Best Bikes: ಮಧ್ಯಮ ವರ್ಗದ ಕುಟುಂಬಕ್ಕೆ ಈ ಬೈಕ್‌ಗಳು ಬೆಸ್ಟ್; ಇವುಗಳಲ್ಲಿ ನೀವು ಇಷ್ಟಪಡುವ ಬೈಕ್ ಇರುವುದೇ? ಚೆಕ್ ಮಾಡಿ
Oct 15, 2024 02:17 PM IST
ಕಡಿಮೆ ದರದ ಉತ್ತಮ ಬೈಕ್‌ಗಳು
- Best Bikes: ಕಡಿಮೆ ದರದಲ್ಲಿ ಒಳ್ಳೆಯ ಬೈಕ್ ಖರೀದಿಸಲು ಬಯಸಿದರೆ ಒಂದಿಷ್ಟು ಬೆಸ್ಟ್ ಬೈಕ್‌ಗಳ ವಿವರ ಇಲ್ಲಿ ನೀಡಲಾಗಿದೆ. ಇವುಗಳ ದರ ಕಡಿಮೆ ಮಾತ್ರವಲ್ಲ, ಮೈಲೇಜ್ ಕೂಡ ಅತ್ಯುತ್ತಮವಾಗಿದೆ. ಮಧ್ಯಮ ವರ್ಗದವರಿಗೆ ಹೆಚ್ಚು ಹೊರೆಯಾಗದಂತಹ ಬೈಕ್‌ಗಳಿವು.
ಈಗ ಬೈಕ್ ಮತ್ತು ಸ್ಕೂಟರ್‌ಗಳ ದರ ಕೇಳಿದ್ರೆ ಸಾಕಷ್ಟು ಜನರು ಬೆಚ್ಚಿ ಬೀಳುತ್ತಾರೆ. ಆನ್‌ರೋಡ್ ದರ 1 ಲಕ್ಷ ರೂಪಾಯಿಗಿಂತ ಹೆಚ್ಚಿರುವುದು ಇದಕ್ಕೆ ಕಾರಣ. ಅನೇಕ ಜನರು ಕೈಗೆಟುಕುವ ಬೈಕ್‌ಗಳನ್ನು ಹುಡುಕುತ್ತಾರೆ. ಬೆಲೆ ಕಡಿಮೆ ಇದ್ದು ಮೈಲೇಜ್ ಕೂಡ ಚೆನ್ನಾಗಿದೆಯಂದ್ರೆ ಅಂತಹ ಬೈಕ್‌ಗಳನ್ನು ಆಯ್ಕೆ ಮಾಡಲು ಬಯಸುತ್ತಾರೆ. ದೈನಂದಿನ ಬಳಕೆಗೆ ಬೈಕ್ ಅತ್ಯಗತ್ಯ. ಕೆಲವರಿಗೆ ಉದ್ಯೋಗಕ್ಕೆ ಹೋಗಲು ಅಗತ್ಯವಿದೆ. ಕೃಷಿಕರಿಗೂ ದ್ವಿಚಕ್ರವಾಹನಗಳು ಅವಶ್ಯವಿರುತ್ತದೆ. ಮಧ್ಯಮ ವರ್ಗದವರ ಅಚ್ಚುಮೆಚ್ಚಿನ ಬೈಕ್‌ಗಳ ಈ ಪಟ್ಟಿಯಲ್ಲಿ ಹೋಂಡಾ ಶೈನ್ 125, ಟಿವಿಎಸ್ ರೈಡರ್ 125, ಬಜಾಜ್ ಪಲ್ಸರ್ 125, ಹೀರೋ ಗ್ಲಾಮರ್, ಸ್ಪ್ಲೆಂಡರ್ ಪ್ಲಸ್ ಸೇರಿವೆ. ಈ ಬೈಕ್‌ಗಳ ಬಗ್ಗೆ ನೋಡೋಣ..
ಬಜಾಜ್ ಪಲ್ಸರ್ 125 ಬೈಕ್ ಪ್ರತಿಲೀಟರ್‌ಗೆ 57 ಕಿಮೀ ಮೈಲೇಜ್ ನೀಡುತ್ತದೆ. ಇದು ಸುಮಾರು 140 ಕೆಜಿ ತೂಕ ಹೊಂದಿದೆ. 11.5 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ಬ್ಲೂಟೂತ್ ಸಂಪರ್ಕದೊಂದಿಗೆ ಎಲ್‌ಸಿಡಿ ಕನ್ಸೋಲ್ ಹೊಂದಿದೆ. ಇದರಲ್ಲಿ ಹಲವು ಫೀಚರ್‌ಗಳು ಇವೆ. ಡ್ರಮ್ ಬ್ರೇಕ್ ಆಯ್ಕೆಯಲ್ಲಿ ಲಭ್ಯ.
ಹೋಂಡಾ ಶೈನ್ 125 ಬೈಕ್ ಬೆಲೆ 81,549 ರೂನಿಂದ 85,550 ರೂವರೆಗಿದೆ (ಎಕ್ಸ್ ಶೋ ರೂಂ). ಆನ್‌ರೋಡ್ ದರ ಒಂದು ಲಕ್ಷ ದಾಟಬಹುದು. 123.94 ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್, 5 ಸ್ಪೀಡ್ ಗಿಯರ್ ಬಾಕ್ಸ್ ಹೊಂದಿದೆ. ಪ್ರತಿಲೀಟರ್‌ಗೆ 55 ಕಿಮೀವರೆಗೆ ಮೈಲೇಜ್ ನೀಡುತ್ತದೆ. ಇದು ಜೆನ್ನಿ ಗ್ರೇ ಮೆಟಾಲಿಕ್, ಡಿಸೆಂಟ್ ಬ್ಲೂ ಮೆಟಾಲಿಕ್ ನಂತಹ ಹಲವಾರು ಬಣ್ಣಗಳಲ್ಲಿಯೂ ಲಭ್ಯವಿದೆ.
ಬಜಾಜ್ ಪಲ್ಸರ್ 125 ಮೋಟಾರ್‌ಸೈಕಲ್ ಎಕ್ಸ್ ಶೋ ರೂಂ ಬೆಲೆ 84,269 ರಿಂದ 99,373 ರೂ.ವರೆಗಿದೆ. ಇದರ ಆನ್‌ರೋಡ್ ದರ ಒಂದು ಲಕ್ಷ ರೂ ದಾಟುತ್ತದೆ. ಇದು 124.4cc ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. 11.8 ಪಿಎಸ್ ಅಶ್ವಶಕ್ತಿ ಮತ್ತು 10.8 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗಿಯರ್ ಬಾಕ್ಸ್ ಹೊಂದಿದೆ.
ಹೀರೋ ಗ್ಲಾಮರ್ ಬೆಲೆ ರೂ. 84,548 ರಿಂದ ರೂ. 88,548 ರೂವರೆಗಿದೆ. ಇದು ಎಕ್ಸ್ ಶೋರೂಂ ಬೆಲೆ. ಇದು 125 ಸಿಸಿ ಎಂಜಿನ್ ಹೊಂದಿದೆ. ಪ್ರತಿಲೀಟರ್‌ಗೆ 63 ಕಿಮೀ ಮೈಲೇಜ್ ನೀಡುತ್ತದೆ. ಕ್ಯಾಂಡಿ ಬ್ಲೇಜಿಂಗ್ ರೆಡ್, ಬ್ಲ್ಯಾಕ್ ಸ್ಪೋರ್ಟ್ಸ್ ರೆಡ್, ಬ್ಲ್ಯಾಕ್ ಟೆಕ್ನೋ ಬ್ಲೂ ಮುಂತಾದ ಹಲವಾರು ಬಣ್ಣಗಳಲ್ಲಿ ಲಭ್ಯವಿದೆ.
ಟಿವಿಎಸ್ ರೈಡರ್ 125 ಸಹ 93,859 ರಿಂದ ರೂ. 1.09 ಲಕ್ಷ ರೂಗೆ ದೊರಕುತ್ತದೆ. ಇದು ಎಕ್ಸ್ ಶೋ ರೂಂ. ಇದು 124.8 ಸಿಸಿ ಪೆಟ್ರೋಲ್ ಎಂಜಿನ್‌ಹೊಂದಿದೆ. 5-ಸ್ಪೀಡ್ ಗಿಯರ್ ಬಾಕ್ಸ್ ಹೊಂದಿದೆ. ಪ್ರತಿಲೀಟರ್‌ಗೆ 57 ಕಿಮೀ ಮೈಲೇಜ್ ನೀಡುತ್ತದೆ. ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಐಡಲ್ ಸ್ಟಾಪ್/ಸ್ಟಾರ್ಟ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್‌ಗಳನ್ನು ಹೊಂದಿದೆ.
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಎಕ್ಸ್ ಶೋ ರೂಂ ದರ 76,356 ರಿಂದ 77,496 ರೂವರೆಗಿದೆ. ಇದು 97.2 ಸಿಸಿ ಎಂಜಿನ್ ಹೊಂದಿದೆ. ಇದು ಪ್ರತಿಲೀಟರ್‌ಗೆ 80.6 ಕಿಮೀ ಮೈಲೇಜ್ ನೀಡುತ್ತದೆ. ಡ್ರಮ್ ಬ್ರೇಕ್ ಆಯ್ಕೆ ಹೊಂದಿದೆ.
ಇಲ್ಲಿ ನೀಡಲಾದ ದರಗಳು ಲಭ್ಯವಿರುವ ಮಾಹಿತಿ ಆಧರಿಸಿದ್ದು. ನಿಖರ ದರವನ್ನು ಹತ್ತಿರದ ಶೋರೂಂಗಳಿಂದ ಪಡೆದುಕೊಳ್ಳಿ.