ದೀಪಾವಳಿ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ವಿಶೇಷ ಉಡುಗೊರೆ ಕೊಡಬೇಕು ಅಂತಿದ್ದೀರಾ; ಇಲ್ಲಿದೆ ಒಂದಿಷ್ಟು ಗಿಫ್ಟ್ ಐಡಿಯಾಗಳು
Oct 31, 2024 03:46 PM IST
ದೀಪಾವಳಿಗೆ ಗಿಫ್ಟ್ ಐಡಿಯಾ
- ಭಾರತದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದೆ. ಈ ದೀಪಗಳ ಹಬ್ಬದಲ್ಲಿ ನಿಮ್ಮ ಆತ್ಮೀಯರಿಗೆ ಏನಾದ್ರೂ ವಿಶೇಷವಾದ ಉಡುಗೊರೆ ಕೊಡಬೇಕು ಎಂದುಕೊಂಡಿದ್ದು, ಏನು ಕೊಡೋದು ಅಂತ ಯೋಚಿಸ್ತಾ ಇದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಗಿಫ್ಟ್ ಐಡಿಯಾಗಳು. ಇದು ನಿಮ್ಮ ಬಜೆಟ್‌ಗೂ ಸರಿ ಹೊಂದಬಹುದು ನೋಡಿ.
ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಇದು 5 ದಿನಗಳ ಕಾಲ ನಡೆಯುವ ಹಬ್ಬ. ಈ ಹಬ್ಬದಲ್ಲಿ ದೀಪಗಳು, ಪಟಾಕಿ, ಸಿಹಿತಿನಿಸು ಎಲ್ಲಾ ವಿಶೇಷ. ಇದರೊಂದಿಗೆ ಪ್ರೀತಿ–ಪಾತ್ರರಿಗೆ ಉಡುಗೊರೆ ನೀಡುವ ಸಂಪ್ರದಾಯವೂ ಕೆಲವು ಭಾಗದಲ್ಲಿದೆ.
ನೀವು ಈ ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ, ಆತ್ಮೀಯರಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಅವರ ಪ್ರೀತಿ, ಸಹಕಾರಕ್ಕೆ ಧನ್ಯವಾದ ಹೇಳಬೇಕು ಅಂತಿದ್ದರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾಗಳು. ಈ ಉಡುಗೊರೆ ನಿಮಗೆ ಬಜೆಟ್ ಫ್ರೆಂಡ್ಲಿ ಕೂಡ ಆಗಿರುತ್ತದೆ. ಹಾಗಾದರೆ ದೀಪಾವಳಿಗೆ ಏನೆಲ್ಲಾ ಗಿಫ್ಟ್ ಕೊಡಬಹುದು ನೋಡಿ.
ಒಣಹಣ್ಣುಗಳ ಬಾಕ್ಸ್
ದೀಪಾವಳಿ ಹಬ್ಬಕ್ಕೆ ಕೊಡಲು ಇದು ಬೆಸ್ಟ್ ಗಿಫ್ಟ್ ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಬಹುತೇಕರು ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುವ ಕಾರಣ ಒಣಹಣ್ಣುಗಳನ್ನು ತಪ್ಪದೇ ತಿನ್ನುತ್ತಾರೆ. ಇದು ಅಗ್ಗದ ಗಿಫ್ಟ್ ಎಂದು ಕೂಡ ಅನ್ನಿಸುವುದಿಲ್ಲ. ಖರ್ಜೂರ, ಗೋಡಂಬಿ, ಬಾದಾಮಿ, ಪಿಸ್ತಾ, ಅಂಜೂರ, ವಾಲ್‌ನಟ್ ಮುಂತಾದ ಒಣಹಣ್ಣುಗಳ ಮಿಶ್ರಣ ಇರುವ ಬಾಕ್ಸ್ ಅನ್ನು ದೀಪಾವಳಿಗೆ ಗಿಫ್ಟ್ ರೂಪದಲ್ಲಿ ನೀಡಬಹುದು.
ಮೇಕಪ್ ಕಿಟ್
ಹೆಣ್ಣುಮಕ್ಕಳಿಗೆ ಅಥವಾ ಮಹಿಳೆಯರಿಗೆ ನೀವು ಗಿಫ್ಟ್ ಕೊಡಲು ಯೋಚಿಸುತ್ತಿದ್ದರೆ ಮೇಕಪ್ ಕಿಟ್‌ಗಿಂತ ಉತ್ತಮವಾಗಿರುವುದು ಇನ್ನೊಂದಿಲ್ಲ. ಅದರಲ್ಲೂ ಹಬ್ಬದ ಸಮಯದಲ್ಲಿ ಹೆಣ್ಣುಮಕ್ಕಳು ಸುಂದರವಾಗಿ ಅಲಂಕರಿಸಿಕೊಳ್ಳಲು ಇಷ್ಟಪಡುತ್ತಾರೆ. ಹಾಗಾಗಿ ಮೇಕಪ್ ಕಿಟ್ ಕೊಡುವುದು ಬೆಸ್ಟ್ ಆಯ್ಕೆ ಆಗಬಹುದು.
ಚಾಕೊಲೇಟ್
ಹಬ್ಬದ ಸಮಯದಲ್ಲಿ ಬಾಯಿ ಸಿಹಿ ಮಾಡಿಕೊಂಡು ಸಂತಸ ಹಂಚಿಕೊಳ್ಳಲಾಗುತ್ತದೆ. ಹಬ್ಬದ ಸಮಯದಲ್ಲಿ ನೀವು ಉಡುಗೊರೆ ರೂಪದಲ್ಲಿ ಚಾಕೊಲೇಟ್ ಬಾಕ್ಸ್ ನೀಡಬಹುದು. ಒಂದೇ ರೀತಿಯ ಚಾಕೊಲೇಟ್ ಕೊಡುವುದಕ್ಕಿಂತ ಬೇರೆ ಬೇರೆ ಚಾಕೊಲೇಟ್‌ಗಳನ್ನು ಬಾಕ್ಸ್‌ನಲ್ಲಿ ಹಾಕಿ ಗಿಫ್ಟ್ ಪ್ಯಾಕ್ ಮಾಡಿ ಕೊಡಬಹುದು. ಇದು ಮನೆಮಂದಿಯೆಲ್ಲಾ ಹಂಚಿ ತಿನ್ನುವಂತೆ ಆಗುತ್ತದೆ.
ಚಿನ್ನ, ಬೆಳ್ಳಿ ನಾಣ್ಯ
ದೀಪಾವಳಿ ಹಬ್ಬಕ್ಕೆ ನಿಮ್ಮ ಆತ್ಮೀಯರಿಗೆ ದುಬಾರಿ ಉಡುಗೊರೆ ಕೊಡಬೇಕು ಅಂತಿದ್ದರೆ ಲಕ್ಷ್ಮೀ, ಗಣೇಶ ಚಿತ್ತಾರವಿರುವ ಚಿನ್ನ ಅಥವಾ ಬೆಳ್ಳಿಯ ನಾಣ್ಯವನ್ನು ಕೊಡಬಹುದು.
ಆಭರಣಗಳ ಸೆಟ್
ಚಿನ್ನ, ಬೆಳ್ಳಿ ಅಥವಾ ಜರ್ಮನ್ ಸ್ವಿಲರ್‌ನಂತಹ ಆಭರಣಗಳನ್ನೂ ಗಿಫ್ಟ್ ಮಾಡಬಹುದು. ನಿಮಗೆ ಚಿನ್ನ, ಬೆಳ್ಳಿ ದುಬಾರಿ ಎನ್ನಿಸಿದರೆ ಜರ್ಮನ್ ಸಿಲ್ವರ್ ಆಯ್ಕೆ ಮಾಡಬಹುದು. ಇದರಲ್ಲೂ ಸಾಕಷ್ಟು ವೆರೈಟಿಗಳಿದ್ದು ನಿಮ್ಮ ಪ್ರೀತಿಪಾತ್ರರು ಮೆಚ್ಚುವ ಆಭರಣವನ್ನು ಉಡುಗೊರೆ ರೂಪದಲ್ಲಿ ಕೊಡಬಹುದು.
ಡೈನಿಂಗ್ ಸೆಟ್
ಡೈನಿಂಗ್ ಸೆಟ್, ಡಿನ್ನರ್‌ವೇರ್‌ಗಳನ್ನೂ ಕೂಡ ದೀಪಾವಳಿ ಉಡುಗೊರೆ ರೂಪದಲ್ಲಿ ಕೊಡಬಹುದು. ಇದು ಕೂಡ ಬಜೆಟ್ ಫ್ರೆಂಡ್ಲಿ ಗಿಫ್ಟ್. ಇದು ಬಹುಪಯೋಗಿ ಹಾಗೂ ಕೆಲವು ವರ್ಷಗಳ ಕಾಲ ಬಾಳಿಕೆ ಬರುವ ಗಿಫ್ಟ್ ಆಗಿದೆ.
ನೋಡಿದ್ರಲ್ಲ ಈ ಉಡುಗೊರೆಗಳಲ್ಲಿ ನಿಮ್ಮ ಬಜೆಟ್ ಯಾವುದು ಹೊಂದುತ್ತದೆ, ನಿಮ್ಮ ಪ್ರೀತಿ ಪಾತ್ರರಿಗೆ ಯಾವುದು ಇಷ್ಟವಾಗುತ್ತದೆ ಎಂಬುದನ್ನು ಪರಿಗಣಿಸಿ ಅವರಿಗೆ ಯಾವ ಗಿಫ್ಟ್ ಆಗಬಹುದು ಎಂದು ಆಯ್ಕೆ ಮಾಡಿ ಕೊಡಿ, ಈ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿ.