Best Family Cars: ಈ 8 ಸೀಟುಗಳ ಕಾರು ಫ್ಯಾಮಿಲಿ ಪ್ರಯಾಣಕ್ಕೆ ಅತ್ಯುತ್ತಮ ಆಯ್ಕೆ, ಫೀಚರ್‌ಗಳೂ ಬೊಂಬಾಟ್
Dec 17, 2024 05:41 PM IST
8 ಸೀಟುಗಳ ಕಾರು
- 8 Seater Cars: ಕುಟುಂಬ ಪ್ರಯಾಣಕ್ಕೆ ಸೂಕ್ತವಾದ ಅನೇಕ ಕಾರುಗಳು ಭಾರತದಲ್ಲಿವೆ. ಆದರೆ, ಪ್ರಯಾಣಿಸುವ ಸಮಯದಲ್ಲಿ ಕೆಲವು ಜನರು ಹೆಚ್ಚಾದಗ ಸೀಟು ಸಾಕಾಗದು ಎಂಬ ತೊಂದರೆ ಕಾಣಿಸುತ್ತದೆ. ಇದೇ ಕಾರಣಕ್ಕೆ 7-8 ಸೀಟುಗಳ ಕಾರುಗಳು ಹೆಚ್ಚಿನವರ ಆದ್ಯತೆಯಾಗುತ್ತಿದೆ. ಈ ಲೇಖನದಲ್ಲಿ 8 ಸೀಟುಗಳ ಕಾರುಗಳ ಬಗ್ಗೆ ತಿಳಿಯೋಣ.
8 Seater Cars: ನಾವಿಬ್ಬರು ನಮಗಿಬ್ಬರು ಅಥವಾ ಒಬ್ಬರು ಎಂಬ ಕಾಲದಲ್ಲಿ ನಾಲ್ಕು ಸೀಟಿನ ಕಾರು ನಿತ್ಯಪ್ರಯಾಣಕ್ಕೆ ಸೂಕ್ತವಾಗುತ್ತದೆ. ಆದರೆ, ಏಳೆಂಟು ಜನರು ಪ್ರವಾಸ ಹೋಗಬೇಕಾದರೆ ಅಥವಾ ದೂರ ಪ್ರಯಾಣ ಕೈಗೊಳ್ಳಬೇಕಾದರೆ ಈ ಪುಟ್ಟ ಕಾರುಗಳು ಸಾಕಾಗದು. ಇದೇ ಕಾರಣಕ್ಕೆ ಹೆಚ್ಚು ಸೀಟುಗಳ ಕಾರುಗಳ ಖರೀದಿಗೆ ಹೆಚ್ಚಿನವರು ಗಮನ ನೀಡುತ್ತಾರೆ. ಹೆಚ್ಚಿನ ಕುಟುಂಬ ಸದಸ್ಯರಿಗೆ ದೊಡ್ಡ ಕಾರು ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಹಲವು ರೀತಿಯ 7 ಸೀಟರ್ ಕಾರುಗಳಿವೆ. ಸರಿಸುಮಾರು ಅದೇ ಬೆಲೆಯಲ್ಲಿ 8 ಸೀಟರ್ ಆಯ್ಕೆಯೊಂದಿಗೆ ಕೆಲವು ಕಾರುಗಳು ಬರುತ್ತವೆ. ಅಂತಹ ಎಂಟು ಸೀಟಿನ ಕಾರುಗಳ ವಿವರ ಇಲ್ಲಿ ನೀಡಲಾಗಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್
ಟೊಯೊಟಾ ಇನ್ನೋವಾ ಹೈಕ್ರಾಸ್ 7 ಮತ್ತು 8 ಸೀಟುಗಳ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು ಎರಡು ಪವರ್ ಟ್ರೈನ್ ಆಯ್ಕೆಗಳನ್ನು ಹೊಂದಿದೆ. ಇದು ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 2 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ. ಇದರ ಮೈಲೇಜ್ ಪ್ರತಿ ಲೀಟರ್‌ಗೆ ಸುಮಾರು 23.24 ಕಿ.ಮೀ. ಇದೆ. ದರ ಸುಮಾರು 19.94 ಲಕ್ಷದಿಂದ ರೂನಿಂದ 31.34 ಲಕ್ಷ (ಎಕ್ಸ್ ಶೋ ರೂಂ) ರೂಪಾಯಿವರೆಗಿದೆ. ಇದು 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 360-ಡಿಗ್ರಿ ಕ್ಯಾಮೆರಾ, ಎಡಿಎಎಸ್, ಇತ್ಯಾದಿ ಫೀಚರ್‌ಗಳನ್ನು ಹೊಂದಿದೆ.
ಟೊಯೋಟಾ ಇನ್ನೋವಾ ಕ್ರಿಸ್ಟಾ
ಟೊಯೊಟಾ ಇನ್ನೋವಾ ಕ್ರಿಸ್ಟಾ ಭಾರತದ ಮಾರುಕಟ್ಟೆಯಲ್ಲಿರುವ ಜನಪ್ರಿಯ ಮಲ್ಟಿ ಪರ್ಪೋಸ್ ವೆಹಿಕಲ್ ಆಗಿದೆ. ಇದು ಜಿಎಕ್ಸ್, ಜಿಎಕ್ಸ್ ಪ್ಲಸ್, ವಿಎಕ್ಸ್ ಮತ್ತು ಝಡ್‌ಎಕ್ಸ್ ಎಂಬ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ. ಇದು 7 ಮತ್ತು 8 ಸೀಟರ್ ಕಾನ್ಫಿಗರೇಶನ್ ಆಯ್ಕೆಗಳನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಂ ದರ19.99 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇದು 2.4 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಇದು 150 ಬಿಎಚ್‌ಪಿ ಪವರ್ ಮತ್ತು 343 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟೊಯೊಟಾ ಇನ್ನೋವಾ ಕ್ರಿಸ್ಟಾದಲ್ಲಿ ಹಲವು ಆಕರ್ಷಕ ಫೀಚರ್‌ಗಳು ಇವೆ. ಇದು 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8 ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಆಂಬಿಯೆಂಟ್ ಲೈಟಿಂಗ್, ರಿಯರ್ ಎಸಿ ವೆಂಟ್‌ನೊಂದಿಗೆ ಸ್ವಯಂಚಾಲಿತ ಹವಾಮಾನ ನಿಯಂತ್ರಣದಂತಹ ಕೆಲವು ಫೀಚರ್‌ಗಳನ್ನು ಹೊಂದಿದೆ.
ಮಾರುತಿ ಸುಜುಕಿ ಇನ್ವಿಕ್ಟೋ
ಮಾರುತಿ ಸುಜುಕಿ ಇನ್ವಿಕ್ಟೊ ಭಾರತೀಯ ಮಾರುಕಟ್ಟೆಯಲ್ಲಿ 7 ಮತ್ತು 8 ಸೀಟರ್ ಕಾನ್ಫಿಗರೇಶನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು ಝೆಟಾ ಪ್ಲಸ್ ಮತ್ತು ಆಲ್ಪಾ ಪ್ಲಸ್ ಎಂಬ ಎರಡು ಟ್ರಿಮ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಬೆಲೆ 25.26 ಲಕ್ಷ ರೂಪಾಯಿಯಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಇದು 2-ಲೀಟರ್ ಹೈಬ್ರಿಡ್ ಎಂಜಿನ್ ಹೊಂದಿದೆ. ಇದು 152PS ಪವರ್ ಮತ್ತು 188 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360 ಡಿಗ್ರಿ ಕ್ಯಾಮೆರಾ, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್ ಮುಂತಾದ ಹಲವು ಫೀಚರ್‌ಗಳನ್ನು ಹೊಂದಿದೆ. ಎಂಟು ಸೀಟಿನ ಕಾರುಗಳನ್ನು ಖರೀದಿಸಲು ಬಯಸಿದರೆ ಈ ಮೂರು ಕಾರುಗಳನ್ನು ಟೆಸ್ಟ್ ಡ್ರೈವ್ ಮಾಡಿ ನೋಡಬಹುದು.