logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಿಯಾ ಇವಿ9 ಬಿಡುಗಡೆ, ದರ 1.29 ಕೋಟಿ ರೂಪಾಯಿ; ಪೆಟ್ರೋಲ್‌, ಡೀಸೆಲ್‌ ಇಲ್ಲದೇ 561 ಕಿಮೀ ಸಂಚರಿಸುತ್ತೆ!

ಕಿಯಾ ಇವಿ9 ಬಿಡುಗಡೆ, ದರ 1.29 ಕೋಟಿ ರೂಪಾಯಿ; ಪೆಟ್ರೋಲ್‌, ಡೀಸೆಲ್‌ ಇಲ್ಲದೇ 561 ಕಿಮೀ ಸಂಚರಿಸುತ್ತೆ!

Praveen Chandra B HT Kannada

Oct 03, 2024 03:51 PM IST

google News

ಕಿಯಾ ಇವಿ9 ಬಿಡುಗಡೆ, ದರ 1.29 ಕೋಟಿ ರೂಪಾಯಿ

    • ಕಿಯಾ ಇಂಡಿಯಾವು ಇವಿ9 ಎಂಬ ಎಲೆಕ್ಟ್ರಿಕ್‌ ವಾಹನವನ್ನು ಭಾರತಕ್ಕೆ ಪರಿಚಯಿಸಿದೆ. ಇದರ ದರ 1.29 ಕೋಟಿ ರೂಪಾಯಿ ಇದೆ. ಇದು 378 ಬಿಎಚ್‌ಪಿ ಮೋಟಾರ್‌ ಹೊಂದಿದೆ. 5.3 ಸೆಕೆಂಡ್‌ನಲ್ಲಿ ಗಂಟೆಗೆ ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಫುಲ್‌ ಚಾರ್ಜ್‌ಗೆ 561 ಕಿ.ಮೀ. ರೇಂಜ್‌ ನೀಡುತ್ತದೆ.
ಕಿಯಾ ಇವಿ9 ಬಿಡುಗಡೆ, ದರ 1.29 ಕೋಟಿ ರೂಪಾಯಿ
ಕಿಯಾ ಇವಿ9 ಬಿಡುಗಡೆ, ದರ 1.29 ಕೋಟಿ ರೂಪಾಯಿ

ಬೆಂಗಳೂರು: ಕಿಯಾ ಇಂಡಿಯಾವು ಭಾರತದ ಮಾರುಕಟ್ಟೆಗೆ ಎಲೆಕ್ಟ್ರಿಕ್‌ ವಾಹನವನ್ನು ಪರಿಚಯಿಸಿದೆ. ಇವಿ9 ಎಂಬ ನೂತನ ಎಲೆಕ್ಟ್ರಿಕ್‌ ವಾಹನವು ದುಬಾರಿ ಇವಿ ಕೂಡ ಹೌದು. ಇದರ ದರ 1.29 ಕೋಟಿ ರೂಪಾಯಿ ಇದೆ. ಇದು ಕೇವಲ ಜಿಟಿ ಲೈನ್‌ ಎಂಬ ಒಂದೇ ಒಂದು ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಇಂದು ಕಿಯಾ ಕಂಪನಿಯು ಬಹುನಿರೀಕ್ಷಿತ ಕಾರ್ನಿವಲ್‌ ಎಂಪಿವಿ ಜತೆಗೆ ನೂತನ ಕಿಯಾ ಇವಿ9 ಎಂಬ ಇವಿ ಪರಿಚಯಿಸಿದೆ.

ಕಿಯಾ ಇವಿ9 ಸ್ಪೆಸಿಫಿಕೇಷನ್‌ ಏನು?

ಕಿಯಾ ಇವಿ9 ಎನ್ನುವುದು ಎಲೆಕ್ಟ್ರಿಕ್‌ ಮೋಟಾರ್‌ ಹೊಂದಿದೆ. ಇದು ಫ್ರಂಟ್‌ ಆಕ್ಸಿಲ್‌ನಲ್ಲಿ ಇದೆ. ಗರಿಷ್ಠ 378 ಗರಿಷ್ಠ ಪವರ್‌ ಮತ್ತು 700 ಎನ್‌ಎಂ ಪೀಕ್‌ ಟಾರ್ಕ್‌ ಒದಗಿಸುತ್ತದೆ. ಕೇವಲ 5.3 ಸೆಕೆಂಡಿನಲ್ಲಿ ಗಂಟೆಗೆ 0-100 ಕಿ.ಮೀ. ಆಕ್ಸಿಲರೇಷನ್‌ ಪಡೆಯುತ್ತದೆ. ಈ ಕಾರಿನಲ್ಲಿ ಡ್ರೈವ್‌ ಮೋಡ್‌ ಮತ್ತು ಟೆರೈನ್‌ ಮೋಡ್‌ ಎಂಬ ಎರಡು ಆಯ್ಕೆಯ ಚಾಲನಾ ವ್ಯವಸ್ಥೆ ಇದೆ.

ಕಿಯಾ ಇವಿ9 ರೇಂಜ್‌ ಏನು?

ಕಿಯಾ ಇಂಡಿಯಾದ ಪ್ರಕಾರ ನೂತನ ಇವಿ9 ಫುಲ್‌ ಚಾರ್ಜ್‌ಗೆ 561 ಕಿ.ಮೀ. ಸಾಗಲಿದೆ. ಇದು 99.8 ಕಿಲೋವ್ಯಾಟ್‌ ಬ್ಯಾಟರಿ ಪ್ಯಾಕ್‌ ಹೊಂದಿದೆ. ಇದು 350 ಕಿಲೋವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ಗೂ ಬೆಂಬಲ ನೀಡುತ್ತದೆ. 10-80 ಪರ್ಸೆಂಟ್‌ ಚಾರ್ಜ್‌ ಕೇವಲ 24 ನಿಮಿಷಗಳಲ್ಲಿ ಆಗಲಿದೆ.

ಕಿಯಾ ಇವಿ9 ಪ್ಲಾಟ್‌ಫಾರ್ಮ್‌ ಯಾವುದು?

ಕಿಯಾ ಇವಿ9 ಕಾರು ಇ-ಜಿಎಂಪಿ ಎಂಬ ಪ್ಲಾಟ್‌ಫಾರ್ಮ್‌ನಲ್ಲಿ ರಚನೆಯಾಗಿದೆ. ಇದೇ ಪ್ಲಾಟ್‌ಫಾರ್ಮ್‌ ಕಿಯಾ ಮತ್ತು ಹ್ಯುಂಡೈ ಹಂಚಿಕೊಂಡಿದೆ. ಕಿಯಾ ಇವಿ9 ಸುಮಾರು 198 ಎಂಎಂ ಗ್ರೌಂಡ್‌ ಕ್ಲೀಯರೆನ್ಸ್‌ ಹೊಂದಿದೆ.

ಯಾವೆಲ್ಲ ಸುರಕ್ಷತಾ ಫೀಚರ್‌ಗಳಿವೆ?

ಸುರಕ್ಷತೆಯ ದೃಷ್ಟಿಯಿಂದ ನೂತನ ಕಾರಿನಲ್ಲಿ ಸಾಕಷ್ಟು ಫೀಚರ್‌ಗಳಿವೆ. ಮಮಲ್ಟಿ ಕಲಿಷನ್‌ ಬ್ರೇಕ್‌ಗಳು, ವೆಹಿಕಲ್‌ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್‌, ಟಿಪಿಎಂಎಸ್‌, 10 ಏರ್‌ಬ್ಯಾಗ್‌ಗಳು ಸೇರಿದಂತೆ ಸಾಕಷ್ಟು ಸುರಕ್ಷತಾ ಫೀಚರ್‌ಗಳಿವೆ. ಇದು 27 ಆಟೋನಮಸ್‌ ಎಡಿಎಎಸ್‌ ಫೀಚರ್‌ಗಳನ್ನೂ ಹೊಂದಿದೆ.

ಈ ಹಿಂದೆ ಅನಾವರಣ ಮಾಡಿದ ಕಾನ್ಸೆಪ್ಟ್‌ ಕಾರು

ಕಿಯಾ ಇವಿ9ನಲ್ಲಿ ಯಾವೆಲ್ಲ ಫೀಚರ್‌ಗಳಿವೆ?

ಕಿಯಾ ಇವಿ9ನಲ್ಲಿ ಆಟೋಮ್ಯಾಟಿಕ್‌ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಪ್ರಾಜೆಕ್ಟರ್‌ ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು, ಲೆದರೆಟ್‌ ಸೀಟುಗಳು, ಏಂಬಿಯೆಂಟ್‌ ಲೈಟಿಂಗ್‌, ಸ್ಮಾರ್ಟ್‌ ಪವರ್‌ ಟೇಲ್‌ಗೇಟ್‌, ಶಿಫ್ಟ್‌ ಬೈ ವೈರ್‌, ಎಲೆಕ್ಟ್ರಾನಿಕ್‌ ಪಾರ್ಕಿಂಗ್‌ ಪಾರ್ಕಿಂಗ್‌ಬ್ರೇಕ್‌ ಮುಂತಾದ ಫೀಚರ್‌ಗಳಿವೆ. ಮುಂಭಾಗದ ಸೀಟುಗಳಿಗೆ ಎಲೆಕ್ಟ್ರಾನಿಕ್ ಅಜೆಸ್ಟ್‌ಮೆಂಟ್‌ ಫೀಚರ್ಸ್‌ ಇವೆ. ಕೂಲ್ಡ್‌ ವೈರ್‌ಲೆಸ್‌ ಚಾರ್ಜರ್‌, ಹೆಡ್ಸ್‌ ಅಪ್‌ ಡಿಸ್‌ಪ್ಲೇ, 3 ಝೋನ್‌ನ ಕ್ಲೈಮೇಟ್‌ ಕಂಟ್ರೋಲ್‌, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ಗಳು ಸೇರಿದಂತೆ ಸಾಕಷ್ಟು ಫೀಚರ್‌ಗಳನ್ನು ಕಿಯಾ ಇವಿ9ನೊಳಗೆ ಗುರುತಿಸಬಹುದು.

ಇಲ್ಲಿಗೆ ಭೇಟಿ ನೀಡಿ>> ವಾಹನ ಪ್ರಪಂಚ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ