ಕರ್ನಾಟಕ ಜಲಾಶಯ ನೀರಿನ ಮಟ್ಟ: ತಗ್ಗಿದ ಮಳೆ, ಬಹುತೇಕ ಜಲಾಶಯಗಳು ಭರ್ತಿ, ಹೊರ ಹರಿವು ಕುಂಠಿತ
Karnataka Dam Water Level Today August 3: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಉತ್ತಮ ಮಳೆಯಾಗುತ್ತಿರುವ ಕಾರಣ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡುಬಂದಿದೆ. ಕೃಷ್ಣ ಮತ್ತು ಕಾವೇರಿ ಕೊಳ್ಳದ ತಗ್ಗು ಪ್ರದೇಶಗಳಲ್ಲಿ ಇರುವವರಿಗೆ ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಬೆಂಗಳೂರು: ನಗರವೂ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಅವ್ಯಾಹತವಾಗಿ ಮುಂದುವರಿದಿದೆ. ಕರಾವಳಿ ಕರ್ನಾಟಕ, ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಮಳೆ ಬಿಡುವು ಕೊಡುತ್ತಿಲ್ಲ. ಭೂಮಿಗೂ, ಅಗಸಕ್ಕೂ ನಡುವೆ ನೀರಿನ ಗೋಡೆಯಂತೆ ಮಳೆ ಸುರಿಯುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ನೇತ್ರಾವತಿ ಸೇರಿ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ದಂಡೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ರಾಜ್ಯದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ನದಿಗೆ ನೀರು ಬಿಡಲಾಗಿದೆ. ಆದರೆ ನಿನ್ನೆಗೆ (ಆಗಸ್ಟ್ 2) ಹೋಲಿಸಿದರೆ ಇಂದು ಹಲವು ಜಲಾಶಯಗಳಲ್ಲಿ ಹೊರಹರಿವು ಕಡಿಮೆಯಾಗಿದೆ.
ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕಾವೇರಿ ಮತ್ತು ಅದರ ಉಪನದಿಗಳು ತುಂಬಿ ಹರಿಯುತ್ತಿವೆ. ಕೆಆರ್ಎಸ್ ಬಹುತೇಕ ಭರ್ತಿಯಾಗಿದ್ದು, ಹೊರಹರಿವಿನ ಪ್ರಮಾಣ ಹೆಚ್ಚಿಸಲಾಗಿದೆ. ಕೇರಳದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯಕ್ಕೆ ನೀರು ಬೃಹತ್ ಪ್ರಮಾಣದಲ್ಲಿ ಹರಿದುಬರುತ್ತಿದೆ. ಈ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗಿರುವ ಕಾರಣ ಕೃಷ್ಣಾ ನದಿ ಮತ್ತು ಅದರ ಉಪನದಿಗಳು ಮೈದುಂಬಿಕೊಂಡಿವೆ.
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 2-3, 2024
1) ಕೆಆರ್ಎಸ್ ಜಲಾಶಯ (ಕಾವೇರಿ)
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 122.65 ಅಡಿ
ಒಳ ಹರಿವು: 79,607 ಲಕ್ಷ ಕ್ಯೂಸೆಕ್
ಹೊರ ಹರಿವು: 58,546 ಲಕ್ಷ ಕ್ಯೂಸೆಕ್
2) ಹಾರಂಗಿ ಜಲಾಶಯ
ಗರಿಷ್ಠ ಮಟ್ಟ: 2,859 ಅಡಿ
ಇಂದಿನ ಮಟ್ಟ: 2,855.64 ಅಡಿ
ಒಳ ಹರಿವು: 10,683 ಕ್ಯೂಸೆಕ್
ಹೊರ ಹರಿವು: 12,500 ಕ್ಯೂಸೆಕ್
3) ಕಬಿನಿ ಜಲಾಶಯ
ಗರಿಷ್ಠ ಮಟ್ಟ: 2,284 ಅಡಿ
ಇಂದಿನ ಮಟ್ಟ: 2,281.72
ಒಳ ಹರಿವು: 36,031 ಕ್ಯೂಸೆಕ್
ಹೊರ ಹರಿವು: 33,000
4) ಹೇಮಾವತಿ ಜಲಾಶಯ (ಗೊರೂರು)
ಗರಿಷ್ಠ ಮಟ್ಟ: 2,922
ಇಂದಿನ ಮಟ್ಟ: 2,919.90
ಒಳ ಹರಿವು: 27,126 ಕ್ಯೂಸೆಕ್
ಹೊರ ಹರಿವು: 23,325 ಕ್ಯೂಸೆಕ್
5) ಲಿಂಗನಮಕ್ಕಿ ಜಲಾಶಯ (ಶರಾವತಿ)
ಗರಿಷ್ಠ ಮಟ್ಟ: 1,819 ಅಡಿ
ಇಂದಿನ ಮಟ್ಟ: 1,815
ಒಳ ಹರಿವು: 51,961 ಕ್ಯೂಸೆಕ್
ಹೊರ ಹರಿವು: 16,913 ಕ್ಯೂಸೆಕ್
6) ಸೂಪಾ ಜಲಾಶಯ (ಕಾಳಿ)
ಗರಿಷ್ಠ ಮಟ್ಟ: 564 ಮೀಟರ್
ಇಂದಿನ ಮಟ್ಟ: 555.63
ಒಳ ಹರಿವು: 44,616 ಕ್ಯೂಸೆಕ್
ಹೊರ ಹರಿವು: ---
7) ಮಾಣಿ ಜಲಾಶಯ (ವರಾಹಿ)
ಗರಿಷ್ಠ ಮಟ್ಟ: 595 ಅಡಿ
ಇಂದಿನ ಮಟ್ಟ: 587.20
ಒಳ ಹರಿವು: 5,203 ಕ್ಯೂಸೆಕ್
ಹೊರ ಹರಿವು: ---
8) ತುಂಗಭದ್ರಾ ಡ್ಯಾಂ (ಹೊಸಪೇಟೆ)
ಗರಿಷ್ಠ ಮಟ್ಟ: 1,633 ಅಡಿ
ಇಂದಿನ ಮಟ್ಟ: 1,631.22
ಒಳ ಹರಿವು: 1.97 ಲಕ್ಷ ಕ್ಯೂಸೆಕ್
ಹೊರ ಹರಿವು: 1.78 ಲಕ್ಷ ಕ್ಯೂಸೆಕ್
9) ಮಲಪ್ರಭಾ
ಗರಿಷ್ಠ ಮಟ್ಟ: 2,079.5 ಅಡಿ
ಇಂದಿನ ಮಟ್ಟ: 2,076
ಒಳ ಹರಿವು: 19,175 ಕ್ಯೂಸೆಕ
ಹೊರ ಹರಿವು: 16,594 ಕ್ಯೂಸೆಕ್
10) ಘಟಪ್ರಭಾ
ಗರಿಷ್ಠ ಮಟ್ಟ: 2,175 ಅಡಿ
ಇಂದಿನ ಮಟ್ಟ: 2,170.63
ಒಳ ಹರಿವು: 34,031 ಕ್ಯೂಸೆಕ್
ಹೊರ ಹರಿವು: 34,031 ಕ್ಯೂಸೆಕ್
11) ಭದ್ರಾ ಡ್ಯಾಂ
ಗರಿಷ್ಠ ಮಟ್ಟ: 186 ಅಡಿ
ಇಂದಿನ ಮಟ್ಟ: 182.7 ಅಡಿ
ಒಳ ಹರಿವು: 38,870 ಕ್ಯೂಸೆಕ್
ಹೊರ ಹರಿವು: 38,870 ಕ್ಯೂಸೆಕ್
12) ಅಲಮಟ್ಟಿ (ಕೃಷ್ಣಾ)
ಗರಿಷ್ಠ ಮಟ್ಟ: 519.6 ಮೀಟರ್
ಇಂದಿನ ಮಟ್ಟ: 515.50 ಮೀಟರ್
ಒಳ ಹರಿವು: 3.41 ಲಕ್ಷ ಕ್ಯೂಸೆಕ್
ಹೊರ ಹರಿವು: 3.27 ಲಕ್ಷ ಕ್ಯೂಸೆಕ್
13) ನಾರಾಯಣಪುರ (ಕೃಷ್ಣಾ)
ಗರಿಷ್ಠ ಮಟ್ಟ: 492.25 ಮೀಟರ್
ಇಂದಿನ ಮಟ್ಟ: 489.92 ಮೀಟರ್
ಒಳ ಹರಿವು: 3 ಲಕ್ಷ ಕ್ಯೂಸೆಕ್
ಹೊರ ಹರಿವು: 2.85 ಲಕ್ಷ ಕ್ಯೂಸೆಕ್