logo
ಕನ್ನಡ ಸುದ್ದಿ  /  ಜೀವನಶೈಲಿ  /  ದೀಪಾವಳಿ ಸಂದರ್ಭ ಕುಟುಂಬದವರಿಂದ ದೂರ ಇದ್ದೀರಾ; ಬೇಸರ ಮಾಡ್ಬೇಡಿ, ಬೆಳಕಿನ ಹಬ್ಬವನ್ನು ಖುಷಿಯಾಗಿ ಈ ರೀತಿ ಆಚರಿಸಿ

ದೀಪಾವಳಿ ಸಂದರ್ಭ ಕುಟುಂಬದವರಿಂದ ದೂರ ಇದ್ದೀರಾ; ಬೇಸರ ಮಾಡ್ಬೇಡಿ, ಬೆಳಕಿನ ಹಬ್ಬವನ್ನು ಖುಷಿಯಾಗಿ ಈ ರೀತಿ ಆಚರಿಸಿ

Reshma HT Kannada

Oct 29, 2024 11:37 AM IST

google News

ದೀಪಾವಳಿ ಆಚರಣೆ

    • ಓದು, ಉದ್ಯೋಗದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಮನೆಯಿಂದ ಹೊರಗೆ ಇರುವವರ ಸಂಖ್ಯೆಯೇ ಹೆಚ್ಚು. ಆದರೆ ಹಬ್ಬದ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಒಂದು ಕಡೆ ಸೇರುತ್ತಾರೆ. ಆದರೆ ಈ ದೀಪಾವಳಿ ಹಬ್ಬಕ್ಕೂ ಮನೆಯವರೆಲ್ಲಾ ಸೇರಲು ಸಾಧ್ಯವಾಗಿಲ್ಲ ಎಂದರೆ ನೀವು ಒಂಟಿತನ ಅನುಭವಿಸುತ್ತಿದ್ದರೆ ನಿಮಗಾಗಿ ದೀಪಾವಳಿ ಆಚರಿಸುವ ಟಿಪ್ಸ್ ಇಲ್ಲಿದೆ ನೋಡಿ.
ದೀಪಾವಳಿ ಆಚರಣೆ
ದೀಪಾವಳಿ ಆಚರಣೆ (PC: Canva)

ದೀಪಾವಳಿ ಸಂಭ್ರಮ ಶುರುವಾಗಿದೆ. ಈ ಹಬ್ಬವು ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬವಾಗಿದ್ದು, ಮನೆಯವರೆಲ್ಲಾ ಸೇರಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಪರೀಕ್ಷೆ, ಕೆಲಸ, ಪ್ರಾಜೆಕ್ಟ್ ಎನ್ನುವ ಕಾರಣಕ್ಕೆ ಹಬ್ಬಕ್ಕೆ ಮನೆಗೆ ಹೋಗಲು ಆಗಿರುವುದಿಲ್ಲ. ಈ ರೀತಿ ಸಂದರ್ಭಗಳು ನಿಮ್ಮಲ್ಲೂ ಇರಬಹುದು. ನಿಮ್ಮ ಪೋಷಕರು ನಿಮ್ಮೊಂದಿಗೆ ವಾಸಿಸುತ್ತಿಲ್ಲವೇ? ನೀವು ಹಾಸ್ಟೆಲ್‌, ಪಿಜಿ ಅಥವಾ ವಿದೇಶದಲ್ಲಿ ನೆಲೆಸಿದ್ದೀರಾ? ನಿಮ್ಮ ಪೋಷಕರು ಅಜ್ಜಿ ಮನೆ ಮತ್ತು ಕುಟುಂಬದವರಿಂದ ಉಳಿದವರಿಂದ ದೂರ ಉಳಿದಿದ್ದಾರಾ ಅಂತಹ ಸಮಯದಲ್ಲಿ ಒಂಟಿತನ ಕಾಡುತ್ತದೆ. ಅಂತಹ ಸಂದರ್ಭದಲ್ಲಿ ದೀಪಾವಳಿ ಆಚರಿಸುವುದು ಹೇಗೆ ನೋಡಿ.

ಮಕ್ಕಳು ಏನು ಮಾಡಬಹುದು?

ಓದಿನ ಸಲುವಾಗಿ ಹಾಸ್ಟೆಲ್ ಅಥವಾ ಪಿಜಿಯಲ್ಲಿ ಉಳಿದುಕೊಂಡಿರುವ ಮಕ್ಕಳು ದೀಪಾವಳಿ ಹಬ್ಬಕ್ಕೆ ಮನೆಗೆ ಹೋಗಲು ಸಾಧ್ಯವಾಗಿಲ್ಲ ಎಂದರೆ ತಾಯಿಯ ಕೈಯಡುಗೆ, ತಂದೆಯೊಂದಿಗೆ ಸೇರಿ ಹಬ್ಬ ಆಚರಿಸುವುದನ್ನ ಮಿಸ್ ಮಾಡಿಕೊಳ್ಳುತ್ತಾರೆ. ಈ ಬಾರಿ ನೀವು ಮನೆಗೆ ಹೋಗಿಲ್ಲ ಎಂದರೆ ತಂದೆ–ತಾಯಿಯ ಜೊತೆ ಕರೆ ಮಾಡಿ ಮಾತನಾಡಿ. ನೀವಿರುವ ಜಾಗದಲ್ಲೇ ದೀಪಾವಳಿ ಆಚರಿಸಿ. ಮನೆಗೆ ವಿಡಿಯೊ ಕಾಲ್ ಮಾಡಿ ಅವರ ಸಂಭ್ರಮವನ್ನು ಹೆಚ್ಚಿಸಿ. ನೀವು ಮನೆಯಲ್ಲೇ ಇದ್ದರೆ ಹೇಗೆ ಇರುತ್ತಿದ್ದಿರಿ ಎಂಬುದನ್ನು ವಿಡಿಯೊ ಕಾಲ್ ಮಾಡುವ ಮೂಲಕ ತೋರಿಸಿ ತಂದೆ–ತಾಯಿಯನ್ನು, ಮನೆಯವರನ್ನು ಖುಷಿಪಡಿಸಿ. ಮನೆಯಲ್ಲಿ ಮಾಡಿದ ಕೈ ರುಚಿ ಮಿಸ್ ಮಾಡಿಕೊಳ್ಳುತ್ತಿದ್ದರೆ ಸ್ವೀಟ್‌ ಮಳಿಗೆಗೆ ಹೋಗಿ ಅಂಥದ್ದೇ ತಿನಿಸುಗಳನ್ನು ತಂದು ತಿನ್ನಿ. ಆದರೆ ಆರೋಗ್ಯ ಕೆಡದಂತೆ ನೋಡಿಕೊಳ್ಳಿ.

ಪೋಷಕರು ಏನು ಮಾಡಬಹುದು?

ಪೋಷಕರು ಹಬ್ಬದ ಸಮಯದಲ್ಲಿ ಮಕ್ಕಳು ಮನೆಗೆ ಬಾರದೇ ಇದ್ದಾಗ ಹೆಚ್ಚು ಬೇಸರ ಮಾಡಿಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ವಿಡಿಯೊ ಕರೆ ಮಾಡಿ ಮಾತನಾಡಿ. ಬೆಳಗಿನ ದೇವರ ಆರತಿಯಿಂದ ಸಂಜೆ ಪಟಾಕಿ ಹೊಡೆಯುವವರೆಗೆ ಎಲ್ಲಾ ಕ್ಷಣಗಳನ್ನು ವಿಡಿಯೊ ಕರೆ ಮಾಡುವ ಮೂಲಕ ಮಕ್ಕಳೊಂದಿಗೆ ಹಂಚಿಕೊಳ್ಳಿ. ಮನೆಯಲ್ಲಿ ಆಚರಿಸಿದ ಪ್ರತಿ ಆಚರಣೆಯನ್ನು ಫೋಟೊ ತೆಗೆದು, ವಿಡಿಯೊ ಮಾಡಿ ಮಕ್ಕಳಿಗೆ ಕಳುಹಿಸಿ ಸಂತೋಷಪಡಿ.

ದೀಪಾವಳಿಯನ್ನು ಮೋಜಿನಿಂದ ಆಚರಿಸಲು ಇತರ ಉಪಯುಕ್ತ ಸಲಹೆಗಳು

ಯಾರೇ ಆಗಲಿ ತಮ್ಮ ಕುಟುಂಬದಿಂದ ದೂರವಿದ್ದರೆ ಆನ್‌ಲೈನ್ ದೀಪಾವಳಿ ಆಚರಿಸಿಕೊಳ್ಳುವುದು ಈಗಿನ ಕಾಲಕ್ಕೆ ಹೊಂದುವ ಮಾರ್ಗವಾಗಿದೆ. ಇದರೊಂದಿಗೆ ಕುಟುಂಬದವರಿಗೆ ಸುಂದರ ಉಡುಗೊರೆಗಳನ್ನು ಕಳುಹಿಸಿ. ಗಿಫ್ಟ್ ವೋಚರ್‌ಗಳನ್ನು ಕಳುಹಿಸುವ ಮೂಲಕ ಅವರಿಗೆ ಇಷ್ಟಬಂದ ಉಡುಗೊರೆಗಳನ್ನ ಅಥವಾ ವಸ್ತುಗಳನ್ನು ತೆಗೆದುಕೊಳ್ಳಲು ಹೇಳಿ. ನೀವು ಇರುವ ಸ್ಥಳದಲ್ಲಿಯೇ ನಿಮ್ಮ ಮನೆಯಲ್ಲಿ ಆಚರಿಸುವ ದೀಪಾವಳಿ ಸಂಪ್ರದಾಯವನ್ನು ಪಾಲಿಸಬಹುದು. ಇದರಿಂದ ನಿಮಗೆ ಮನೆಯಿಂದ ದೂರ ಉಳಿಸಿದಿದ್ದೀರಿ ಎಂದು ಅನ್ನಿಸುವುದಿಲ್ಲ. ಪೌರಾಣಿಕ ಕಥೆಗಳನ್ನು ಓದುವುದು ಅಥವಾ ನೆಚ್ಚಿನ ಚಲನಚಿತ್ರವನ್ನು ಕೂಡ ದೀಪಾವಳಿ ಸಮಯದಲ್ಲಿ ಮನೆಯಿಂದ ದೂರ ಇದ್ದೇನೆ ಎಂಬ ಬೇಸರ ಕಳೆಯುವಂತೆ ಮಾಡುತ್ತದೆ.

  • ಮನೆಯಲ್ಲಿ ನಿಮ್ಮ ಮಕ್ಕಳ ಇಲ್ಲ ಅಂತ ಚಿಂತೆ ಮಾಡ್ಬೇಡಿ. ಅಕ್ಕಪಕ್ಕದ ಮಕ್ಕಳು ಇದ್ದರೆ ಅವರನ್ನು ನಿಮ್ಮ ಮನೆಗೆ ಬರಲು ಹೇಳಿ ದೀಪಾವಳಿ ಆಚರಿಸಿ.
  • ಯುವಕರು ನಿಮ್ಮ ಮನೆಯ ಅಕ್ಕಪ‌ಕ್ಕ ಹಿರಿಯರು ಮಾತ್ರ ಇದ್ದು, ಅವರು ಒಂಟಿತನ ಅನುಭವಿಸುತ್ತಿದ್ದಾರೆ ಎನ್ನಿಸಿದರೆ ನೀವೇ ಅವರ ಮನೆಗೆ ಹೋಗಿ ದೀಪಾವಳಿ ಸಂಭ್ರಮದಲ್ಲಿ ಭಾಗಿಯಾಗಿ. ಅವರಿಗೆ ಸಿಹಿ ತಿನಿಸುಗಳನ್ನು ನೀಡಿ. ಆಗ ಅವರಿಗೆ ಮಕ್ಕಳು ಒಮ್ಮೆ ಜೊತೆ ಇಲ್ಲ ಎನ್ನುವ ಭಾವನೆ ಬರುವುದಿಲ್ಲ.

ನೋಡಿದ್ರಲ್ಲ ದೀಪಾವಳಿ ಹಬ್ಬಕ್ಕೆ ಮಕ್ಕಳು ಮನೆಯಲ್ಲಿ ಇಲ್ಲ, ಪೋಷಕರು ನಮ್ಮಿಂದ ದೂರ ಇದ್ದಾರೆ ಎಂದೆಲ್ಲಾ ಯೋಚಿಸುವ ಅಗತ್ಯವಿಲ್ಲ. ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಮನೆಯಲ್ಲಿ ಯಾರೂ ಇಲ್ಲ ಎಂದರೂ ಸಂಭ್ರಮದಿಂದ ಹಬ್ಬವನ್ನು ಆಚರಿಸಬಹುದು.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ