logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಾಕಪ್ಪಾ ಸಾಕು, 60 ವರ್ಷ ತನಕ ಯಾರು ದುಡೀತಾರೆ, 40ಕ್ಕೋ 50ಕ್ಕೋ ರಿಟೈರ್ ಆಗಬೇಕು ಅಂತ ಕನಸು ಕಾಣ್ತಿರೋ ಯುವಜನರೇ ಗಮನಿಸಿ

ಸಾಕಪ್ಪಾ ಸಾಕು, 60 ವರ್ಷ ತನಕ ಯಾರು ದುಡೀತಾರೆ, 40ಕ್ಕೋ 50ಕ್ಕೋ ರಿಟೈರ್ ಆಗಬೇಕು ಅಂತ ಕನಸು ಕಾಣ್ತಿರೋ ಯುವಜನರೇ ಗಮನಿಸಿ

Umesh Kumar S HT Kannada

Oct 09, 2024 05:17 PM IST

google News

ಸಾಕಪ್ಪಾ ಸಾಕು, 60 ವರ್ಷ ತನಕ ಯಾರು ದುಡೀತಾರೆ, 40ಕ್ಕೋ 50ಕ್ಕೋ ರಿಟೈರ್ ಆಗಬೇಕು ಅಂತ ಕನಸು ಕಾಣ್ತಿರೋ ಯುವಜನರೇ ಗಮನಿಸಿ. ಅದಕ್ಕೊಂದು ಉಳಿತಾಯದ ತಂತ್ರವಿದೆ. (ಸಾಂಕೇತಿಕ ಚಿತ್ರ)

  • ಬದುಕು ಇರೋದೇ ಎಂಜಾಯ್ ಮಾಡೋದಕ್ಕೆ. ಸಾಕಪ್ಪಾ ಸಾಕು, 60 ವರ್ಷ ತನಕ ಯಾರು ದುಡೀತಾರೆ, 40ಕ್ಕೋ 50ಕ್ಕೋ ರಿಟೈರ್ ಆಗಬೇಕು ಅಂತ ಕನಸು ಕಾಣ್ತಿರೋ ಯುವಜನರೇ ಗಮನಿಸಿ. ಅದಕ್ಕೊಂದು ಶಿಸ್ತು ಬೇಕು, ಬದ್ಧತೆಯೂ ಇದ್ದರಷ್ಟೇ ನನಸಾಗಿಸಬಹುದು. ಹೇಗಂತೀರಾ- ಇಲ್ಲಿದೆ ಆ ಯೋಜನೆ.

ಸಾಕಪ್ಪಾ ಸಾಕು, 60 ವರ್ಷ ತನಕ ಯಾರು ದುಡೀತಾರೆ, 40ಕ್ಕೋ 50ಕ್ಕೋ ರಿಟೈರ್ ಆಗಬೇಕು ಅಂತ ಕನಸು ಕಾಣ್ತಿರೋ ಯುವಜನರೇ ಗಮನಿಸಿ. ಅದಕ್ಕೊಂದು ಉಳಿತಾಯದ ತಂತ್ರವಿದೆ. (ಸಾಂಕೇತಿಕ ಚಿತ್ರ)
ಸಾಕಪ್ಪಾ ಸಾಕು, 60 ವರ್ಷ ತನಕ ಯಾರು ದುಡೀತಾರೆ, 40ಕ್ಕೋ 50ಕ್ಕೋ ರಿಟೈರ್ ಆಗಬೇಕು ಅಂತ ಕನಸು ಕಾಣ್ತಿರೋ ಯುವಜನರೇ ಗಮನಿಸಿ. ಅದಕ್ಕೊಂದು ಉಳಿತಾಯದ ತಂತ್ರವಿದೆ. (ಸಾಂಕೇತಿಕ ಚಿತ್ರ) (canva)

ನಿವೃತ್ತಿಯ ವಯಸ್ಸು ಎಂದರೆ 60ರ ಆಸುಪಾಸು. ಆದರೆ ಬಹುವೇಗದ ಬದುಕಿನಲ್ಲಿ 40 ಅಥವಾ 50 ವರ್ಷಕ್ಕೆಲ್ಲ ಕೆಲಸ ಅಥವಾ ಉದ್ಯೋಗದಿಂದ ನಿವೃತ್ತರಾಗಿಬಿಡಬೇಕು. ಬದುಕನ್ನು ಎಂಜಾಯ್‌ ಮಾಡಬೇಕು ಎಂದು ಹೇಳುವವರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಹೊಸ ತಲೆಮಾರಿನವರ ಆಲೋಚನೆಗಳನ್ನು, ಅವರ ಮಾತುಗಳ ಕಡೆಗೊಮ್ಮೆ ಗಮನಕೊಟ್ಟು ನೋಡಿ. ಅವರು ಹೇಳುವ ವಿಚಾರಗಳು ಅರ್ಥವಾದೀತು. 60 ವರ್ಷಗಳ ತನಕ ಕೆಲಸ ಮಾಡುವ ಇಚ್ಛೆ ಅವರಿಗಿಲ್ಲ. 40 ವರ್ಷಕ್ಕೆ ಕೆಲಸದಿಂದ ನಿವೃತ್ತರಾಗಿ ಮನೆ, ಕುಟುಂಬದವರ ಜೊತೆಗೆ ತಮಗೆ ಇಷ್ಟ ಬಂದ ಕೆಲಸ ಮಾಡುತ್ತ ಜೀವನ ಮುನ್ನಡೆಸಲು ಬಯಸುತ್ತಾರೆ. ಇದು ಸಾಧ್ಯವೇ ಎಂದು ಹುಬ್ಬೇರಿಸಬೇಡಿ. ಖಂಡಿತಾ ಸಾಧ್ಯವಿದೆ. ಈ ರೀತಿ ಬದುಕು ಬೇಕಾಗಿರುವುದ ಹಣಕಾಸಿನ ಸ್ವಾತಂತ್ರ್ಯ. ಇಂಗ್ಲಿಷ್ ಭಾಷೆಯಲ್ಲಿ ಈ ಪ್ರವತ್ತಿಯನ್ನು ಅಥವಾ ಇಂತಹ ಬದುಕಿನ ಯೋಜನಾ ತಂತ್ರಕ್ಕೆ ಫೈರ್‌ (FIRE) ಎಂದು ಹೇಳುತ್ತಾರೆ. ಸರಳವಾಗಿ ಅದನ್ನು ಇಂಗ್ಲಿಷ್‌ನಲ್ಲೇ ಬಿಡಿಸಿ ಹೇಳಬೇಕಾದರೆ FI - ಫೈನಾನ್ಶಿಯಲ್ ಇಂಡಿಪೆಂಡೆನ್ಸ್‌ (Financial Independence) ಮತ್ತು RE - ರಿಟೈರ್ ಅರ್ಲಿ (Retire Early). ಬದುಕಿನ ಈ ಯೋಜನಾ ತಂತ್ರವನ್ನು ಅರ್ಥಮಾಡಿಕೊಳ್ಳೋಣ.

ಬೇಗ ನಿವೃತ್ತರಾಗುವುದಕ್ಕೆ ನೆರವಾಗುವ ಫೈರ್‌ ತಂತ್ರಗಾರಿಕೆ

ಏನಿದು ಫೈರ್ (FIRE) ತಂತ್ರಗಾರಿಕೆ. ಇದು ಪರಿಣಾಮಕಾರಿ ಉಳಿತಾಯ ಮತ್ತು ಹೂಡಿಕೆಯ ವಿಧಾನವಾಗಿದ್ದು, ಇದನ್ನು ಸಾಧಿಸಿದರೆ ಬೇಗ ನಿವೃತ್ತರಾಗುವುದು ಕೂಡ ಸುಲಭವೇ ಸರಿ. ಇದರಲ್ಲಿ ವ್ಯಕ್ತಿ ತನ್ನ ಆದಾಯದ ಶೇಕಡ 50 ರಿಂದ ಶೇಕಡ 70 ಭಾಗವನ್ನು ಉಳಿತಾಯ ಮಾಡುತ್ತಾನೆ. ಇದು ಎಲ್ಲರಿಂದಲೂ ಸಾಧ್ಯವಾಗದ ಕೆಲಸ. ಇದಕ್ಕೆ ಅತಿ ಹೆಚ್ಚು ಸ್ವಯಂ ಶಿಸ್ತು ಮತ್ತು ದೀರ್ಘಾವಧಿಗೆ ಹೂಡಿಕೆ ಮಾಡುವ ನಿರ್ಧಾರಕ್ಕೆ ಬದ್ಧತೆ ಬೇಕು. ಮಿತವ್ಯಯದೊಂದಿಗೆ ಬದುಕುವುದು ಸಾಧ್ಯವಾಗದವರಿಗೆ ಈ ತಂತ್ರಗಾರಿಕೆ ಕೆಲಸಕ್ಕೆ ಬರದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಬೇಗ ನಿವೃತ್ತರಾಗಿ ಬದುಕನ್ನು ಎಂಜಾಯ್ ಮಾಡಬೇಕಾದರೆ

ಜೀವನದಲ್ಲಿ 60 ವರ್ಷ ತನಕ ಕೆಲಸ ಮಾಡಿದ ಬಳಿಕ ಬದುಕನ್ನು ಎಂಜಾಯ್ ಮಾಡಲು ಶರೀರದಲ್ಲಿ ಕಸುವು ಇರಲ್ಲ ಎಂದು ಹೇಳುವವರು ಬೇಗ ನಿವೃತ್ತರಾಗಿ ಬದುಕನ್ನು ಎಂಜಾಯ್ ಮಾಡಬೇಕಾದರೆ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಅಂಶಗಳಿವು

1) ವೇತನದ ಶೇ 50 -70 ಉಳಿಸಿ: ನಿವೃತ್ತ ಬದುಕಿಗೆ ಬೇಕಾದಷ್ಟು ಹಣಕಾಸು ಕೂಡಿಡಬೇಕು. ಇದಕ್ಕಾಗಿ ಕೆಲಸಕ್ಕೆ ಸೇರಿದ ಮೊದಲ ತಿಂಗಳಿಂದಲೇ ವೇತನದಲ್ಲಿ ಅಥವಾ ಉದ್ಯಮ ಆರಂಭಿಸಿದ ವರ್ಷವೇ ವೇತನದ ಭಾಗದಲ್ಲಿ ಶೇಕಡ 50 ರಿಂದ ಶೇಕಡ 70 ರಷ್ಟು ಹಣವನ್ನು ಉಳಿತಾಯ ಮಾಡಬೇಕು. ಈಗ ನೀವು ಖರ್ಚು ಮಾಡುವ ಹಣದ 30 ಪಟ್ಟು ಹಣ ಮುಂದಕ್ಕೆ ಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಅದಕ್ಕಾಗಿಯೇ ಈ ಉಳಿತಾಯ.

2) ಆದಾಯ ಮೂಲ ಹೆಚ್ಚಿಸಿ: ನಿಮ್ಮ ಬಹುಪಾಲು ಆದಾಯ ಉಳಿತಾಯಕ್ಕೆ ಹೋಗುವ ಕಾರಣ ಆದಾಯ ಮೂಲವನ್ನು ಹೆಚ್ಚಿಸಿ. ಇದಕ್ಕಾಗಿ ಅರೆಕಾಲಿಕ ಉದ್ಯೋಗ ಕಂಡುಕೊಳ್ಳಿ ಅಥವಾ ಈಗ ಇರುವುದಕ್ಕಿಂತಲೂ ಹೆಚ್ಚು ವೇತನ ಸಿಗುವ ಉದ್ಯೋಗಕ್ಕೆ ಸೇರಿಕೊಳ್ಳಿ. ಸಾಧ್ಯವಾದಷ್ಟೂ ಉಪ ಆದಾಯದ ಕಡೆಗೆ ಗಮನಹರಿಸಿ. ಷೇರುಗಳ ಡಿವಿಡೆಂಡ್‌, ಫಿಕ್ಸೆಡ್ ಡೆಪಾಸಿಟ್ ಬಡ್ಡಿ ಅಥವಾ ಬಾಡಿಗೆ ಮೂಲಕ ಆದಾಯ ಹೀಗೆ ಏನಾದರೂ ಉಪ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಿ.

3) ನಿಮ್ಮ ವೆಚ್ಚವನ್ನು ತಗ್ಗಿಸಿ: ಖರ್ಚು - ವೆಚ್ಚಗಳ ಮೇಲೆ ಬಿಗಿ ಹಿಡಿತ ಸಾಧಿಸಿ. ಕ್ರೆಡಿಟ್ ಕಾರ್ಡ್‌ಗಳನ್ನು ಬಹಳ ಜಾಗರೂಕತೆಯಿಂದ ಬಳಸಿ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸಾರ್ವಜನಿಕ ಸಾರಿಗೆಯನ್ನು ಬಳಸಿ. ಒಟ್ಟಿನಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಖರ್ಚು ಕಡಿಮೆ ಮಾಡಿ.

4) ಗರಿಷ್ಠ ಹೂಡಿಕೆ ಮಾಡಿ: ಬೇಗನೆ ನಿವೃತ್ತರಾಗುವುದಕ್ಕೆ ಬೇಕಾಗಿ ಗರಿಷ್ಠ ಹಣವನ್ನು ಹೂಡಿಕೆ ಮಾಡಿ. ಆದರೆ ಹಣವನ್ನು ಸುರಕ್ಷಿತ ಮತ್ತು ಲಾಭದಾಯಕ ಯೋಜನೆಗಳಲ್ಲೇ ಅಂದರೆ ಮ್ಯೂಚುವಲ್ ಫಂಡ್, ಪಿಪಿಎಫ್, ಬ್ಯಾಂಕ್ ಎಫ್‌ಡಿ ಸೇರಿದಂತೆ ದೀರ್ಘಾವಧಿಯಲ್ಲಿ ಗರಿಷ್ಠ ಲಾಭ ನೀಡುವ ಯೋಜನೆಗಳಲ್ಲೇ ಹೂಡಿಕೆ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ