Karnataka News Live December 4, 2024 : Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿ ಮಾಡಿಸಿಲ್ಲವೇ, ಎರಡು ದಿನ ನೋಂದಣಿ ಅವಧಿ ವಿಸ್ತರಣೆ
Dec 04, 2024 07:14 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mandya Kannada Sahitya Sammelana: ಮಂಡ್ಯದಲ್ಲಿ ನೆಡಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಪ್ರತಿನಿಧಿಗಳ ಆನ್‌ಲೈನ್ ನೋಂದಣಿಗೆ ಇನ್ನೂ ಎರಡು ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ.
- ಬೆಂಗಳೂರಿನಲ್ಲಿ ವಾಸಿಸುತ್ತಿರುವ ಟೆಕ್ಕಿ, ನಗರದ ಕಳಪೆ ರಸ್ತೆ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ವಿದೇಶಿ ಸ್ನೇಹಿತರನ್ನು ಉದ್ಯಾನ ನಗರಿಯ ಮನೆಗೆ ಕರೆಯಲು ಮುಜುಗರವಾಗಿದ್ದರೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
- Indian Railways: ಬೆಂಗಳೂರು ಹಾಗೂ ಮೈಸೂರು ನಗರಗಳ ನಡುವೆ ಸಂಚರಿಸುವ ವಿಶೇಷ ಪ್ಯಾಸೆಂಜರ್ ರೈಲು ಡಿಸೆಂಬರ್‌ನಲ್ಲಿ ನಾಲ್ಕು ದಿನ ವಿಳಂಬವಾಗಿ ಹೊರಡಲಿದೆ.
Research on Areca: ಕೇಂದ್ರ ಸರ್ಕಾರದ ಕೃಷಿ ಸಚಿವಾಲಯವು ಅಡಕೆ ಸೇವನೆಯಿಂದ ಆಗಬಹುದಾದ ಆರೋಗ್ಯ ಪರಿಣಾಮಗಳ ಕುರಿತು ಸಂಶೋಧನೆ ನಡೆಸಲಿದೆ. ಇದಕ್ಕಾಗಿ ಪ್ರತ್ಯೇಕ ತಂಡಗಳು ಕೆಲಸ ಮಾಡಲಿವೆ.
ವರದಿ: ಹರೀಶ ಮಾಂಬಾಡಿ. ಮಂಗಳೂರು
- Water in Cauvery Basin Reservoirs: ಕಾವೇರಿ ಕಣಿವೆಯ ಜಲಾಶಯದ ನೀರಿನ ಮಟ್ಟದಲ್ಲಿ ಡಿಸೆಂಬರ್ ಹೊತ್ತಿಗೆ ನಿಧಾನವಾಗಿ ಕುಸಿತ ಕಂಡು ಬಂದಿದೆ.ಕೆಆರ್‌ಎಸ್ ಜಲಾಶಯ ತುಂಬಿದ್ದರೆ ಹಾರಂಗಿಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಹಿತ ಮೂವರ ವಿರುದ್ದ ಚುನಾವಣಾ ಬಾಂಡ್ ಹೆಸರಿನಲ್ಲಿ ಹಣ ಸುಲಿಗೆ ಆರೋಪ ಕುರಿತಾದ ಎಫ್‌ಐಆರ್ ಅನ್ನು ರದ್ದುಪಡಿಸಿ ನ್ಯಾಯಾಲಯ ಆದೇಶಿಸಿದೆ.
(ವರದಿ: ಎಚ್.ಮಾರುತಿ, ಬೆಂಗಳೂರು)
Bangalore New Year 2025: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಡ್ರಗ್ಸ್ ಬಳಕೆ, ಅನಗತ್ಯ ಗದ್ದಲಕ್ಕೆ ಆಸ್ಪದ ನೀಡದಂತೆ ಪೊಲೀಸರು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಹೇಗಿರಲಿದೆ ಪೊಲೀಸ್ ಭದ್ರತೆ, ಇಲ್ಲಿದೆ ಮಾಹಿತಿ.
(ವರದಿ:ಎಚ್.ಮಾರುತಿ, ಬೆಂಗಳೂರು)
- Karnataka Weather: ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದ ಹವಾಮಾನ ಬದಲಾಗಿದೆ. ಚಳಿಗಾಲದಲ್ಲೂ ಮಳೆ ಸುರಿಯುವಂತಾಗಿದೆ. ಜೋರು ಚಳಿಯ ನಡುವೆ ಮಳೆಯು ಕೂಡ ಜೊತೆಯಾಗಿ ವಾತಾವರಣ ಸಂಪೂರ್ಣ ಬದಲಾಗಿದೆ. ಇಂದು (ಡಿಸೆಂಬರ್ 4) ಕೊಡಗಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಎಲ್ಲೆಲ್ಲಿ ಮಳೆ ಮಳೆಯಾಗಲಿದೆ, ಎಲ್ಲೆಲ್ಲಿ ಚಳಿ ಜೋರು ಎಂಬ ವಿವರ ಇಲ್ಲಿದೆ.
- BMTC Vajra Bus: "ಹೊರಗಿನಿಂದ ನೋಡುವರಿಗೆ, ́ಇವರು ಏಸಿ ಬಸ್‌ನಲ್ಲಿ ಆರಾಮಾಗಿ ಹೋಗುತ್ತಿದ್ದಾರೆʼ ಎನಿಸುತ್ತದೆ. ಬಸ್‌ನಲ್ಲಿದ್ದವರು ಕೆಲವೊಮ್ಮೆ ಉಸಿರುಗಟ್ಟುವ ವಾತಾವರಣದಲ್ಲಿದ್ದರೆ, ಇನ್ನು ಕೆಲವು ಬಾರಿ ಪ್ಯಾಂಟ್ ಒದ್ದೆ ಮಾಡಿಕೊಂಡು ಒದ್ದಾಡುತ್ತಿರುತ್ತಾರೆ" ಎಂದು ಬಿಎಂಟಿಸಿ ವಜ್ರ ಬಸ್‌ಗಳ ವಸ್ತುಸ್ಥಿತಿಯನ್ನು ರಾಜೀವ ಹೆಗಡೆ ಇಲ್ಲಿ ತೆರೆದಿಟ್ಟಿದ್ದಾರೆ.