logo
ಕನ್ನಡ ಸುದ್ದಿ  /  ಕರ್ನಾಟಕ  /  Sbi Recruitment 2024-25: ಎಸ್‌ಬಿಐನಲ್ಲಿ ಹೊಸ ವರ್ಷದಲ್ಲಿ ನೇಮಕ, 13,735 ಕ್ಲರ್ಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವೇತನ 64480 ರೂ.

SBI Recruitment 2024-25: ಎಸ್‌ಬಿಐನಲ್ಲಿ ಹೊಸ ವರ್ಷದಲ್ಲಿ ನೇಮಕ, 13,735 ಕ್ಲರ್ಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವೇತನ 64480 ರೂ.

Umesha Bhatta P H HT Kannada

Dec 18, 2024 02:18 PM IST

google News

ಭಾರತೀಯ ಸ್ಟೇಟ್‌ ಬ್ಯಾಂಕ್‌ ನಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.

    • SBI Recruitment 2024-25: ಎಸ್‌ಬಿಐ ಬ್ಯಾಂಕ್‌ನಲ್ಲಿ ಕ್ಲರ್ಕ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆ ಆರಂಭಗೊಂಡಿದೆ.
ಭಾರತೀಯ ಸ್ಟೇಟ್‌ ಬ್ಯಾಂಕ್‌ ನಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.
ಭಾರತೀಯ ಸ್ಟೇಟ್‌ ಬ್ಯಾಂಕ್‌ ನಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.

SBI Recruitment 2024-25: ಹೊಸ ವರ್ಷದಲ್ಲಿ 2025ರಲ್ಲಿ ಉದ್ಯೋಗ ಪಡೆಯಬೇಕು ಎನ್ನುವ ನಿರೀಕ್ಷೆಯಲ್ಲಿರುವವರಿಗೆ ಸಂತಸದ ಸುದ್ದಿ ಇಲ್ಲಿದೆ. ಭಾರತದಲ್ಲಿ ವಿಶ್ವಾಸಾರ್ಹ, ಹಳೆಯ ಹಾಗೂ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಭಾರ್ ಸಂಖ್ಯೆಯ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಿದೆ. ದೇಶದಾದ್ಯಂತ ಖಾಲಿಯಿರುವ ಎಸ್‌ಬಿಐನ ಜೂನಿಯರ್ ಅಸೋಸಿಯೇಟ್ಸ್ ಕ್ಲರ್ಕ್ ಹುದ್ದೆಗಳ ನೇಮಕಕ್ಕೆ ಪ್ರಕ್ರಿಯೆ ಶುರುವಾಗಿದೆ. ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಎಸ್‌ಬಿಐ ಹೊರಡಿಸಿದ್ದು, 2024 ಡಿಸೆಂಬರ್ 17 ರಿಂದ ಅರ್ಜಿ ಸಲ್ಲಿಸುವ ಪಕ್ರಿಯೆಯೂ ಶುರುವಾಗಿದೆ. ಅರ್ಜಿ ಸಲ್ಲಿಸಲು ಜನವರಿ 7, 2025 ಕೊನೆಯ ದಿನವಾಗಿದು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಲ ಆಸಕ್ತಿ ಹೊಂದಿರುವ ಎಸ್‌ಬಿಐ ನೀಡಿರುವ ಈ ಹುದ್ದೆಯ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಗಳ ವಿವರ

* ನೇಮಕಾತಿ ಬ್ಯಾಂಕ್ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

* ಹುದ್ದೆ ಹೆಸರು : ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್‌ ಮತ್ತು ಸೇಲ್ಸ್‌)

* ಹುದ್ದೆಗಳ ಸಂಖ್ಯೆ : 13,735

* ಕರ್ನಾಟಕದಲ್ಲಿ ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆಗಳ ಸಂಖ್ಯೆ : 50

ಇತರೆ ರಾಜ್ಯಗಳಲ್ಲಿಯೂ ಅವಕಾಶವಿದೆ.

* ವೇತನಶ್ರೇಣಿ : ಮಾಸಿಕ ಆರಂಭಿಕ ವೇತನ ರೂ Rs.24050-1340/3-28070-1650/3-33020-2000/4-41020-2340/7-57400-4400/1-61800-2680/1-64480.

ವಿದ್ಯಾರ್ಹತೆ ಏನು

* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಪಡೆದಿರಬೇಕು. ಸ್ನಾತಕೋತ್ತರ ಪದವಿ ಮುಗಿಸಿದವರೂ ಅರ್ಜಿ ಸಲ್ಲಿಸಲು ಅವಕಾಶವಿದೆ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.

ವಯಸ್ಸು ಎಷ್ಟಿರಬೇಕು

* ಎಸ್ ಬಿಐ ನಲ್ಲಿ ಖಾಲಿಯಿರುವ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ ವಯಸ್ಸು 28 ವರ್ಷ ಮೀರಿರಬಾರದು. ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೂ ವಯೋಮಿತಿ ಸಡಿಲಿಕೆಯಿದೆ.

ಅರ್ಜಿ ಶುಲ್ಕ ಎಷ್ಟು

* ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು ರೂ 750 ಅರ್ಜಿ ಶುಲ್ಕವನ್ನು ಅರ್ಜಿಯೊಂದಿಗೆ ಪಾವತಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಂಗವಿಕಲ ವರ್ಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

ಆಯ್ಕೆ ವಿಧಾನ ಹೇಗಿರಲಿದೆ

* ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪೂರ್ವಭಾವಿ ಪರೀಕ್ಷೆ/ ಮುಖ್ಯ ಪರೀಕ್ಷೆ ಹಾಗೂ ಭಾಷಾ ಪ್ರಾವಿಣ್ಯತೆ ಆಧಾರದ ಮೇಲೆ ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಮುಂದಿನ ವರ್ಷದ ಆರಂಭದಲ್ಲಿ ವಿವಿಧ ಹಂತದಲ್ಲಿ ಪರೀಕ್ಷೆ, ಸಂದರ್ಶನಗಳು ನಡೆಯಲಿವೆ.

ನೇಮಕಾತಿ ದಿನಾಂಕ ವಿವರ

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 2024 ಡಿಸೆಂಬರ್ 17

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2025 ಜನವರಿ 07

* ಪೂರ್ವಭಾವಿ ಪರೀಕ್ಷೆಯ ಸಂಭಾವ್ಯ ಸಮಯ: 2025 ರ ಫೆಬ್ರವರಿ

* ಮುಖ್ಯ ಪರೀಕ್ಷೆಯ ಸಂಭಾವ್ಯ ಅವಧಿ: 2025 ರ ಮಾರ್ಚ್‌ / ಏಪ್ರಿಲ್.

ಕ್ಲರ್ಕ್ ನೇಮಕಾತಿ 2024 ಗೆ ಅರ್ಜಿ ಸಲ್ಲಿಸುವುದು ಹೇಗೆ

  • ಅಧಿಕೃತ ಎಸ್‌ಬಿಐ ವೆಬ್‌ಸೈಟ್‌ ಪುಟಕ್ಕೆ ಭೇಟಿ ನೀಡಿ.
  • ಮಾನ್ಯವಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿ.
  • ನಿಖರವಾದ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ವಿಶೇಷಣಗಳ ಪ್ರಕಾರ ಅಗತ್ಯ ದಾಖಲೆಗಳು ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ).

ಇದಕ್ಕಾಗಿ ಈ ವೆಬ್‌ಸೈಟ್‌ ಬಳಸಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ