logo
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ದೈನಂದಿನ ಬದುಕಿನಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಬೇಗನೆ ಶ್ರೀಮಂತರಾಗಬಹುದು; ಹಣ ಗಳಿಕೆಗೆ ಚಾಣಕ್ಯರು ನೀಡಿದ ಸಲಹೆ

Chanakya Niti: ದೈನಂದಿನ ಬದುಕಿನಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಬೇಗನೆ ಶ್ರೀಮಂತರಾಗಬಹುದು; ಹಣ ಗಳಿಕೆಗೆ ಚಾಣಕ್ಯರು ನೀಡಿದ ಸಲಹೆ

Reshma HT Kannada

Sep 15, 2023 06:30 AM IST

google News

ಚಾಣಕ್ಯ ನೀತಿ

    • ಇತ್ತೀಚೆಗೆ ಜಗತ್ತನ್ನು ಆಳುತ್ತಿರುವುದು ಹಣ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಹಣ ಪ್ರಮುಖ ಪಾತ್ರ ವಹಿಸುತ್ತದೆ. ಹಣವಿಲ್ಲದವರನ್ನು ಸಮಾಜದಲ್ಲಿ ಕೀಳಾಗಿ ಕಾಣಲಾಗುತ್ತಿದೆ. ಆ ಕಾರಣಕ್ಕೆ ಪ್ರತಿಯೊಬ್ಬರೂ ಹಣ ಸಂಪಾದಿಸಲು ಮತ್ತು ಶ್ರೀಮಂತರಾಗಲು ಬಯಸುತ್ತಾರೆ. ಹಣ ಗಳಿಸುವ ವಿಚಾರದಲ್ಲಿ ಚಾಣಕ್ಯರು ಹೇಳಿದ ಕೆಲವು ಅಮೂಲ್ಯ ಸಲಹೆಗಳು ಹೀಗಿವೆ.
ಚಾಣಕ್ಯ ನೀತಿ
ಚಾಣಕ್ಯ ನೀತಿ

ಇತ್ತೀಚಿನ ಜಗತ್ತಿನಲ್ಲಿ ಹಣವೇ ಸರ್ವಸ್ವವಾಗಿದೆ. ಹಣವಿಲ್ಲದವರ ಬದುಕು ನರಕ. ಆದರೆ ನ್ಯಾಯ ಮಾರ್ಗ, ಕಠಿಣ ಪರಿಶ್ರಮದಿಂದ ಹಣ ಗಳಿಸುವುದು ಬಹಳ ಮುಖ್ಯವಾಗುತ್ತದೆ. ಆಚಾರ್ಯ ಚಾಣಕ್ಯರು ಆ ಕಾಲದಲ್ಲೇ ಹಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ತಮ್ಮ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಾಕಷ್ಟು ಹಣ ಗಳಿಸಿ, ಶ್ರೀಮಂತರಾಗಲು ನಮ್ಮ ದೈನಂದಿನ ಬದುಕಿನಲ್ಲಿ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಚಾಣಕ್ಯ ಹೇಳುತ್ತಾರೆ. ಹಾಗಾದರೆ ಅವು ಯಾವುವು ಚಾಣಕ್ಯ ಹೇಳಿದ ಈ ನೀತಿಗಳು ಹಣ ಗಳಿಸಲು ಹೇಗೆ ಸಹಾಯ ಮಾಡುತ್ತವೆ ನೋಡಿ.

ಬಾಲ್ಯದಿಂದಲೂ ನೀವು ಮನೆ ಅಥವಾ ಶಾಲೆಯಲ್ಲಿ ಸಮಯದ ಮೌಲ್ಯವನ್ನು ಕಲಿಯುತ್ತೀರಿ. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿಯೂ ಇದನ್ನು ಉಲ್ಲೇಖಿಸುತ್ತಾರೆ. ಸಮಯವನ್ನು ವಿಶ್ವದ ಅತ್ಯಂತ ಬಲಶಾಲಿ ಎಂದು ಪರಿಗಣಿಸಲಾಗಿದೆ. ಸಮಯ ಎಲ್ಲರಿಗೂ ಒಂದೇ. ಸಮಯ ಯಾರಿಗಾಗಿಯೂ ಕಾಯುವುದಿಲ್ಲ. ಒಮ್ಮೆ ಹೋದ ಸಮಯ ಮತ್ತೆ ಮರಳಿ ಬರುವುದಿಲ್ಲ. ಆದ್ದರಿಂದ, ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಸೋಲು ಕಾಣುವುದಿಲ್ಲ. ತಮ್ಮ ಗುರಿ ಸಾಧಿಸಲು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಜೀವನದಲ್ಲಿ ಯಶಸ್ವಿಯಾಗುವುದು ಖಚಿತ ಎಂದು ಚಾಣಕ್ಯ ಹೇಳಿದ್ದಾರೆ. ಸಮಯದ ಮೌಲ್ಯವನ್ನು ತಿಳಿದಿರುವ ವ್ಯಕ್ತಿಯು ಸುಗಮ ಜೀವನ ಪಥವನ್ನು ಹೊಂದುತ್ತಾನೆ.

ಚಾಣಕ್ಯನ ಪ್ರಕಾರ, ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿಯು ಸಮಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುವವರಿಗೆ ಆಶೀರ್ವಾದ ನೀಡುತ್ತಾಳೆ. ಅಂತಹ ಜನರು ಸರಿಯಾದ ಸಮಯದಲ್ಲಿ ಸರಿಯಾದ ಕೆಲಸವನ್ನು ಮಾಡುತ್ತಾರೆ. ಅವರು ಸಾಗುವ ದಾರಿಯು ಸುಗಮವಾಗಿರುತ್ತದೆ. ಉದಾಹರಣೆಗೆ, ಒಬ್ಬ ವಿದ್ಯಾರ್ಥಿ ತನ್ನ ಭವಿಷ್ಯಕ್ಕಾಗಿ ಸಂಪೂರ್ಣ ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು. ಇದು ಅವರ ಓದಿನ ಯಶಸ್ಸಿಗೆ ಕಾರಣವಾಗುತ್ತದೆ. ಅಲ್ಲದೆ ಭವಿಷ್ಯದಲ್ಲಿನ ಸಾಧನೆಗೆ ದಾರಿಯಾಗುತ್ತದೆ.

ಇಂದಿನ ಕೆಲಸವನ್ನು ನಾಳೆಗೆ ಮುಂದೂಡಿ, ನಾಳೆ ಮಾಡಿದ್ರೆ ಆಯ್ತು ಎಂದುಕೊಳ್ಳುವವರ ಮೇಲೆ ಲಕ್ಷ್ಮೀದೇವಿ ಮುನಿಯುತ್ತಾಳೆ. ಸಮಯಕ್ಕೆ ಬೆಲೆ ಕೊಟ್ಟು, ಸಮಯದೊಂದಿಗೆ ಸಾಗುವವರಿಗಷ್ಟೇ ಲಕ್ಷ್ಮೀದೇವಿ ಬೆಲೆ ಕೊಡುತ್ತಾಳೆ ಎನ್ನುವುದು ಚಾಣಕ್ಯರ ಅಭಿಪ್ರಾಯ.

ನೀವು ಹಣ ಗಳಿಸಲು ಬಯಸಿದರೆ, ನಿಮ್ಮ ಗುರಿ ಹಾಗೂ ಕೆಲಸಗಳ ಮೇಲೆ ಗಮನ ಹರಿಸಬೇಕು. ಗುರಿಗಳಿಲ್ಲದ ವ್ಯಕ್ತಿಯು ಎಂದಿಗೂ ಯಶಸ್ವಿ ಗಳಿಸಲು ಸಾಧ್ಯವಿಲ್ಲ, ಅಂತೆಯೆ ಶ್ರೀಮಂತನಾಗಲು ಸಾಧ್ಯವಿಲ್ಲ. ನ್ಯಾಯ ಮಾರ್ಗದಲ್ಲಿ ಹಣ ಸಂಪಾದನೆ ಮಾಡುವುದು ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ. ಅನೈತಿಕವಾಗಿ ಗಳಿಸಿದ ಹಣ ಇವತ್ತಲ್ಲ ನಾಳೆ ನಮ್ಮನ್ನು ಬಿಟ್ಟು ಹೋಗುವುದು ಖಂಡಿತ.

ಚಾಣಕ್ಯನ ಪ್ರಕಾರ, ದೇವಾಲಯಕ್ಕೆ ನಿಯಮಿತವಾಗಿ ದಕ್ಷಿಣೆಯನ್ನು ನೀಡುವುದರಿಂದ ಭಗವಂತನ ಆಶೀರ್ವಾದ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಮನೆಯಲ್ಲಿ ಬಡತನ ಇರುವುದಿಲ್ಲ. ಯಾವಾಗಲೂ ನಿಮ್ಮ ಮಿತಿಯೊಳಗೆ ದಾನ ಮಾಡಿ. ದಾನ ಮಾಡುವುದರಿಂದ ಮನುಷ್ಯನ ಸಂಪತ್ತು ದ್ವಿಗುಣಗೊಳ್ಳುತ್ತದೆ.

ಚಾಣಕ್ಯ ನೀತಿಯ ಪ್ರಕಾರ, ಹಣವನ್ನು ಗಳಿಸುವುದು ಮಾತ್ರವಲ್ಲ, ಅದನ್ನು ಸರಿಯಾಗಿ ಬಳಸುವುದು ಹೇಗೆ ಎಂಬುದನ್ನು ಕಲಿಯುವುದು ಸಹ ಮುಖ್ಯವಾಗಿದೆ. ಸರಿಯಾಗಿ ಬಳಕೆಯಾಗದಿದ್ದರೆ ಹಣವು ಕೈಯಿಂದ ನೀರಿನಂತೆ ಹರಿಯುತ್ತದೆ. ಆದ್ದರಿಂದ, ಹಣವನ್ನು ಬುದ್ಧಿವಂತಿಕೆಯಿಂದ ಬಳಸಿ. ಖರ್ಚು ಮಾಡುವುದನ್ನು ನಿಯಂತ್ರಿಸದಿದ್ದರೆ, ಎಷ್ಟೇ ಹಣ ಸಂಪಾದಿಸಿದರೂ ಬಡತನಕ್ಕೆ ಗುರಿಯಾಗಬೇಕಾಗುತ್ತದೆ.

ಇದನ್ನೂ ಓದಿ 

Chanakya Niti: ಜೀವನ ಸಂಗಾತಿಯ ಆಯ್ಕೆಗೂ ಮುನ್ನ ಈ ವಿಚಾರ ತಿಳಿದಿರಲಿ; ಮದುವೆಯ ವಿಚಾರದಲ್ಲಿ ಚಾಣಕ್ಯರು ನೀಡಿದ ಸಲಹೆಗಳು ಹೀಗಿವೆ

ಆಚಾರ್ಯ ಚಾಣಕ್ಯರು ನೀತಿಶಾಸ್ತ್ರ ಪುಸ್ತಕದಲ್ಲಿ ವೈವಾಹಿಕ ಜೀವನದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆಯಾಗುವ ಮುನ್ನ ನಮಗೆ ಸರಿಯಾದ ಜೀವನ ಸಂಗಾತಿ ಯಾರು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ. ಮದುವೆಯ ವಿಚಾರದಲ್ಲಿ ಚಿಂತನಶೀಲರಾಗಿರಬೇಕು. ಆತುರ ಮಾಡಬಾರದು. ಆತುರದಿಂದ ಯಾರದ್ದೋ ಅಭಿಪ್ರಾಯಕ್ಕೆ ಮದುವೆ ಆದರೆ ಭವಿಷ್ಯದಲ್ಲಿ ಪತಿ, ಪತ್ನಿಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ವಿಚಾರಗಳನ್ನು ಗಮನಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ