logo
ಕನ್ನಡ ಸುದ್ದಿ  /  ಜೀವನಶೈಲಿ  /  ಮೊಟ್ಟೆ ತಿಂದು ಚಿಪ್ಪು ಎಸಿಬೇಡಿ, ಇದರಿಂದ ಅಂದ ಹೆಚ್ಚಿಸಿಕೊಳ್ಳಬಹುದು; ತ್ವಚೆಯ ಸೌಂದರ್ಯಕ್ಕೆ ಮೊಟ್ಟೆ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ನೋಡಿ

ಮೊಟ್ಟೆ ತಿಂದು ಚಿಪ್ಪು ಎಸಿಬೇಡಿ, ಇದರಿಂದ ಅಂದ ಹೆಚ್ಚಿಸಿಕೊಳ್ಳಬಹುದು; ತ್ವಚೆಯ ಸೌಂದರ್ಯಕ್ಕೆ ಮೊಟ್ಟೆ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು ನೋಡಿ

Reshma HT Kannada

Nov 23, 2024 05:29 PM IST

google News

ಮೊಟ್ಟೆ ಚಿಪ್ಪಿನಿಂದ ಅಂದ ಹೆಚ್ಚಿಸಿಕೊಳ್ಳಬಹುದು, ಇದನ್ನು ಹೇಗೆಲ್ಲಾ ಬಳಸೋದು ನೋಡಿ (ಸಾಂಕೇತಿಕ ಚಿತ್ರ)

    • ಮೊಟ್ಟೆ ತಿಂದ ಮೇಲೆ ನಾವೆಲ್ಲರೂ ಮೊಟ್ಟೆಯ ಸಿಪ್ಪೆ ಅಥವಾ ಚಿಪ್ಪನ್ನ ಎಸೆಯುತ್ತೇವೆ. ಆದರೆ ಇದರಿಂದ ಹಲವು ಪ್ರಯೋಜನಗಳಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಮೊಟ್ಟೆ ಸಿಪ್ಪೆಯಿಂದ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು. ಹಾಗಾದರೆ ಚರ್ಮದ ಆರೈಕೆಗೆ ಮೊಟ್ಟೆ ಸಿಪ್ಪೆಯನ್ನು ಹೇಗೆಲ್ಲಾ ಬಳಸಬಹುದು  ಎಂಬ ವಿವರ ಇಲ್ಲಿದೆ. 
ಮೊಟ್ಟೆ ಚಿಪ್ಪಿನಿಂದ ಅಂದ ಹೆಚ್ಚಿಸಿಕೊಳ್ಳಬಹುದು, ಇದನ್ನು ಹೇಗೆಲ್ಲಾ ಬಳಸೋದು ನೋಡಿ (ಸಾಂಕೇತಿಕ ಚಿತ್ರ)
ಮೊಟ್ಟೆ ಚಿಪ್ಪಿನಿಂದ ಅಂದ ಹೆಚ್ಚಿಸಿಕೊಳ್ಳಬಹುದು, ಇದನ್ನು ಹೇಗೆಲ್ಲಾ ಬಳಸೋದು ನೋಡಿ (ಸಾಂಕೇತಿಕ ಚಿತ್ರ) (PC: Canva)

ಮೊಟ್ಟೆ ಆರೋಗ್ಯಕ್ಕೆ ಬಹಳ ಉತ್ತಮ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಆ ಕಾರಣಕ್ಕೆ ಹಲವರು ಪ್ರತಿದಿನ ಮೊಟ್ಟೆ ತಿನ್ನುತ್ತಾರೆ. ಆದರೆ ಮೊಟ್ಟೆ ತಿನ್ನುವ ಬಹುತೇಕ ಅದರ ಚಿಪ್ಪನ್ನು ಎಸೆಯುತ್ತಾರೆ. ಯಾಕೆಂದರೆ ಅವರಿಗೆ ಮೊಟ್ಟೆ ಚಿಪ್ಪಿನ ಪ್ರಯೋಜನಗಳ ಬಗ್ಗೆ ಅರಿವು ಇರುವುದಿಲ್ಲ.

ಮೊಟ್ಟೆ ಚಿಪ್ಪನ್ನು ಹಲವು ರೀತಿಯಲ್ಲಿ ಬಳಕೆ ಮಾಡಬಹುದು. ಅದರಲ್ಲಿ ಚರ್ಮದ ಆರೈಕೆಯೂ ಒಂದು. ಹೌದು, ತ್ವಚೆಯ ಅಂದ ಹೆಚ್ಚಿಸಲು ಹಾಗೂ ಆರೈಕೆ ಮಾಡಲು ಮೊಟ್ಟೆಯ ಚಿಪ್ಪನ್ನು ಬಳಸಬಹುದು. ಆದರೆ ಬಳಸುವ ಸರಿಯಾದ ಕ್ರಮ ಯಾವುದು ಎಂಬುದು ನಮಗೆ ತಿಳಿದಿರಬೇಕು. ಈ ಕುರಿತ ವಿವರ ಇಲ್ಲಿದೆ.

ಮೊಟ್ಟೆ ಚಿಪ್ಪಿನ ಪ್ರಯೋಜನಗಳು

ಮೊಟ್ಟೆ ಚಿಪ್ಪು ಕ್ಯಾಲ್ಸಿಯಂ, ಪ್ರೊಟೀನ್‌ಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಮೊಟ್ಟೆ ಚಿಪ್ಪಿನ ಬಳಕೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಇದು ಸುಕ್ಕು, ಕಲೆಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ರಂಧ್ರಗಳನ್ನು ಮುಚ್ಚುತ್ತದೆ.

ಕಲೆ ನಿವಾರಣೆಗೆ ಮೊಟ್ಟೆ ಚಿಪ್ಪು, ಜೇನುತುಪ್ಪ

ಮೊಟ್ಟೆ ಚಿಪ್ಪು ಹಾಗೂ ಜೇನುತುಪ್ಪದಿಂದ ಮಾಡಿದ ಫೇಸ್‌ಪ್ಯಾಕ್ ಬಳಸುವುದರಿಂದ ಚರ್ಮದ ಮೇಲಿ ಕಲೆಗಳು ನಿವಾರಣೆಯಾಗುತ್ತವೆ. ಮೊದಲು ಮೊಟ್ಟೆ ಚಿಪ್ಪನ್ನು ತೊಳೆದು ಒಣಗಿಸಿ, ಪುಡಿ ಮಾಡಿ. ಇದು ನುಣ್ಣಗೆ ಪುಡಿ ಆಗಿರಬೇಕು. ಇದಕ್ಕೆ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಒಣಗುವವರೆಗೂ ಬಿಟ್ಟು ನಂತರ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಮುಖದ ಮೇಲಿನ ಕಲೆಗಳು ಕಡಿಮೆಯಾಗುತ್ತವೆ.

ಉರಿಯೂತ ಕಡಿಮೆ ಮಾಡಲು ಆ್ಯಪಲ್ ಸೈಡರ್ ವಿನೇಗರ್, ಲವಂಗ

ಅರ್ಧ ಕಪ್ ಆ್ಯಪಲ್ ಸೈಡರ್ ವಿನೇಗರ್‌ಗೆ ಎರಡು ಮೊಟ್ಟೆಯ ಚಿಪ್ಪುಗಳನ್ನು ಸೇರಿಸಿ. ಇವೆರನ್ನು 5 ದಿನಗಳ ಕಾಲ ನೆನೆಸಿ ಇಡಿ. ನಂತರ ಇದು ಪೇಸ್ಟ್‌ನಂತೆ ಆಗಿರುತ್ತದೆ. ಈ ಪೇಸ್ಟ್ ಅನ್ನು ಹತ್ತಿ ಉಂಡೆಯಲ್ಲಿ ಉಜ್ಜಿ ಚರ್ಮಕ್ಕೆ ಹಚ್ಚಿಕೊಳ್ಳಿ. ಇದನ್ನು ಆರುವವರೆಗೆ ಹಾಗೇ ಬಿಡಿ. ನಂತರ ತೊಳೆಯಿರಿ. ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಎಕ್ಸ್‌ಫೋಲಿಯೇಟ್ ಮಾಡಲು ಮೊಟ್ಟೆ ಚಿಪ್ಪು, ಸಕ್ಕರೆ

ಮೊಟ್ಟೆ ಚಿಪ್ಪು ಹಾಗೂ ಸಕ್ಕರೆಯ ಮಿಶ್ರಣದಿಂದ ಸ್ಕ್ರಬ್ ತಯಾರಿಸಿ, ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿರ್ಜೀವ ಕೋಶಗಳನ್ನು ತೆಗೆದುಹಾಕಬಹುದು. ಮೊದಲು ಮೊಟ್ಟೆಯ ಚಿಪ್ಪುಗಳನ್ನು ಬಟ್ಟಲಿನಲ್ಲಿ ಒಣಗಿಸಿ. ಇದನ್ನು ಚೆನ್ನಾಗಿ ಪುಡಿ ಮಾಡಿ. ಅದಕ್ಕೆ ಸಕ್ಕರೆ ಹಾಗೂ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಒಣಗಲು ಬಿಡಿ. ನಂತರ ತೊಳೆಯಿರಿ.

ಮೊಟ್ಟೆ ಚಿಪ್ಪು ಮತ್ತು ಬೆಲ್ಲ

ಮೊಟ್ಟೆಯ ಚಿಪ್ಪು ಮತ್ತು ಬೆಲ್ಲದ ಈ ಮಿಶ್ರಣವು ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ಬೆಲ್ಲದಲ್ಲಿ ಕೆಲವು ಪೋಷಕಾಂಶಗಳಿರುತ್ತವೆ. ಮೊದಲು ಮೊಟ್ಟೆಯ ಚಿಪ್ಪನ್ನು ಒಣಗಿಸಿ. ಒಂದು ಬೌಲ್‌ನಲ್ಲಿ ಮೊಟ್ಟೆ ಚಿಪ್ಪಿನ ಪುಡಿ ತೆಗೆದುಕೊಂಡು ಅದರಲ್ಲಿ ಒಂದು ಚಮಚ ಬೆಲ್ಲದ ಪುಡಿ ಹಾಕಿ. ಮಿಶ್ರಣವನ್ನು ಇಡೀ ಮುಖಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಈ ರೀತಿ ಮಾಡುವುದರಿಂದ ಮುಖ ಚೆನ್ನಾಗಿ ಆಗುತ್ತದೆ.

(ಗಮನಿಸಿ: ಈ ಲೇಖನವು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದ ಬರಹ. ಚರ್ಮವನ್ನು ತುಂಬಾ ಸೂಕ್ಷ್ಮವಾಗಿರುವ ಕಾರಣ ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞರ ಅಭಿಪ್ರಾಯ ಪಡೆಯಲು ಮರೆಯದಿರಿ.)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ