ರೈಲು ಟಿಕೆಟ್‌ನಲ್ಲಿರುವ WL RSWL PQWL GNWL RAC CNF ಇತ್ಯಾದಿ 10 ಕೋಡ್‌ಗಳ ಅರ್ಥ ಇಲ್ಲಿದೆ ನೋಡಿ, ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ
Railway ticket code Meaning: ಪ್ರತಿನಿತ್ಯ ರೈಲಲ್ಲಿ ಪ್ರಯಾಣಿಸುವರು ಕೂಡ ರೈಲು ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ವಿವಿಧ ಕೋಡ್‌ವರ್ಡ್ ನೋಡಿ ಗೊಂದಲಕ್ಕೆ ಈಡಾಗುತ್ತಾರೆ. WL RSWL PQWL GNWL PNR RAC CNF CAN ಇತ್ಯಾದಿ ಹತ್ತು ಕೋಡ್‌ವರ್ಡ್‌ಗಳ ಕುರಿತು ವಿವರವನ್ನು ಇಲ್ಲಿ ನೀಡಲಾಗಿದೆ.
ಭಾರತೀಯ ರೈಲ್ವೆಯ ರೈಲು ಪ್ರಯಾಣವನ್ನು ಬಹುತೇಕರು ಇಷ್ಟಪಡುತ್ತಾರೆ. ಬಸ್‌ನಲ್ಲಿಯಾದರೆ ದೂರ ಪ್ರಯಾಣದಿಂದ ಸುಸ್ತಾಗುತ್ತದೆ, ರೈಲಿನಲ್ಲಿ ಆರಾಮವಾಗಿ ಪ್ರಯಾಣಿಸಬಹುದು ಎಂದು ಹೆಚ್ಚಿನವರ ಅಭಿಪ್ರಾಯ. ನಿತ್ಯ ರೈಲನ್ನು ಸಾವಿರಾರು, ಲಕ್ಷಾಂತರ ಜನರು ಅವಲಂಬಿಸಿದ್ದಾರೆ. ಪ್ರತಿನಿತ್ಯ ರೈಲಲ್ಲಿ ಪ್ರಯಾಣಿಸುವರು ಕೂಡ ರೈಲು ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ವಿವಿಧ ಕೋಡ್‌ವರ್ಡ್ ನೋಡಿ ಗೊಂದಲಕ್ಕೆ ಈಡಾಗುತ್ತಾರೆ. ನಮಗೆ ಟಿಕೆಟ್ ಕನ್‌ಫರ್ಮ್ ಆಯ್ತಾ, ಇಲ್ವ ಎಂದು ಆಲೋಚಿಸುತ್ತಾರೆ. ಭಾರತೀಯ ರೈಲ್ವೆಯಲ್ಲಿ ಹಲವು ವಿಷಯಗಳು ಕೋಡ್‌ವರ್ಡ್‌ನಲ್ಲಿರುತ್ತವೆ. ಕಾಯುವಿಕೆ ಪಟ್ಟಿಯಲ್ಲಿದ್ದರೆ ಡಬ್ಲ್ಯುಎಲ್. ಇದೇ ರೀತಿ ಹಲವು ಕೋಡ್‌ಗಳು ಇವೆ. WL RSWL PQWL GNWL PNR RAC CNF CAN ಇತ್ಯಾದಿ ಹತ್ತು ಕೋಡ್‌ವರ್ಡ್‌ಗಳ ಕುರಿತು ವಿವರವನ್ನು ಇಲ್ಲಿ ನೀಡಲಾಗಿದೆ.
ರೈಲು ಟಿಕೆಟ್‌ನ ಕೋಡ್ ಮತ್ತು ಅದರ ಅರ್ಥ
- ಪಿಎನ್‌ಆರ್ (PNR): ಪ್ಯಾಸೆಂಜರ್ ನೇಮ್ ರೆಕಾರ್ಡ್ ಅಥವಾ ಪ್ರಯಾಣಿಕರ ಹೆಸರಿನ ದಾಖಲೆ. ಇದು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ ಸಂದರ್ಭದಲ್ಲಿ ಸೃಜನೆಯಾಗುವಂತಹ ಸಂಖ್ಯೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲೂ ಇದೇ ರೀತಿಯ ಪಿಎನ್‌ಆರ್ ಸಂಖ್ಯೆ ಇರುತ್ತದೆ.
- ಡಬ್ಲ್ಯುಎಲ್ (WL): ವೈಟಿಂಗ್ ಲಿಸ್ಟ್ ಅಥವಾ ಕಾಯುವಿಕೆ ಪಟ್ಟಿ. ಇದು ಬಹುತೇಕರಿಗೆ ತಿಳಿದಿರುವಂತಹ ಅಂಶ. ಕಾಯುವಿಕೆ ಪಟ್ಟಿಯಲ್ಲಿ ಪ್ರತಿನಿತ್ಯ ಸಾಕಷ್ಟು ಜನರು ತಮ್ಮ ಟಿಕೆಟ್ ಖಚಿತಗೊಳ್ಳಲು ಕಾಯುತ್ತಿರುತ್ತಾರೆ. ಪ್ರಯಾಣಿಕರು ರೈಲು ಹೊರಡುವ 30 ನಿಮಿಷಗಳ ಮೊದಲು ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್ ಕ್ಯಾನ್ಸಲ್ ಮಾಡಬಹುದು. ವೇಟಿಂಗ್ ಲಿಸ್ಟ್‌ನಲ್ಲಿರುವ ಟಿಕೆಟ್‌ಗೆ ಸೀಟು ಖಚಿತಗೊಳ್ಳದೆ ಇದ್ದರೆ ಸ್ವಯಂಚಾಲಿತವಾಗಿ ಟಿಕೆಟ್ ರದ್ದಾಗುತ್ತದೆ.
- ಆರ್‌ಎಸ್‌ಡಬ್ಲ್ಯುಎಲ್ (RSWL): ರೋಡ್‌ಸೈಡ್ ಸ್ಟೇಷನ್ ವೇಟಿಂಗ್ ಲಿಸ್ಟ್. ಮೂಲ ನಿಲ್ದಾಣದಿಂದ ರೋಡ್ ಸೈಡ್ ಸ್ಟೇಷನ್‌ವರೆಗೆ ಪ್ರಯಾಣಿಸಲು ಅನುಮತಿ ದೊರಕುತ್ತದೆ. ಆದರೆ, ಕಾಯುವಿಕೆ ಪಟ್ಟಿಯಲ್ಲೂ ಸೀಟು ಖಚಿತಗೊಳ್ಳುವುದು ಕಷ್ಟ.
- ಆರ್‌ಕ್ಯೂಡಬ್ಲ್ಯುಎಲ್ (RQWL): ಒಂದು ಇಂಟರ್‌ಮೀಡಿಯೇಟ್ ಸ್ಟೇಷನ್‌ನಿಂದ ಮತ್ತೊಂದು ಇಂಟರ್‌ಮೀಡಿಯೇಟ್ ಸ್ಟೇಷನ್‌ವರೆಗೆ ಟಿಕೆಟ್ ಬುಕ್ ಮಾಡಿದರೆ, ಜನರಲ್ ಕೋಟಾ ಅಥವಾ ರಿಮೋಟ್ ಲೊಕೆಷನ್ ಕೋಟಾದಲ್ಲಿ ಬಾರದೆ ಇದ್ದರೆ ಈ ಟಿಕೆಟ್ ವಿನಂತೆ ಆರ್‌ಕ್ಯೂಡಬ್ಲ್ಯುಎಲ್‌ನಲ್ಲಿ ಇರುತ್ತದೆ.
- ಆರ್‌ಎಸಿ (RAC): ಎಲ್ಲಾದರೂ ಪ್ರಯಾಣಿಕರೊಬ್ಬರಿಗೆ ಆರ್‌ಎಸಿ ಟಿಕೆಟ್ ದೊರಕಿದರೆ ಚಾರ್ಟ್ ರೆಡಿಯಾಗುವ ಹಂತದಲ್ಲಿ ಟಿಕೆಟ್ ದೊರಕುವ ಸಾಧ್ಯತೆ ಹೆಚ್ಚಿರುತ್ತದೆ. ಆತ ರೈಲಿನೊಳಗೆ ಹೋಗಬಹುದು. ಚಾರ್ಟ್ ಸಿದ್ಧವಾದ ಬಳಿಕವೂ ಟಿಕೆಟ್ ಆರ್‌ಎಸಿಯಲ್ಲಿ ಇದ್ದರೆ ಆ ಪ್ರಯಾಣಿಕರಿಗೆ ಅರ್ಧ ಸೀಟು ದೊರಕುತ್ತದೆ. ಅಂದರೆ, ಒಂದು ಸ್ಲೀಪರ್ ಸೀಟ್‌ನಲ್ಲಿ ಇಬ್ಬರು ಕುಳಿತುಕೊಂಡು ಪ್ರಯಾಣಿಸಬೇಕು.
- ಸಿಎನ್‌ಎಫ್ (CNF): ಈ ಸನ್ನಿವೇಶದಲ್ಲಿ ಪ್ರಯಾಣಿಕರನಿಗೆ ಟಿಕೆಟ್‌ನಲ್ಲಿ ಬರ್ತ್ ವಿವರ ಖಚಿತಗೊಂಡಿಲ್ಲದೆ ಇದ್ದರೂ ಆತನಿಗೆ ಪೂರ್ತಿ ಬರ್ತ್ ಖಚಿತವಾಗಿ ದೊರಕುತ್ತದೆ. ಟಿಟಿಇ ಅವರು ಲಭ್ಯವಿರುವ ಸೀಟುಗಳನ್ನು ನೀಡುತ್ತಾರೆ.
- ಸಿಎಎನ್ (CAN): ಪ್ರಯಾಣಿಕರ ಸೀಟು ಕ್ಯಾನ್ಸಲ್ ಆಗಿದೆ ಎಂದು ಇದರ ಅರ್ಥವಾಗಿದೆ.
- ಜಿಎನ್‌ಡಬ್ಲ್ಯುಎಲ್: ಜನರಲ್ ವೇಟಿಂಗ್ ಲಿಸ್ಟ್ ಎಂದರೆ, ಪ್ರಯಾಣಿಕರು ತಮ್ಮ ಟಿಕೆಟ್ ಕ್ಯಾನ್ಸಲ್ ಮಾಡಿದ ಬಳಿಕ ಖಾಲಿಯಾಗುವ ಸೀಟುಗಳಲ್ಲಿ ದೊರಕಬಹುದಾದ ಅವಕಾಶ ಎಂದು ಅರ್ಥ ಮಾಡಿಕೊಳ್ಳಬಹುದು. ಯಾರಾದರೂ ಬುಕ್ ಮಾಡಿರುವ ಸೀಟ್ ಕ್ಯಾನ್ಸಲ್ ಮಾಡಿದರೆ ನಿಮಗೆ ಟಿಕೆಟ್ ದೊರಕುತ್ತದೆ.
- ಟಿಕ್ಯುಡಬ್ಲ್ಯುಎಲ್ (TQWL): ತತ್ಕಾಲ್ ವೈಟ್‌ಲಿಸ್ಟ್ ಎಂದು ಇದರ ಅರ್ಥವಾಗಿದೆ. ತತ್ಕಾಲ್ ಬುಕ್ಕಿಂಗ್ ಸಮಯದಲ್ಲಿ ಈ ರೀತಿಯ ಕಾಯುವಿಕೆ ಪಟ್ಟಿಯಲ್ಲಿರುವ ಟಿಕೆಟ್‌ಗಳು ಇರುತ್ತವೆ. ಆದರೆ, ಈ ಸೀಟುಗಳು ಖಚಿತಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.
- ಪಿಕ್ಯುಡಬ್ಲ್ಯುಎಲ್ (PQWL): ಪೂಲ್ಡ್ ಕ್ವೋಟಾ ವೈಟ್‌ಲಿಸ್ಟ್. ಪ್ರಯಾಣಿಕರು ಇಂಟರ್‌ಮೀಡಿಯೇಟ್ ಸ್ಟೇಷನ್‌ಗಳ ನಡುವೆ ಪ್ರಯಾಣಿಸುತ್ತಾರೆ. ಅವರಿಗೆ ಜನರಲ್ ವೈಟ್‌ಲಿಸ್ಟ್ ಬದಲು ಪ್ರತ್ಯೇಕ ಕಾಯುವಿಕೆ ಪಟ್ಟಿ ಇರುತ್ತದೆ.
ಹೀಗೆ, ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವ ಸಮಯದಲ್ಲಿ ಕಾಣಿಸುವ ವಿವಿಧ ಕೋಡ್‌ಗಳಿಗೆ ವಿವಿಧ ಅರ್ಥಗಳು ಇರುತ್ತವೆ. ಕೆಲವೊಂದು ಕೋಡ್‌ಗಳಲ್ಲಿ ಟಿಕೆಟ್ ದೊರಕುವ ಸಾಧ್ಯತೆ ಇರುತ್ತದೆ. ಇನ್ನು ಕೆಲವು ಕೋಡ್‌ಗಳು ಟಿಕೆಟ್ ದೊರಕುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಸೂಚಿಸುತ್ತವೆ. ಈ ಕೋಡ್ ಅರ್ಥ ಮಾಡಿಕೊಳ್ಳದೆ ಇದ್ದರೆ ಟಿಕೆಟ್ ಬುಕ್ಕಿಂಗ್ ಮಾಡಿದ್ದೇವೆ ಎಂದು ರೈಲಿನೊಳಗೆ ಪ್ರವೇಶಿಸಿ ಬಳಿಕ ಅಲ್ಲಿ ಸೀಟು ದೊರಕದೆ ತೊಂದರೆಗೆ ಈಡಾಗಬೇಕಾಗುತ್ತದೆ. ಹೀಗಾಗಿ ಈ ಕೋಡ್‌ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಷೇರ್ ಮಾಡಿ.