ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸೆಪ್ಟೆಂಬರ್ 1ರಂದು ಬಿಡುಗಡೆ, ಹೊಸ ಬುಲೆಟ್‌ನ ದರ ಎಷ್ಟಿರಲಿದೆ?- ಇಲ್ಲಿದೆ ವಿವರ
Aug 31, 2024 03:45 PM IST
ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸೆಪ್ಟೆಂಬರ್ 1ರಂದು ಬಿಡುಗಡೆ
2024ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬುಲೆಟ್ ಸೆಪ್ಟೆಂಬರ್ 1 ಅಂದರೆ ನಾಳೆ ಬಿಡುಗಡೆಯಾಗಲಿದೆ. ಈ ಬುಲೆಟ್‌ನ ಎಂಜಿನ್ ಮತ್ತು ಬಿಡಿಭಾಗಗಳು ಈ ಹಿಂದಿನ ಕ್ಲಾಸಿಕ್ 350ಯಂತೆಯೇ ಇರಲಿದೆ. ಆದರೆ, ಒಂದಿಷ್ಟು ಹೊಸ ಬದಲಾವಣೆಗಳನ್ನು ಹೊಸ ಬುಲೆಟ್ ಬೈಕ್‌ನಲ್ಲಿ ನಿರೀಕ್ಷಿಸಬಹುದು.
ರಾಯಲ್ ಎನ್‌ಫೀಲ್ಡ್ ಕಂಪನಿಯು 2024ರ ಕ್ಲಾಸಿಕ್ 350 ಬೈಕ್‌ನ ಕುರಿತು ಈ ಹಿಂದೆಯೇ ತಿಳಿಸಿತ್ತು. ಇದೀಗ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ರಸ್ತೆಗಿಳಿಯಲು ಸಜಜಾಗಿದೆ. ಈ ಬೈಕ್‌ನಲ್ಲಿನ ಹೊಸ ಬದಲಾವಣೆಯ ಕುರಿತು ಈ ಹಿಂದೆಯೇ ಮಾಹಿತಿ ಹೊರಬಿದ್ದಿತ್ತು. ಆದರೆ, ಅಪ್‌ಡೇಟೆಡ್ ಆಗಿರುವ ನೂತನ ಬೈಕ್‌ನ ದರ ಎಷ್ಟಿರಲಿದೆ ಎಂಬ ಕುತೂಹಲ ಸಾಕಷ್ಟು ಜನರಿಗಿದೆ. ಈ ಬೈಕ್ ಬಿಡುಗಡೆಗೆ ಮೊದಲೇ ದರ ಮಾಹಿತಿ ಲಭಿಸಿದೆ.
2024ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350: ಹೊಸ ಬಣ್ಣಗಳು
ಈ ಬೈಕ್ ಏಳು ಹೊಸ ಬಣ್ಣಗಳು ಮತ್ತು ಒಂದಿಷ್ಟು ಅಪ್‌ಗ್ರೇಡ್‌ಗಳೊಂದಿಗೆ ಲಾಂಚ್ ಆಗಲಿದೆ. ಹೊಸ ಎಮರಾಲ್ಡ್ ಗ್ರೀನ್, ಜೋಧಪುರ್ ಬ್ಲೂ, ಮದ್ರಾಸ್ ರೆಡ್, ಮೆಡಾಲಿಯನ್ ಬ್ರೌನ್, ಕಮಾಂಡೋ ಸ್ಯಾಂಡ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿ ದೊರಕಲಿದೆ. ಈ ಬಣ್ಣಗಳು ಹೆರಿಟೇಜ್, ಹೇರಿಟೇಜ್ ಪ್ರೀಮಿಯಂ, ಸಿಗ್ನಲ್ಸ್, ಡಾರ್ನ್ ಮತ್ತು ಎಮರಾರ್ಡ್ ಎಂಬ ಐದು ಟ್ರಿಮ್‌ಗಳಲ್ಲಿ ಲಭ್ಯವಿರಲಿದೆ. ಇದರೊಂದಿಗೆ ರೆಡಿಚ್ ಬಣ್ಣಗಳು ಈ ಹಿಂದಿನಂತೆ ಮುಂದುವರೆಯಲಿದೆ.
ಫೀಚರ್ ಅಪ್‌ಡೇಟ್‌ಗಳು
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಒಂದಿಷ್ಟು ಫೀಚರ್ಸ್ ಅಪ್‌ಗ್ರೇಡ್ ಮಾಡಾಗಿದೆ. ಇದು ಹಲವು ಹೊಸ ಬಣ್ಣಗಳಲ್ಲಿ ದೊರಕಲಿದೆ. ಇದರೊಂದಿಗೆ ಹೆಚ್ಚುವರಿ ಫೀಚರ್‌ಗಳು ದೊರಕಲಿವೆ. ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಪಿಲೊಟ್ ಲ್ಯಾಂಪ್ ಇರಲಿದೆ. ಟಾಪ್ ವೇರಿಯೆಂಟ್‌ನಲ್ಲಿ ಎಲ್‌ಇಡಿ ಟರ್ನ್ ಇಂಡಿಖೇಟರ್ ಇರಲಿದೆ. ಲೋವರ್ ಟ್ರಿಮ್‌ನಲ್ಲಿ ಇದು ಹಾಲೊಜೆನ್ ಆಗಿರಲಿದೆ. ಸಿಗ್ನಲ್ ಮತ್ತು ಎಮರ್ಲಡ್ ವೇರಿಯೆಂಟ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ಲೆವರ್ಸ್‌ಗಳು ಸ್ಟಾಂಡರ್ಡ್ ಫೀಚರ್ ಆಗಿರಲಿದೆ.
ಇಷ್ಟು ಮಾತ್ರವಲ್ಲದೆ ಇನ್‌ಸ್ಟ್ರುಮೆಂಟ್ ಕನ್ಸೋಲ್‌ನ ಎಂಐಡಿ ಸ್ಕ್ರೀನ್‌ನಲ್ಲಿ ನೀವು ಯಾವ ಗಿಯರ್‌ನಲ್ಲಿದ್ದೀರಿ (ಗಿಯರ್ ಪೊಸಿಷನ್) ಎನ್ನುವುದು ತಿಳಿಯುತ್ತದೆ. ಇಷ್ಟು ಮಾತ್ರವಲ್ಲದೆ ಹ್ಯಾಂಡಲ್‌ಬಾರ್ ಕೆಳಗಡೆ ಟೈಪ್ ಸಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಇರಲಿದೆ.
ಎಂಜಿನ್ ವಿವರ
ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್‌ನಲ್ಲಿ ಯಾವುದೇ ಮೆಕ್ಯಾನಿಕಲ್ ಬದಲಾವಣೆಗಳು ಇರುವುದಿಲ್ಲ. ಮೊದಲಿನಂತೆ 349 ಸಿಸಿ ಸಿಂಗಲ್ ಸಿಲಿಂಡರ್ ಜೆ ಸೀರಿಸ್ ಎಂಜಿನ್ ಹೊಂದಿರಲಿದೆ. ಇದು 6100 ಆವರ್ತನಕ್ಕೆ 20.2 ಬಿಎಚ್‌ಪಿ ಪವರ್ ನೀಡಲಿದೆ. 4000 ಆವರ್ತನಕ್ಕೆ 27 ಎನ್‌ಎಂ ಟಾರ್ಕ್ ದೊರಕಲಿದೆ. 5 ಹಂತದ ಗಿಯರ್ ಬಾಕ್ಸ್ ಇರಲಿದೆ. ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಇರುವ ಡ್ಯೂಯಲ್ ಕ್ರಡಲ್ ಫ್ರೇಮ್ ಇರಲಿದೆ. ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಇರಲಿದೆ.
ದರ ನಿರೀಕ್ಷೆ
ಈಗಿನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ಗಿಂತ ದರ ತುಸು ಹೆಚ್ಚಿರುವ ನಿರೀಕ್ಷೆಯಿದೆ. ಎಕ್ಸ್ ಶೋರೂಂ ದರವು 1.95 ಲಕ್ಷ ರೂಪಾಯಿಯಿಂದ 2.30ಲಕ್ಷ ರೂ.ವರೆಗೆ ಇರುವ ನಿರೀಕ್ಷೆಯಿದೆ. ಈಗಿನ ಕ್ಲಾಸಿಕ್ 350 ಬೈಕ್‌ಗಳ ಎಕ್ಸ್ ಶೋರೂಮ್ ದರ 1.93 ಲಕ್ಷ ರೂ.ನಿಂದ 2.25 ಲಕ್ಷ ರೂ. ವರೆಗಿದೆ.