logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಾಶಿ ಅನ್ನಪೂರ್ಣೇಶ್ವರಿ ದರ್ಶನಕ್ಕೆ ದೀಪಾವಳಿಯೇ ಶುಭ ಸಮಯ: ಅನ್ನ ಕೊಡುವ ದೇವಿಯ ಕಥೆ, ಮಹಿಮೆ ಹೀಗಿದೆ

ಕಾಶಿ ಅನ್ನಪೂರ್ಣೇಶ್ವರಿ ದರ್ಶನಕ್ಕೆ ದೀಪಾವಳಿಯೇ ಶುಭ ಸಮಯ: ಅನ್ನ ಕೊಡುವ ದೇವಿಯ ಕಥೆ, ಮಹಿಮೆ ಹೀಗಿದೆ

HT Kannada Desk HT Kannada

Nov 10, 2023 12:32 PM IST

ಕಾಶಿ ಅನ್ನಪೂರ್ಣೇಶ್ವರಿ ದೇವಿ

    • ಕಾಶಿ ಅಥವಾ ವಾರಣಸಿ ಅಂದರೆ ಕಾಶಿ ವಿಶ್ವನಾಥ ದೇವಸ್ಥಾನ ಅಥವಾ ಗಂಗಾ ನದಿ ಮಾತ್ರವಲ್ಲ. ಅನ್ನ ಕೊಡುವ ದೇವಿ  ಅನ್ನಪೂರ್ಣೆ ನೆಲೆಸಿರುವ ಕಾಶಿ ಅನ್ನಪೂರ್ಣೇಶ್ವರಿ ದೇವಾಲಯವು ಒಂದು. ದೇವಿಯ ದರ್ಶನಕ್ಕೆ ದೀಪಾವಳಿಯೇ ಏಕೆ ಶುಭ ಸಮಯ? ದೇವಿಯ ಮಹಿಮೆ, ಪುರಾಣದ ಕಥೆ ಹೀಗಿದೆ.
ಕಾಶಿ ಅನ್ನಪೂರ್ಣೇಶ್ವರಿ ದೇವಿ
ಕಾಶಿ ಅನ್ನಪೂರ್ಣೇಶ್ವರಿ ದೇವಿ

ಹಿಂದೂ ಪವಿತ್ರ ಸ್ಥಳ, ದೈವೀ ಶಕ್ತಿಯ ಕೇಂದ್ರ ಕಾಶಿ ಅಥವಾ ವಾರಣಾಸಿಯ ಬಗ್ಗೆ ತಿಳಿಯದವರಿಲ್ಲ. ಕಾಶಿ ವಿಶ್ವನಾಥ ಹಾಗೂ ಗಂಗಾ ನದಿಯನ್ನು ಬಿಟ್ಟು ಇನ್ನೂ ಹಲವು ಆಶ್ಚರ್ಯಕರ ಸಂಗತಿಯಿದೆ. ಅದೇ ಕಾಶಿಯ ಅದ್ಭುತ ಅನ್ನ ಕೊಡುವ ದೇವಿ ಅನ್ನಪೂರ್ಣ ದೇವಿ ದೇವಾಲಯ. ನಮ್ಮೆಲ್ಲರ ನಂಬಿಕೆಯಂತೆ ಸಾಕ್ಷಾತ್‌ ಪಾರ್ವತಿ ದೇವಿಯೇ ಕರುಣಾಮಯಿ ರೂಪದಲ್ಲಿ ಇಲ್ಲಿ ನೆಲೆಸಿದ್ದಾಳೆ. ಜೀವಿಗಳು ವಾಸಿಸಲು ಅನ್ನ, ನೀರು ಕೊಡುವುದು ನಮ್ಮ ಭೂಮಿ ಎಂಬುದು ಸತ್ಯವಾದರೂ, ಕಾಶಿಗೆ ಅದನ್ನು ದಯಪಾಲಿಸಿದ್ದು ಅನ್ನಪೂರ್ಣ ದೇವಿ ಎಂದು ನಂಬಲಾಗಿದೆ. ವಿಶ್ವನಾಥ ಗಲ್ಲಿಯ ದಶಾಶ್ವಮೇಧ ರಸ್ತೆಯ ಕಾಶಿ ವಿಶ್ವನಾಥ ದೇವಾಲಯದ ಬಳಿಯೇ ಇರುವ ಅನ್ನಪೂರ್ಣ ದೇವಾಲಯದಲ್ಲಿ ದುರ್ಗೆಯ ಮಹಾಗೌರಿ ರೂಪವನ್ನು ಪೂಜಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಅನ್ನಪೂರ್ಣ ದೇವಿಯ ಕಥೆ

ಪುರಾಣದ ಜನಪ್ರಿಯ ಕಥೆಯ ಪ್ರಕಾರ, ಹಿಂದೂಗಳ ಆರಾಧ್ಯ ದೈವ ಶಿವನು, ಆಹಾರದ ಪ್ರಾಮುಖ್ಯತೆಯನ್ನು ನಿರಾಕರಿಸಿದನು. ಅದೊಂದು ಭ್ರಮೆ ಎಂದು ಹೇಳಿದನು. ಇದನ್ನು ಕೇಳಿದ ಜಗತ್ತಿನ ಶಕ್ತಿಯ ದ್ಯೋತಕಳಾದ ಪಾರ್ವತಿಯು ಬಹಳ ಬೇಸರ ವ್ಯಕ್ತಿಪಡಿಸಿದಳು. ಆಹಾರವು ಜೀವನದ ಅವಿಭಾಜ್ಯ ಅಂಗ ಎಂದು ಶಿವನಿಗೆ ತಿಳಿಯಪಡಿಸುವ ಸಲುವಾಗಿ ಅಲ್ಲಿಂದ ಕಣ್ಮರೆಯಾದಳು. ಅವಳ ಜೊತೆಗೆ ಭೂಮಿಯ ಆಹಾರದ ಮೂಲಗಳಿಂದಲೂ ಕಣ್ಮರೆಯಾದಳು. ಇದರಿಂದ ಶಿವನು ಆಹಾರದ ಮಹತ್ವವನ್ನು ಅರಿತನು. ತನ್ನ ಕೈಯಲ್ಲಿ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಆಹಾರಕ್ಕಾಗಿ ತನ್ನ ಸಂಗಾತಿ ಪಾರ್ವತಿಯಿಂದಲೇ ಭಿಕ್ಷೆ ಬೇಡಿದನು. ಅವಳ ಈ ಇನ್ನೊಂದು ರೂಪವೇ ಅನ್ನಪೂರ್ಣ ಅಂದರ ಜಗತ್ತಿಗೆ ಆಹಾರ ಮತ್ತು ಪೋಷಣೆ ನೀಡುವವಳು.

ಇದನ್ನೂ ಓದಿ: Deepavali 2023: ಈ ಅಂಶಗಳನ್ನು ಪಾಲಿಸಿದರೆ ದೀಪಾವಳಿಯಂದು ನಿಮ್ಮ ಮನೆಗೆ ಬರುವ ಲಕ್ಷ್ಮೀ ನಿಮ್ಮೊಂದಿಗೆ ಶಾಶ್ವತವಾಗಿ ನೆಲೆಸುತ್ತಾಳೆ

ಅನ್ನಕುಟ ಉತ್ಸವ

ಪವಿತ್ರ ಕಾಶಿ ಮಹಾ ಕ್ಷೇತ್ರದ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿಯೇ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನವಿದೆ. ಅಲ್ಲಿ ಭಕ್ತರು ಚಿನ್ನದ ಅನ್ನಪೂರ್ಣ ದೇವಿಯ ದರ್ಶನ ಪಡೆಯುತ್ತಾರೆ. ದೀಪಾವಳಿ ಮರುದಿನ ಆಚರಿಸವು ಅನ್ನಕುಟ ಉತ್ಸವದಲ್ಲಿ ವರ್ಷಕ್ಕೊಮ್ಮೆ ಸಾರ್ವಜನಿಕರು ಚಿನ್ನದ ಅನ್ನಪೂರ್ಣ ದೇವಿಯ ದರ್ಶನ ಪಡೆದುಕೊಳ್ಳಬಹುದಾಗಿದೆ. ದೇವಿಯ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಜನರು ಬರುತ್ತಾರೆ. ಉಳಿದ ದಿನಗಳಲ್ಲಿ ದೇವಿಯ ಹಿತ್ತಾಳೆಯ ವಿಗ್ರಹವನ್ನು ಪೂಜಿಸಲಾಗುತ್ತದೆ.

ಅನ್ನಪೂರ್ಣ ದೇವಿಯು ಸಹ ಐಶ್ವರ್ಯ ದೇವತೆಯಾದ ಮಹಾಲಕ್ಷ್ಮಿಯನ್ನು ಹೋಲುತ್ತಾಳೆ. ಪ್ರತಿ ವರ್ಷ ದೇವಸ್ಥಾನದವರು ದೇವಿಯ ಕೃಪಾದೃಷ್ಟಿಗೆ ಪಾತ್ರರಾಗಲು ಪೂಜಿಸಬೇಕಾದ ವಿಶೇಷ ನಾಣ್ಯಗಳನ್ನು ವಿತರಿಸುತ್ತಾರೆ. ಅನ್ನಪೂರ್ಣ ದೇವಿಯು ತನ್ನ ನಗರದಲ್ಲಿರುವ ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳುತ್ತಾಳೆ ಎಂಬುದು ಸ್ಥಳೀಯರ ನಂಬಿಕೆ.

ಅನ್ನಪೂರ್ಣ ದೇವಾಲಯಕ್ಕೆ ಭೇಟಿ ನೀಡಲು ಸರಿಯಾದ ಸಮಯ ಯಾವುದು

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಭಕ್ತರು ಅನ್ನಪೂರ್ಣ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಸ್ಥಾನದಲ್ಲಿ ಪ್ರತಿನಿತ್ಯ ನಡೆಯುವ ಅನ್ನದಾನದ ಸಲುವಾಗಿ ಭಕ್ತರು ದಾನ ನೀಡಬಹುದಾಗಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಅನ್ನದಾನ ನಡೆಯತ್ತದೆ. ಭಕ್ತರು ಭಕ್ತಿಯಿಂದ ನೀಡಿರುವ ದಾನದಿಂದಲೇ ಅಲ್ಲಿರುವ ವ್ಯವಸ್ಥಿತ ಅಡುಗೆಮನೆಯಿಂದ ಊಟದ ವ್ಯವಸ್ಥೆಯಾಗುತ್ತದೆ.

ಭೇಟಿ ನೀಡಲು ಸರಿಯಾದ ಸಮಯ ಯಾವುದು‌

ವಾರಣಾಸಿಯ ಅನ್ನಪೂರ್ಣ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ದೀಪಾವಳಿ ಮತ್ತು ಅನ್ನಕುಟ ಉತ್ಸವ. ಆದರೆ ಆ ಸಮಯದಲ್ಲಿ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇದರಿಂದ ವಿಪರೀತ ಜನಸಂದಣಿಯಾಗುತ್ತದೆ. ಅದರ ಬದಲಿಗೆ ನವೆಂಬರ್ ಅಂತ್ಯ ಅಥವಾ ಡಿಸೆಂಬರ್‌ನಂತಹ ಆಫ್-ಸೀಸನ್ ಸಮಯದಲ್ಲಿ ಪ್ರವಾಸ ಆಯೋಜಿಸಬಹುದು. ಹೊರರಾಜ್ಯದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ, ಅನ್ನಪೂರ್ಣ ದೇವಾಲಯದಲ್ಲಿ ಉಚಿತ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೂ, ಅಲ್ಲಿಗೆ ಬೇಟಿ ನೀಡುವ ಮೊದಲು ದೇವಸ್ಥಾನದ ಅಧಿಕಾರಿಗಳನ್ನು ಮುಂಚಿತವಾಗಿ ಸಂಪರ್ಕಿಸಿ, ವ್ಯವಸ್ಥೆಯ ಅನುಕೂಲತೆಯನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

    ಹಂಚಿಕೊಳ್ಳಲು ಲೇಖನಗಳು