Chanakya Niti: ಯಶಸ್ಸು, ಶ್ರೀಮಂತಿಕೆ ಸದಾ ನಿಮ್ಮ ಜೊತೆ ಇರಬೇಕು ಅಂದ್ರೆ ಚಾಣಕ್ಯರ ಈ ಸಲಹೆಗಳನ್ನ ತಪ್ಪದೇ ಪಾಲಿಸಿ
Nov 30, 2024 07:38 AM IST
ಚಾಣಕ್ಯ ನೀತಿ
- ಚಾಣಕ್ಯರು ಮಹಾನ್ ವಿದ್ವಾಂಸ. ಅವರು ತಮ್ಮ ನೀತಿಶಾಸ್ತ್ರ ಪುಸ್ತಕದಲ್ಲಿ ಬದುಕಿನ ಕುರಿತ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶ್ರೀಮಂತರಾಗಲು ಬಯಸುವವರಿಗೆ ಚಾಣಕ್ಯ ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಗಳನ್ನು ಅನುಸರಿಸಿದರೆ ಯಶಸ್ಸು ಸದಾ ನಿಮ್ಮ ಕಡೆ ಇರುತ್ತದೆ. ಶ್ರೀಮಂತಿಕೆ, ಯಶಸ್ಸು ನಿಮ್ಮನ್ನ ಹಿಂಬಾಲಿಸಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ.
ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಇದರಿಂದ ನಾವು ಜೀವನದ ಬಗ್ಗೆ ಬಹಳಷ್ಟು ಕಲಿಯುತ್ತೇವೆ. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿರುವ ವಿಚಾರಗಳನ್ನು ಅನುಸರಿಸಿದರೆ ನಾವು ಯಶಸ್ವಿ ಹಾಗೂ ಸಮೃದ್ಧ ಜೀವನ ನಡೆಸಲು ಸಾಧ್ಯವಾಗುತ್ತದೆ. ಚಾಣಕ್ಯರ ನೀತಿಗಳು ಎಲ್ಲ ಕಾಲಕ್ಕೂ ಸಲ್ಲುವಂಥದ್ದು, ಇದು ನಮಗೆ ಬದುಕಿನ ಪಾಠಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಚಾಣಕ್ಯರು ಬದುಕಿನ ಕುರಿತು ಹಲವು ವಿಚಾರಗಳನ್ನು ನೀತಿಶಾಸ್ತ್ರದಲ್ಲಿ ತಿಳಿಸಿದ್ದಾರೆ.
ಚಾಣಕ್ಯರು ಬಡತನ ದೂರವಾಗಿ ಶ್ರೀಮಂತರಾಗಲು ಏನು ಮಾಡಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ಇದರೊಂದಿಗೆ ಯಶಸ್ಸು ಸದಾ ಹಿಂಬಾಲಿಸಲು ನಾವೇನು ಮಾಡಬೇಕು ಎಂಬುದನ್ನೂ ತಿಳಿಸಿದ್ದಾರೆ. ಚಾಣಕ್ಯರು ಹೇಳಿದ ಈ ಸೂತ್ರಗಳನ್ನ ಅನುಸರಿಸುವ ಮೂಲಕ ನೀವು ಶ್ರೀಮಂತಿಕೆ, ಯಶಸ್ಸು ಪಡೆಯಬಹುದು. ಅದಕ್ಕಾಗಿ ನೀವು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಂತಹ ಅಭ್ಯಾಸಗಳು ಯಾವುವು ನೋಡಿ.
ತಾಳ್ಮೆಯಿಂದಿರುವುದು
ಚಾಣಕ್ಯ ನೀತಿಯ ಪ್ರಕಾರ ಮನುಷ್ಯ ಯಾವಾಗಲೂ ತಾಳ್ಮೆಯಿಂದ ಇರಬೇಕು. ಎಂತಹ ಬಿಕ್ಕಟ್ಟಿನ ಸಮಸ್ಯೆ ಎದುರಾದರೂ ತಾಳ್ಮೆ ಕಳೆದುಕೊಳ್ಳಬಾರದು. ಹೀಗೆ ತಾಳ್ಮೆ ಹೊಂದಿರುವ ಜನರು ಎಂತಹ ಕಷ್ಟದ ಪರಿಸ್ಥಿತಿ ಎಂದರೂ ಅದನ್ನು ಎದುರಿಸಲು ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಇಂತಹವರು ಜೀವನದಲ್ಲಿ ಹಣ ಬೇಗ ಯಶಸ್ಸು ಕಾಣುತ್ತದೆ. ಸದಾ ಯಶಸ್ಸು ಇವರಿಗೆ ಹಣ, ಶ್ರೀಮಂತಿಕೆಯನ್ನೂ ತರುತ್ತದೆ. ತಾಳ್ಮೆ ಇಲ್ಲದ ಮನುಷ್ಯ ಎಲ್ಲವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾನೆ.
ಸೋಮಾರಿತನದಿಂದ ದೂರಾಗಿ
ಸೋಮಾರಿತನವು ಮನುಷ್ಯನ ದೊಡ್ಡ ಶತ್ರು. ಇದು ಮನುಷ್ಯ ಪ್ರಗತಿಗೆ ಅಡ್ಡಿಯಾಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಮೊದಲು ಸೋಮಾರಿತನದಿಂದ ದೂರಾಗಿ. ಸೋಮಾರಿತನ ಬಿಟ್ಟಾಗ ಯಶಸ್ಸು, ಹಣ, ಸಂಪತ್ತು ಎಲ್ಲವೂ ನಿಮ್ಮನ್ನು ಹುಡುಕಿ ಬರುತ್ತದೆ.
ಗುರಿ ಮೇಲೆ ಗಮನ ಹರಿಸುವುದು
ಮನುಷ್ಯನಿಗೆ ಜೀವನದಲ್ಲಿ ಗುರಿ ಬಹಳ ಮುಖ್ಯ. ಮನುಷ್ಯನ ಶ್ರೀಮಂತಿಕೆಯು ಗುರಿಗಳ ಮೇಲೆ ಅವಲಂಬಿತವಾಗಿದೆ. ಎಷ್ಟು ಕಷ್ಟವಾದರೂ ಸರಿ ನನ್ನ ಗುರಿಯನ್ನು ನಾನು ಸಾಧಿಸಿಯೇ ಬಿಡುತ್ತೇನೆ ಎಂಬ ಛಲ ನಿಮ್ಮಲ್ಲಿ ಇರಬೇಕು. ಗುರಿ ಸಾಧಿಸಿದ ಮನುಷ್ಯ ಶ್ರೀಮಂತನಾಗುವುದು ಅಸಾಧ್ಯವೇನಲ್ಲ.
ಗೌಪ್ಯತೆ ಕಾಪಾಡಿಕೊಳ್ಳುವುದು
ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಅಥವಾ ಶ್ರೀಮಂತರಾಗಲು ಗೌಪ್ಯತೆ ಕಾಪಾಡಿಕೊಳ್ಳುವುದನ್ನು ತಿಳಿದಿರಬೇಕು. ನೀವು ಯಾವುದೇ ಯೋಜನೆಯನ್ನು ಮಾಡಿದ್ದರು ಅದನ್ನು ಇತರರಿಂದ ಗೌಪ್ಯವಾಗಿ ಇಡಬೇಕು. ನಿಮ್ಮ ಯೋಜನೆ ಹಾಗೂ ಗುರಿಯನ್ನು ಎಲ್ಲರೊಂದಿಗೂ ಹಂಚಿಕೊಂಡರೆ ಗುರಿ ಮುಟ್ಟುವಲ್ಲಿ ನೀವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಇದರಿಂದ ನಿಮಗೆ ಸಂಕಷ್ಟಗಳೇ ಜಾಸ್ತಿ. ಹಾಗಾಗಿ ನಿಮ್ಮ ಗುರಿಯನ್ನು ಯಾರಿಗೂ ಹಂಚಿಕೊಳ್ಳದೇ ಯಶಸ್ಸಿನತ್ತ ಸಾಗಿ.
(ಗಮನಿಸಿ: ಈ ಬರಹವು ಸಾಮಾನ್ಯಜ್ಞಾನ ಹಾಗೂ ಅಂರ್ತಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರವನ್ನು ನಂಬುವ ಮೊದಲು ಪರಿಶೀಲಿಸಿ)
ವಿಭಾಗ