logo
ಕನ್ನಡ ಸುದ್ದಿ  /  ಜೀವನಶೈಲಿ  /  ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಸಿದ 15 ಕಾರುಗಳ ನಂಬರ್‌ 1953 ಏಕೆ? ಮೈಸೂರು ರಾಜವಂಶಸ್ಥರ ಕಾರುಪ್ರೇಮ

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಸಿದ 15 ಕಾರುಗಳ ನಂಬರ್‌ 1953 ಏಕೆ? ಮೈಸೂರು ರಾಜವಂಶಸ್ಥರ ಕಾರುಪ್ರೇಮ

Praveen Chandra B HT Kannada

Oct 08, 2024 05:00 PM IST

google News

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಸಿದ 15 ಕಾರುಗಳ ನಂಬರ್‌ 1953 ಏಕೆ?

    • Vintage Car Museum Mysore: ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ಗೆ ಕಾರುಗಳೆಂದರೆ ಅಚ್ಚುಮೆಚ್ಚು. ಅವರ ಗ್ಯಾರೇಜ್‌ನಲ್ಲಿರುವ ಹದಿನೈದು ಲಗ್ಷುರಿ ಕಾರುಗಳ ನಂಬರ್‌ ಪ್ಲೇಟ್‌ನಲ್ಲಿ 1953 ಸಂಖ್ಯೆ ಇದೆ. ಇವರು ಫೋರ್ಡ್‌, ಬಿಎಂಡಬ್ಲ್ಯು, ಮರ್ಸಿಡಿಸ್‌ ಬೆಂಜ್‌ ಕಾರುಗಳನ್ನು ಸ್ವತಃ ತಾವೇ ಡ್ರೈವ್‌ ಮಾಡುತ್ತಿದ್ದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಸಿದ 15 ಕಾರುಗಳ ನಂಬರ್‌ 1953 ಏಕೆ?
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಸಿದ 15 ಕಾರುಗಳ ನಂಬರ್‌ 1953 ಏಕೆ?

ಮೈಸೂರು ಅರಮನೆ ದಸರಾ ಸಂಭ್ರಮದಲ್ಲಿದೆ. ಇದೇ ಸಮಯದಲ್ಲಿ ಮೈಸೂರು ಅರಮನೆಯಲ್ಲಿ ಆಯುಧ ಪೂಜೆಯೂ ನಡೆಯಲಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗ್ಯಾರೇಜ್‌ನಲ್ಲಿರುವ ಹದಿನೈದು ಲಗ್ಷುರಿ ಕಾರುಗಳು ಸೇರಿದಂತೆ ಎಲ್ಲಾ ವಾಹನಗಳಿಗ ವಾಹನ ಪೂಜೆಯು ಪ್ರತಿವರ್ಷ ಸಂಪ್ರದಾಯದಂತೆ ನಡೆಯಲಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಸಿದ 15 ಕಾರುಗಳ ನಂಬರ್‌ ಪ್ಲೇಟ್‌ ನೋಡಿದರೆ ಅಚ್ಚರಿಯಾಗದೆ ಇರದು. ಏಕೆಂದರೆ, ಅವರು ಬಳಸಿದ ಎಲ್ಲಾ ಕಾರುಗಳ ನಂಬರ್‌ ಪ್ಲೇಟ್‌ ಸಂಖ್ಯೆ 1953. ಇದೇ ನಂಬರ್‌ ಅನ್ನು ತನ್ನ ವಾಹನಗಳ ನಂಬರ್‌ಪ್ಲೇಟ್‌ನಲ್ಲಿ ಯಾಕೆ ಬಳಸಿದ್ದಾರೆ? ಇದರ ಹಿಂದೆ ಏನಾದರೂ ಕಾರಣವಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಮೊದಲು ಮೈಸೂರು ರಾಜರ ಕಾರುಪ್ರೇಮದ ಬಗ್ಗೆ ತಿಳಿಯೋಣ.

ಮೈಸೂರು ಮತ್ತು ಧರ್ಮಸ್ಥಳದಲ್ಲಿ ಹಳೆಯ ವಾಹನಗಳ ಸಂಗ್ರಹಾಲಯವನ್ನು ನೀವು ನೋಡಿರಬಹುದು. ಹಳೆ ಕಾಲದ ವಾಹನಗಳು ಹೇಗಿದ್ದವು? ಈಗಿನ ವಾಹನಗಳು ಹೇಗೆ ಇದ್ದಾವೆ? ವಾಹನಗಳ ಇತಿಹಾಸದ ಅಧ್ಯಯನಕ್ಕೆ ಇಂತಹ ಹಳೆಯ ವಾಹನಗಳು ಪೂರಕ. ಇಂತಹ ಹಳೆಕಾಲದ ಅಪರೂಪದ ಸಂಗ್ರಹವು ಮೈಸೂರಿನಲ್ಲಿದೆ. Payana Vintage Car Museumಗೆ ಭೇಟಿ ನೀಡಿದಾಗ ಹಲವು ಹಳೆಯ ಕಾರುಗಳ ದರ್ಶನವಾಗುತ್ತದೆ.

ಮೈಸೂರು ರಾಜವಂಶಸ್ಥರ ಕಾರುಪ್ರೇಮ

ಮೈಸೂರಿನ ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ಗೆ ವಾಹನಗಳೆಂದರೆ ಅತೀವ ಆಸಕ್ತಿ. ಫೋರ್ಡ್‌ನಲ್ಲಿ ಷೇರು ಹೊಂದಿರುವ ಕಾರಣ ಫೋರ್ಡ್‌ ಕಂಪನಿಯ ಎಲ್ಲಾ ಹೊಸ ಕಾರುಗಳು ಅರಮನೆ ತಲುಪುತ್ತಿದ್ದವು. ಬಿಎಂಡಬ್ಲ್ಯು 5 ಸೀರಿಸ್‌ ಮತ್ತು ಮರ್ಸಿಡಿಸ್‌ ಬೆಂಜ್‌ ಕಾರುಗಳು ಇವರಿಗೆ ಅಚ್ಚುಮೆಚ್ಚು. ಆ ಸಮಯದಲ್ಲಿ ಒಡೆಯರ್‌ ಐದು ಮರ್ಸಿಡಿಸ್‌ ಬೆಂಜ್‌ ಕಾರುಗಳನ್ನು ಹೊಂದಿದ್ದರು. ನಂತರ ಬಿಎಂಡಬ್ಲ್ಯು ಕಾರುಗಳತ್ತ ಆಕರ್ಷಿತರಾದರು. ಫೋರ್ಡ್‌ ಎಂಡೋವರ್‌ ಸೇರಿದಂತೆ ಎಲ್ಲಾ ಫೋರ್ಡ್‌ ಕಾರುಗಳನ್ನು ಇವರು ಚಾಲನೆ ಮಾಡುತ್ತಿದ್ದರು. ಇವರ ಕಾರುಗಳು ಮೈಸೂರು ಅರಮನೆಯಲ್ಲಿವೆ.

ರಾಜವಂಶಸ್ಥರೆಂದರೆ ಚಾಲಕರನ್ನು ಇಟ್ಟುಕೊಂಡು ಸವಾರಿ ಹೊರಡುತ್ತಾರೆ ಎಂದುಕೊಂಡರೆ ತಪ್ಪಾದೀತು. ಇವರಿಗೆ ವಾಹನ ಚಾಲನೆ ಕುರಿತು ಅಪಾರ ಆಸಕ್ತಿ ಇತ್ತು. ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಪ್ರಕಾರ ಇವರೇ ಆಗಾಗ ಕಾರು ಚಾಲನೆ ಮಾಡುತ್ತ ಲಾಂಗ್‌ಡ್ರೈವ್‌ ಹೋಗುತ್ತಿದ್ದರಂತೆ. ತನ್ನ ಪತ್ನಿ ಪ್ರಮೋದ ದೇವಿ ಅಥವಾ ಚಾಲಕರೊಬ್ಬರನ್ನು ಜತೆಯಾಗಿ ಕರೆದುಕೊಂಡು ಹೋಗುತ್ತಿದ್ದರಂತೆ.

ಪ್ರಮೋದ ದೇವಿಯವರ ಬಳಿಕ ಮರ್ಸಿಡಿಸ್‌ ಬೆಂಜ್‌ ಕಾರಿದೆ. ಇದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಉಡುಗೊರೆಯಾಗಿ ನೀಡಿದ ಕಾರು.

ಕಾರುಗಳ ನಂಬರ್‌ ಪ್ಲೇಟ್‌ ಸಂಖ್ಯೆ 1953 ಏಕೆ?

ತನ್ನ ಹದಿನೈದು ಐಷಾರಾಮಿ ಕಾರುಗಳ ನಂಬರ್‌ ಪ್ಲೇಟ್‌ಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು 1953 ಸಂಖ್ಯೆ ಇರಿಸಿದ್ದರು. ತಾನು ಹುಟ್ಟಿದ ವರ್ಷವನ್ನ ನಂಬರ್‌ಪ್ಲೇಟ್‌ ಸಂಖ್ಯೆಯಾಗಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ