logo
ಕನ್ನಡ ಸುದ್ದಿ  /  ಜೀವನಶೈಲಿ  /  Dasara 2023: ದಸರಾ ದಿನಾಂಕ, ಇತಿಹಾಸ, ಹಿನ್ನೆಲೆ ಸೇರಿ ತಿಳಿದುಕೂಳ್ಳಲೇಬೇಕಾದ ವಿಷಯಗಳಿವು

Dasara 2023: ದಸರಾ ದಿನಾಂಕ, ಇತಿಹಾಸ, ಹಿನ್ನೆಲೆ ಸೇರಿ ತಿಳಿದುಕೂಳ್ಳಲೇಬೇಕಾದ ವಿಷಯಗಳಿವು

Raghavendra M Y HT Kannada

Aug 31, 2023 08:46 AM IST

google News

ಕರ್ನಾಟಕ ಸೇರಿ ದೇಶಾದ್ಯಂತ ದಸರಾ ಆಚರಣೆಗೆ ಸಿದ್ಧತೆಗಳು ಆರಂಭಗೊಂಡಿವೆ (ಫೈಲ್-HT)

  • 2023ರ ಅಕ್ಟೋಬರ್ 24 ರ ಮಂಗಳವಾರ ಈ ಬಾರಿ ದಸರಾವನ್ನು (ವಿಜಯ ದಶಮಿ) ಅದ್ಧೂರಿಯಾಗಿ ಆಚರಿಸಲಾಗುತ್ತದೆ. ವಿಜಯದ ಸಂಕೇತವಾಗಿರುವ ದಸರಾ ಇತಿಹಾಸ, ಹಿನ್ನೆಲೆ ಸೇರಿ ಪ್ರಮುಖ ವಿಷಯಗಳ ಮಾಹಿತಿ ಇಲ್ಲಿದೆ.

ಕರ್ನಾಟಕ ಸೇರಿ ದೇಶಾದ್ಯಂತ ದಸರಾ ಆಚರಣೆಗೆ ಸಿದ್ಧತೆಗಳು ಆರಂಭಗೊಂಡಿವೆ (ಫೈಲ್-HT)
ಕರ್ನಾಟಕ ಸೇರಿ ದೇಶಾದ್ಯಂತ ದಸರಾ ಆಚರಣೆಗೆ ಸಿದ್ಧತೆಗಳು ಆರಂಭಗೊಂಡಿವೆ (ಫೈಲ್-HT)

ಬೆಂಗಳೂರು: ಭಾರತದಲ್ಲಿ ದಸರಾ (Dasara 2023/Dussehra 2023) ಹಿಂದೂ ಧರ್ಮದಲ್ಲಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ದಸರಾ ಅಥವಾ ವಿಜಯದಶಮಿ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ನಾಡಹಬ್ಬವಾಗಿ ಆಚರಿಸಲಾಗುತ್ತದೆ. ಹಬ್ಬಕ್ಕೆ ವಿಶೇಷ ಮಹತ್ವವಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ದಸರಾವನ್ನು ಆಚರಿಸಲಾಗುತ್ತದೆ. ಈ ಬಾರಿ 2023ರ ಅಕ್ಟೋಬರ್ 24ರ ಮಂಗಳವಾರ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ದುರ್ಗಾ ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸಿದರೆ, ದಕ್ಷಿಣ ಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ಚಾಮುಂಡೇಶ್ವರಿಯನ್ನು ಪೂಜಿಸಲಾಗುತ್ತದೆ. ಚಾಮುಂಡೇಶ್ವರಿ ಮಹಿಷಾಸುರ ಎಂಬ ರಾಕ್ಷಸನನ್ನು ವಧೆ ಮಾಡಿದ ದಿನವನ್ನಾಗಿ ಆಚರಿಸಲಾಗುತ್ತದೆ ಎಂಬ ಪ್ರತೀತಿ ಇದೆ.

9 ದಿನಗಳ ನವರಾತ್ರಿಯ ವೈಶಿಷ್ಟ್ಯವೇನು?

ದಸರಾ ಹಬ್ಬವನ್ನು ಕೆಡುವಿನ ಮೇಲೆ ಒಳಿತಿನ ವಿಜಯವನ್ನು ಸೂಚಿಸುತ್ತದೆ. ಅಲ್ಲದೆ, ಒಂಬತ್ತು ದಿನಗಳ ಹಬ್ಬವಾಗಿದ್ದು, 2023ರ ಅಕ್ಟೋಬರ್ 15 ರಿಂದ ನವರಾತ್ರಿ ಆರಂಭವಾಗಲಿದೆ. ನವರಾತ್ರಿಯಲ್ಲಿ ಒಂಭತ್ತು ದಿನ ಚಾಮುಂಡೇಶ್ವರಿಯನ್ನು ಪೂಜಿಸಲಾಗುತ್ತದೆ.

ಪೌರಾಣಿಕ ಕಥೆಗಳ ಪ್ರಕಾರ, ಮೈಸೂರನ್ನು ರಾಕ್ಷಸ ಮಹಿಷಾಸುರನು ಆಳುತ್ತಿದ್ದನು. ದೇವತೆಗಳ ಪ್ರಾರ್ಥನೆಯನ್ನು ಕೇಳಿ ಪಾರ್ವತಿ ದೇವಿ ಚಾಮುಂಡೇಶ್ವರಿಯ ಅವತಾರದಲ್ಲಿ ಹುಟ್ಟಿ ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಮಹಿಷಾಸುರನನ್ನು ಕೊಂದಿದ್ದಾಳೆ. ಬೆಟ್ಟಕ್ಕೆ ಚಾಮುಂಡಿ ಬೆಟ್ಟ ಹಾಗೂ ನಗರಕ್ಕೆ ಮೈಸೂರು ನಗರ ಎಂಬ ಹೆಸರುಗಳು ಬಂದವು ಎಂದು ಹೇಳಲಾಗಿದೆ. ಮಹಿಷಾಸುರನನ್ನು ಕೊಂದ ನಂತರ ಚಾಮುಂಡೇಶ್ವರಿ ಬೆಟ್ಟದ ಮೇಲೆಯೇ ಉಳಿದುಕೊಂಡಳು ಕಥೆಗಳು ಹೇಳುತ್ತವೆ.

ಸೀತೆಯನ್ನು ರಕ್ಷಿಸಿಕೊಳ್ಳಲು ರಾವಣನ ವಿರುದ್ಧ ಶ್ರೀರಾಮನ ಯುದ್ಧ

ದಸರಾ ಆಚರಣೆ ಪ್ರಾಚೀನ ಕಾಲದಿಂದಲೂ ನಡೆದುಕೊಂಡ ಬಂದಿದೆ. ರಾಮಾಯಣದ ಪ್ರಕಾರ, ಸೀತೆಯನ್ನು ರಾವಣ ಅಪಹರಿಸಿರುತ್ತಾನೆ. ಆಗ ಶ್ರೀರಾಮನು ತನ್ನ ಪತ್ನಿ ಸೀತೆ ಮತ್ತು ಸಹೋದರರಾದ ಲಕ್ಷ್ಮಣನನ್ನು ರಾಕ್ಷಸ ರಾಜ ರಾವಣನಿಂದ ರಕ್ಷಿಸಿಕೊಳ್ಳಲು ರಾವಣನ ವಿರುದ್ಧ ಹೋರಾಡುತ್ತಾನೆ. 9 ದಿನಗಳ ಕಾಲ ಯುದ್ಧ ನಡೆಯುತ್ತದೆ. ಅಂತಿಮವಾಗಿ 10ನೇ ದಿನ ಶ್ರೀರಾಮ ರಾವಣನನ್ನು ಸೋಲಿಸುತ್ತಾನೆ. ಇದನ್ನೇ ದಸರಾ ಎಂದು ಆಚರಿಸಲಾಗುತ್ತದೆ ಎಂದು ಕಥೆಗಳಲ್ಲಿ ಹೇಳಲಾಗಿದೆ.

ಶ್ರೀರಾಮನ ವಿಜಯವು ದುಷ್ಟ ಶಕ್ತಿಗಳ ಮೇಲಿನ ವಿಜಯವನ್ನು ಸಂಕೇತವಾಗಿದೆ. ರಾಮನು ಅಯೋಧ್ಯೆಗೆ ಹಿಂದಿರುಗಿದ ಕಥೆಯನ್ನು ಭಾರತದ ದಸರಾ ಆಚರಣೆಗಳಲ್ಲಿ ವಿವಿಧ ಸಾಂಸ್ಕೃತಿಕ ದೃಷ್ಟಿಕೋನಗಳಲ್ಲಿ ಚಿತ್ರಿಸಲಾಗಿದೆ.

ಇನ್ನೊಂದು ಪೌರಾಣಿಕ ಕಥೆಯಲ್ಲಿ ಎಮ್ಮೆ ತಲೆಯ ದೈತ್ಯನಾದ ರಾಕ್ಷಸ ಮಹಿಷಾಸುರನ ವಿರುದ್ಧ ದುರ್ಗಾ ದೇವಿಯ ಯುದ್ಧದ ಕಥೆಯಾಗಿದೆ. ದುರ್ಗಾ ದೇವಿ ಒಂಬತ್ತು ರಾತ್ರಿ ಮಹಿಷಾಸುರನೊಂದಿಗೆ ಹೋರಾಡಿ ಅಂತಿಮವಾಗಿ 10ನೇ ದಿನ ಗೆಲುವು ಸಾಧಿಸುತ್ತಾಳೆ. ಆ ಹತ್ತನೇ ದಿನವನ್ನು ವಿಜಯದಶಮಿ ಅಂತ ಇಂದಿಗೂ ಆಚರಿಸಲಾಗುತ್ತಿದೆ. ಹಬ್ಬವನ್ನ ಕೆಡುಕಿನ ಮೇಲೆ ಒಳಿತಿನ ವಿಜಯ, ಕತ್ತಲೆಯ ಮೇಲಿನ ಬೆಳಕಿನ ವಿಜಯ ಅಂತಲೂ ವರ್ಣಿಸಲಾಗಿದೆ.

ಭಾರತದ ಶ್ರೀಮಂತ ಪರಂಪರೆ, ಸಂಪ್ರದಾಯವನ್ನು ಬಿಂಬಿಸು ಹಬ್ಬ

ದಸರಾ ಹಬ್ಬವು ಕಲೆ, ಸಂಗೀತ, ನೃತ್ಯ ಹಾಗೂ ನಾಟಕದ ವಿವಿಧ ಪ್ರಕಾರಗಳ ಮೂಲಕ ಭಾರತದ ಶ್ರೀಮಂತ ಪರಂಪರೆ ಹಾಗೂ ಸಂಪ್ರದಾಯಗಳನ್ನು ಬಿಂಬಿಸುತ್ತದೆ. ಈ ಹಬ್ಬವು ಸಮುದಾಯಗಳನ್ನು ಒಟ್ಟುಗೂಡಿಸುತ್ತದೆ. ಜನರಲ್ಲಿ ಏಕತೆ, ಸೌಹಾರ್ದತೆಯ ಭಾವನೆಯನ್ನು ಬೆಳೆಸುತ್ತದೆ. ದೇಶಾದ್ಯಂತ ಹಬ್ಬವನ್ನು ಒಂದೇ ದಿನ ಆಚರಿಸಿದರೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ.

ದುಷ್ಟ ಶಕ್ತಿಯನ್ನು ಹೊಡೆದೋಡಿಸುವ ಸಂಕೇತವಾಗಿ ನವರಾತ್ರಿಯ ಕೊನೆಯ ದಿನ ರಾವಣನ ದಹನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಇದನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ