Chanakya Niti: ಜೀವನ ಸಂಗಾತಿಯ ಆಯ್ಕೆಗೂ ಮುನ್ನ ಈ ವಿಚಾರ ತಿಳಿದಿರಲಿ; ಮದುವೆಯ ವಿಚಾರದಲ್ಲಿ ಚಾಣಕ್ಯರು ನೀಡಿದ ಸಲಹೆಗಳು ಹೀಗಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಜೀವನ ಸಂಗಾತಿಯ ಆಯ್ಕೆಗೂ ಮುನ್ನ ಈ ವಿಚಾರ ತಿಳಿದಿರಲಿ; ಮದುವೆಯ ವಿಚಾರದಲ್ಲಿ ಚಾಣಕ್ಯರು ನೀಡಿದ ಸಲಹೆಗಳು ಹೀಗಿವೆ

Chanakya Niti: ಜೀವನ ಸಂಗಾತಿಯ ಆಯ್ಕೆಗೂ ಮುನ್ನ ಈ ವಿಚಾರ ತಿಳಿದಿರಲಿ; ಮದುವೆಯ ವಿಚಾರದಲ್ಲಿ ಚಾಣಕ್ಯರು ನೀಡಿದ ಸಲಹೆಗಳು ಹೀಗಿವೆ

ಪ್ರತಿಯೊಬ್ಬರು ಜೀವನ ಸಂಗಾತಿಯನ್ನು ಹೊಂದಿರುವುದು ಬಹಳ ಮುಖ್ಯ. ಸಂಗಾತಿಯು ಯಾವುದೇ ಪರಿಸ್ಥಿತಿಯಲ್ಲೂ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ. ಆಗ ನಿಮ್ಮ ಜೀವನ ಸುಗಮವಾಗಿ ಸಾಗುತ್ತದೆ. ಒಬ್ಬರೇ ಇರುವ ಪರಿಸ್ಥಿತಿ ಸಂಕಟವನ್ನು ತಂದೊಡ್ಡಬಹುದು. ಆದರೆ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ವಿಚಾರಗಳನ್ನು ಗಮನಿಸಬೇಕು ಎನ್ನುತ್ತಾರೆ ಚಾಣಕ್ಯ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ನೀತಿಶಾಸ್ತ್ರ ಪುಸ್ತಕದಲ್ಲಿ ವೈವಾಹಿಕ ಜೀವನದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮದುವೆಯಾಗುವ ಮುನ್ನ ನಮಗೆ ಸರಿಯಾದ ಜೀವನ ಸಂಗಾತಿ ಯಾರು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ. ಮದುವೆಯ ವಿಚಾರದಲ್ಲಿ ಚಿಂತನಶೀಲರಾಗಿರಬೇಕು. ಆತುರ ಮಾಡಬಾರದು. ಆತುರದಿಂದ ಯಾರದ್ದೋ ಅಭಿಪ್ರಾಯಕ್ಕೆ ಮದುವೆ ಆದರೆ ಭವಿಷ್ಯದಲ್ಲಿ ಪತಿ, ಪತ್ನಿಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ವಿಚಾರಗಳನ್ನು ಗಮನಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ.

ತಾಳ್ಮೆ

ಜೀವನದಲ್ಲಿ ಎಲ್ಲರ ಪರಿಸ್ಥಿತಿ ಹಾಗೂ ಸಮಯ ಒಂದೇ ರೀತಿ ಇರುವುದಿಲ್ಲ. ಇದು ಕಾಲಕಾಲಕ್ಕೆ ಬದಲಾಗಬಹುದು. ಜೀವನದಲ್ಲಿ ಏರಿಳಿತಗಳಿರುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ ನೀವು ಮತ್ತು ನಿಮ್ಮ ಸಂಗಾತಿಯು ತಾಳ್ಮೆಯಿಂದಿರುವುದು ಬಹಳ ಮುಖ್ಯ. ಮದುವೆಗೂ ಮೊದಲು ನಿಮ್ಮ ಸಂಗಾತಿಯಲ್ಲಿ ತಾಳ್ಮೆ ಇದೆಯೇ ಪರಿಶೀಲಿಸಿ. ಇದರಿಂದ ನಂತರ ವಿಷಾದವಿರುವುದಿಲ್ಲ. ತಾಳ್ಮೆಯುಳ್ಳ ವ್ಯಕ್ತಿ ಕಷ್ಟದ ಸಮಯದಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾನೆ. ಅವರ ತಾಳ್ಮೆಯು ನಿಮಗೆ ಸರಿ ದಾರಿ ತೋರಿಸುತ್ತದೆ. ನಿಮ್ಮ ಸಂಗಾತಿಯು ತಾಳ್ಮೆಯ ಗುಣವನ್ನು ಹೊಂದಿದ್ದರೆ, ನೀವು ದೊಡ್ಡ ಸವಾಲುಗಳನ್ನು ಸಹ ಸುಲಭವಾಗಿ ಜಯಿಸಬಹುದು. ನಿಮ್ಮ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ.

ದೇವರ ಮೇಲೆ ನಂಬಿಕೆ

ಚಾಣಕ್ಯರ ಪ್ರಕಾರ ವ್ಯಕ್ತಿಗಳಿಗೆ ದೇವರಲ್ಲಿ ನಂಬಿಕೆ ಇರುವುದು ಮುಖ್ಯ. ನೀವು ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮುನ್ನ ಅವರಿಗೆ ದೇವರಲ್ಲಿ ನಂಬಿಕೆ ಇದೆಯೇ ಇಲ್ಲವೇ ಎಂಬುದನ್ನು ಕಂಡುಹಿಡಿಯಿರಿ. ದೇವರಲ್ಲಿ ನಂಬಿಕೆ ಇರುವ ಮನುಷ್ಯ ಕುಟುಂಬಕ್ಕೆ ಬದ್ಧರಾಗಿರುತ್ತಾರೆ. ಅವರ ಮುಖವನ್ನಷ್ಟೇ ಅಲ್ಲ, ಮನಸ್ಸನ್ನೂ ನೋಡಬೇಕು ಎನ್ನುತ್ತಾರೆ ಚಾಣಕ್ಯ. ಬಾಹ್ಯ ಸೌಂದರ್ಯವು ಕಾಲಾನಂತರದಲ್ಲಿ ಮರೆಯಾಗುತ್ತದೆ. ಆದರೆ ಆಂತರಿಕ ಸೌಂದರ್ಯ ಎಂದೆಂದಿಗೂ ಶಾಶ್ವತ. ನಿಮ್ಮ ಸಂಗಾತಿ ದೇವರನ್ನು ನಂಬುವವರಾಗಿದ್ದರೆ ಅವರ ಆಂತರಿಕ ಸೌಂದರ್ಯ ಚೆನ್ನಾಗಿರುತ್ತದೆ. ದೇವರನ್ನು ನಂಬುವ ವ್ಯಕ್ತಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ.

ಗೌರವಿಸುವ ಗುಣ

ಯಾವುದೇ ಸಂಬಂಧದಲ್ಲಿ ಪರಸ್ಪರ ಗೌರವ ಬಹಳ ಮುಖ್ಯ ಎಂದು ಚಾಣಕ್ಯ ಹೇಳಿದ್ದರು. ಪತಿ-ಪತ್ನಿಯರ ನಡುವಿನ ಸಂಬಂಧದ ವಿಷಯಕ್ಕೆ ಬಂದಾಗ, ಇಬ್ಬರೂ ಪರಸ್ಪರ ಗೌರವಿಸಬೇಕು. ಆಗ ಮಾತ್ರ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂಗಾತಿಯು ಹಿರಿಯರನ್ನು ಗೌರವಿಸಬೇಕು. ಇದರಿಂದ ನಿಮ್ಮ ತಂದೆ ತಾಯಿಯ ಜೀವನವೂ ಸಂತೋಷವಾಗುತ್ತದೆ. ಒಟ್ಟಾರೆ ಸುಖ ಸಂಸಾರಕ್ಕೆ ಇದುವೇ ಮದ್ದು.

ಸಹನೆ

ಸಂಯಮ ಮತ್ತು ಸಹನೆ ಹೊಂದಿರುವ ವ್ಯಕ್ತಿಯು ಎಲ್ಲಾ ಕಷ್ಟಕರ ಸಂದರ್ಭಗಳಿಂದ ಕುಟುಂಬವನ್ನು ರಕ್ಷಿಸುತ್ತಾನೆ. ಕಷ್ಟಕಾಲದಲ್ಲಿ ಕುಟುಂಬಕ್ಕೆ ಗುರಾಣಿಯಾಗಿ ನಿಲ್ಲುತ್ತಾರೆ. ಮದುವೆಗೆ ಮೊದಲು ನಿಮ್ಮ ಸಂಗಾತಿಯ ಸಹನೆಯನ್ನು ಪರಿಶೀಲಿಸಿ.

ಕೋಪ

ಮದುವೆಗೂ ಮುನ್ನ ನಿಮ್ಮ ಸಂಗಾತಿಯ ಕೋಪವನ್ನು ನೀವು ಪರಿಶೀಲಿಸಬೇಕು. ಕೋಪವು ಸಂಬಂಧಗಳ ನಡುವೆ ಬಿರುಕು ಉಂಟಾಗಲು ಕಾರಣವಾಗುತ್ತದೆ. ಕೋಪದಲ್ಲಿದ್ದಾಗ ವ್ಯಕ್ತಿಯು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಮರೆತುಬಿಡುತ್ತಾನೆ. ಕೋಪಗೊಂಡ ವ್ಯಕ್ತಿ ತನ್ನ ಸಂಗಾತಿಯ ಬಗ್ಗೆಯೂ ಆಲೋಚಿಸುವುದಿಲ್ಲ. ಸಂಗಾತಿಯೊಂದಿಗೂ ಕೋಪದ ವರ್ತನೆ ತೋರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು.

ಇದನ್ನೂ ಓದಿ

Chanakya Niti: ಜೀವನದಲ್ಲಿ ಈ ಮೂವರ ಬಗ್ಗೆ ಜಾಗರೂಕರಾಗಿರಬೇಕು, ಅವರು ಹಾವಿಗಿಂತ ಅಪಾಯಕಾರಿ ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರ ಪ್ರಕಾರ ಈ ಜಗತ್ತಿನಲ್ಲಿ ಕೆಲವು ಮನುಷ್ಯರು ಹಾವಿಗಿಂತಲೂ ಅಪಾಯಕಾರಿಯಾಗಿರುತ್ತಾರೆ. ಅಂತಹವರನ್ನು ನಂಬಿದರೆ ಅವರು ಬೆನ್ನಿಗೆ ಚೂರಿ ಹಾಕುವುದು ಖಂಡಿತ. ಅವರು ನಮಗೆ ತಿಳಿಯದಂತೆ ನಮ್ಮ ಜೀವನವನ್ನು ನಾಶ ಮಾಡುತ್ತಾರೆ. ಅಂತಹವರ ಬಳಿ ಸಹಾಯ ಕೇಳುವುದು, ಅಂತಹವರ ಸಹವಾಸ ಮಾಡುವುದು ಎಂದಿಗೂ ಒಳ್ಳೆಯದಲ್ಲ ಎನ್ನುವ ಚಾಣಕ್ಯ ಜೀವನದಲ್ಲಿ ಸುಖವಾಗಿರಬೇಕು ಎಂದರೆ ಅಂತಹವರಿಂದ ದೂರ ಇರಬೇಕು ಎನ್ನುತ್ತಾರೆ.

Whats_app_banner