ಹೊಸ ನೋಟ, ಫೀಚರ್‌ನೊಂದಿಗೆ ಬೈಕ್‌ ಪ್ರಿಯರ ಮನಸೆಳಯುತಿದೆ 2025 ಯಮಹಾ ಆರ್‌3; ಅಮೆರಿಕದ ಇದರ ಬೆಲೆಗೆ ಭಾರತದಲ್ಲಿ ಪುಟ್ಟ ಕಾರು ಖರೀದಿಸಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊಸ ನೋಟ, ಫೀಚರ್‌ನೊಂದಿಗೆ ಬೈಕ್‌ ಪ್ರಿಯರ ಮನಸೆಳಯುತಿದೆ 2025 ಯಮಹಾ ಆರ್‌3; ಅಮೆರಿಕದ ಇದರ ಬೆಲೆಗೆ ಭಾರತದಲ್ಲಿ ಪುಟ್ಟ ಕಾರು ಖರೀದಿಸಬಹುದು

ಹೊಸ ನೋಟ, ಫೀಚರ್‌ನೊಂದಿಗೆ ಬೈಕ್‌ ಪ್ರಿಯರ ಮನಸೆಳಯುತಿದೆ 2025 ಯಮಹಾ ಆರ್‌3; ಅಮೆರಿಕದ ಇದರ ಬೆಲೆಗೆ ಭಾರತದಲ್ಲಿ ಪುಟ್ಟ ಕಾರು ಖರೀದಿಸಬಹುದು

ಅಮೆರಿಕ ಮತ್ತು ಯುರೋಪ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಿದ 2025 ಯಮಹಾ ಆರ್‌3 ಬೈಕ್‌ ಹೊಸ ವಿನ್ಯಾಸ, ನೋಟ ಮತ್ತು ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬೈಕ್‌ ಪ್ರಿಯರ ಮನಸೆಳೆಯತೊಡಗಿದೆ. ಅಂದ ಹಾಗೆ, ಈ ಬೈಕ್‌ಗೆ ಅಮೆರಿಕದಲ್ಲಿ ನಿಗದಿಯಾಗಿರುವ ಬೆಲೆಗೆ ಭಾರತದಲ್ಲಿ ಒಂದು ಪುಟ್ಟ ಕಾರು ಖರೀದಿಸಬಹುದು ನೋಡಿ!

ಯಮಹಾ ತನ್ನ ಹಳೆ ವಿನ್ಯಾಸಕ್ಕೆ ಬದಲಾಗಿ 2025ರ ಯಮಹಾ ಆರ್‌3ರಲ್ಲಿ ಅತ್ಯಾಕರ್ಷಕ ಸ್ಪೋರ್ಟ್ಸ್‌ ಲುಕ್ ನೀಡಿದೆ. ಅದರ ಲೈಟಿಂಗ್‌ ಮತ್ತು ಇನ್ನು ಕೆಲವು ಬದಲಾವಣೆಗಳು ಬೈಕ್‌ಗೆ ಅತ್ಯಾಕರ್ಷಕ ಲುಕ್ ನೀಡಿದೆ.
icon

(1 / 10)

2025 ಯಮಹಾ ಆರ್‌ 3 ಬೈಕ್‌ನಲ್ಲಿ ಆಕರ್ಷಕ ಎಲ್‌ಇಡಿ ಲೈಟ್ ಮತ್ತು ಡಿಎಲ್‌ಆರ್‌ಗಳು ಮನಸೆಳೆಯುತ್ತವೆ. ಹೆಡ್‌ಲೈಟ್‌ನಲ್ಲಿ ಪ್ರೊಜೆಕ್ಟರ್‌ ಇರುವ ಕಾರಣ ಲೈಟ್ ಹೆಚ್ಚು ಫೋಕಸ್ ಆಗಿ ಎದುರು ಬೀಳುತ್ತದೆ. ಅದನ್ನು ಕಣ್ಣಿಗೆ ಕಾಣಿಸದ ಹಾಗೆ ಒಳಗೆ ಕೂರಿಸಿಲಾಗಿದೆ.
icon

(2 / 10)

ಬೈಕ್‌ನ ಪಾರ್ಶ್ವನೋಟವೂ ಚೆನ್ನಾಗಿದ್ದು, ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಿದೆ. 2025 ಯಮಹಾ ಆರ್ 3 ಬೈಕ್ ಈಗಾಗಲೇ ಮಾರುಕಟ್ಟೆಯಲ್ಲಿರುವ ಏಪ್ರಿಲಾ ಆರ್‌ಎಸ್‌457, ಕೆಟಿಎಂಆರ್‌ಸಿ 390, ಕವಾಸಕಿ ನಿಂಜಾ 500 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದೆ.
icon

(3 / 10)

ಹಿಂಬದಿಯ ನೋಟವೂ ಚೆನ್ನಾಗಿದ್ದು, ಸ್ವಲ್ಪ ದೊಡ್ಡ ಗಾತ್ರ ಇರುವಂತೆ ಗೋಚರಿಸಿದೆ. 2025 ಆರ್‌3 ಪ್ರೀಮಿಯಂ ಮಾಡೆಲ್ ಆಗಿರುವ ಕಾರಣ  ಭಾರತದಲ್ಲಿ ಸಂಪೂರ್ಣ ಸಿದ್ಧ ರೀತಿಯಲ್ಲೇ ಮಾರಾಟವಾಗುವ ನಿರೀಕ್ಷೆ ಇದೆ.
icon

(4 / 10)

ಬೈಕ್‌ನ ಹ್ಯಾಂಡಲ್‌ ಮೇಲಿರುವ ಡ್ಯಾಶ್‌ಬೋರ್ಡ್‌ನಲ್ಲಿ ಹೊಚ್ಚ ಹೊಸ ಎಲ್‌ಸಿಡಿ ಸ್ಕ್ರೀನ್‌ ಇದ್ದು, ಅದಕ್ಕೆ ಬ್ಲೂಟೂತ್ ಕನೆಕ್ಟಿವಿಟಿ ಕೂಡ ಜೋಡಿಸಲಾಗಿದೆ. ಇದಲ್ಲದೆ ಹೊಸ 5 ವೋಲ್ಟ್‌ ಯುಎಸ್‌ಬಿ ಎ ಸಾಕೆಟ್ ಕೂಡ ಇದೆ.
icon

(5 / 10)

ಆರ್3 ಬೈಕ್‌ನಲ್ಲಿ ಈಗ ಹೊಸ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ ಕೂಡ ಸೇರ್ಪಡೆಯಾಗಿದೆ. ಬೈಕ್‌ನ ಎಂಜಿನ್ ಬ್ಲಾಕ್‌ ಅನ್ನು ಹೈ ಸಿಲಿಕಾನ್ ಅಲ್ಯುಮೀನಿಯಂ ಅಲ್ಲಾಯ್‌ ಲೋಹದಿಂದ ತಯಾರಿಸಿದ್ದು, ಆಫ್‌ಸೆಟ್‌ ಸಿಲಿಂಡರ್ ಡಿಸೈನ್‌ನಲ್ಲಿದೆ. ಅಲ್ಲೋಯ್ ಚಕ್ರಗಳಲ್ಲಿ 10 ಸ್ಪೋಕ್‌ ಡಿಸೈನ್ ಇದೆ.
icon

(6 / 10)

ಆರ್‌3 ಬೈಕ್‌ ಎಂಜಿನ್ 321 ಸಿಸಿ ಇದ್ದು, 41.4 ಬಿಎಚ್‌ಪಿ, 29.5ಎನ್‌ಎಂ ಗರಿಷ್ಠ ಟೋರ್ಕ್‌ ಹೊಂದಿದೆ. ಇದರಲ್ಲಿ 6 ಸ್ಪೀಡ್ ಗೇರ್‌ ಬಾಕ್ಸ್ ಇದೆ.
icon

(7 / 10)

ಬೈಕ್‌ನಲ್ಲಿ 298 ಎಂಎಂ ಪ್ಲೋಟಿಂಗ್ ಫ್ರಂಟ್ ಡಿಸ್ಕ್‌ ಬ್ರೇಕ್‌ ಇದ್ದು, ಹಿಂದೆ 220 ಎಂಎಂ ಡಿಸ್ಕ್‌ ಮತ್ತು ಡುಯೆಲ್ ಚಾನೆಲ್‌ ಎಬಿಎಸ್ ಇದೆ. 
icon

(8 / 10)

ಆರ್‌3 ಬೈಕ್‌ನಲ್ಲಿ YZR-M1 ಪ್ರೇರಿತ ಟಾಪ್ ಕ್ಲಾಂಪ್ ಇದ್ದು, ಅದರ ತೂಕ ಸಮವಾಗಿ ಇರುವಂತೆ ನೀಡಿಕೊಂಡಿದೆ. ಟೀಮ್ ಯಮಹಾ ಬ್ಲೂ,f ಮೆಟ್‌ ಸ್ಟೆಲ್ತ್‌ ಬ್ಲ್ಯಾಕ್‌, ಲೂನಾರ್ ವೈಟ್ ವಿತ್ ನೆಬ್ಯುಲಾ ಬ್ಲೂ ಬಣ್ಣದಲ್ಲಿ ಬೈಕ್ ಲಭ್ಯ ಇದೆ.
icon

(9 / 10)

ಆರ್‌3 ಬೈಕ್ ಅದರ ಎಂಜಿನ್‌ ಕಾರ್ಯಕ್ಷಮತೆ ಹೆಸರುವಾಸಿ. ಇದನ್ನು ಸದ್ಯ ಅಮೆರಿಕ, ಯುರೋಪ್‌ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅಮೆರಿಕದ ಇದರ ಬೆಲೆ (5,499 ಡಾಲರ್)ಗೆ ಭಾರತದಲ್ಲಿ ಒಂದು ಪುಟ್ಟ ಕಾರು ಖರೀದಿಸಬಹುದು. ಭಾರತಕ್ಕೆ ಇದು ಇನ್ನು ಕೆಲವೇ ತಿಂಗಳಲ್ಲಿ ಬರಲಿದೆ.
icon

(10 / 10)

ಇತರ ಗ್ಯಾಲರಿಗಳು