಕಿ ಜಲಾಶಯ

ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕರ್ನಾಟಕದ ಅತೀ ದೊಡ್ಡ ಜಲಾಶಯ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಲಿಂಗನಮಕ್ಕಿಗೂ ಉತ್ತ ನೀರು ಹರಿದು ಬರುತ್ತಿದೆ. ಜಲಾಶಯಕ್ಕೆ 19414 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದರೆ, 24834 ಕ್ಯೂಸೆಕ್‌ ನೀರು ಹೊರ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 1817.30 ಅಡಿ ತಲುಪಿದೆ.

ಸೂಪಾ ಜಲಾಶಯ

ಉತ್ತರ ಕನ್ನಡ ಜಿಲ್ಲೆಯ ಸೂಪಾ ಜಲಾಶಯಕ್ಕೂ 14287 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು. ಜಲಾಶಯದ ನೀರಿನ ಮಟ್ಟವು 1838.41 ಅಡಿ ಇದೆ. ಜಲಾಶಯದಿಂದ 8200 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ.

ತುಂಗಭದ್ರಾ ಜಲಾಶಯ

ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದ ನೀರಿನ ಮಟ್ಟವು 1629. 56 ಅಡಿ ತುಂಬಿದ್ದು. ಬಹುತೇಕ ತುಂಬುವ ಹಂತಕ್ಕೆ ಬಂದಿದೆ. ಜಲಾಶಯಕ್ಕೆ ಸದ್ಯ 34083 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಹೊರ ಹರಿವಿನ ಪ್ರಮಾಣ 10459 ಕ್ಯೂಸೆಕ್‌ ಇದೆ.

ಹೇಮಾವತಿ ಜಲಾಶಯ

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದ ಒಳ ಹರಿವಿನ ಪ್ರಮಾಣ ಕೊಂಚ ಕಡಿಮೆಯಾಗಿದೆ. ಶನಿವಾರ ಜಲಾಶಯಕ್ಕೆ 6743 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹೊರ ಹರಿವು 8375 ಕ್ಯೂಸೆಕ್‌ ನಷ್ಟಿದೆ. ಜಲಾಶಯದ ನೀರಿನ ಮಟ್ಟವು 2921.75 ಅಡಿಯಿದೆ. ಜಲಾಶಯದಲ್ಲಿ 36.861 ಟಿಎಂಸಿ ನೀರು ಸಂಗ್ರಹವಿದೆ.

ಕರ್ನಾಟಕದ ಜಲಾಶಯದ ನೀರಿನ ಮಟ್ಟ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ