logo
ಕನ್ನಡ ಸುದ್ದಿ  /  ಜೀವನಶೈಲಿ  /  Bike Parcel In Train: ರೈಲಿನಲ್ಲಿ ದ್ವಿಚಕ್ರ ವಾಹನ ಪಾರ್ಸೆಲ್‌ ಮಾಡೋದು ಹೇಗೆ? ಟ್ರೇನ್‌ ಲಗೇಜ್‌ Vs ಪಾರ್ಸೆಲ್‌ ವ್ಯತ್ಯಾಸ ತಿಳಿಯಿರಿ

Bike parcel in train: ರೈಲಿನಲ್ಲಿ ದ್ವಿಚಕ್ರ ವಾಹನ ಪಾರ್ಸೆಲ್‌ ಮಾಡೋದು ಹೇಗೆ? ಟ್ರೇನ್‌ ಲಗೇಜ್‌ vs ಪಾರ್ಸೆಲ್‌ ವ್ಯತ್ಯಾಸ ತಿಳಿಯಿರಿ

Praveen Chandra B HT Kannada

Oct 08, 2024 01:29 PM IST

google News

Bike parcel in train: ರೈಲಿನಲ್ಲಿ ದ್ವಿಚಕ್ರ ವಾಹನ ಪಾರ್ಸೆಲ್‌ ಮಾಡೋದು ಹೇಗೆ ಎಂದು ತಿಳಿಯಿರಿ

    • Bike parcel in train: ಭಾರತೀಯ ರೈಲ್ವೆಯು ಎರಡು ವಿಧಾನಗಳ ಮೂಲಕ ನಿಮ್ಮ ಬೈಕ್‌ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕಳುಹಿಸಲು ಅವಕಾಶ ನೀಡುತ್ತದೆ. ರೈಲ್ವೆ ಪಾರ್ಸೆಲ್‌ ಮತ್ತು ರೈಲ್ವೆ ಲಗೇಜ್‌ ವಿಧಾನಗಳ ಮೂಲಕ ದ್ವಿಚಕ್ರವಾಹನಗಳನ್ನು ಸಾಗಾಟ ಮಾಡಬಹುದು.
Bike parcel in train: ರೈಲಿನಲ್ಲಿ ದ್ವಿಚಕ್ರ ವಾಹನ ಪಾರ್ಸೆಲ್‌ ಮಾಡೋದು ಹೇಗೆ ಎಂದು ತಿಳಿಯಿರಿ
Bike parcel in train: ರೈಲಿನಲ್ಲಿ ದ್ವಿಚಕ್ರ ವಾಹನ ಪಾರ್ಸೆಲ್‌ ಮಾಡೋದು ಹೇಗೆ ಎಂದು ತಿಳಿಯಿರಿ (Bike image credit: jansatta)

Bike parcel in train: ಒಂದು ಊರಿನಿಂದ ಇನ್ನೊಂದು ಊರಿಗೆ ಶಿಫ್ಟ್‌ ಆಗುವ ಸಮಯದಲ್ಲಿ ಬಟ್ಟೆ ಬರೆ ಅಥವಾ ಇತರೆ ಸಾಮಾಗ್ರಿಗಳನ್ನು ಯಾವುದಾದರೂ ವಿಧಾನಗಳ ಮೂಲಕ ವರ್ಗಾವಣೆ ಮಾಡಬಹುದು. ಆದರೆ, ಬೈಕ್‌ ಅಥವಾ ಸ್ಕೂಟರ್‌ಗಳನ್ನು ಹೇಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವುದು ಎಂದು ಸಾಕಷ್ಟು ಜನರು ಆಲೋಚಿಸುತ್ತಾರೆ. ಸಾಕಷ್ಟು ಜನರಿಗೆ ಬೈಕ್‌ ಅಥವಾ ಸ್ಕೂಟರ್‌ ಅನ್ನು ರೈಲಿನಲ್ಲಿ ಕೊಂಡೊಯ್ಯಬಹುದು ಎಂಬ ಮಾಹಿತಿ ಇರುತ್ತದೆ. ಒಂದಿಷ್ಟು ಜನರು ಈ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳು, ರೈಲ್ವೆ ಪಾರ್ಸೆಲ್‌ ನಿಯಮಗಳ ಕುರಿತು ತಿಳಿಯದೇ ಇರಬಹುದು. ಭಾರತೀಯ ರೈಲ್ವೆಯು ಬೈಕ್‌ ಅನ್ನು ಎರಡು ವಿಧಾನಗಳ ಮೂಲಕ ಸಾಗಾಟ ಮಾಡಲು ಅವಕಾಶ ನೀಡುತ್ತದೆ.

ಟ್ರೇನ್‌ ಲಗೇಜ್‌ vs ಪಾರ್ಸೆಲ್‌ ನಿಯಮ

ಬೈಕ್‌ ಅಥವಾ ಸ್ಕೂಟರ್‌ ಅನ್ನು ಸಾಗಾಟ ಮಾಡಲು ಭಾರತೀಯ ರೈಲ್ವೆಯು ಎರಡು ರೀತಿಯ ಅವಕಾಶ ನೀಡುತ್ತದೆ. ಇವೆರಡರ ವ್ಯತ್ಯಾಸವನ್ನು ಗಮನಿಸಿಕೊಳ್ಳುವುದು ಅತ್ಯಂತ ಅಗತ್ಯ. ನೀವು ಲಗೇಜ್‌ ವಿಧಾನದ ಮೂಲಕ ಬೈಕ್‌ ಪಾರ್ಸೆಲ್‌ ಮಾಡೋದಾದ್ರೆ ಅದೇ ರೈಲಿನಲ್ಲಿ ನೀವು ಪ್ರಯಾಣಿಸಬೇಕಾಗುತ್ತದೆ. ನಿಮ್ಮ ಬೈಕನ್ನು ಯಾವ ರೈಲಲ್ಲಿ ಸಾಗಿಸಲಾಗುತ್ತದೆಯೋ ಅದೇ ರೈಲಲ್ಲಿ ನೀವು ಪ್ರಯಾಣಿಸುವುದಾದರೆ ಮಾತ್ರ ಲಗೇಜ್‌ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ. ನೀವು ಆ ರೈಲಿನಲ್ಲಿ ಪ್ರಯಾಣಿಸುವುದಿಲ್ಲವಾದರೆ ಮಾತ್ರ ಪಾರ್ಸೆಲ್‌ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.

ದ್ವಿಚಕ್ರವಾಹನ ಸಾಗಾಟಕ್ಕೆ ಟ್ರೇನ್‌ ಪಾರ್ಸೆಲ್‌ ಬುಕ್ಕಿಂಗ್‌ ಮಾಡುವುದು ಹೇಗೆ?

ಈಗಾಗಲೇ ಹೇಳಿದಂತೆ ನೀವು ಆ ಟ್ರೇನ್‌ನಲ್ಲಿ ಪ್ರಯಾಣಿಸುತ್ತಿಲ್ಲ ಎಂದಾದರೆ ಪಾರ್ಸೆಲ್‌ ವಿಧಾನದ ಮೂಲಕ ಟ್ರೇನ್‌ನಲ್ಲಿ ದ್ವಿಚಕ್ರವಾಹನ ಕಳುಹಿಸಬೇಕು. ನೀವು ನಂತರ ನಿಗದಿತ ರೈಲ್ವೆ ಸ್ಟೇಷನ್‌ನಿಂದ ಈ ಪಾರ್ಸೆಲ್‌ ಅನ್ನು ಕಲೆಕ್ಟ್‌ ಮಾಡಬೇಕು.

  1. ದ್ವಿಚಕ್ರ ವಾಹನ ನೋಂದಣಿ ಸರ್ಟಿಫಿಕೇಟ್‌ ಮತ್ತು ಸರಕಾರ ಅಂಗೀಕರಿಸುವ ಐಡಿ ಪ್ರೂಫ್‌ನ ಜೆರಾಕ್ಸ್‌ ಪ್ರತಿಗಳನ್ನು ರೈಲ್ವೆ ಪಾರ್ಸೆಲ್‌ ಆಫೀಸ್‌ಗೆ ತನ್ನಿ.
  2. ಬುಕ್ಕಿಂಗ್‌ ಮಾಡುವ ಮುನ್ನ ನಿಮ್ಮ ದ್ವಿಚಕ್ರವಾಹನವನ್ನು ಸಮರ್ಪಕವಾಗಿ ಪ್ಯಾಕಿಂಗ್‌ ಮಾಡಬೇಕು.
  3. ಪ್ಯಾಕಿಂಗ್‌ ಮಾಡುವ ಮುನ್ನ ಬೈಕ್‌ ಅಥವಾ ಸ್ಕೂಟರ್‌ನ ಪೆಟ್ರೋಲ್‌ ಟ್ಯಾಂಕ್‌ ಸಂಪೂರ್ಣವಾಗಿ ಖಾಲಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬಕು.
  4. ಈ ಪಾರ್ಸೆಲ್‌ನಲ್ಲಿ ಪಾರ್ಸೆಲ್‌ ಎಲ್ಲಿಂದ ಎಲ್ಲಿಗೆ ಕಳುಹಿಸಲಾಗುತ್ತದೆ ಎಂದು ಸ್ಪಷ್ಟವಾಗಿ ಕಾರ್ಡ್‌ಬೋರ್ಡ್‌ನಲ್ಲಿ ನಮೂದಿಸಬೇಕು. ಈ ಕಾರ್ಡ್‌ ಬೋರ್ಡ್‌ ಅನ್ನು ದ್ವಿಚಕ್ರವಾಹನಕ್ಕೆ ಕಟ್ಟಬೇಕು.
  5. ಪಾರ್ಸೆಲ್‌ ಆಫೀಸ್‌ನಲ್ಲಿ ನಿಗದಿತ ಅರ್ಜಿಯಲ್ಲಿ ಹೊರಡುವ ಸ್ಟೇಷನ್‌, ತಲುಪಬೇಕಿರುವ ಸ್ಟೇಷನ್‌, ಪೋಸ್ಟಲ್‌ ವಿಳಾಸ, ವಾಹನ ತಯಾರಿಸಿ ಕಂಪನಿ, ನೋಂದಣಿ ಸಂಖ್ಯೆ, ವಾಹನದ ತೂಕ, ವಾಹನದ ಮೌಲ್ಯ ಇತ್ಯಾದಿಗಳನ್ನು ನಮೂದಿಸಬೇಕು.

ಇದನ್ನೂ ಓದಿ: Railway Monthly Pass: ರೈಲು ಪ್ರಯಾಣಕ್ಕೆ ಪಾಸ್‌ ಪಡೆಯುವುದು ಹೇಗೆ? ಸೀಸನ್‌ ಟಿಕೆಟ್‌ಗೆ ಆನ್‌ಲೈನ್‌-ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

ಲಗೇಜ್‌ ರೂಪದಲ್ಲಿ ವಾಹನ ಸಾಗಾಟ ಹೇಗೆ?

  1. ನೀವು ಅದೇ ಟ್ರೇನ್‌ನಲ್ಲಿ ಪ್ರಯಾಣಿಸುವುದಾದರೆ ಲಗೇಜ್‌ ವಿಧಾನದ ಮೂಲಕ ಬೈಕನ್ನು ಸಾಗಾಟ ಮಾಡಬಹುದು.
  2. ರೈಲು ಹೊರಡುವ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ತಲುಪಿ.
  3. ಪ್ಯಾಕಿಂಗ್‌, ಲೇಬಲಿಂಗ್‌ ಮತ್ತು ಮಾರ್ಕಿಂಗ್ ಪ್ರಕ್ರಿಯೆಗಳು ಇರುತ್ತವೆ.
  4. ನಿಮಗೆ ಲಗೇಜ್‌ ಟಿಕೆಟ್‌ ನೀಡಲಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಪ್ರಯಾಣದ ಟಿಕೆಟ್‌ ಅನ್ನು ಹಾಜರುಪಡಿಸಬೇಕಾಗುತ್ತದೆ.
  5. ಸ್ಥಳಾವಕಾಶ ಲಭ್ಯತೆ ಆಧಾರದಲ್ಲಿ ಅದೇ ಟ್ರೇನ್‌ನಲ್ಲಿ ಲಗೇಜ್‌ ಕಳುಹಿಸಲಾಗುತ್ತದೆ.
  6. ಡೆಲಿವರಿ ಸಂದರ್ಭದಲ್ಲಿ ಒರಿಜಿನಲ್‌ಟಿಕೆಟ್‌ ಮತ್ತು ಲಗೇಜ್‌ ಎಂಡೋರ್ಸ್‌ಮೆಂಟ್‌ ಪ್ರತಿ ಹಾಜರುಪಡಿಸಬೇಕು.
  7. ಡೆಲಿವರಿ ಪಡೆದಾಗ ಲಗೇಜ್‌ ಟಿಕೆಟ್‌ ಅನ್ನು ಸರೆಂಡರ್‌ ಮಾಡಬೇಕು.

ಇದನ್ನೂ ಓದಿ: ರೈಲು ಟಿಕೆಟ್‌ನಲ್ಲಿರುವ WL RSWL PQWL GNWL RAC CNF ಇತ್ಯಾದಿ 10 ಕೋಡ್‌ಗಳ ಅರ್ಥ ಇಲ್ಲಿದೆ ನೋಡಿ, ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ

ಭಾರತೀಯ ರೈಲ್ವೆಯ ಪಾರ್ಸೆಲ್‌ ನಿಯಮಗಳ ಕುರಿತು ಹೆಚ್ಚಿನ ವಿವರ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: parcel.indianrail.gov.in

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ