Top 5 Scooters: ಅತ್ಯಧಿಕ ಮಾರಾಟವಾಗುವ 5 ಸ್ಕೂಟರ್‌ಗಳಿವು, ದೇಶದ ತರುಣ ತರುಣಿಯರಿಗೆ ಇವು ಅಚ್ಚುಮೆಚ್ಚು
Top 5 Best-Selling Scooters: ದೇಶದ ದ್ವಿಚಕ್ರ ವಾಹನ ಪ್ರೇಮಿಗಳಿಗೆ ಹೋಂಡಾ ಆಕ್ಟಿವಾ, ಟಿವಿಸ್ ಜುಪಿಟರ್ ಸೇರಿದಂತೆ ಕೆಲವು ಸ್ಕೂಟರ್‌ಗಳ ಮೇಲೆ ವಿಪರೀತ ಮೋಹ. ಭಾರತದಲ್ಲಿ ಅತ್ಯಧಿಕ ಮಾರಾಟಗೊಂಡ ಐದು ಸ್ಕೂಟರ್‌ಗಳ ವಿವರ ಇಲ್ಲಿದೆ. ಹೊಸ ಸ್ಕೂಟರ್ ಖರೀದಿಸುವವರಿಗೂ ಇದು ಆಯ್ಕೆಗೆ ಮಾರ್ಗಸೂಚಿಯಾಗಬಲ್ಲದು.
India Best-Selling Scooters ಹರೆಯದ ಯುವಕ ಯುವತಿಯರಿಂದ ನಿವೃತ್ತಿಯಾದ ಹಿರಿಯರವರೆಗೆ ಎಲ್ಲರಿಗೂ ಸ್ಕೂಟರ್ ಅಂದ್ರೆ ಅಚ್ಚುಮೆಚ್ಚು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಈಗ ಸ್ಕೂಟರ್ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆರಾಮವಾಗಿ ಚಾಲನೆ ಮಾಡಬಹುದು, ಗಿಯರ್ ಬದಲಾಯಿಸುವ ತಾಪತ್ರಯವಿಲ್ಲ ಎನ್ನುವುದರ ಜತೆಗೆ ಸಾಮಾನು ಸರಜಾಮುಗಳನ್ನು ಮುಂಭಾಗದಲ್ಲಿ ಇಟ್ಟುಕೊಂಡು ಬರಬಹುದು. ದೇಶದಲ್ಲೀಗ ಹತ್ತು ಹಲವು ಬಗೆಯ ಸ್ಕೂಟರ್‌ಗಳಿವೆ. ಪೆಟ್ರೋಲ್ ಸ್ಕೂಟರ್‌ಗಳ ನಡುವೆ ಎಲೆಕ್ಟ್ರಿಕ್ ಸ್ಕೂಟರ್‌ಗಳೂ ಹೆಚ್ಚುತ್ತಿವೆ. ಹಾಗಾದರೆ, ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳು ಯಾವುವು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆಗಸ್ಟ್ ತಿಂಗಳ ಸ್ಕೂಟರ್ ಮಾರಾಟದ ಲೆಕ್ಕ ಇನ್ನೂ ಬಂದಿಲ್ಲ. ಜುಲೈ ತಿಂಗಳ ಅಂಕಿಅಂಶಗಳ ಆಧಾರದಲ್ಲಿ ದೇಶದಲ್ಲಿ ಅತ್ಯಧಿಕ ಮಾರಾಟಗೊಂಡ 5 ಸ್ಕೂಟರ್‌ಗಳ ವಿವರನ್ನು ಇಲ್ಲಿ ನೀಡಲಾಗಿದೆ.
1. ಹೋಂಡಾ ಆಕ್ಟಿವಾ 6ಜಿ ಮತ್ತು 125
ದೇಶದಲ್ಲಿ ಹೋಂಡಾ ಆಕ್ಟಿವಾ ಟಾಪ್ ಲಿಸ್ಟ್‌ನಲ್ಲಿಯೇ ಇದೆ. ಒಂದೇ ತಿಂಗಳಲ್ಲಿ 195,603 ಆಕ್ಟಿವಾ ಮಾರಾಟಗೊಂಡಿದೆ. ಇದು 110 ಸಿಸಿ ಮತ್ತು 125 ಸಿಸಿ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಹೋಂಡಾ ಆಕ್ಟಿವಾ 6ಜಿಯಲ್ಲಿ 109.7 ಸಿಸಿಎ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 7.8 ಪಿಎಸ್ ಮತ್ತು 8.8 ಎನ್‌ಎಂ ಟಾರ್ಕ್ ಒದಗಿಸುತ್ತದೆ. 5.3 ಲೀಟರ್ ಇಂಧನ ಟ್ಯಾಂಕ್ ಇದೆ. ಆಕ್ಟಿವಾ ಸ್ಕೂಟರ್ ನಗರದಲ್ಲಿ ಪ್ರತಿಲೀಟರ್ ಪೆಟ್ರೋಲ್‌ಗೆ 59.5 ಕಿ.ಮೀ. ಮತ್ತು ಹೈವೇನಲ್ಲಿ 55.9 ಕಿ.ಮೀ. ಮೈಲೇಜ್ ನೀಡುತ್ತದೆ.
ಈ ಸ್ಕೂಟರ್‌ನ ಸಹೋದರಿ ಹೋಂಡಾ ಆಕ್ಟಿವಾ 125ಯು 124 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 6250 ಆವತ್ತನಕ್ಕೆ 8.3 ಪಿಎಸ್ ಪವರ್ ಮತ್ತು 5 ಸಾವಿರ ಆವರ್ತನಕ್ಕೆ 10.4 ಎನ್‌ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. 5.3 ಲೀಟರ್‌ನ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಸಿಟಿಯಲ್ಲಿ ಲೀಟರ್‌ಗೆ 52.63 ಕಿ.ಮೀ. ಮತ್ತು ಹೈವೇನಲ್ಲಿ 51.23 ಕಿ.ಮೀ. ಮೈಲೇಜ್ ದೊರಕುತ್ತದೆ.
2. ಟಿವಿಎಸ್ ಜುಪಿಟರ್
ಇದು 110 ಸಿಸಿ ಮತ್ತು 125 ಸಿಸಿ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಇದು ಭಾರತದ ಎರಡನೇ ಅತ್ಯಧಿಕ ಮಾರಾಟದ ಸ್ಕೂಟರ್ ಆಗಿದೆ. ಜುಲೈನಲ್ಲಿ 74,663 ಸ್ಕೂಟರ್‌ಗಳು ಮಾರಾಟಗೊಂಡಿವೆ. ಟಿವಿಎಸ್ ಜುಪಿಟರ್ 110ರಲ್ಲಿ 109.7 ಸಿಸಿಯ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 7.9 ಪಿಎಸ್ ಮತ್ತು 8.8 ಎನ್‌ಎಂ ಟಾರ್ಕ್ ಒದಗಿಸುತ್ತದೆ. ಟಿವಿಎಸ್ ಜುಪಿಟರ್ 125 ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 8.2 ಪಿಎಸ್ ಪವರ್ ಮತ್ತು 10.5 ಎನ್‌ಎಂ ಟಾರ್ಕ್ ಒದಗಿಸುತ್ತದೆ. ಸಿಟಿಯಲ್ಲಿ ಪ್ರತಿಲೀಟರ್ ಪೆಟ್ರೋಲ್‌ಗೆ 64 ಕಿ.ಮೀ. ಮತ್ತು ಹೈವೇನಲ್ಲಿ ಪ್ರತಿಲೀಟರ್‌ಗೆ 52 ಕಿ.ಮೀ. ಮೈಲೇಜ್ ನೀಡುತ್ತದೆ. 125 ಸಿಸಿಯ ಜುಪಿಟರ್ ಸಿಟಿಯಲ್ಲಿ 57.27 ಕಿ.ಮೀ. ಮತ್ತು ಹೈವೇಯಲ್ಲಿ 52.91 ಕಿ.ಮೀ. ಮೈಲೇಜ್ ನೀಡುತ್ತದೆ.
3. ಸುಜಕಿ ಆಕ್ಸೆಸ್ 125
ದೇಶದಲ್ಲಿ ಮಾರಾಟದಲ್ಲಿ ಮೂರನೇ ಸ್ಥಾನದಲ್ಲಿರುವ ಸ್ಕೂಟರ್ ಇದಾಗಿದೆ. ಇದು 124 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 6750 ಆವರ್ತನಕ್ಕೆ 8.7 ಪಿಎಸ್ ಪವರ್ ಮತ್ತು 5500 ಆರ್‌ಪಿಎಂಗೆ 10 ಎನ್‌ಎಂ ಟಾರ್ಕ್ ನೀಡುತ್ತದೆ. ಇದು ಸಿಟಿಯಲ್ಲಿ 52.45 ಕಿ.ಮೀ. ಮತ್ತು ಹೈವೇನಲ್ಲಿ 57.22 ಕಿ.ಮೀ. ಮೈಲೇಜ್ ನೀಡುತ್ತದೆ.
4. ಟಿವಿಎಸ್ ಎನ್‌ಟಾರ್ಕ್ 125
ಭಾರತದ ಶಕ್ತಿಶಾಲಿ ಮತ್ತು ವೇಗದ ಸ್ಕೂಟರ್ ಎಂಬ ಖ್ಯಾತಿ ಪಡೆದ ಟಿವಿಎಸ್ ಎನ್‌ಟಾರ್ಕ್ 125 ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದು 9.38 ಪಿಎಸ್ ಪವರ್ ಮತ್ತು 10.6 ಎನ್‌ಎಂ ಟಾರ್ಕ್ ಹೊಂದಿದೆ. ಸಿಟಿಯಲ್ಲಿ 54.33 ಕಿ.ಮೀ. ಮತ್ತ ಹೈವೇಯಲ್ಲಿ 55.85 ಕಿ.ಮೀ. ಮೈಲೇಜ್ ನೀಡುತ್ತದೆ.
5. ಸುಜುಕಿ ಬುರ್ಗ್‌ಮೆನ್
125 ಸಿಸಿಯ ಮ್ಯಾಕ್ಸಿ ವಿನ್ಯಾಸದ ಸುಜುಕಿ ಬುರ್ಗ್‌ಮ್ಯಾನ್ ದೇಶದಲ್ಲಿ ಮಾರಾಟದಲ್ಲಿ ಅಗ್ರ 5ನೇ ಸ್ಥಾನದಲ್ಲಿದೆ. ಇದು ಸಿಟಿಯಲ್ಲಿ 61.9 ಕಿ.ಮೀ ಮತ್ತು ಹೆದ್ದೃಿಯಲ್ಲಿ 54.95 ಕಿ.ಮೀ. ಮೈಲೇಜ್ ನೀಡುತ್ತದೆ.
ಗಮನಿಸಿ: ಆಯಾ ಕಂಪನಿಗಳು ಟೆಸ್ಟಿಂಗ್ ಸಮಯದಲ್ಲಿ ಪಡೆದಿರುವ ಮತ್ತು ಅಧಿಕೃತವಾಗಿ ತಿಳಿಸಿರುವ ಮೈಲೇಜ್ ಅನ್ನು ಇಲ್ಲಿ ನೀಡಲಾಗಿದೆ. ರಿಯಲ್ ಜಗತ್ತಿನಲ್ಲಿ ಆಯಾ ರಸ್ತೆಗಳು, ವಾತಾವರಣ, ವೇಗದ ಮಟ್ಟಕ್ಕೆ ತಕ್ಕಂತೆ ಇಂಧನ ದಕ್ಷತೆಯಲ್ಲಿ ಏರುಪೇರಾಗಬಹುದು.