ದೀಪಾವಳಿ ಹಬ್ಬಕ್ಕೆ ನಿಮ್ಮ ಸ್ನೇಹಿತರು, ಆತ್ಮೀಯರಿಗೆ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಶುಭಾಶಯ ಕೋರಲು ಇಲ್ಲಿದೆ ಐಡಿಯಾಗಳು
Oct 30, 2024 02:44 PM IST
ದೀಪಾವಳಿ ಶುಭಾಶಯ
- ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಿದೆ. ಇಂದಿನಿಂದ (ಅಕ್ಟೋಬರ್ 30) 5 ದಿನಗಳ ಕಾಲ ಭಾರತದಾದ್ಯಂತ ಹಬ್ಬದ ಸಂಭ್ರಮ ಜೋರು. ದೀಪಾವಳಿ ಹಬ್ಬಕ್ಕೆ ನಿಮ್ಮ ಆತ್ಮೀಯರು ಹಾಗೂ ಸ್ನೇಹಿತರಿಗೆ ವಾಟ್ಸ್‌ಆಪ್, ಫೇಸ್‌ಬುಕ್‌ನಲ್ಲಿ ಶುಭಾಶಯ ಕೋರಲು ವಿಶಷ್‌ಗಾಗಿ ಹುಡುಕಾಟ ನಡೆಸುತ್ತಿದ್ದರೆ ಇಲ್ಲಿದೆ ಒಂದಿಷ್ಟು ಐಡಿಯಾಗಳು.
ದೀಪಾವಳಿ ಶುಭಾಶಯ (PC: Canva)
ಭಾರತದಲ್ಲಿ ಆಚರಿಸುವ ಮಹತ್ವದ ಹಬ್ಬಗಳಲ್ಲಿ ದೀಪಾವಳಿಯು ಒಂದು. ಹಿಂದೂಗಳಲ್ಲಿ ದೀಪಾವಳಿ ಹಬ್ಬ ವಿಶೇಷ. ಇದನ್ನು ದೀಪಗಳ ಹಬ್ಬ ಎಂದೂ ಕರೆಯುತ್ತಾರೆ. ಕತ್ತಲೆನಿಂದ ಬೆಳಕಿನೆಡೆಗೆ ಸಾಗುವ, ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ಬೆಳಗುವ ಹಬ್ಬ ದೀಪಾವಳಿ. ಶ್ರೀರಾಮನು ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ ಎಂಬುದು ಪ್ರತೀತಿ.
ದೀಪಾವಳಿ ಸಮಯದಲ್ಲಿ ಮನೆಯನ್ನು ಸಿಂಗರಿಸುವುದು, ರಂಗೋಲಿ ಹಾಕುವುದು, ಬಗೆ ಬಗೆಯ ತಿನಿಸುಗಳನ್ನ ತಯಾರಿಸುವುದು, ಪಟಾಕಿ ಹಚ್ಚುವುದು ಇಂತಹ ಸಂಭ್ರಮಗಳು ಇರುತ್ತವೆ. ಈ ವರ್ಷದ ದೀಪಾವಳಿ ಹಬ್ಬಕ್ಕೆ ನಿಮ್ಮ ಆತ್ಮೀಯರಿಗೆ ವಾಟ್ಸ್‌ಆಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡಲು ಐಡಿಯಾಗಳಿಗಾಗಿ ಹುಡುಕುತ್ತಿದ್ದರೆ ಈ ವಿಶಷ್, ಕೋಟ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ.
ದೀಪಾವಳಿ ವಿಶಸ್
- ಬೆಳಕಿನ ಹಬ್ಬವು ನಿಮ್ಮ ಮನೆಯಲ್ಲಿ ಸದಾ ಸಂಪತ್ತು, ಸಂತೋಷ ಮತ್ತು ಸಂತಸ ತುಂಬುವಂತೆ ಮಾಡಲಿ. ನಿಮಗೆ ಮತ್ತು ನಿಮ್ಮ ಇಡಿ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು
- ದೀಪಗಳ ಬೆಳಕಿನ ಅಲೆಯು ನಿಮ್ಮ ಬದುಕನ್ನು ಉಜ್ವಲವಾಗಿಸಲಿ. ನಿಮ್ಮ ಜೀವನದಿಂದ ಕತ್ತಲೆಯನ್ನು ಹೊಡೆದೋಡಿಸಲಿ. ದೀಪಾವಳಿ ಹಬ್ಬದ ಶುಭಾಶಯಗಳು
- ಈ ದೀಪಾವಳಿ ನಿಮ್ಮ ಬದುಕಿನ ಖುಷಿ ಹೆಚ್ಚಿಸಲಿ. ನಗು ಎಂಬ ಬೆಳಕು ನಿಮ್ಮ ಮೊಗದಲ್ಲಿ ಸದಾ ನಲಿಯುವಂತೆ ಮಾಡಲಿ. ಬೆಳಕಿನ ಹಬ್ಬದ ಶುಭಾಶಯಗಳು.
- ಕತ್ತಲೆಯ ವಿರುದ್ಧ ಬೆಳಕಿನ ವಿಜಯ ಸಾರುವ ಈ ದೀಪಾವಳಿಯು ನಿಮ್ಮ ಬದುಕಿನ ನೋವೆಲ್ಲನ್ನೂ ದೂರ ಮಾಡಿ, ಖುಷಿ ಹರಡುವಂತೆ ಮಾಡಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಈ ದೀಪಾವಳಿಯು ನಿಮ್ಮ ಬದುಕಿನ ನೋವೆಲ್ಲಾ ದೂರಮಾಡಿ, ಬೆಳಕೆಂಬ ಖುಷಿಯನ್ನು ಹರಡಲಿ. ದೀಪಾವಳಿ ಹಬ್ಬದ ಶುಭಾಶಯಗಳು.
- ಶಾಂತಿ, ಸಂತೋಷ, ತೃಪ್ತಿ ಮತ್ತು ಪ್ರೀತಿಯಿಂದ ತುಂಬಿರುವ ದೀಪಾವಳಿಯು ನಿಮ್ಮ ಬದುಕಿನಲ್ಲಿ ಹೊಸ ಅಲೆ ಮೂಡಿಸಲಿ. ನಿಮ್ಮ ಎಲ್ಲಾ ತೊಂದರೆಗಳು ಮೇಣದಬತ್ತಿಗಳೊಂದಿಗೆ ಸುಟ್ಟುಹೋಗಲಿ. ಅದ್ಭುತ ಜೀವನ ನಿಮ್ಮದಾಗಲಿ. ಬೆಳಕಿನ ಹಬ್ಬದ ಶುಭಾಶಯಗಳು.
- ಹಣತೆಯಲ್ಲಿ ಉರಿಯುವ ದೀಪದಂತೆ ನಿಮ್ಮ ಬಾಳು ಬೆಳಗಲಿ ದೀಪಾವಳಿ ಹಬ್ಬದ ಶುಭಾಶಯಗಳು.
- ಬೆಳಕಿನ ಹಬ್ಬವು ನಿಮ್ಮ ಜೀವನವನ್ನು ಸಂತೋಷ ಮತ್ತು ಯಶಸ್ಸಿನಿಂದ ಬೆಳಗಿಸಲಿ. ನಿಮಗೆ ಮತ್ತು ನಿಮ್ಮ ಪ್ರೀತಿಯ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು
- ದೀಪಗಳ ಬೆಳಕು ಯಶಸ್ಸು ಮತ್ತು ಸಮೃದ್ಧಿಯ ಕಡೆಗೆ ನಿಮಗೆ ದಾರಿ ತೋರಲಿ. ದೀಪಾವಳಿ ಹಬ್ಬದ ಶುಭಾಶಯಗಳು.
- ಕುಟುಂಬ ಮತ್ತು ಸ್ನೇಹಿತರೊಂದಿಗೆ ದೀಪಾವಳಿಯನ್ನು ಆಚರಿಸುವ ಈ ಹೊತ್ತಿನಲ್ಲಿ ನಿಮ್ಮ ಜೀವನವು ಸಂತೋಷದಿಂದ ಮತ್ತು ನಿಮ್ಮ ಹೃದಯವು ಪ್ರೀತಿಯಿಂದ ಉಕ್ಕಿ ಹರಿಯಲಿ. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.
ಇದನ್ನೂ ಓದಿ: Deepavali Wishes: ದೀಪಾವಳಿಗೆ ನಿಮ್ಮ ಪ್ರೀತಿ-ಪಾತ್ರರಿಗೆ ಶುಭಾಶಯ ತಿಳಿಸಬೇಕಾ? ಇಲ್ಲಿವೆ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸಂದೇಶದ ಫೋಟೊಸ್ - ಈ ದೀಪಾವಳಿ ಋತುವಿನಲ್ಲಿ ಲಕ್ಷ್ಮಿ ದೇವಿಯು ನಿಮಗೆ ಹೇರಳವಾದ ಆಶೀರ್ವಾದ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ. ಎಲ್ಲವೂ ಒಳಿತೇ ಆಗಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
- ದೀಪಾವಳಿಯ ಬೆಳಕು ನಿಮ್ಮ ಮನೆ ಬಾಗಿಲು ಮಾತ್ರವಲ್ಲ ನಿಮ್ಮ ಬದುಕನ್ನೂ ಪ್ರಜ್ವಲಿಸಲಿ. ದೀಪಾವಳಿ ಹಬ್ಬದ ಶುಭಾಶಯಗಳು.
- ಇಂದು, ನಾಳೆ ಮತ್ತು ಎಂದೆಂದಿಗೂ ದೀಪದ ಬೆಳಕಿನಂತೆ ನಿಮ್ಮ ಬದುಕು ಸದಾ ಬೆಳಗುತ್ತಿರಲಿ. ನಿಮ್ಮ ದೀಪಾವಳಿ ಅದ್ಭುತ ಮತ್ತು ಮಂಗಳಕರವಾಗಿರಲಿ. ಹ್ಯಾಪಿ ದೀಪಾವಳಿ.
- ದೀಪಾವಳಿಯ ಬೆಳಕು ಕತ್ತಲೆ ಮತ್ತು ಅಜ್ಞಾನವನ್ನು ಹೋಗಲಾಡಿಸಿ, ಜ್ಞಾನ ಮತ್ತು ಬುದ್ಧಿವಂತಿಕೆಯ ಪ್ರಕಾಶವನ್ನು ಹರಡಲಿ. ಶುಭ ದೀಪಾವಳಿ
- ದೀಪಾವಳಿಯ ದಿವ್ಯ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಹರಡಲಿ. ನಿಮಗೂ ನಿಮ್ಮ ಮನೆಯವರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
- ಇದನ್ನೂ ಓದಿ: ದೀಪಾವಳಿಯಂದು ಮನೆಯನ್ನು ದೀಪಗಳಿಂದ ಹೇಗೆಲ್ಲಾ ಅಲಂಕರಿಸಬಹುದು ಅಂತ ಯೋಚಿಸ್ತಾ ಇದೀರಾ, ಇಲ್ಲಿದೆ ನೋಡಿ ಐಡಿಯಾಗಳು
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.