logo
ಕನ್ನಡ ಸುದ್ದಿ  /  ಜೀವನಶೈಲಿ  /  Beauty Tips: ಕುಂಬಳಕಾಯಿ ಬೀಜದಿಂದ ಡ್ರೈಫ್ರೂಟ್ಸ್‌ವರೆಗೆ ತ್ವಚೆಯ ಕಾಂತಿ ಅರಳಿಸುವ ಸತುವಿನಂಶ ಇರುವ ಪದಾರ್ಥಗಳಿವು

Beauty Tips: ಕುಂಬಳಕಾಯಿ ಬೀಜದಿಂದ ಡ್ರೈಫ್ರೂಟ್ಸ್‌ವರೆಗೆ ತ್ವಚೆಯ ಕಾಂತಿ ಅರಳಿಸುವ ಸತುವಿನಂಶ ಇರುವ ಪದಾರ್ಥಗಳಿವು

HT Kannada Desk HT Kannada

Jun 11, 2023 06:00 PM IST

google News

ತ್ವಚೆಯ ಅಂದಕ್ಕೆ ಬೇಕು ಸತುವಿನಂಶ ಇರುವ ಆಹಾರ ಪದಾರ್ಥಗಳು

    • ದೇಹದಲ್ಲಿ ಸತುವಿನಂಶ ಕಡಿಮೆಯಾಗುವುದರಿಂದ ಚರ್ಮದ ಸಮಸ್ಯೆಗಳು ಕಾಣಿಸುತ್ತವೆ. ಇದರಿಂದ ಚರ್ಮ ಕಳೆಗುಂದಬಹುದು. ಆದರೆ ಸತುವಿನಂಶ ಹೆಚ್ಚಿರುವ ಆಹಾರ ಸೇವನೆಯಿಂದ ತ್ವಚೆಯನ್ನು ಸದಾ ಹೊಳೆಯವಂತೆ ಮಾಡಬಹುದು. ಅಂತಹ ಆಹಾರಗಳು ಯಾವುವು ನೋಡಿ. 
ತ್ವಚೆಯ ಅಂದಕ್ಕೆ ಬೇಕು ಸತುವಿನಂಶ ಇರುವ ಆಹಾರ ಪದಾರ್ಥಗಳು
ತ್ವಚೆಯ ಅಂದಕ್ಕೆ ಬೇಕು ಸತುವಿನಂಶ ಇರುವ ಆಹಾರ ಪದಾರ್ಥಗಳು

ತಮ್ಮ ಚರ್ಮ ಪ್ರತಿದಿನ ಕಾಂತಿಯುತವಾಗಿರಬೇಕು, ಮೃದುವಾಗಿರಬೇಕು, ಹೊಳಪಿನಿಂದ ಕಂಗೊಳಿಸಬೇಕು ಎಂಬುದು ಹೆಣ್ಣುಮಕ್ಕಳ ಆಸೆ. ಆದರೆ, ದಿನ ಕಳೆದಂತೆ ಕೆಲವರ ಚರ್ಮ ಹೊಳಪನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಸತು (zinc) ಅಂಶ ಕಡಿಮೆಯಾಗಿರುವುದು ಕೂಡ ಕಾರಣ ಎನ್ನುತ್ತಾರೆ ತಜ್ಞರು. ಚರ್ಮ ಆರೋಗ್ಯಕ್ಕೆ ಬೇಕಾಗುವ ಮುಖ್ಯ ಪೋಷಕಾಂಶಗಳಲ್ಲಿ ಸತು ಕೂಡ ಒಂದು.

ಆದರೆ, ದೇಹದಲ್ಲಿ ಸತುವಿನ ಅಂಶವನ್ನು ವೃದ್ಧಿಸಿಕೊಳ್ಳುವುದು ಹೇಗೆ? ಅದರ ಮೂಲ ಯಾವುದು ಎಂಬುದು ತಿಳಿದಿರುವುದಿಲ್ಲ. ಯಾವ ಆಹಾರವನ್ನು ಸೇವಿಸಿದರೆ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿವೆ 5 ಮುಖ್ಯ ಆಹಾರಗಳು. ಇವು ಚರ್ಮದ ಆರೋಗ್ಯವನ್ನು ಸುಧಾರಿಸುವ ಜೊತೆಗೆ ಒಟ್ಟಾರೆ ದೇಹದ ಆರೋಗ್ಯ ವೃದ್ಧಿಗೂ ಸಹಕಾರಿ.

ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ಸತುವಿನ ಅಂಶ ಹೆಚ್ಚಿರುತ್ತವೆ. ಆದರೆ, ಮಹಿಳೆಯರು ಕೆಲಸದ ಒತ್ತಡದ ನಡುವೆ ತಾವು ಸೇವಿಸುವ ಆಹಾರವನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಚರ್ಮ ಒಣಗುತ್ತದೆ. ಚರ್ಮದ ಮೇಲೆ ತೆಳುವಾದ ತೇವಾಂಶ, ಮೃದುತ್ವ ಇದ್ದರೆ ಬಣ್ಣಕ್ಕಿಂತ ಚರ್ಮದ ಕಾಂತಿಯೇ ಆರೋಗ್ಯಕರ ನೋಟ ಸಿಗುವಂತೆ ಮಾಡುತ್ತದೆ.

ಮುಖ್ಯವಾಗಿ ಸಂಸ್ಕರಿಸಿದ ಹಾಗೂ ಸಕ್ಕರೆ ಪದಾರ್ಥಗಳಿಂದ ದೂರವಿರಬೇಕು. ಹಣ್ಣು, ತರಕಾರಿ ಹಾಗೂ ಮನೆಯಲ್ಲೇ ಬೇಯಿಸಿದ ಆಹಾರವನ್ನು ಸೇವಿಸುವುದು ಒಳ್ಳೆಯದು. ಸತುವಿನಂಶ ಕಡಿಮೆಯಾದರೆ ರೋಗ ನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ಈ ಅಂಶವೂ ಅಕಾಲಿಕ ಪ್ರಾಯವನ್ನು ತಡೆಯುತ್ತದೆ. ಇದರಲ್ಲಿ ಇದು ಉರಿಯೂತವನ್ನು ನಿವಾರಿಸುವ ಜೊತೆಗೆ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸುತ್ತದೆ. ಸೂರ್ಯನ ಕಿರಣಗಳಿಂದ ಟ್ಯಾನ್‌ ಆಗದಂತೆ ಹಾಗೂ ಚರ್ಮ ಕಳೆಗುಂದಂತೆ ಕಾಪಾಡಲಿದೆ.

ಚರ್ಮದ ಕಾಂತಿಗೆ ಅಗತ್ಯವಿರುವ ಸತುವಿನ ಆಹಾರಗಳು

ಡ್ರೈ ಫ್ರೂಟ್ಸ್‌

ಬಾದಾಮಿ, ಗೋಡಂಬಿ, ವಾಲ್‌ನಟ್‌, ಪಿಸ್ತಾ ಇವುಗಳಲ್ಲಿ ಸತುವಿನ ಅಂಶ ಸಮೃದ್ಧವಾಗಿರುತ್ತವೆ.

ಆರೋಗ್ಯಕರ ಕೊಬ್ಬಿನಾಂಶವೂ ಇದೆ. ಇದು ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಮುಖದ ಚರ್ಮದ ಮೇಲೆ ಯಾವುದೇ ಮೊಡವೆಗಳು ಇತರೆ ಸಮಸ್ಯೆಗಳಾಗದಂತೆ ತಡೆಯಲು ಈ ಆಹಾರ ಸಹಕಾರಿ.

ದ್ವಿದಳ ಧಾನ್ಯಗಳು

ಹೌದು, ಧಾನ್ಯಗಳನ್ನು ಸೂಪ್ ರೂಪದಲ್ಲಿ ಹೆಚ್ಚು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು. ಉತ್ತಮ ಸಸ್ಯಾಹಾರಿ ಆಹಾರವಾದ ಧಾನ್ಯಗಳಲ್ಲಿ ಪೋಷಕಾಂಶ ಹೇರಳವಾಗಿವೆ. ಬೇಯಿಸಿ ಅದಕ್ಕೆ ತರಕಾರಿಗಳೊಂದಿಗೆ ಸೇವಿಸಬಹುದು. ಸತುವಿನ ಅಂಶ ಹೇರಳವಾಗಿ ದೇಹವನ್ನು ಸೇರಿಕೊಳ್ಳಲೀದೆ.

ಮೀನು

ಕೆಲವು ಬಗೆಯ ಮೀನುಗಳಲ್ಲಿ ಮಾತ್ರ ಸತುವಿನ ಅಂಶವಿರುತ್ತದೆ. ಅದರಲ್ಲೂ ಸಮುದ್ರದ ಮೀನುಗಳಾದ ಸಾಲ್ಮನ್‌ ಸೇರಿದಂತೆ ಇತರ ಮೀನುಗಳಲ್ಲಿ ವಿಟಮಿನ್‌ ಇ ಅಂಶವಿರುತ್ತದೆ. ಇದು ಚರ್ಮಕ್ಕೆ ಯಾವುದೇ ಸೋಂಕು ಅಥವಾ ಹಾನಿಯಾದಂತೆ ಕಾಪಾಡಲಿದೆ.

ಮೊಟ್ಟೆ

ಮೊಟ್ಟೆಗಳಲ್ಲಿ ಲ್ಯುಟಿನ್‌ ಅಂಶ ಚರ್ಮವನ್ನು ಯಥಾಸ್ಥಿತಿಯಲ್ಲಿಡಲಿದೆ. ಬೆಳಗಿನ ಉಪಹಾರದೊಂದಿಗೆ ಮೊಟ್ಟೆ ಸೇವೆನೆ ಒಳ್ಳೆಯದು. ಪ್ರತಿದಿನವೂ ಬಿಡದಂತೆ ಸೇವಿಸುವುದು ತುಂಬಾ ಮುಖ್ಯ.

ಕುಂಬಳಕಾಯಿ ಬೀಜ

ಹೇರಳವಾದ ಸತುವನ್ನು ಹೊಂದಿರುವ ಆಹಾರ. ವಿಟಮಿನ್‌ ಎ ಮತ್ತು ಸಿ ಯಿಂದ ತುಂಬಿವೆ. ಆರೋಗ್ಯಕರ ಚರ್ಮಕ್ಕೆ ಅಗತ್ಯವಾದ ರೋಗನಿರೋಧಕ ಕೊಬ್ಬಿನಾಮ್ಲಗಳು ಇದರಲ್ಲಿ ಸಿಗಲಿವೆ. ಸಲಾಡ್‌ ಹಾಗೂ ನಟ್ಸ್‌ಗಳೊಂದಿಗೆ ಸೇವಿಸಬಹುದು. ಇದರೊಂದಿಗೆ ಸೂರ್ಯಕಾಂತಿ ಹಾಗೂ ಕಲ್ಲಂಗಡಿ ಹಣ್ಣಿನ ಬೀಜಗಳು ಕೂಡ ಹೆಚ್ಚಿನ ಸತುವಿನ ಅಂಶ ಹೊಂದಿರುತ್ತವೆ.

ಇದೀಗ ನಿಮ್ಮ ಚರ್ಮದ ಕಾಂತಿಗೆ ಅಗತ್ಯವಿರುವ ಆಹಾರಗಳನ್ನು ತಿಳಿದುಕೊಂಡಿರಿ. ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲೂ ಸತುವಿನ ಅಂಶವಿರುತ್ತದೆ. ಆದರೆ, ಮೊಡವೆಗೂ ಕಾರಣವಾಗಬಹುದು ಎನ್ನುತ್ತಾರೆ.

ಲೇಖನ: ಅಕ್ಷರ ಕಿರಣ್‌

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ