ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಬೇಕು ಅಂದ್ರೆ ಬಸ್‌ ಟಿಕೆಟ್‌ಗೆ ಕೊಡಬೇಕು 3000 ರೂಪಾಯಿ, ಯಾವ ಊರಿಗೆ ಎಷ್ಟಾಯಿತು ದರ - ಹೀಗಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಬೇಕು ಅಂದ್ರೆ ಬಸ್‌ ಟಿಕೆಟ್‌ಗೆ ಕೊಡಬೇಕು 3000 ರೂಪಾಯಿ, ಯಾವ ಊರಿಗೆ ಎಷ್ಟಾಯಿತು ದರ - ಹೀಗಿದೆ ವಿವರ

ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಬೇಕು ಅಂದ್ರೆ ಬಸ್‌ ಟಿಕೆಟ್‌ಗೆ ಕೊಡಬೇಕು 3000 ರೂಪಾಯಿ, ಯಾವ ಊರಿಗೆ ಎಷ್ಟಾಯಿತು ದರ - ಹೀಗಿದೆ ವಿವರ

ದಸರಾ ರಜೆ ವಿಶೇಷವಾಗಿ ಉದ್ಯೋಗಿಗಳಿಗೆ ಆಯುಧ ಪೂಜೆ, ವಿಜಯ ದಶಮಿಗೆ ಇಂದು ಮತ್ತು ನಾಳೆ ರಜೆ. ನಾಡಿದ್ದು ಭಾನುವಾರ. ಹೀಗೆ ಮೂರು ದಿನ ರಜೆ ಕಾರಣ ಬೆಂಗಳೂರಿನಿಂದ ಊರು, ಪ್ರವಾಸಕ್ಕೆ ಹೊರಟವರಿಗೆ ಖಾಸಗಿ ಬಸ್‌ ಟಿಕೆಟ್ ದರ ಹೊರೆಯಾಗಿದೆ. ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಬೇಕು ಅಂದ್ರೆ ಬಸ್‌ ಟಿಕೆಟ್‌ಗೆ 3000 ರೂ, ಯಾವ ಊರಿಗೆ ಎಷ್ಟಾಯಿತು ದರ ಎಂಬಿತ್ಯಾದಿ ವಿವರ ಇಲ್ಲಿದೆ.

ದಸರಾ ರಜೆ ನಿಮಿತ್ತ ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಖಾಸಗಿ ಬಸ್ ಪ್ರಯಾಣ ದರ ಜೇಬಿಗೆ ಹೊರೆಯಾಗಿದೆ. (ಸಾಂಕೇತಿಕ ಚಿತ್ರ)
ದಸರಾ ರಜೆ ನಿಮಿತ್ತ ಬೆಂಗಳೂರಿನಿಂದ ಊರಿಗೆ ಹೊರಟವರಿಗೆ ಖಾಸಗಿ ಬಸ್ ಪ್ರಯಾಣ ದರ ಜೇಬಿಗೆ ಹೊರೆಯಾಗಿದೆ. (ಸಾಂಕೇತಿಕ ಚಿತ್ರ) (SM)

ಬೆಂಗಳೂರು: ಊರಿಗೆ ಹೊರಟ್ರಾ… ಬೆಂಗಳೂರಿಂದ ವಿವಿಧ ಊರುಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ ಸಿಕ್ಕರೆ ಅದೃಷ್ಟ. ಖಾಸಗಿ ಬಸ್‌ ಕಡೆಗೆ ಮುಖ ಮಾಡಿದ್ರೋ ಜೇಬು ಖಾಲಿ ಗ್ಯಾರೆಂಟಿ! ಬೆಂಗಳೂರಿನಿಂದ ಧಾರವಾಡಕ್ಕೆ 500 ರಿಂದ 1000 ರೂಪಾಯಿ ಇದ್ದ ಖಾಸಗಿ ಬಸ್‌ ಟಿಕೆಟ್ ದರ ನಿನ್ನೆ ಗುರುವಾರ (ಅಕ್ಟೋಬರ್ 10) ಏಕಾಕಿಯಾಗಿ 3000 ರೂಪಾಯಿ ತನಕ ಏರಿಕೆಯಾಗಿದೆ! ಸಾಲು ಸಾಲು ರಜೆ ಸಿಕ್ಕಿದೆ. ಇಂದು ಆಯುಧ ಪೂಜೆ, ನಾಳೆ ವಿಜಯದಶಮಿ. ನಾಡಿದ್ದು ಭಾನುವಾರ. ಹೀಗೆ ರಜೆ ಸಿಕ್ಕರೆ ಬೆಂಗಳೂರಿಗರು ಊರಿಗೆ ಹೊರಡುವುದು ಮೊದಲೇ ಗೊತ್ತಿರುವ ವಿಚಾರ. ಇದಕ್ಕಾಗಿಯೇ ಕೆಎಸ್‌ಆರ್‌ಟಿಸಿ ಹೆಚ್ಚುವರಿಯಾಗಿ 2000 ಬಸ್‌ಗಳು, 500 ಬಿಎಂಟಿಸಿ ಬಸ್‌ಗಳನ್ನೂ ಬೇರೆ ಬೇರೆ ಊರುಗಳಿಗೆ ನಿಯೋಜಿಸಿದೆ. ಆದರೂ ಗುರುವಾರ ಸಂಜೆ ಮೆಜೆಸ್ಟಿಕ್‌, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್‌ ನಿಲ್ದಾಣ, ಕಲಾಸಿ ಪಾಳ್ಯ ಸೇರಿ ವಿವಿಧೆಡೆ ಹೊರ ಊರುಗಳಿಗೆ ಬಸ್ ಹೊರಡುವ ಪಾಯಿಂಟ್‌ಗಳಲ್ಲಿ ಪ್ರಯಾಣಿಕ ದಟ್ಟಣೆ ಬಹಳ ಹೆಚ್ಚಾಗಿತ್ತು. ಈ ನಡುವೆ ಖಾಸಗಿ ಬಸ್ ಪ್ರಯಾಣದ ಟಿಕೆಟ್ ದರ ಕನಿಷ್ಠ 300 ರೂಪಾಯಿಯಿಂದ ಹಿಡಿದು ಮೂರು ಪಟ್ಟು ಮತ್ತು ಅದಕ್ಕಿಂತಲೂ ಹೆಚ್ಚಾಗಿರುವುದು ಗಮನಸೆಳೆಯಿತು.

ಸ್ವಂತ ಊರು, ಪ್ರವಾಸಿ ತಾಣಗಳ ಕಡೆಗೆ ಮುಖ ಮಾಡಿದ ಬೆಂಗಳೂರಿಗರು

ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇಂದಿನಿಂದ ಮೂರು ದಿನ ಸರಣಿ ರಜೆ ಸಿಕ್ಕಿರುವ ಕಾರಣ ಬಹುತೇಕರು ಸ್ವಂತ ಊರಿನ ಕಡೆಗೆ ಹೊರಟಿದ್ದಾರೆ. ಇನ್ನೂ ಅನೇಕರು ಮೈಸೂರು, ಚಾಮರಾಜನಗರ, ಮಡಿಕೇರಿ, ಮಂಗಳೂರು ಸೇರಿ ವಿವಿಧ ಪ್ರವಾಸಿ ತಾಣಗಳ ಕಡೆಗೆ ಹೊರಟಿದ್ದಾರೆ. ಅನೇಕರು ತಿಂಗಳು ಮೊದಲೇ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ ನಿಯೋಜಿಸಿದ್ದು ತಿಳಿಯುತ್ತಲೇ ಹಲವರು ಟಿಕೆಟ್ ಬುಕ್ ಮಾಡಿದ್ದಾರೆ. ಇನ್ನೂ ಹಲವರು ರೈಲು ಟಿಕೆಟ್ ಬುಕ್ ಮಾಡಿಕೊಂಡು ಊರಿಗೆ ಹೊರಟಿದ್ದಾರೆ. ಗುರುವಾರ ಸಂಜೆಯೇ ಈ ಸಂಚಾರ ದಟ್ಟಣೆ ಅನುಭವಕ್ಕೆ ಬಂದಿದೆ. ಬೆಂಗಳೂರಿನ ಬಸ್‌ನಿಲ್ದಾಣಗಳಲ್ಲಿ ಪ್ರಯಾಣಿಕ ದಟ್ಟಣೆ ಹೆಚ್ಚಿದರೆ, ಟೋಲ್‌ಗೇಟ್‌ಗಳಲ್ಲಿ ಸಂಚಾರ ದಟ್ಟಣೆ ಕಂಡುಬಂದಿದೆ.

ಖಾಸಗಿ ಬಸ್ ಪ್ರಯಾಣದ ಟಿಕೆಟ್ ದರ ಹಂತ ಹಂತವಾಗಿ ಏರಿಕೆಯಾಗಿದ್ದು ನಿನ್ನೆ ಗರಿಷ್ಠ ಮಟ್ಟ ತಲುಪಿದೆ. ಆರಂಭದಲ್ಲಿ ಮೈಸೂರು, ಚಾಮರಾಜನಗರ, ಮಡಿಕೇರಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳುವವರಿಗೆ ಶೇ. 15ರಷ್ಟು ದರ ಏರಿಕೆಯ ಬಿಸಿ ತಟ್ಟಿದೆ. ನಿನ್ನೆ ಬೆಂಗಳೂರಿನಿಂದ ಮೈಸೂರಿಗೆ 600 ರೂ. ಇದ್ದ ಟಿಕೆಟ್‌ ದರ ಏಕಾಕಿಯಾಗಿ 1000 ರೂಪಾಯಿ ಆಗಿದೆ. ಚಾಮರಾಜನಗರಕ್ಕೆ 700 ರೂ. ಇದ್ದ ಟಿಕೆಟ್‌ ದರ 1200 ರೂ.,. ಮಡಿಕೇರಿಗೆ 850 ರೂ. ಇದ್ದ ಟಿಕೆಟ್ ದರ ಈಗ 1,500 ರೂಪಾಯಿಗೆ ಏರಿದೆ.

ಹೀಗಿದೆ ಏರಿತು ನೋಡಿ ಖಾಸಗಿ ಬಸ್ ಟಿಕೆಟ್ ದರ

ಆಯುಧ ಪೂಜೆ ಸಂದರ್ಭದಲ್ಲಿ ಖಾಸಗಿ ಬಸ್ ಟಿಕೆಟ್‌ ದರ 

ಎಲ್ಲಿಂದ -ಎಲ್ಲಿಗೆಅಕ್ಟೋಬರ್ ಆರಂಭದ ಟಿಕೆಟ್‌ ದರ (ರೂಪಾಯಿ)ಆಯುಧ ಪೂಜೆ ಹಿಂದಿನ ದಿನದ (ಅಕ್ಟೋಬರ್ 10) ಟಿಕೆಟ್ ದರ (ರೂಪಾಯಿ)
ಬೆಂಗಳೂರು- ಧಾರವಾಡ500- 11001200-3000
ಬೆಂಗಳೂರು- ದಾವಣಗೆರೆ550- 900900- 2000
ಬೆಂಗಳೂರು- ಕಲಬುರಗಿ600- 12001200- 1800
ಬೆಂಗಳೂರು- ಹಾವೇರಿ600 - 12001550-1600
ಬೆಂಗಳೂರು- ಯಾದಗಿರಿ600- 14001100- 1750
ಬೆಂಗಳೂರು - ಹಾಸನ475- 600899- 1800
ಬೆಂಗಳೂರು- ಚಿಕ್ಕಮಗಳೂರು500- 900900- 1500

ನೆರೆ ರಾಜ್ಯದ ವಿವಿಧ ಪ್ರದೇಶಗಳಿಗೂ ಬಸ್ ವ್ಯವಸ್ಥೆ: ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಾದ ಹೈದರಾಬಾದ್, ಚೆನ್ನೈ ಊಟಿ, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಏರ್ನಾಕುಲಂ, ಪಾಲ್ಟಾಟ್ ಹಾಗೂ ಇತರೆ ಸ್ಥಳಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಸಾರಿಗೆ ಬಸ್‌ಗಳನ್ನು ನಿಯೋಜಿಸಿದೆ.

Whats_app_banner