Karnataka News Live October 11, 2024 : ಅದ್ಯಾವುದೋ ದುಷ್ಟಶಕ್ತಿಗಳ ಎದುರು ಸತ್ಯದ ಜಯ ಅಂತೆ; ಸಿದ್ದರಾಮಯ್ಯ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಕಿಡಿ
Oct 11, 2024 06:40 PM IST
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
- HD Kumaraswamy: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗವಾಗಿದೆ. ಇವರೇ ಆರ್ಥಿಕ ಸಚಿವರು, ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆಯಾಗಿದೆ. ಅದರ ಸತ್ಯಾಂಶಗಳು ಹೊರವರುವ ಕಾಲ ದೂರ ಇಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.
- Shobha Karandlaje: ಪ್ರತಿವರ್ಷದಂತೆ ಈ ವರ್ಷವೂ ಮೈಸೂರು ಗಜಪಡೆಯ ಮಾವುತರು ಮತ್ತು ಕಾವಾಡಿಗರ ಕುಟುಂಬಕ್ಕೆ ಉಪಹಾರ ಏರ್ಪಡಿಸಿದ್ದರು. ಅಲ್ಲದೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು.
- ಮೈಸೂರು ರಾಜವಂಶಸ್ಥರಿಗೆ ಮಕ್ಕಳಿಗೆ ಸಂಬಂಧಿಸಿದ ಪುರಾತನ ಶಾಪವೊಂದಿದೆ. ಅದು ಯದುವೀರ್‌ಗೆ ಏಳು ವರ್ಷದ ಹಿಂದೆ ಮಗುವಾದಾಗ ಬದಲಾಗಿತ್ತು. ಈಗ ಮತ್ತೆ ಎರಡನೇ ಮಗುವಾಗುವ ಮೂಲಕ ಮತ್ತೊಮ್ಮೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
- ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ದಸರಾ ವೇಳೆ ಹೊಸ ಸದಸ್ಯನ ಪ್ರವೇಶವಾಗಿದ್ದರೂ ನವರಾತ್ರಿ ಸಂದರ್ಭದಲ್ಲ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆಗಳಿಗೆ ಸೂತಕ ಆವರಿಸಿದೆ.
- ಕರ್ನಾಟಕದಲ್ಲಿ ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ ಆ್ಯಪ್ ಇದ್ದರೂ ಅದು ಸರಿಯಾಗಿ ಬಳಕೆಯಾಗದೇ ಇರುವುದರಿಂದ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕುರಿತು ಬರಹಗಾರ ಅರವಿಂದ ಸಿಗದಾಳ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
- ಮೈಸೂರು ರಾಜವಂಶಸ್ಥರಾದ ಯದುವೀರ್ ಅವರು ಎರಡನೇ ಬಾರಿ ಅಪ್ಪ ಆಗಿದ್ದಾರೆ. ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಎರಡನೇ ಗಂಡು ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದಾರೆ.
- ಇಳಯರಾಜ ಹಾಡುಗಳನ್ನೇ ಕೇಳುವುದೇ ಆನಂದ. ಅದೂ ಲೈವ್ ಕಛೇರಿ ಎಂದರೆ ಇನ್ನೂ ಪುಳಕವೇ. ಮೈಸೂರು ಯುವ ದಸರಾದಲ್ಲಿ ಮೂರು ಗಂಟೆ ಕಾಲ ಇಳಯರಾಜ ಆವರಿಸಿದರು. ಅಲ್ಲದೇ ಖುಷಿಯ ಅನುಭೂತಿಯನ್ನು ಸೃಷ್ಟಿಸಿದರು.
ದೀಪಾವಳಿ ತನಕವೂ ದರ ಏರಿಕೆ ಇರಬಹುದು ಎಂದು ಹೇಳಲಾಗುತ್ತಿದ್ದು, ಆಯುಧ ಪೂಜೆ ಹಿನ್ನೆಲೆಯಲ್ಲಿ ಹೂವಿನ ಬೆಲೆ ಇನ್ನಷ್ಟು ಏರಿಕೆಯಾಗಿದೆ. 2500 ರೂಪಾಯಿ ಆಸುಪಾಸಲ್ಲಿ ಕನಕಾಂಬರ ಇದ್ದು, ಮಲ್ಲಿಗೆ, ಗುಲಾಬಿಯೂ ದುಬಾರಿಯಾಗಿದೆ.
ಕಾಫಿ ಪ್ರಿಯರಿಗೆ ಸ್ವಲ್ಪ ಆಘಾತ ನೀಡುವ ವಿಚಾರ ಇದು. ಕಾಫಿ ಪುಡಿ ಬೆಲೆ ಕಿಲೋಗೆ 100 ರೂಪಾಯಿ ಹೆಚ್ಚಾಗಲಿದೆ. ಅಕ್ಟೋಬರ್ 15 ರಿಂದ ಇದು ಜಾರಿಗೆ ಬರಲಿದ್ದು, ಹೋಟೆಲ್, ರೆಸ್ಟೋರೆಂಟ್‌ಗೆ ಹೋಗಿ ಕಾಫಿ ಕುಡಿಯುವ ಮೊದಲೇ ರೇಟ್ ಕೇಳುವುದು ಒಳ್ಳೆಯದು. ಬೆಲೆ ಏರಿಕೆಗೆ ಕಾರಣವೇನು- ಇಲ್ಲಿದೆ ಆ ವಿವರ.
ದಸರಾ ರಜೆ ವಿಶೇಷವಾಗಿ ಉದ್ಯೋಗಿಗಳಿಗೆ ಆಯುಧ ಪೂಜೆ, ವಿಜಯ ದಶಮಿಗೆ ಇಂದು ಮತ್ತು ನಾಳೆ ರಜೆ. ನಾಡಿದ್ದು ಭಾನುವಾರ. ಹೀಗೆ ಮೂರು ದಿನ ರಜೆ ಕಾರಣ ಬೆಂಗಳೂರಿನಿಂದ ಊರು, ಪ್ರವಾಸಕ್ಕೆ ಹೊರಟವರಿಗೆ ಖಾಸಗಿ ಬಸ್ ಟಿಕೆಟ್ ದರ ಹೊರೆಯಾಗಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಬೇಕು ಅಂದ್ರೆ ಬಸ್ ಟಿಕೆಟ್‌ಗೆ 3000 ರೂ, ಯಾವ ಊರಿಗೆ ಎಷ್ಟಾಯಿತು ದರ ಎಂಬಿತ್ಯಾದಿ ವಿವರ ಇಲ್ಲಿದೆ.