Brain Teaser: ನೀವು ಗಣಿತದಲ್ಲಿ ಜೀನಿಯಸ್ಸಾ? ಹಾಗಾದ್ರೆ ಈ ಸವಾಲಿಗೆ ಕ್ಯಾಲ್ಕ್ಯುಲೇಟರ್ ಬಳಸದೇ ಉತ್ತರ ಕಂಡುಹಿಡಿಯಿರಿ
Feb 11, 2024 08:00 AM IST
ಬ್ರೈನ್ ಟೀಸರ್
- Social Media Brain Teaser: ಇತ್ತೀಚೆಗೆ Xನಲ್ಲಿ ಶೇರ್ ಮಾಡಲಾಗಿರುವ ಈ ಗಣಿತದ ಸವಾಲು, ಪಜಲ್ ಪ್ರಿಯರನ್ನು ಯೋಚಿಸುವಂತೆ ಮಾಡಿದೆ. ಈ ಗಣಿತದ ಪಜಲ್‌ಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಗುವುದೇ ನೋಡಿ.
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುವ ಬ್ರೇನ್ ಟೀಸರ್‌ಗಳು ಬಹಳ ಆಸಕ್ತಿದಾಯಕವಾಗಿರುತ್ತವೆ. ಅಂಕಗಣಿತ, ಟ್ರಿಗ್ನೊಮೆಟ್ರಿ, ಲಾಜಿಕ್, ರಿಡಲ್ಸ್ ಹೀಗೆ ವಿವಿಧ ಪ್ರಕಾರದ ಬ್ರೇನ್ ಟೀಸರ್‌ಗಳನ್ನು ನಾವು ಅಲ್ಲಿ ಕಾಣಬಹುದು. ಅಲ್ಲಿನ ಕೆಲವು ಸವಾಲುಗಳಿಗೆ ಥಟ್ ಅಂತ ಉತ್ತರ ಕಂಡುಹಿಡಿದರೆ, ಇನ್ನು ಕೆಲವುಗಳಿಗೆ ತಲೆ ಕೆರೆದುಕೊಂಡರು ಸುಲಭಕ್ಕೆ ಉತ್ತರ ಸಿಗುವುದಿಲ್ಲ. ಅದರಲ್ಲೂ ಗಣಿತದ ಸವಾಲುಗಳು ನಮ್ಮ ಮೆದುಳಿಗೆ ಸವಾಲು ಎಸೆಯುತ್ತವೆ. ಗಣಿತದ ಸೂತ್ರಗಳನ್ನೆಲ್ಲಾ ಒಮ್ಮೆ ನೆನಪು ಮಾಡಿಕೊಳ್ಳುವಂತೆ ಮಾಡುತ್ತದೆ. ಇಲ್ಲೊಂದು ಬ್ರೇನ್ ಟೀಸರ್ ಇದೆ. ಇದು ಇತ್ತೀಚೆಗೆ Xನಲ್ಲಿ ಶೇರ್ ಮಾಡಲಾಗಿರುವ ಗಣಿತದ ಸವಾಲಾಗಿದೆ. ಈ ಸವಾಲಿಗೆ ಉತ್ತರ ಕಂಡುಹಿಡಿಯುವವರು ‘ಮ್ಯಾಥ್ಸ್ ಜೀನಿಯಸ್’ಎಂಬ ಶೀರ್ಷಿಕೆಯಿಂದ ಇದನ್ನು ಹಂಚಿಕೊಳ್ಳಲಾಗಿದೆ. ಗಣಿತದ ಪ್ರಶ್ನೆಯಾಗಿರುವ ಇದನ್ನು BODMAS ಸೂತ್ರ ಬಳಸಿ ಉತ್ತರ ಕಂಡುಹಿಡಿಯಬೇಕು. ಜೊತೆಗೆ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಕ್ಯಾಲ್ಕುಲೇಟರ್ ಬಳಸುವಂತಿಲ್ಲ. ಮತ್ತೇಕೆ ತಡ ಗಣಿತದ ಈ ಸವಾಲಿಗೆ ಉತ್ತರ ಕಂಡು ಹಿಡಿದೇ ಬಿಡಿ.
X ನಲ್ಲಿ ಹಂಚಿಕೊಳ್ಳಲಾದ, ‘ಮ್ಯಾಥ್ಸ್ ಜೀನಿಯಸ್! ಕ್ಯಾನ್ ಯು ಕ್ಯಾಲ್ಕುಲೇಟ್ ವಿತೌಟ್ ಅ ಕ್ಯಾಲ್ಕುಲೇಟರ್’ ಎಂಬ ಶೀರ್ಷಿಕೆ ಇರುವ ಈ ಗಣಿತದ ಬ್ರೇನ್ ಟೀಸರ್ ಹೀಗಿದೆ: (12/3)^2+((6-4)*6^2)-5(2^2)=? ಇದಕ್ಕೆ ಉತ್ತರ ಕಂಡು ಹಿಡಿಯಬಲ್ಲಿರಾ? ಕೆಲವೇ ಗಂಟೆಗಳ ಹಿಂದೆ ಹಂಚಿಕೊಳ್ಳಲಾದ ಬ್ರೇನ್ ಟೀಸರ್ ಇದಾಗಿದ್ದು, ಈಗಾಗಲೇ ಹಲವಾರು ಜನರು ಇದನ್ನು ನೋಡಿದ್ದಾರೆ ಮತ್ತು ಲೈಕ್ ಕೂಡ ಮಾಡಿದ್ದಾರೆ. ಬಹಳಷ್ಟು ಜನರು ಉತ್ತರ ಕಮೆಂಟ್ ಮಾಡುವ ಮೂಲಕ ತಾವು ಗಣಿತದಲ್ಲಿ ಜೀನಿಯಸ್ ಎಂದು ಹೇಳುತ್ತಿದ್ದಾರೆ.
ಕಮೆಂಟ್‌ನಲ್ಲೇನಿದೆ?
ಗಣಿತದ ಈ ಸವಾಲಿಗೆ ಒಬ್ಬರು 16+72-20. 88-20. 68 ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು 68=16+72-20 ಈ ರೀತಿಯಾಗಿ ಬರೆದು ತಮ್ಮ ಉತ್ತರವನ್ನು ಕಮೆಂಟ್ ಬಾಕ್ಸ್‌ನಲ್ಲಿ ಸೇರಿಸಿದ್ದಾರೆ. ಮತ್ತೊಬ್ಬರಂತು ಇದಕ್ಕೆ ಸರಿಯಾದ ಉತ್ತರ 58 ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪ್ರಶ್ನೆಗೆ ಸರಿಯಾದ ಉತ್ತರ 68 ಎಂಬುದು ಬಹಳಷ್ಟು ಜನರು ನೀಡಿರುವ ಉತ್ತರವಾಗಿದೆ. ಈ ಗಣಿತದ ಬ್ರೇನ್ ಟೀಸರ್‌ಗೆ ಉತ್ತರ ಕಂಡು ಹಿಡಿಯಲು ನಿಮಗೆ ಸಾಧ್ಯವಾಯಿತೇ? ನಿಮ್ಮ ಉತ್ತರ ಹೌದು ಎಂದಾದರೆ, ಮತ್ತೇನು ಯೋಚಿಸುತ್ತಿದ್ದೀರಿ, ನೀವೂ ಕೂಡಾ ನಿಮ್ಮ ಉತ್ತರವನ್ನು ಕಮೆಂಟ್ ಬಾಕ್ಸ್‌ಗೆ ಸೇರಿಸಿ. ನಾನೇನು ಗಣಿತದಲ್ಲಿ ಹಿಂದೆಉಳಿದಿಲ್ಲ, ನಾನೂ ಕೂಡಾ ಜೀನಿಯಸ್ ಅಂತ ಹೇಳಿ.
ನಿಮಗೆ ಉತ್ತರ ಕಂಡು ಹಿಡಿಯಲು ಕಷ್ಟವಾಗಿದ್ದರೆ ನಿಮಗಾಗಿ ಹಿಂಟ್ ಕೊಡಲಾಗಿದೆ: ಮೊದಲು ಸವಾಲನ್ನು ಗಮನಿಸಿ, (12/3)^2+((6-4)*6^2)-5(2^2). BODMAS ಸೂತ್ರದ ಪ್ರಕಾರ, ಮೊದಲು ಈ ಸವಾಲಿನಲ್ಲಿರುವ ಒಳಗಿನ ಬ್ರಾಕೆಟ್‌ಗೆ ಉತ್ತರ ಕಂಡು ಹಿಡಿಯಿರಿ. ಅದು (6–4)= 2 ಆದರೆ, ಅದರ ನಂತರ 6 ರ ವರ್ಗ ಕಂಡು ಹಿಡಿಯಿರಿ ಬಂದ ಉತ್ತರಕ್ಕೆ 2 ರಿಂದ ಗುಣಿಸಿ. ನಂತರ (12/3) ಎಷ್ಟು ಎಂದು ನೊಡಿ, ಅದರ ವರ್ಗ ಎಷ್ಟು ನೋಡಿ. ಕೊನೆಯದಾಗಿ ಈ ಸವಾಲಿನ ಕೊನೆಯ ಬ್ರಾಕೆಟ್‌ನಲ್ಲಿರುವುದಕ್ಕೆ ಉತ್ತರ ಹುಡುಕಿ. ಇದಾದಮೇಲೆ ಕೂಡಿಸುವ ಮತ್ತು ಕಳೆಯುವ ಲೆಕ್ಕ ಮಾಡಿ. ಹೀಗೆ ಸುಲಭವಾಗಿ ಉತ್ತರ ಕಂಡು ಹಿಡಿಯಿರಿ.
ಊರಿನ ಹೆಸರು ಕಂಡುಹಿಡಿಯಬಲ್ಲಿರಾ?
Brain Teaser: ಹಾವು ಏಣಿ ಏರಿ ಮೇಲೆ ಹೋಯಿತು; ಈ ವಾಕ್ಯಗಳಲ್ಲಿ ಅಡಗಿರುವ ಊರುಗಳ ಹೆಸರು ಗುರುತಿಸಿ